ETV Bharat / science-and-technology

ವಾಟ್ಸ್​​ಆ್ಯಪ್​ನಲ್ಲಿ ಶೀಘ್ರವೇ 3 ಹೊಸ ಫೀಚರ್: ಗ್ರೂಪ್​ಗಳಿಂದ ಯಾರಿಗೂ ತಿಳಿಯದಂತೆ ಎಕ್ಸಿಟ್​​ ಆಗಿ - ಈಟಿವಿ ಭಾರತ ಕನ್ನಡ

ವಾಟ್ಸ್​​ಆ್ಯಪ್​ ಗ್ರೂಪ್​ಗಳಿಂದ ಒಮ್ಮೊಮ್ಮೆ ತುಂಬಾ ಕಿರಿಕಿರಿ ಆಗುತ್ತದೆ. ಯಾಕಾದರೂ ಈ ಗ್ರೂಪ್​ನಲ್ಲಿ ಇದ್ದೇನೆ ಎನಿಸುತ್ತದೆ. ಆದರೆ, ನಮಗೆ ಬೇಕಾದ ಯಾರೋ ಗ್ರೂಪ್​ನಲ್ಲಿ ನಮ್ಮನ್ನು ಸೇರಿಸುತ್ತಾರೆ. ಹೀಗಾಗಿ ಗ್ರೂಪ್​ನಿಂದ ಹೊರಬರಲು ಆಗದಂತಹ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುತ್ತೇವೆ. ಇಂತಹದನ್ನು ತಪ್ಪಿಸಲೆಂದು ಹೊಸ ಫೀಚರ್​ ಪರಿಚಯಿಸಲು ವಾಟ್ಸ್​​ಆ್ಯಪ್​ ಮುಂದಾಗಿದೆ.

Exit WhatsApp group privately: Zuckerberg
ವಾಟ್ಸ್​​ಆ್ಯಪ್​ನಲ್ಲಿ ಶೀಘ್ರವೇ ಮೂರು ಹೊಸ ಫೀಚರ್: ಗ್ರೂಪ್​ಗಳಿಂದ ಯಾರಿಗೂ ತಿಳಿಯದಂತೆ ಎಕ್ಸಿಟ್​​ ಆಗಿ
author img

By

Published : Aug 9, 2022, 5:16 PM IST

ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸ್​​ಆ್ಯಪ್​ನಲ್ಲಿ ಖಾಸಗಿತನಕ್ಕೆ ಸಂಬಂಧಿಸಿದಂತೆ ಮಂಗಳವಾರ ಮೂರು ಹೊಸ ಫೀಚರ್​ಗಳನ್ನು ಪರಿಚಯಿಸಲು WhatsApp ಮುಂದಾಗಿದೆ. ಇವು ಬಳಕೆದಾರರು ತಮ್ಮ ಸಂಭಾಷಣೆಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಮತ್ತು ಸಂದೇಶ ಕಳುಹಿಸುವಾಗ ರಕ್ಷಣೆಯನ್ನೂ ಒದಗಿಸುತ್ತವೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.

  • ಮೂರು ಹೊಸ ಫೀಚರ್​​ಗಳಲ್ಲಿ ಪ್ರಮುಖವಾಗಿರುವುದು ಎಂದರೆ ಬಳಕೆದಾರರು ಯಾವುದೇ ವಾಟ್ಸ್​​ಆ್ಯಪ್​ ಗ್ರೂಪ್​ನಿಂದ ಯಾರಿಗೂ ತಿಳಿಯದಂತೆ ಎಕ್ಸಿಟ್​​ ಆಗಬಹುದಾಗಿದೆ. ಅಂದರೆ ಗ್ರೂಪ್​ನಿಂದ ಹೊರ ಬರುವಾಗ ಗ್ರೂಪ್​ನಲ್ಲಿರುವ​ ಎಲ್ಲರಿಗೂ ತಿಳಿಯುವುದಿಲ್ಲ. ಬದಲಿಗೆ ಅಡ್ಮಿನ್​ಗೆ ಮಾತ್ರ ಗೊತ್ತಾಗಲಿದೆ. ಈ ಫೀಚರ್ ಇದೇ ತಿಂಗಳು ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.
  • ಎರಡನೇಯದ್ದು ನೀವು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ನಿಯಂತ್ರಿಸಬಹದಾಗಿದೆ. ಈ ಫೀಚರ್ ಕೂಡ ಇದೇ ತಿಂಗಳಲ್ಲಿ ಎಲ್ಲ ಬಳಕೆದಾರರಿಗೂ ಸಿಗಲಿದೆ.
  • ಮೂರನೇಯದ್ದು ವೀವ್​ ಓನ್ಸ್​​​ ಮೆಸೇಜ್​ಗಳನ್ನು ಸ್ಕ್ರೀನ್‌ಶಾಟ್​ ತೆಗೆದುಕೊಳ್ಳಲು ಕೂಡ ಬಳಕೆದಾರರು ಅವಕಾಶ ನೀಡದಂತೆ ಮಾಡಬಹುದಾಗಿದೆ. ಈ ಫೀಚರ್​ ಸದ್ಯ ಪ್ರಯೋಗದಲ್ಲಿದ್ದು, ಶೀಘ್ರದಲ್ಲೇ ಇದು ಸಹ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ.

'ಮುಖಾಮುಖಿಯಾಗಿ ಸಂಭಾಷಣೆ ಮಾಡಿದಾಗ ಹೇಗೆ ನಿಮ್ಮ ಸಂದೇಶಗಳನ್ನು ಖಾಸಗಿಯಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯವೋ ಅದೇ ರೀತಿಯಾಗಿ ಈ ಹೊಸ ಮೂರು ಫೀಚರ್​ಗಳು ಬಳಕೆಗಾರರಿಗೆ ಸಹಕಾರಿಯಾಗುವಂತೆ ರೂಪಿಸಲಾಗುತ್ತಿದೆ' ಎಂದು ಜುಕರ್‌ಬರ್ಗ್ ಹೇಳಿದ್ದಾರೆ.

ಇದನ್ನೂ ಓದಿ: 2025ಕ್ಕೆ 'ಸೋಲಾರ್​ ಸೈಕಲ್​' ಪೂರ್ಣ: ಸೂರ್ಯನ ಮೇಲ್ಮೈ ಮತ್ತಷ್ಟು ಪ್ರಕ್ಷುಬ್ಧ, ಪರಿಣಾಮವೇನು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.