ETV Bharat / science-and-technology

ಎಕ್ಸೊಪ್ಲಾನೆಟ್​ಗಳಲ್ಲಿ ನೀರಿರುವ ಸಾಧ್ಯತೆ 100 ಪಟ್ಟು ಹೆಚ್ಚಳ: ಸಂಶೋಧನೆಯಲ್ಲಿ ಬಹಿರಂಗ - etv bharat kannada

ಭೂಮಿಯನ್ನು ಹೊರತುಪಡಿಸಿ ಅದೆಷ್ಟೋ ಮಿಲಿಯನ್ ವರ್ಷಗಳಷ್ಟು ದೂರವಿರುವ ಯಾವುದೋ ಎಕ್ಸೊಪ್ಲಾನೆಟ್​ಗಳಲ್ಲಿ ನೀರಿರುವ ಸಾಧ್ಯತೆ 100 ಪಟ್ಟು ಹೆಚ್ಚಳವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

Water on exoplanets 100x more likely: Study

author img

By

Published : Jul 12, 2023, 3:50 PM IST

ನ್ಯೂಯಾರ್ಕ್ : ಈ ಹಿಂದೆ ನಮಗೆ ತಿಳಿದಿರುವುದಕ್ಕಿಂತಲೂ ಹೆಚ್ಚು ದ್ರವ ನೀರಿನಿಂದ ಕೂಡಿದ ಭೂಮಿಯ ತರಹದ ಎಕ್ಸೋಪ್ಲಾನೆಟ್‌ಗಳಿವೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ. ಎಕ್ಸೊಪ್ಲಾನೆಟ್​ಗಳಲ್ಲಿ ನೀರು ಇರುವ ಸಾಧ್ಯತೆ 100 ಪಟ್ಟು ಹೆಚ್ಚಾಗಿದ್ದು, ಭೂಮಿಯ ಹೊರಗಿನ ಮತ್ತೊಂದು ಗ್ರಹದಲ್ಲಿ ಜೀವಿಗಳಿರುವ ಸಾಧ್ಯತೆ ಕೂಡ ಇದರಿಂದ ಹೆಚ್ಚಾಗಿದೆ.

ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿರ್ದಿಷ್ಟ ಗ್ರಹವೊಂದರ ಮೇಲ್ಮೈನ ಪರಿಸ್ಥಿತಿಯು ದ್ರವ ನೀರು ಅಸ್ತಿತ್ವದಲ್ಲಿರಲು ಸೂಕ್ತವಾಗಿಲ್ಲದಿದ್ದರೂ ಸಹ, ಅನೇಕ ನಕ್ಷತ್ರಗಳು ಗ್ರಹದ ಮೇಲ್ಮೈ ಅಡಿ ದ್ರವ ನೀರಿಗೆ ಸೂಕ್ತವಾದ ಭೌಗೋಳಿಕ ಪರಿಸ್ಥಿತಿಗಳು ಕಂಡು ಬಂದಿವೆ.

"ಜೀವನಕ್ಕೆ ದ್ರವರೂಪದ ನೀರಿನ ಉಪಸ್ಥಿತಿಯು ಅತ್ಯಗತ್ಯ ಎಂದು ನಮಗೆ ತಿಳಿದಿದೆ. ನಾವು ಈವರೆಗೆ ನೀರಿಲ್ಲ ಎಂದುಕೊಂಡ ಗ್ರಹಗಳಲ್ಲಿ ನೀರನ್ನು ಕಾಣಬಹುದು ಎಂದು ನಮ್ಮ ಹೊಸ ಸಂಶೋಧನೆ ತೋರಿಸುತ್ತದೆ” ಎಂದು ಅಮೆರಿಕದ ರಟ್ಜರ್ಸ್ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕ ಡಾ ಲುಜೆಂದ್ರ ಓಜಾ ಹೇಳಿದರು. "ಇದು ಜೀವಿಗಳು ಅಭಿವೃದ್ಧಿ ಹೊಂದುವ ಪರಿಸರವನ್ನು ಸೈದ್ಧಾಂತಿಕವಾಗಿ ಕಂಡುಹಿಡಿಯುವ ಸಾಧ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸುತ್ತದೆ" ಎಂದು ಫ್ರಾನ್ಸ್‌ನ ಲಿಯಾನ್‌ನಲ್ಲಿ ನಡೆದ ಗೋಲ್ಡ್‌ಸ್ಮಿಡ್ಟ್ ಜಿಯೋಕೆಮಿಸ್ಟ್ರಿ ಸಮ್ಮೇಳನದಲ್ಲಿ, ಈ ಬಗೆಗಿನ ಸಂಶೋಧನೆಗಳನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಗ್ರಹದ ಮೇಲ್ಮೈ ಹೆಪ್ಪುಗಟ್ಟಿದರೂ, ವಿಕಿರಣಶೀಲತೆಯಿಂದ ಉತ್ಪತ್ತಿಯಾಗುವ ಶಾಖವು ನೀರನ್ನು ನೆಲದಡಿಯಲ್ಲಿ ದ್ರವೀಕರಿಸಲು ಅನುವು ಮಾಡಿಕೊಡುತ್ತದೆ ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಅತ್ಯಂತ ಸಾಮಾನ್ಯವಾದ ನಕ್ಷತ್ರಗಳ ಸುತ್ತಲೂ ಕಂಡುಬರುವ M-ಡ್ವಾರ್ಫ್ಸ್ ಎಂದು ಕರೆಯಲ್ಪಡುವ ಸೂರ್ಯ ಗ್ರಹಗಳ ಮೇಲೆ ತಂಡವು ತನ್ನ ವಿಶ್ಲೇಷಣೆಯನ್ನು ಕೇಂದ್ರೀಕರಿಸಿದೆ. M-ಡ್ವಾರ್ಫ್ಸ್ ಇವು ಚಿಕ್ಕ ನಕ್ಷತ್ರಗಳಾಗಿವೆ ಮತ್ತು ಅವು ನಮ್ಮ ಸೂರ್ಯನಿಗಿಂತ ಹೆಚ್ಚು ತಂಪಾಗಿರುತ್ತವೆ.

ನಮ್ಮ ನಕ್ಷತ್ರಪುಂಜದಲ್ಲಿನ ಸುಮಾರು 70 ಪ್ರತಿಶತದಷ್ಟು ನಕ್ಷತ್ರಗಳು ಎಂ-ಡ್ವಾರ್ಫ್‌ಗಳಾಗಿವೆ ಮತ್ತು ಎಂ-ಡ್ವಾರ್ಫ್‌ಗಳ ಕಕ್ಷೆಯಲ್ಲಿ ಇಲ್ಲಿಯವರೆಗೆ ಹೆಚ್ಚಾಗಿ ಕಲ್ಲಿನ ಮತ್ತು ಭೂಮಿಯಂತಹ ಬಾಹ್ಯ ಗ್ರಹಗಳು ಕಂಡು ಬಂದಿವೆ. "ಗ್ರಹದಿಂದ ಉತ್ಪತ್ತಿಯಾಗುವ ಶಾಖವನ್ನು ಮಾತ್ರ ಪರಿಗಣಿಸುವ ಮೂಲಕ ನಾವು ಎಂ-ಡ್ವಾರ್ಫ್‌ಗಳನ್ನು ಪರಿಭ್ರಮಿಸುವ ಎಕ್ಸೋಪ್ಲಾನೆಟ್‌ಗಳಲ್ಲಿ ದ್ರವ ನೀರನ್ನು ಉತ್ಪಾದಿಸುವ ಮತ್ತು ಉಳಿಸಿಕೊಳ್ಳುವ ಕಾರ್ಯಸಾಧ್ಯತೆಯನ್ನು ರೂಪಿಸಿದ್ದೇವೆ" ಎಂದು ಓಜಾ ಹೇಳಿದರು.

ರೇಡಿಯೊ ಆಕ್ಟಿವಿಟಿಯಿಂದ ಉತ್ಪತ್ತಿಯಾಗುವ ದ್ರವ ನೀರಿನ ಸಾಧ್ಯತೆಯನ್ನು ಪರಿಗಣಿಸಿ, ಈ ಎಕ್ಸೋಪ್ಲಾನೆಟ್‌ಗಳಲ್ಲಿ ಹೆಚ್ಚಿನ ಶೇಕಡಾವಾರು ದ್ರವ ನೀರನ್ನು ಉಳಿಸಿಕೊಳ್ಳಲು ಸಾಕಷ್ಟು ಶಾಖವನ್ನು ಹೊಂದಿರಬಹುದು. ಇದು ನಾವು ಯೋಚಿಸಿದ್ದಕ್ಕಿಂತ ಹೆಚ್ಚಾಗಿರಲೂ ಬಹುದು ಎಂದು ಸಂಶೋಧಕರು ಊಹಿಸಿದ್ದಾರೆ.

ನಾವು ಈ ಉಪ-ಮೇಲ್ಮೈ ನೀರನ್ನು ಪರಿಗಣಿಸಲು ಪ್ರಾರಂಭಿಸುವ ಮೊದಲು, ಪ್ರತಿ 100 ನಕ್ಷತ್ರಗಳಲ್ಲಿ ಸುಮಾರು 1 ಕಲ್ಲಿನ ಗ್ರಹವು ದ್ರವ ನೀರನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ. ಪರಿಸ್ಥಿತಿಗಳು ನಾವು ಅಂದುಕೊಂಡಂತೆ ಆದರೆ, ಇದು ಪ್ರತಿ ನಕ್ಷತ್ರಕ್ಕೆ 1 ಗ್ರಹವನ್ನು ತಲುಪಬಹುದು ಎಂದು ಹೊಸ ಮಾದರಿ ತೋರಿಸುತ್ತದೆ. ಆದ್ದರಿಂದ ನಾವು ಯೋಚಿಸಿದ್ದಕ್ಕಿಂತ ದ್ರವ ನೀರನ್ನು ಕಂಡುಹಿಡಿಯುವ ಸಾಧ್ಯತೆ ನೂರು ಪಟ್ಟು ಹೆಚ್ಚು. ಕ್ಷೀರಪಥ ಗ್ಯಾಲಕ್ಸಿಯಲ್ಲಿ ಸುಮಾರು 100 ಬಿಲಿಯನ್ ನಕ್ಷತ್ರಗಳಿವೆ. ಇದು ಬ್ರಹ್ಮಾಂಡದ ಬೇರೆಡೆಯಲ್ಲಿನ ಜೀವನದ ಉಗಮಕ್ಕೆ ನಿಜವಾಗಿಯೂ ಒಳ್ಳೆಯ ಆಶಾದಾಯಕ ಬೆಳವಣಿಗೆ ಎಂದು ಓಜಾ ಹೇಳಿದ್ದಾರೆ.

ಇದನ್ನೂ ಓದಿ : PM Modi foreign tour: ನಾಳೆಯಿಂದ ಪ್ರಧಾನಿ ವಿದೇಶ ಪ್ರವಾಸ; ಫ್ರಾನ್ಸ್​, ಯುಎಇ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.