ಕೂಪರ್ಟಿನೊ: ಆ್ಯಪಲ್ ತನ್ನ ಜನಪ್ರಿಯ ಮ್ಯಾಕ್‌ಬುಕ್ ಪ್ರೊ 13 - ಇಂಚಿನ, ಮ್ಯಾಕ್‌ಬುಕ್ ಏರ್, ಮತ್ತು ಮ್ಯಾಕ್ ಮಿನಿ ಕಂಪ್ಯೂಟರ್‌ಗಳ ಹೊಸ ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ.
ಇದು ನಾಲ್ಕು ಹೈ - ಪವರ್ ಮತ್ತು ನಾಲ್ಕು ಪವರ್ - ಎಫೆಕ್ಟಿವ್ ಹಾಗೂ ಕಸ್ಟಮ್ ಇಂಟಿಗ್ರೇಟೆಡ್ ಜಿಪಿಯು, ಇಮೇಜ್ ಸಿಗ್ನಲ್ ಪ್ರೊಸೆಸರ್, ಸೆಕ್ಯೂರ್ ಎನ್‌ಕ್ಲೇವ್ ಮತ್ತು ನ್ಯೂರಾಲ್ ಎಂಜಿನ್ ಒಳಗೊಂಡಿದೆ. ಆಪಲ್ M1 ಅನ್ನು ಹೊಸ ಏಕೀಕೃತ ಮೆಮೊರಿ ಆರ್ಕಿಟೆಕ್ಚರ್‌ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಇದು ವಿದ್ಯುತ್ ದಕ್ಷತೆ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಆ್ಯಪಲ್ ಈ ಬಾರಿ ಮ್ಯಾಕ್ ಸಿರೀಸ್‌ನಲ್ಲಿ ತಾನೇ ಸ್ವತಃ ಅಭಿವೃದ್ಧಿಪಡಿಸಿರುವ M1 ಚಿಪ್ ಬಳಸಿದೆ.
ಹೊಸ 13 ಇಂಚಿನ ಮ್ಯಾಕ್‌ಬುಕ್ ಪ್ರೊ ಹಿಂದಿನ ತಲೆಮಾರಿನ ಐದು ಪಟ್ಟು ವೇಗವಾದ ಗ್ರಾಫಿಕ್ಸ್‌ನೊಂದಿಗೆ ಕಾರ್ಯಾಚರಣೆ ಮಾಡಲಿದೆ. ಇದು 17 ಗಂಟೆಗಳ ವೆಬ್ ಬ್ರೌಸಿಂಗ್ ಮತ್ತು 20 ಗಂಟೆಗಳ ವಿಡಿಯೊ ಪ್ಲೇಬ್ಯಾಕ್ನ ಸಾಟಿಯಿಲ್ಲದ ಬ್ಯಾಟರಿ ಅವಧಿ ನೀಡುತ್ತದೆ ಅಂದರೆ ಮೊದಲಿಗಿಂತ 10 ಗಂಟೆ ಹೆಚ್ಚು.
ಪರ್ಸನಲ್ ಕಂಪ್ಯೂಟರ್‌ನಲ್ಲಿ ವಿಶ್ವದ ಅತಿ ವೇಗದ ಸಂಯೋಜಿತ ಗ್ರಾಫಿಕ್ಸ್ ಮತ್ತು ಆ್ಯಪಲ್ ನ್ಯೂರಾಲ್ ಎಂಜಿನ್‌ನ ಅದ್ಭುತ ಯಂತ್ರ ಕಲಿಕೆ ಕಾರ್ಯಕ್ಷಮತೆ ಒಳಗೊಂಡಿದೆ.
ಅತ್ಯಾಧುನಿಕ 5 -ನ್ಯಾನೋ ಮೀಟರ್ ಪ್ರಕ್ರಿಯೆ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಲಾದ ಮೊದಲ ಪರ್ಸ್ನಲ್ ಕಂಪ್ಯೂಟರ್ ಚಿಪ್ M1 ಆಗಿದೆ ಮತ್ತು ಇದು ಬೆರಗುಗೊಳಿಸುವ 16 ಬಿಲಿಯನ್ ಟ್ರಾನ್ಸಿಸ್ಟರ್‌ಗಳಿಂದ ಕೂಡಿರುತ್ತದೆ. ಇದನ್ನು ಆ್ಯಪಲ್ ಚಿಪ್‌ನಲ್ಲಿ ಇರಿಸಿದೆ.
ಹೊಸ 13 ಇಂಚಿನ ಮ್ಯಾಕ್‌ಬುಕ್ ಪ್ರೊ ಬೆಲೆ ಯುಎಸ್ನಲ್ಲಿ 1,299 $ ರಿಂದ ಪ್ರಾರಂಭವಾಗುತ್ತದೆ, ಹೊಸ ಮ್ಯಾಕ್‌ಬುಕ್ ಏರ್ $ 999 ರಿಂದ ಪ್ರಾರಂಭವಾಗಿದ್ದರೆ, M1 ಚಿಪ್‌ನೊಂದಿಗೆ ಮ್ಯಾಕ್ ಮಿನಿ $ 699 ಪ್ರಾರಂಭವಾಗುತ್ತದೆ. ಭಾರತದಲ್ಲಿ ಇವುಗಳ ಬೆಲೆ ನಂತರದ ದಿನಗಳಲ್ಲಿ ತಿಳಿಯಲಿದೆ.