ETV Bharat / science-and-technology

ಭಾರತದೊಂದಿಗೆ 25 ವರ್ಷಗಳ ಇತಿಹಾಸ ಮುಂದುವರಿಸಲು ಆ್ಯಪಲ್ ಉತ್ಸುಕ: ಟಿಮ್ ಕುಕ್ - ಐಫೋನ್ ತಯಾರಕ ಕಂಪನಿ ಆ್ಯಪಲ್

ಐಫೋನ್ ತಯಾರಕ ಕಂಪನಿ ಆ್ಯಪಲ್ ಏ 18 ರಂದು ಭಾರತದಲ್ಲಿ ತನ್ನ ಪ್ರಥಮ ರಿಟೇಲ್ ಸ್ಟೋರ್ ಅನ್ನು ಆರಂಭಿಸಲಿದೆ. Apple BKC ಹೆಸರಿನ ರಿಟೇಲ್ ಮಳಿಗೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ಕಾರ್ಯಾರಂಭ ಮಾಡಲಿದೆ.

ಭಾರತದೊಂದಿಗೆ 25 ವರ್ಷಗಳ ಇತಿಹಾಸ ಮುಂದುವರಿಸಲು ಆ್ಯಪಲ್ ಉತ್ಸುಕ: ಟಿಮ್ ಕುಕ್
Excited to build on Apple long history in India: Tim Cook
author img

By

Published : Apr 17, 2023, 4:04 PM IST

ಮುಂಬೈ : ಆ್ಯಪಲ್ ಭಾರತದಲ್ಲಿ ತನ್ನ 25 ವರ್ಷಗಳ ಇತಿಹಾಸವನ್ನು ಮುಂದುವರಿಸಲು ಉತ್ಸುಕವಾಗಿದೆ ಎಂದು ಆ್ಯಪಲ್​​ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮ್ ಕುಕ್ ಹೇಳಿದರು. ನಾಳೆ ಮುಂಬೈನಲ್ಲಿ ದೇಶದ ಪ್ರಥಮ ಆ್ಯಪಲ್ ಮಾಲೀಕತ್ವದ ಮಳಿಗೆ ಆರಂಭಕ್ಕೂ ಮುನ್ನ ಕುಕ್ ಹೇಳಿಕೆ ಮಹತ್ವ ಪಡೆದಿದೆ. ಭಾರತವು ಸುಂದರವಾದ ಸಂಸ್ಕೃತಿ ಮತ್ತು ಅದ್ಭುತವಾದ ಶಕ್ತಿಯನ್ನು ಹೊಂದಿದೆ. ನಮ್ಮ ಗ್ರಾಹಕರನ್ನು ಬೆಂಬಲಿಸಲು, ಸ್ಥಳೀಯ ಸಮುದಾಯಗಳಲ್ಲಿ ಹೂಡಿಕೆ ಮಾಡಲು ಮತ್ತು ಮಾನವೀಯತೆಗೆ ಸೇವೆ ಸಲ್ಲಿಸುವ ಹೊಸತನಗಳೊಂದಿಗೆ ಉತ್ತಮ ಭವಿಷ್ಯ ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುವುದಕ್ಕಾಗಿ ಭಾರತದೊಂದಿಗಿನ ನಮ್ಮ ದೀರ್ಘಕಾಲದ ಇತಿಹಾಸವನ್ನು ಮುಂದುವರಿಸಲು ಉತ್ಸುಕರಾಗಿದ್ದೇವೆ ಎಂದು ಕುಕ್ ಹೇಳಿದರು.

ಆ್ಯಪಲ್ ತನ್ನ ಬಹು ನಿರೀಕ್ಷಿತ ರಿಟೇಲ್ ಸ್ಟೋರ್ ಆ್ಯಪಲ್ ಬಿಕೆಸಿ (Apple BKC) ಅನ್ನು ಏಪ್ರಿಲ್ 18 ರಂದು ಮುಂಬೈನಲ್ಲಿ ತೆರೆಯಲು ಸಜ್ಜಾಗಿದೆ. ಇದು ದೇಶದಲ್ಲಿ ಆ್ಯಪಲ್ ತನ್ನ ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತಿರುವ ಸಂಕೇತವಾಗಿದೆ. ಕಂಪನಿಯ ಭವಿಷ್ಯದ ಬೆಳವಣಿಗೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ಏಪ್ರಿಲ್ 20 ರಂದು ದೆಹಲಿಯಲ್ಲಿ ಎರಡನೇ ರಿಟೇಲ್ ಸ್ಟೋರ್ ಅನ್ನು ಆ್ಯಪಲ್ ಆರಂಭಿಸುತ್ತಿದೆ. ಈ ಮಳಿಗೆಗೆ ಆ್ಯಪಲ್ ಸಾಕೇತ್ (Apple Saket) ಎಂದು ಹೆಸರಿಡಲಾಗಿದೆ.

ಈ ರಿಟೇಲ್ ಸ್ಟೋರ್​ಗಳು ದೇಶದಲ್ಲಿ ಆ್ಯಪಲ್‌ನ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಗಳ ಗುರುತಾಗಿವೆ. ಇದು ಭಾರತವು ಮಾರಾಟ ಮತ್ತು ಉತ್ಪಾದನಾ ಸಾಮರ್ಥ್ಯಗಳ ವಿಷಯದಲ್ಲಿ ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿರುವುದರ ಸೂಚಕವಾಗಿದೆ. ಇನ್ನು ಹೆಚ್ಚೆಚ್ಚು ಭಾರತೀಯ ಗ್ರಾಹಕರು ಪ್ರೀಮಿಯಂ ಉತ್ಪನ್ನಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ. ಭಾರತದಲ್ಲಿ ಆ್ಯಪಲ್​ನ ಐಫೋನ್​ಗಳ ಮಾರಾಟದಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಇದರಿಂದ ಕಂಪನಿಗೆ ದೊಡ್ಡ ಪ್ರಮಾಣದ ಆದಾಯ ಹರಿದು ಬರುತ್ತಿದೆ. ಐಫೋನ್​​ಗಳ ಮಾರಾಟ ಪ್ರತಿ ತ್ರೈಮಾಸಿಕದಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸುತ್ತಿದೆ.

ಆ್ಯಪಲ್​ ಉತ್ಪನ್ನಗಳಿಗೆ ಭಾರತವು ತುಂಬಾ ಆಶಾದಾಯಕವಾದ ಮಾರುಕಟ್ಟೆಯಾಗಿದೆ, ಭಾರತದಲ್ಲಿ ಆ್ಯಪಲ್ ಫೋನ್ ಬಳಕೆದಾರರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಫೆಬ್ರವರಿ 2023ರಲ್ಲಿ ನಡೆದ ಕಂಪನಿಯ ಕಾನ್ಫರೆನ್ಸ್​ ಕಾಲ್ ಮೀಟಿಂಗ್ ಒಂದರಲ್ಲಿ ಟಿಮ್ ಕುಕ್ ಹೇಳಿದ್ದರು. ಜಗತ್ತಿನ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ ಭಾರತದ ಮೇಲೆ ಆ್ಯಪಲ್ ತನ್ನ ಗಮನವನ್ನು ಕೇಂದ್ರೀಕರಿಸಿದೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆಯ ವಿಶ್ಲೇಷಣೆಯ ಪ್ರಕಾರ, ಆ್ಯಪಲ್ ಪ್ರಸ್ತುತ ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ (ರೂ. 30,000 ಕ್ಕಿಂತ ಹೆಚ್ಚು) ಮತ್ತು Q4 2022 ರಲ್ಲಿ ಸಾಗಣೆ ಮೌಲ್ಯದಲ್ಲಿ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಕಂಪನಿ 2022 ರಲ್ಲಿ 6.5 ಮಿಲಿಯನ್‌ಗಿಂತಲೂ ಹೆಚ್ಚಿನ ಮೊಬೈಲ್​ಗಳನ್ನು ಮಾರಾಟ ಮಾಡಿದೆ.

ಆ್ಯಪಲ್ ಇಂಕ್ ಕಂಪನಿಯ ಹೆಸರು ಈ ಹಿಂದೆ ಆ್ಯಪಲ್ ಕಂಪ್ಯೂಟರ್ ಇಂಕ್ ಎಂದಾಗಿತ್ತು. ಪರ್ಸನಲ್ ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್ ಕಂಪ್ಯೂಟರ್‌ಗಳು, ಕಂಪ್ಯೂಟರ್ ಪೆರಿಫೆರಲ್ಸ್ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್‌ಗಳನ್ನು ತಯಾರಿಸುವ ಆ್ಯಪಲ್ ವಿಶ್ವದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್​ಗಳಲ್ಲಿ ಒಂದಾಗಿದೆ.

ಇದನ್ನೂ ಓದಿ : ಸುಡಾನ್ ಸೇನಾ ಸಂಘರ್ಷ: ನೂರಕ್ಕೂ ಹೆಚ್ಚು ಸಾವು, 600 ಜನರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.