ETV Bharat / science-and-technology

GenAIನಿಂದ 2030ರ ವೇಳೆಗೆ ಭಾರತದ ಜಿಡಿಪಿಗೆ 1.5 ಟ್ರಿಲಿಯನ್ ಡಾಲರ್ ಆದಾಯ: ವರದಿ - ಬೇಸ್​ಲೈನ್ ಜಿಡಿಪಿಗಿಂತ

ಜೆನ್ ಎಐ ತಂತ್ರಜ್ಞಾನವು ಭಾರತದ ಜಿಡಿಪಿಗೆ ಗಮನಾರ್ಹ ಆದಾಯ ತರಲಿದೆ ಎಂದು ವರದಿ ಹೇಳಿದೆ.

GenAI has potential to add $1.2-1.5 trillion to India's GDP by FY30: Report

author img

By ETV Bharat Karnataka Team

Published : Dec 17, 2023, 4:24 PM IST

ನವದೆಹಲಿ: ಜೆನರೇಟಿವ್ ಎಐ (ಜೆಎನ್ಎಐ) ಉದ್ಯಮವು ಮುಂದಿನ ಏಳು ವರ್ಷಗಳಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) 1.2 ರಿಂದ 1.5 ಟ್ರಿಲಿಯನ್ ಡಾಲರ್ ಆದಾಯ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೊಸ ವರದಿಯೊಂದು ಭಾನುವಾರ ತೋರಿಸಿದೆ. ಇವೈ ಇಂಡಿಯಾ ವರದಿಯ (EY India report) ಪ್ರಕಾರ, ಭಾರತವು 2029-30ರ ಹಣಕಾಸು ವರ್ಷವೊಂದರಲ್ಲಿಯೇ ತನ್ನ ಆರ್ಥಿಕತೆಗೆ ಜೆನ್ ಎಐನಿಂದ 359 ರಿಂದ 438 ಬಿಲಿಯನ್ ಡಾಲರ್ ಆದಾಯ ಪಡೆಯಬಹುದು. ಇದು ಬೇಸ್​ಲೈನ್ ಜಿಡಿಪಿಯ ಮೇಲೆ ಶೇಕಡಾ 5.9ರಿಂದ 7.2ರಷ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.

ಜೆನ್ ಎಐನಿಂದ ಸೃಷ್ಟಿಯಾಗಬಹುದಾದ ಒಟ್ಟಾರೆ ಆದಾಯದ ಪೈಕಿ ಸುಮಾರು 69 ಪ್ರತಿಶತ ವ್ಯವಹಾರ ಸೇವೆಗಳು (ಐಟಿ, ಕಾನೂನು, ಸಲಹೆ, ಹೊರಗುತ್ತಿಗೆ, ಯಂತ್ರೋಪಕರಣಗಳು ಮತ್ತು ಉಪಕರಣಗಳ ಬಾಡಿಗೆ ಮತ್ತು ಇತರವುಗಳನ್ನು ಒಳಗೊಂಡಂತೆ), ಹಣಕಾಸು ಸೇವೆಗಳು, ಶಿಕ್ಷಣ, ಚಿಲ್ಲರೆ ವ್ಯಾಪಾರ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಿಂದ ಬರುವ ನಿರೀಕ್ಷೆಯಿದೆ.

"ಆರಂಭಿಕ ಹಂತಗಳಲ್ಲಿ, ಎಐನಲ್ಲಿ ಅಪಾರ ಆಶಾವಾದವಿದೆ ಮತ್ತು ಅದರ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು, ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ಸರ್ಕಾರದ ಪಾತ್ರವನ್ನು ಹೆಚ್ಚಿಸುವ ದೃಷ್ಟಿಯಿಂದ ಭಾರತವು ತನ್ನ ಪ್ರಯತ್ನಗಳನ್ನು ಗಮನಾರ್ಹವಾಗಿ ಹೆಚ್ಚಿಸಬೇಕು" ಎಂದು ಇವೈ ಇಂಡಿಯಾದ ಟೆಕ್ನಾಲಜಿ ಕನ್ಸಲ್ಟಿಂಗ್ ಲೀಡರ್ ಮಹೇಶ್ ಮಖಿಜಾ ಹೇಳಿದರು.

ಶೇಕಡಾ 60 ರಷ್ಟು ಸಂಸ್ಥೆಗಳು ತಮ್ಮ ವ್ಯವಹಾರಗಳ ಮೇಲೆ ಜೆನ್ ಎಐನ ಗಮನಾರ್ಹ ಪ್ರಭಾವವನ್ನು ಒಪ್ಪಿಕೊಂಡಿವೆ ಎಂದು ವರದಿ ತೋರಿಸಿದೆ. ಆದಾಗ್ಯೂ, ಅವರಲ್ಲಿ 75 ಪ್ರತಿಶತದಷ್ಟು ಜನರು ಜೆಎನ್ಎಐನ ಪ್ರಯೋಜನಗಳನ್ನು ಬಳಸಿಕೊಳ್ಳಲು ಕಡಿಮೆ ಮತ್ತು ಮಧ್ಯಮ ಮಟ್ಟದ ಪರಿಣತಿಯನ್ನು ಮಾತ್ರ ಹೊಂದಿದ್ದಾರೆ. ಸಂಸ್ಥೆಗಳು ಪ್ರಸ್ತುತ ಎದುರಿಸುತ್ತಿರುವ ಎರಡು ಪ್ರಾಥಮಿಕ ಸವಾಲುಗಳೆಂದರೆ ಕೌಶಲ್ಯ ಕೊರತೆ (52 ಪ್ರತಿಶತ) ಮತ್ತು ಬಳಕೆಯ ಅಸ್ಪಷ್ಟತೆ (47 ಪ್ರತಿಶತ). ಹಾಗೆಯೇ ಕೇವಲ 36 ಪ್ರತಿಶತದಷ್ಟು ಸಂಸ್ಥೆಗಳು ಮಾತ್ರ ಜೆನ್ ಎಐನಿಂದ ತಮ್ಮ ಡೇಟಾ ಗೌಪ್ಯತೆಗೆ ಧಕ್ಕೆ ಬರಬಹುದು ಎಂದು ಭಾವಿಸಿವೆ.

ನಿಯಂತ್ರಕ ಚೌಕಟ್ಟಿನ ಬಗ್ಗೆ ಸ್ಪಷ್ಟತೆ, ನಿಯಂತ್ರಕ ನೀತಿಗಳನ್ನು ರೂಪಿಸುವುದು, ಜೆನ್ ಎಐ ಕಂಟೆಂಟ್ ಅನ್ನು ವಾಟರ್ ಮಾರ್ಕ್ ಮಾಡುವುದು ಮತ್ತು ಎಐ ವ್ಯವಸ್ಥೆಗಳಲ್ಲಿ ವಿಶ್ವಾಸವನ್ನು ಬೆಳೆಸಲು ಉತ್ತರದಾಯಿತ್ವ ಮತ್ತು ಹೊಣೆಗಾರಿಕೆಗೆ ಮಾನದಂಡಗಳನ್ನು ನಿಗದಿಪಡಿಸುವುದು ನಿರ್ಣಾಯಕವಾಗಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಿಂದ ದೂರವಿದ್ದಷ್ಟೂ ಮಾನಸಿಕ ಆರೋಗ್ಯ ಸುಧಾರಣೆ: ಸಂಶೋಧನಾ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.