ETV Bharat / science-and-technology

ಬರೋಬ್ಬರಿ 11 ಸಾವಿರ ಉದ್ಯೋಗಿಗಳ ವಜಾಗೊಳಿಸಿದ ಮೆಟಾ - 11 ಸಾವಿರ ಉದ್ಯೋಗಿಗಳ ವಜಾ

ಕುಂಟುತ್ತಿರುವ ಆದಾಯ ಮತ್ತು ಟೆಕ್​ ಉದ್ಯಮದ ತೊಂದರೆಯಿಂದಾಗಿ 11 ಸಾವಿರ ಉದ್ಯೋಗಿಗಳಿಗೆ ಫೇಸ್‌ಬುಕ್​ ಪೋಷಕ ಸಂಸ್ಥೆ ಮೆಟಾ ಗೇಟ್​ ಪಾಸ್​ ನೀಡಿದೆ.

facebook-parent-meta-cuts-11000-jobs-13-percent-of-workforce
ಬರೋಬ್ಬರಿ 11 ಸಾವಿರ ಉದ್ಯೋಗಿಗಳ ವಜಾಗೊಳಿಸಿದ ಮೆಟಾ
author img

By

Published : Nov 9, 2022, 7:07 PM IST

ನ್ಯೂಯಾರ್ಕ್ (ಅಮೆರಿಕ): ಸಾಮಾಜಿಕ ಜಾಲತಾಣಗಳ ದೈತ್ಯ ಕಂಪನಿಯಾದ ಮೆಟಾ ತನ್ನ ಸಾವಿರಾರು ಉದ್ಯೋಗಿಗಳಿಗೆ ಶಾಕ್​ ನೀಡಿದೆ. ಫೇಸ್‌ಬುಕ್​ ಪೋಷಕ ಸಂಸ್ಥೆಯಾಗಿರುವ ಮೆಟಾ ಸಂಸ್ಥೆಯು ಒಟ್ಟಾರೆ ಶೇ.13ರಷ್ಟು ಎಂದರೆ ಬರೋಬ್ಬರಿ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಈ ಕುರಿತು ಸ್ವತಃ ಸಿಇಒ ಮಾರ್ಕ್ ಜುಕರ್‌ಬರ್ಗ್ ಬುಧವಾರ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕುಂಟುತ್ತಿರುವ ಆದಾಯ ಮತ್ತು ಟೆಕ್ ಉದ್ಯಮದ ತೊಂದರೆಗಳೊಂದಿಗೆ ಹೋರಾಡುತ್ತಿರುವ ಕಾರಣ ನೀಡಿ 11 ಸಾವಿರ ಉದ್ಯೋಗಿಗಳಿಗೆ ಗೇಟ್​ ಪಾಸ್​ ನೀಡಲಾಗಿದೆ.

ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್‌ ಸಂಸ್ಥೆಯನ್ನು ತೆಕ್ಕೆಗೆ ತೆಗೆದುಕೊಂಡ ಕೇವಲ ಒಂದೇ ವಾರದಲ್ಲಿ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದ್ದು, ಇದರ ಮುಂದುವರೆದ ಕ್ರಮವಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವೇಗವಾಗಿ ನೇಮಕಗೊಂಡ ಇತರ ಟೆಕ್ ಕಂಪನಿಗಳಲ್ಲೂ ಹಲವಾರು ಉದ್ಯೋಗ ಕಡಿತಗಳು ನಡೆಯುತ್ತಿವೆ.

ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರ ತ್ವರಿತ ಬೆಳವಣಿಗೆಯನ್ನು ನಿರೀಕ್ಷಿಸುತ್ತ ವ್ಯಾಪಕವಾಗಿ ನೇಮಕ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದೆವು. ದುರದೃಷ್ಟವಶಾತ್, ಇದು ನಾವು ನಿರೀಕ್ಷಿಸಿದ ರೀತಿಯಲ್ಲಿ ಅದು ಸಾಧ್ಯವಾಗಿಲ್ಲ ಎಂದು ಜುಕರ್‌ಬರ್ಗ್ ತಮ್ಮ ಸಿದ್ಧ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್ ವಾಣಿಜ್ಯವು ಹಿಂದಿನ ಟ್ರೆಂಡ್‌ಗಳಿಗೆ ಮರಳಿದೆ. ಮಾತ್ರವಲ್ಲ, ಸ್ಥೂಲ ಆರ್ಥಿಕ ಕುಸಿತ ಮತ್ತು ಹೆಚ್ಚಿದ ಸ್ಪರ್ಧೆ ಹಾಗೂ ಜಾಹೀರಾತುಗಳ ಸಂಕೇತ ನಷ್ಟವು ನಮ್ಮ ಆದಾಯವನ್ನು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಮಾಡಿದೆ. ಇದರ ಬಗ್ಗೆ ನಾನು ತಪ್ಪಾಗಿ ಗ್ರಹಿಸಿದ್ದೆ, ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಆದಾಯ ಕುಸಿತಕ್ಕೆ ಕಾರಣವೇನು?: ಇತರ ಸಾಮಾಜಿಕ ಮಾಧ್ಯಮ ಕಂಪನಿಗಳಂತೆ ಮೆಟಾ ಕೂಡ ಸಾಂಕ್ರಾಮಿಕ ಲಾಕ್‌ಡೌನ್ ಸಮಯದಲ್ಲಿ ಆರ್ಥಿಕ ಉತ್ತೇಜನವನ್ನು ಅನುಭವಿಸಿತ್ತು. ಏಕೆಂದರೆ ಹೆಚ್ಚಿನ ಜನರು ಮನೆಯಲ್ಲಿಯೇ ಇದ್ದರು. ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿ ಜನತೆ ಸ್ಕ್ರೋಲ್ ಮಾಡುತ್ತಿದ್ದರು. ಆದರೆ, ಲಾಕ್‌ಡೌನ್‌ ಕೊನೆಗೊಂಡಂತೆ ಜನರು ಮತ್ತೆ ಹೊರಗೆ ಹೋಗಲು ಪ್ರಾರಂಭಿಸಿದರು. ಇದರ ಜೊತೆಗೆ ಆದಾಯದ ಬೆಳವಣಿಗೆಯು ಕುಂಠಿತಗೊಳ್ಳಲು ಪ್ರಾರಂಭಿಸಿತು ಎಂದು ವಿವರಿಸಲಾಗಿದೆ.

ಆರ್ಥಿಕ ಮಂದಗತಿ ಮತ್ತು ಆನ್‌ಲೈನ್ ಜಾಹೀರಾತಿಗಾಗಿ ಕಠೋರ ದೃಷ್ಟಿಕೋನವು ಮೆಟಾದ ದೊಡ್ಡ ಆದಾಯದ ಮೂಲದ ಸಂಕಟಗಳಿಗೆ ಕಾರಣವಾಗಿದೆ. ಈ ಬೇಸಿಗೆಯಲ್ಲಿ ಮೆಟಾ ಇತಿಹಾಸದಲ್ಲಿ ತನ್ನ ಮೊದಲ ತ್ರೈಮಾಸಿಕ ಆದಾಯದ ಕುಸಿತವನ್ನು ಪ್ರಕಟಿಸಿತ್ತು. ಇದರ ನಂತರ ಮತ್ತೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಇದು ಆರ್ಥಿಕ ಮತ್ತು ತಾಂತ್ರಿಕ ಶಕ್ತಿಗಳಿಗೆ ಹೊಡೆತಕೊಟ್ಟಿದೆ ಎಂದು ಹೇಳಲಾಗ್ತಿದೆ.

ಕಳೆದ ವಾರವಷ್ಟೇ ಟ್ವಿಟರ್ ತನ್ನ 7,500 ಉದ್ಯೋಗಿಗಳಲ್ಲಿ ಅರ್ಧದಷ್ಟು ಕೆಲಸದಿಂದ ವಜಾಗೊಳಿಸಿತ್ತು. ಕಂಪನಿಯು ದಿನಕ್ಕೆ 4 ಮಿಲಿಯನ್​ ಡಾಲರ್​ನಷ್ಟು ನಷ್ಟವಾಗುತ್ತಿರುವಾಗ ಉದ್ಯೋಗಗಳನ್ನು ಕಡಿತಗೊಳಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ ಎಂದು ಹೊಸ ಬಾಸ್​ ಮಸ್ಕ್ ಟ್ವೀಟ್ ಮಾಡಿದ್ದರು. ಆದರೆ, ನಷ್ಟದ ಕುರಿತ ವಿವರಗಳನ್ನು ನೀಡಿರಲಿಲ್ಲ.

ಇದನ್ನೂ ಓದಿ: ಅರ್ಧದಷ್ಟು ನೌಕರರ ವಜಾಕ್ಕೆ ಎಲೋನ್​​ ಮಸ್ಕ್​ ನೀಡಿದ ಕಾರಣವಿದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.