ಲಂಡನ್:ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು ಇಂಗಾಲದ ಹೊರಸೂಸುವಿಕೆಯನ್ನು ಶೇಕಡಾ 80 ರಷ್ಟು ಕಡಿಮೆ ಮಾಡಬಹುದು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಈ ಮೂಲಕ ಇಂಗಾಲದ ಹೊರಸೂಸುವಿಕೆಯಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರ ಉತ್ಪಾದನೆಯ ಸಮಯದಲ್ಲಿ ಬಿಡುಗಡೆಯಾಗುತ್ತದೆ, ಉಳಿದ ಹೊರಸೂಸುವಿಕೆಯು ಗೊಬ್ಬರವನ್ನು ಹೊಲಗಳಲ್ಲಿ ಹರಡಿದ ನಂತರ ಬಿಡುಗಡೆಯಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಮತ್ತು ರಾಸಾಯನಿಕ ಗೊಬ್ಬರಗಳು ಪೆಟ್ರೋಕೆಮಿಕಲ್ ಉದ್ಯಮದ ಉತ್ಪನ್ನಗಳಲ್ಲಿ 74ರಷ್ಟು ಪಾಲನ್ನು ಹೊಂದಿವೆ. ವಿಶ್ವದ ಜನಸಂಖ್ಯೆಯ ಶೇಕಡಾ 48 ರಷ್ಟು ಆಹಾರದ ಅಗತ್ಯಗಳನ್ನು ರಾಸಾಯನಿಕ ಗೊಬ್ಬರಗಳ ಮೂಲಕ ಬೆಳೆದ ಬೆಳೆಗಳಿಂದ ಪೂರೈಸಲಾಗುತ್ತದೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆ ಶೇ.20ರಷ್ಟು ಹೆಚ್ಚಾಗುವುದರಿಂದ ರಾಸಾಯನಿಕ ಗೊಬ್ಬರಗಳ ಬಳಕೆಯೂ ಹೆಚ್ಚಲಿದೆ. ಸಾರಜನಕ ಆಧಾರಿತ ರಸಗೊಬ್ಬರಗಳು ಎಲ್ಲಕ್ಕಿಂತ ಹೆಚ್ಚು ಇಂಗಾಲವನ್ನು ಹೊರಸೂಸುತ್ತವೆ.
2.6 ಗಿಗಾಟನ್ ಇಂಗಾಲವನ್ನು ಹೊರಸೂಸುತ್ತಿರುವ ಗೊಬ್ಬರ:ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು ಒಟ್ಟಾಗಿ ವರ್ಷಕ್ಕೆ 2.6 ಗಿಗಾಟನ್ ಇಂಗಾಲವನ್ನು ಹೊರಸೂಸುತ್ತವೆ. ಇದು ವಾಯುಯಾನ ಮತ್ತು ಹಡಗು ಕ್ಷೇತ್ರಗಳಲ್ಲಿ ಇಂಗಾಲದ ಹೊರಸೂಸುವಿಕೆಗಿಂತ ಹೆಚ್ಚು. ರಾಸಾಯನಿಕ ಗೊಬ್ಬರ ಉತ್ಪಾದನಾ ಪ್ರಕ್ರಿಯೆಯಲ್ಲಿ ಅಮೋನಿಯಾ ಸಂಶ್ಲೇಷಣೆ ಇಂಗಾಲದ ಹೊರಸೂಸುವಿಕೆಯ ಪ್ರಮುಖ ಮೂಲವಾಗಿದೆ. ಈ ಉದ್ಯಮದಿಂದ ಹೈಡ್ರೋಜನ್ ಉತ್ಪಾದನೆಗಳು ಹಾಗೂ ಕಲ್ಲಿದ್ದಲು ಮತ್ತು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿಮೆ ಮಾಡಿದಾಗ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತದೆ.
ಪರಿಸರದ ಮೇಲೆ ಕೆಟ್ಟ ಪರಿಣಾಮ:ಪ್ರಪಂಚದ ಜನಸಂಖ್ಯೆಯನ್ನು ಆಹಾರವನ್ನು ಪೋರೈಸಲು ರೈತರು ತಮ್ಮ ಮಣ್ಣನ್ನು ರಸಗೊಬ್ಬರಗಳೊಂದಿಗೆ ಉತ್ಕೃಷ್ಟಗೊಳಿಸಬೇಕು. ವಾತಾವರಣದ ಸಾರಜನಕದ ಮಟ್ಟಗಳು ಸದ್ಯ ಬೆಳೆಯುತ್ತಿರುವ ಬೆಳೆಗಳಿಗೆ ಅಗತ್ಯವಿರುವಷ್ಟು ಪೂರೈಕೆಯನ್ನು ಒದಗಿಸಲು ವಾತಾವರಣದ ಸಾರಜನಕದ ಮಟ್ಟಗಳು, ಜೈವಿಕ ಸಾರಜನಕ ಸ್ಥಿರೀಕರಣದೊಂದಿಗೆ ಸಾಕಾಗುವುದಿಲ್ಲ.
ರೈತರು ಸಾರಜನಕವನ್ನು ಸಂಶ್ಲೇಷಿತ ರಸಗೊಬ್ಬರಗಳ ರೂಪದಲ್ಲಿ ಮಣ್ಣಿಗೆ ಸೇರಿಸುತ್ತಾರೆ. ಆದರೆ ರಸಗೊಬ್ಬರಗಳ ಉತ್ಪಾದನೆ ಮತ್ತು ಬಳಕೆಯು ಪರಿಸರದ ಮೇಲೆ ಕೆಟ್ಟ ಪರಿಣಾಮಗಳನ್ನು ಹೊಂದಿದೆ. ಅವುಗಳಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಸೇರಿದೆ. ಭವಿಷ್ಯದಲ್ಲಿ ಜಾಗತಿಕ ತಾಪಮಾನ ಏರಿಕೆಯಯನ್ನು ತಡೆಯಲು ಮೊದಲು ಹಸಿರುಮನೆ ಅನಿಲಗಳ ಜಾಗತಿಕ ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಇದಕ್ಕೆ ರಸಗೊಬ್ಬರ ಉತ್ಪಾದನೆ ಮತ್ತು ಬಳಕೆಯ ಪಾತ್ರವು ಮುಖ್ಯವಾಗಿರುತ್ತದೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ಹೊಸ ಅಧ್ಯಯನದ ಪ್ರಕಾರ, ಇಂಗಾಲದ ಡೈಆಕ್ಸೈಡ್ (CO2), ನೈಟ್ರಸ್ ಆಕ್ಸೈಡ್ (N2O) ಮತ್ತು ಮೀಥೇನ್ (CH4) ಸೇರಿದಂತೆ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ, ರಸಗೊಬ್ಬರ ಉತ್ಪಾದನೆ ಮತ್ತು ಬಳಕೆ ಐದು ಪ್ರತಿಶತದಷ್ಟು ಕೊಡುಗೆ ಇದೆ. ಹೀಗಾಗಿ ರಸಗೊಬ್ಬರಗಳನ್ನು ಬಳಸುವ ವಿಧಾನವನ್ನು ಬದಲಾಯಿಸುವುದು ಮತ್ತು ಜನರಿಗೆ ಆಹಾರ ಭದ್ರತೆಯನ್ನು ನೀಡುವುದರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ತಿಳಿಸಿದೆ.