ETV Bharat / science-and-technology

‘ವಾಚ್ ಫಾರ್ ಬ್ಲ್ಯಾಕ್ ಹಿಸ್ಟರಿ ಮಾಸ’ಕ್ಕಾಗಿ ನೂತನ ವಾಚ್ ಬಿಡುಗಡೆಗೊಳಿಸಿದ ಆಪಲ್

author img

By

Published : Jan 27, 2021, 7:43 AM IST

Updated : Feb 16, 2021, 7:53 PM IST

ಆಪಲ್ ‘ವಾಚ್ ಫಾರ್ ಬ್ಲ್ಯಾಕ್ ಹಿಸ್ಟರಿ ಮಾಸ’ಕ್ಕಾಗಿ ಯುನಿಕ್​ ವಾಚ್ ಬ್ಯಾಂಡ್ ಮತ್ತು ಹೊಸ ವಾಚ್‌ಫೇಸ್ ಬಿಡುಗಡೆ ಮಾಡುತ್ತಿದೆ.

Black Unity Collection
ನೂತನ ವಾಚ್ ಬಿಡುಗಡೆಗೊಳಿಸಿದ ಆಪಲ್

ನವದೆಹಲಿ: ಟೆಕ್ ಕಂಪನಿ ಆಪಲ್ ‘ವಾಚ್ ಫಾರ್ ಬ್ಲ್ಯಾಕ್ ಹಿಸ್ಟರಿ ಮಾಸ’ಕ್ಕಾಗಿ ಯುನಿಕ್​ ವಾಚ್ ಬ್ಯಾಂಡ್ ಮತ್ತು ಹೊಸ ವಾಚ್‌ಫೇಸ್‌ನೊಂದಿಗೆ ಸೀಮಿತ ಆವೃತ್ತಿಯ ವಾಚ್​ ಬಿಡುಗಡೆ ಮಾಡುತ್ತಿದೆ.

ದಿ ವರ್ಜ್ ಪ್ರಕಾರ, ಗಡಿಯಾರದಿಂದ ಬರುವ ಕೆಲವು ಆದಾಯವು ನಾಗರಿಕ ಹಕ್ಕುಗಳ ಸಂಸ್ಥೆಗಳ ಕಡೆಗೆ ಹೋಗುತ್ತದೆ. ಉತ್ಪನ್ನಗಳ ಹೊಸ ಕಪ್ಪು ಯೂನಿಟಿ ಸಂಗ್ರಹದ ಭಾಗವಾಗಿರುವ ಗಡಿಯಾರವು ಕಪ್ಪು, ಹಸಿರು ಮತ್ತು ಕೆಂಪು ಪಟ್ಟೆ ಬ್ಯಾಂಡ್ ಮತ್ತು ಫೇಸ್​ನೊಂದಿಗೆ ಬರುತ್ತದೆ, ಇದು ಪ್ಯಾನ್- ಆಫ್ರಿಕನ್ ಧ್ವಜವನ್ನು ಪ್ರತಿಬಿಂಬಿಸುತ್ತದೆ. ಆಪಲ್ ವಾಚ್ ಸರಣಿ 6 ರ ಸ್ಟ್ಯಾಂಡರ್ಡ್ ಅಲ್ಯೂಮಿನಿಯಂ ಆವೃತ್ತಿಯಂತೆ ಕಂಡುಬರುತ್ತದೆ.

ಇದರ ಬೆಲೆ USD 399 ಅಂದರೆ ಅಂದಾಜು 29,127 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಬ್ಯಾಂಡ್ USD 49 ಅಂದರೆ 3,577 ರೂಪಾಯಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಈ ಉತ್ಪನ್ನಗಳು ಫೆಬ್ರವರಿ 1 ರಿಂದ ಮಾರಾಟವಾಗುತ್ತವೆ ಎಂದು ದಿ ವರ್ಜ್​ ವರದಿ ಮಾಡಿದೆ.

ಇದನ್ನೂ ಓದಿ: 2021ರಲ್ಲಿ ಭಾರತದ ಜಿಡಿಪಿ ಶೇ. 11.5ರಷ್ಟು ಬೆಳವಣಿಗೆ: ಐಎಂಎಫ್​

ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಸಪೋರ್ಟ್ ಫಂಡ್, ಎನ್‌ಎಎಸಿಪಿ ಲೀಗಲ್ ಡಿಫೆನ್ಸ್ ಅಂಡ್ ಎಜುಕೇಶನ್ ಫಂಡ್ ಮತ್ತು ಯುರೋಪಿಯನ್ ನೆಟ್‌ವರ್ಕ್ ಎಗೇನ್ಸ್ಟ್ ರೇಸಿಸಂ ಸೇರಿದಂತೆ ಈ ಉತ್ಪನ್ನ ಬಿಡುಗಡೆಯ ಭಾಗವಾಗಿ 'ಆರು ಜಾಗತಿಕ ಸಂಸ್ಥೆಗಳನ್ನು ಬೆಂಬಲಿಸಲಿದೆ' ಎಂದು ಆಪಲ್ ಹೇಳಿದೆ.

Last Updated : Feb 16, 2021, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.