ETV Bharat / science-and-technology

Explained: ಇಸ್ರೋ ಮಹತ್ವಾಕಾಂಕ್ಷೆಯ ಆದಿತ್ಯ L1 ಮಿಷನ್​​​​​ ಏನೆಲ್ಲ ಅಧ್ಯಯನ ನಡೆಸಲಿದೆ ಗೊತ್ತಾ? - ಹೈಡ್ರೋಜನ್ ಮತ್ತು ಹೀಲಿಯಂ

Aditya-L1 mission: ಸೂರ್ಯನ ಅಧ್ಯಯನಕ್ಕಾಗಿ ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯ, ಆದಿತ್ಯ-ಎಲ್ 1, ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಬೆಳಗ್ಗೆ 11.50ಕ್ಕೆ ಉಡಾವಣೆಗೊಳ್ಳಲಿದೆ. ಇಸ್ರೋದ ಈ ಮಹತ್ವಾಕಾಂಕ್ಷಿ ಯೋಜನೆ ಈ ಬಗ್ಗೆ ಒಂದಿಷ್ಟು ಮಾಹಿತಿ

Explained: Aditya-L1 mission, India's first space-based observatory to study the Sun
Explained: ಇಸ್ರೋ ಮಹತ್ವಾಕಾಂಕ್ಷೆಯ ಆದಿತ್ಯ L1 ಮಿಷನ್​​​​​ ಏನೆಲ್ಲ ಅಧ್ಯಯನ ನಡೆಸಲಿದೆ ಗೊತ್ತಾ?
author img

By ETV Bharat Karnataka Team

Published : Aug 30, 2023, 9:52 AM IST

Updated : Aug 30, 2023, 10:47 AM IST

ಹೈದರಾಬಾದ್: ಸೂರ್ಯ ಕ್ಷೀರಪಥದ ಅತ್ಯಂತ ಸಣ್ಣ ನಕ್ಷತ್ರಗಳಲ್ಲಿ ಒಂದು. ಮಿಲ್ಕಿವೇನಲ್ಲಿ ಇರುವ ಹತ್ತಿರದ ನಕ್ಷತ್ರ. ಸೂರ್ಯನ ವಯಸ್ಸು ಅಂದಾಜು ಸುಮಾರು 4.5 ಶತಕೋಟಿ ವರ್ಷಗಳು ಎಂದು ಲೆಕ್ಕ ಹಾಕಲಾಗಿದೆ. ಇದು ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳಿಂದ ಕೂಡಿದ ಒಂದು ಬಿಸಿಯಾದ ಹಾಗೂ ಪ್ರಕಾಶಮಾನವಾದ ಚಂಡು ಅಂತಲೇ ಹೇಳಬಹುದು.

ಭೂಮಿಯಿಂದ ಸೂರ್ಯನಿಗೆ ಇರುವ ಅಂತರ ಸುಮಾರು 150 ಮಿಲಿಯನ್ ಕಿಲೋಮೀಟರ್. ನಮ್ಮ ಸೌರವ್ಯೂಹಕ್ಕೆ ಶಕ್ತಿಯ ಮೂಲ ಎಂದರೆ ಅದು ಸೂರ್ಯ. ಸೌರಶಕ್ತಿಯಿಲ್ಲದೇ ಭೂಮಿಯ ಮೇಲಿನ ಜೀವಿಗಳು ಬದುಕಲು ಸಾಧ್ಯವೇ ಇಲ್ಲ. ಸೂರ್ಯನ ಗುರುತ್ವಾಕರ್ಷಣೆ ಸೌರವ್ಯೂಹದ ಎಲ್ಲ ವಸ್ತುಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

'ಕೋರ್' ಎಂದು ಕರೆಯಲ್ಪಡುವ ಸೂರ್ಯನ ಕೇಂದ್ರ ಪ್ರದೇಶದಲ್ಲಿ, ತಾಪಮಾನವು 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ತಾಪಮಾನದಲ್ಲಿ, ಪರಮಾಣು ಸಮ್ಮಿಳನ ಎಂಬ ಪ್ರಕ್ರಿಯೆಯು ಸೂರ್ಯನಿಗೆ ಶಕ್ತಿ ನೀಡುವ ಕರೋನಾ ಎಂದು ಕರೆಯಲ್ಪಡುವ ಭಾಗದಲ್ಲಿ ನಡೆಯುತ್ತದೆ. ದ್ಯುತಿಗೋಳ ಎಂದು ಕರೆಯಲ್ಪಡುವ ಸೂರ್ಯನ ಗೋಚರ ಮೇಲ್ಮೈ ತುಲನಾತ್ಮಕವಾಗಿ ಸುಮಾರು 5,500 C ತಾಪಮಾನ ಹೊಂದಿರುತ್ತದೆ.

ಸೌರ ಅಧ್ಯಯನದ ಮಹತ್ವ ಏನು: ಸೂರ್ಯ ಮಂಡಲದ ಭಾಗವಾಗಿರುವ ನಾವು ಸೂರ್ಯನನ್ನು ವಿವರವಾಗಿ ಪರೀಕ್ಷಿಸುವ ವಿಫುಲವಾದ ಅವಕಾಶಗಳನ್ನು ಪಡೆದುಕೊಂಡಿದ್ದೇವೆ. ಕ್ಷೀರಪಥ ಮತ್ತು ದೂರದ ಗೆಲಕ್ಸಿಗಳಾದ್ಯಂತ ನಕ್ಷತ್ರಗಳನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ಸೂರ್ಯನು ತನ್ನ ಗೋಚರ ಅಂಶವನ್ನು ಮೀರಿ ವಿಸ್ತರಿಸಿರುವ ಕ್ರಿಯಾತ್ಮಕ ಘಟಕವಾಗಿದೆ.

ಬಾಹ್ಯಾಕಾಶ ಹವಾಮಾನ ಮತ್ತು ಸೂರ್ಯನ ಪ್ರಭಾವ:

  • ಸೂರ್ಯ ನಿರಂತರವಾಗಿ ವಿಕಿರಣ ಮತ್ತು ಕಾಂತೀಯ ಕ್ಷೇತ್ರಗಳ ಮೂಲಕ ಭೂಮಿಯ ಪರಿಸರವನ್ನು ರೂಪಿಸುತ್ತಾನೆ.
  • ಸೌರ ಮಾರುತ, ಹೆಚ್ಚಿನ ಶಕ್ತಿಯ ಪ್ರೋಟಾನ್‌ಗಳ ಸ್ಟ್ರೀಮ್, ಸೂರ್ಯನ ಕಾಂತಕ್ಷೇತ್ರದ ಜೊತೆಗೆ ಸೌರವ್ಯೂಹದ ಮೇಲೆ ಪ್ರವಾಹ ಮಾಡುತ್ತದೆ.
  • ಕರೋನಲ್ ಮಾಸ್ ಎಜೆಕ್ಷನ್ಸ್ (CME ಗಳು) ನಂತಹ ವಿಚ್ಛಿದ್ರಕಾರಿ ಸೌರ ಘಟನೆಗಳು, ಗ್ರಹಗಳ ಬಳಿ ಬಾಹ್ಯಾಕಾಶ ಪರಿಸರವನ್ನು ಮಾರ್ಪಡಿಸುತ್ತವೆ. ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸ್ವತ್ತುಗಳ ಕಾರ್ಯನಿರ್ವಹಣೆಯ ಮೇಲೆ ಇವು ಸಂಭಾವ್ಯ ಪರಿಣಾಮ ಬೀರುತ್ತವೆ.
  • ಬಾಹ್ಯಾಕಾಶ-ಆಧಾರಿತ ತಂತ್ರಜ್ಞಾನದ ಮೇಲೆ ನಮ್ಮ ಅವಲಂಬನೆಯು ಬೆಳೆದಂತೆ ಬಾಹ್ಯಾಕಾಶ ಹವಾಮಾನವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಏನಿದು ಆದಿತ್ಯ-L1?: ಆದಿತ್ಯ L1 ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ. ಇದು ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿ ವಿಶಿಷ್ಟವಾದ ವಾಂಟೇಜ್ ಪಾಯಿಂಟ್ ಅನ್ನು ನೀಡುವ ಮೂಲಕ ಲಂಗ್ರೇಜ್​​ ಪಾಯಿಂಟ್ 1 (L1)ನ ಸುತ್ತ ಸುತ್ತಲು ಆದಿತ್ಯ ಎಲ್​ 1 ಮಿಷನ್​ ಸಜ್ಜಾಗಿದೆ.

  • ಲಂಗ್ರೇಜ್​ ಪಾಯಿಂಟ್​ನಲ್ಲಿ ನೆಲೆಗೊಳ್ಳುವ ಆದಿತ್ಯ-ಎಲ್1 ಸೂರ್ಯನ ಚಟುವಟಿಕೆಗಳ ಬಗ್ಗೆ ಅಡೆತಡೆಗಳಿಲ್ಲದೇ ತನ್ನ ಅಧ್ಯಯನ ಮುಂದುವರಿಸಲಿದೆ.
  • ಎಲೆಕ್ಟ್ರೋಮ್ಯಾಗ್ನೆಟಿಕ್ ಮತ್ತು ಪಾರ್ಟಿಕಲ್ ಡಿಟೆಕ್ಟರ್‌ಗಳನ್ನು ಒಳಗೊಂಡಂತೆ ಏಳು ಪೇಲೋಡ್‌ಗಳನ್ನು ಹೊಂದಿದ್ದು, ಇದು ಫೋಟೋಸ್ಪಿಯರ್, ಕ್ರೋಮೋಸ್ಪಿಯರ್ ಮತ್ತು ಕರೋನಾವನ್ನು ಅನ್ವೇಷಿಸುತ್ತದೆ.
  • ಆದಿತ್ಯ-L1 ಪೇಲೋಡ್‌ಗಳು ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್‌ಗಳು (CMEಗಳು) ಮತ್ತು ಬಾಹ್ಯಾಕಾಶ ಹವಾಮಾನ, ಸೂರ್ಯನ ಶಕ್ತಿ ಮತ್ತು ಪರಿಕಲ್ಪನೆಗಳನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ.

ಮಿಷನ್ ಉದ್ದೇಶಗಳು: ಸೂರ್ಯನ ಕರೋನಾ ಭಾಗ ಮತ್ತು ಸೌರ ಮಾರುತಗಳ ವೇಗವರ್ಧನೆಯನ್ನು ಅರ್ಥಮಾಡಿಕೊಳ್ಳುವುದು.

• ಕರೋನಲ್ ಮಾಸ್ ಎಜೆಕ್ಷನ್ (CME), ಸೌರ ಜ್ವಾಲೆಗಳು ಮತ್ತು ಭೂಮಿಯ ಸಮೀಪ ಬಾಹ್ಯಾಕಾಶ ಹವಾಮಾನ ಹೇಗೆ ಶುರುವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯಕ

• ಸೌರ ವಾತಾವರಣದ ಜೋಡಣೆ ಮತ್ತು ಸೂರ್ಯನ ಶಕ್ತಿ ಮತ್ತು ಅದರ ಪರಿಕಲ್ಪನೆ ಬಗ್ಗೆ ತಿಳಿಯುವುದು

• ಸೌರ ಮಾರುತದ ವಿಸ್ತಾರ ಮತ್ತು ಪ್ರಸಾರ ಹಾಗೂ ತಾಪಮಾನ ಅನಿಸೊಟ್ರೋಪಿಯನ್ನು ಅರ್ಥಮಾಡಿಕೊಳ್ಳಲು ಈ ಮಿಷನ್​​ನಿಂದ ನೆರವಾಗಲಿದೆ

ಆದಿತ್ಯ-L1 ನ ವೈಶಿಷ್ಟ್ಯಗಳು: ಸೌರ ಡಿಸ್ಕ್‌ಗೆ ಸಮೀಪದಲ್ಲಿರುವ CME ಡೈನಾಮಿಕ್ಸ್‌ನ( ಅಂದರೆ ಸೂರ್ಯನ ಶಕ್ತಿ ಮತ್ತು ಪರಿಕಲ್ಲನೆ) ಪರಿಶೋಧನೆ ಮಾಡುವುದಾಗಿದೆ. ಈ ಪ್ರದೇಶದ ಬಗ್ಗೆ ವಿರಳ ಅಧ್ಯಯನಗಳಾಗಿದ್ದು, ಆದಿತ್ಯ ಈ ಬಗ್ಗೆ ವಿಸ್ತೃತ ಅಧ್ಯಯನ ಮಾಡಲಿದೆ.

  • CME ಮತ್ತು ಸೌರ ಜ್ವಾಲೆ ಪತ್ತೆಗಾಗಿ ಆದಿತ್ಯL1ರಲ್ಲಿ ವಿಶೇಷ ವ್ಯವಸ್ಥೆ - ವೀಕ್ಷಣೆ ಮತ್ತು ಡೇಟಾ ಸಂಗ್ರಹದ ಉದ್ದೇಶವನ್ನು ಎಲ್​​ 1 ಮಿಷನ್​ ಹೊಂದಿದೆ.
  • ಸೌರ ಮಾರುತದ ದಿಕ್ಕು ಮತ್ತು ಶಕ್ತಿಯ ಅನಿಸೊಟ್ರೋಪಿಯನ್ನು ಬಹು-ದಿಕ್ಕಿನ ಅವಲೋಕನಗಳ ಮೂಲಕ ಅಧ್ಯಯನ ಮಾಡುವುದು ಈ ಮಿಷನ್​​ನ ಉದ್ದೇಶವಾಗಿದೆ.

ಆದಿತ್ಯ-L1 ಪೇಲೋಡ್‌ಗಳ ಬಳಕೆ ಹೇಗೆ? - ಏಳು ವೈಜ್ಞಾನಿಕ ಪೇಲೋಡ್‌ಗಳನ್ನು ಆದಿತ್ಯ-L1ನ ಟೂಲ್‌ಕಿಟ್ ನಲ್ಲಿ ಅಳವಡಿಸಲಾಗಿದೆ. ಪ್ರತಿಯೊಂದನ್ನು ವಿವಿಧ ಭಾರತೀಯ ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಪಡಿಸಿ ಅಳವಡಿಕೆ ಮಾಡಲಾಗಿದೆ

  • ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಕರೋನಾ ಮತ್ತು CME ಡೈನಾಮಿಕ್ಸ್ ಅನ್ನು ಇದು ಪರಿಶೀಲಿಸಲಿದೆ.
  • ಸೌರ ಅಲ್ಟ್ರಾ-ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT) ಸೌರ ಫೋಟೋಸ್ಪಿಯರ್ ಮತ್ತು ಕ್ರೋಮೋಸ್ಪಿಯರ್ ಅನ್ನು ಆದಿತ್ಯ ವೀಕ್ಷಿಸಲಿದ್ದಾನೆ. UV ವಿಕಿರಣ ವ್ಯತ್ಯಾಸಗಳನ್ನು ಇದು ಅಳೆಯುತ್ತದೆ.
  • ಸೌರ ಶಕ್ತಿಯ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (SoLEXS) ಮತ್ತು ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (HEL1OS) ಎಕ್ಸ್-ರೇ ಸೂರ್ಯನ ಜ್ವಾಲೆಗಳ ಮೇಲೆ ಕೇಂದ್ರೀಕರಿಸುತ್ತವೆ.
  • ಮ್ಯಾಗ್ನೆಟೋಮೀಟರ್ ಪೇಲೋಡ್ ಅಂತರಗ್ರಹ ಕಾಂತೀಯ ಕ್ಷೇತ್ರಗಳ ಬಗ್ಗೆ ಅಧ್ಯಯನ ನಡೆಸಲಿದೆ

ಆದಿತ್ಯ-L1 ಯೋಜನೆ ಅದ್ಭುತವಾಗಿದ್ದರೂ, ಬಾಹ್ಯಾಕಾಶ ಕಾರ್ಯಾಚರಣೆ ತನ್ನದೇ ಆದ ಮಿತಿಗಳನ್ನು ಹೊಂದಿದೆ. ಸೌರಮಾನದ ಎಲ್ಲ ವಿದ್ಯಮಾನಗಳನ್ನು ಆದಿತ್ಯನಿಗೆ ಸೆರೆ ಹಿಡಿಯಲು ಅಧ್ಯಯನ ಮಾಡಲು ಸಾಧ್ಯವಾಗದೇ ಇರಬಹುದು. ಬಹು-ದಿಕ್ಕಿನ ಸೌರ ಘಟನೆಗಳು ಆದಿತ್ಯ-L1 ನೊಂದಿಗೆ ಪ್ರತ್ಯೇಕವಾಗಿ ಅಧ್ಯಯನ ಮಾಡಲು ಸವಾಲಾಗಿಯೇ ಉಳಿಯ ಬಹುದು.

ಇದನ್ನು ಓದಿ: ಇಸ್ರೋ ಮಹತ್ವದ ಘೋಷಣೆ: ಸೂರ್ಯನ ಅಧ್ಯಯನಕ್ಕೆ ಬಾಹ್ಯಾಕಾಶದಲ್ಲಿ ಆದಿತ್ಯ-L1 ವೀಕ್ಷಣಾಲಯ; ಸೆ.2ರಂದು ಉಡ್ಡಯನ

Last Updated : Aug 30, 2023, 10:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.