ETV Bharat / science-and-technology

ಆ್ಯಪಲ್‌ ವಾಚ್‌ ಹೊಂದಿರುವ ಗ್ರಾಹಕರಿಗೆ eಸಿಮ್‌‌‌ ಸೌಲಭ್ಯ ಕೊಟ್ಟ ವೊಡಾಫೋನ್‌

author img

By

Published : Jun 13, 2020, 5:41 PM IST

Updated : Feb 16, 2021, 7:51 PM IST

ಇದೇ ಮೊದಲ ಬಾರಿ ವೊಡಾವೋನ್‌ ಸಂಸ್ಥೆ ಆ್ಯಪಲ್‌ ವಾಚ್‌ ಹೊಂದಿರುವ ತನ್ನ ಪೋಸ್ಟ್‌ ಪೇಯ್ಡ್‌ ಗ್ರಾಹಕರಿಗೆ ಜಿಪಿಎಸ್‌ ಮತ್ತು ಸೆಲ್ಯೂಲರ್‌ ಸೇವೆಯನ್ನು ನೀಡಿದೆ. ಇದರಿಂದ ತಮ್ಮ ಬಳಿಕ ಮೊಬೈಲ್‌ ಇಲ್ಲದಿದ್ದರೂ ವಾಚ್‌ ಮೂಲಕವೇ ಕರೆಗಳನ್ನು ಸ್ವೀಕರಿಸುವ ಮತ್ತು ಡಾಟಾ ಬಳಸಿಕೊಳ್ಳಬಹುದಾಗಿದೆ.

vodafone-users-can-now-enjoy-apple-watch-cellular-in-india
ಆ್ಯಪಲ್‌ವಾಚ್‌ ಹೊಂದಿರುವ ಗ್ರಾಹಕರಿಗೆ ಇಸಿಮ್‌‌‌ ಸೌಲಭ್ಯ ಕೊಟ್ಟ ವೊಡಾಫೋನ್‌

ನವದೆಹಲಿ: ಟೆಲಿಕಾಮ್‌ ಸೇವಾ ಸಂಸ್ಥೆ ವೊಡಾಪೋನ್‌ ಕೊನೆಗೂ ಭಾರತದಲ್ಲಿ ಆ್ಯಪಲ್‌ ವಾಚ್‌ಗೆ ಇಸಿಮ್‌ (ಜಿಪಿಎಸ್‌ + ಸೆಲ್ಯೂಲರ್‌) ಸೇವೆಯನ್ನು ಆರಂಭಿಸಿದೆ. ಈವರೆಗೆ ಏರ್‌ಟೆಲ್‌ ಮತ್ತು ರಿಲಯನ್ಸ್‌ನ ಜಿಯೋ ನೆಟ್‌ವರ್ಕ್‌ಗಳು ಮಾತ್ರ ಇಸಿಮ್‌ ಸೌಲಭ್ಯವನ್ನು ದೇಶದ ಗ್ರಾಹಕರಿಗೆ ನೀಡುತ್ತಿದ್ದವು.

ಈ ಸೇವೆಯಿಂದ ಗ್ರಾಹಕರು ವೊಡಾಪೋನ್‌ ಪೋಸ್ಟ್‌ ಪೇಯ್ಡ್‌ ಸೇವೆಗಳನ್ನು ಮೊಬೈಲ್‌ ಮೂಲಕ ಆ್ಯಪಲ್‌ ವ್ಯಾಚ್‌ನಲ್ಲೂ ಹಂಚಿಕೊಳ್ಳಬಹುದಾಗಿದೆ. ಅಂದರೆ ಕರೆಗಳನ್ನು ಸ್ವೀಕರಿಸುವುದು ಮತ್ತು ವೊಡಾಫೋನ್‌ ಡಾಟಾ ಬಳಸಿಕೊಳ್ಳಬಹುದಾಗಿದೆ. ಗ್ರಾಹಕ ಮೊಬೈಲ್‌ನಿಂದ ದೂರ ಇದ್ದರೂ ಇದೀಗ ಈ ಸೇವೆಯನ್ನು ವಾಚ್‌ ಮೂಲಕ ಬಳಸಿಕೊಳ್ಳಬಹುದು ಎಂದು ವೊಡಾಫೋನ್‌ ಸಂಸ್ಥೆ ತಿಳಿಸಿದೆ.

ಆಯ್ದ ರಾಜ್ಯ ಮತ್ತು ನಗರಗಳಿಗೆ ಮಾತ್ರ ಈ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಮುಂಬೈ, ದೆಹಲಿ, ಗುಜರಾತ್‌ನಲ್ಲಿ ಈ ಸೇವೆ ಲಭ್ಯವಾಗಲಿದೆ. ಕೇವಲ ಪೋಸ್ಟ್‌ ಪೇಯ್ಡ್‌ ಗ್ರಾಹಕರು ಮಾತ್ರ ಈ ಅನುಕೂಲವನ್ನು ಪಡೆಯಲಿದ್ದು, ಆ್ಯಪಲ್‌ ವಾಚ್‌ ಸೀರಿಸ್‌-3 ಅಥವಾ ಇದಕ್ಕೂ ಮೊದಲ ಮಾರುಕಟ್ಟೆಗೆ ಬಂದಿರುವ ವಾಚ್‌ ಒಎಸ್‌ 6.2 ಸೀರಿಸ್‌ ಮಾತ್ರ ಇಸಿಮ್‌ ಆ್ಯಕ್ಟೀವೇಷನ್‌ ಸಾಮರ್ಥ್ಯ ಹೊಂದಿದೆ ಎಂದು ವೊಡಾಫೋನ್‌ ಸಂಸ್ಥೆ ಸ್ಪಷ್ಟಪಡಿಸಿದೆ.

Last Updated : Feb 16, 2021, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.