ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ಪ್ಲೇ ಸ್ಟೋರ್ನಲ್ಲಿ ಮೊಬೈಲ್ ಗೇಮ್ ಡೆವಲಪರ್ಗಳ ಗೂಗಲ್ ಏಕಸ್ವಾಮ್ಯ ನಿಯಂತ್ರಣ ಹೊಂದಿದೆ ಎಂದು ಹೇಳಿರುವ ಎಪಿಕ್ ಗೇಮ್ಸ್ ಸಿಇಒ ಟಿಮ್ ಸ್ವೀನಿ, ಗೂಗಲ್ ಅನ್ನು ಬೆದರಿಸುವ ದುಷ್ಟ ಕಂಪನಿ ಎಂದು ಕರೆದಿದ್ದಾರೆ. ಗೂಗಲ್ ವರ್ಸಸ್ ಎಪಿಕ್ ಆಂಟಿಟ್ರಸ್ಟ್ ಪ್ರಕರಣದಲ್ಲಿ ಸಾಕ್ಷ್ಯ ನುಡಿದ ಟಿಮ್ ಸ್ವೀನಿ ಮೇಲಿನ ಮಾತುಗಳನ್ನು ಉಲ್ಲೇಖಿಸಿದ್ದಾರೆ.
ಪ್ಲೇ ಸ್ಟೋರ್ನಲ್ಲಿ ಫೋರ್ಟ್ನೈಟ್ ಗೇಮ್ ಬಿಡುಗಡೆ ಮಾಡಲು ಎಪಿಕ್ ಅನ್ನು ಮನವೊಲಿಸಲು ಗೂಗಲ್ ತನ್ನನ್ನು ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂ ಪ್ರಧಾನ ಕಚೇರಿಗೆ ಕರೆಸಿಕೊಂಡಿತ್ತು ಎಂದು ಸ್ವೀನಿ ಸೋಮವಾರ ತಡರಾತ್ರಿ ನ್ಯಾಯಾಲಯಕ್ಕೆ ತಿಳಿಸಿದರು. ಗೂಗಲ್ ತನ್ನನ್ನು ಹಲವಾರು ರೀತಿಯ ಆರ್ಥಿಕ ಪ್ರೋತ್ಸಾಹಗಳೊಂದಿಗೆ ಆಕರ್ಷಿಸಲು ಪ್ರಯತ್ನಿಸಿತು, ಆದರೆ ಅವೆಲ್ಲವನ್ನು ತಾವು ತಿರಸ್ಕರಿಸಿದ್ದಾಗ ಸ್ವೀನಿ ಹೇಳಿದ್ದಾರೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
"ಅದೊಂದು ದುಷ್ಟ ವ್ಯವಸ್ಥೆಯಾಗಿರುವಂತೆ ಕಂಡಿತು. ಎಪಿಕ್ ಗೂಗಲ್ ನೊಂದಿಗೆ ಸ್ಪರ್ಧಿಸದಂತೆ ಮಾಡಲು ಗೂಗಲ್ ನನ್ನ ಮುಂದೆ ಡೀಲ್ಗಳ ಸರಣಿಯನ್ನೇ ಮುಂದಿಟ್ಟಿತ್ತು" ಸ್ವೀನಿ ತೀರ್ಪುಗಾರರಿಗೆ ತಿಳಿಸಿದರು.
"ಆಂಡ್ರಾಯ್ಡ್ನಲ್ಲಿ ಅಪ್ಲಿಕೇಶನ್ಗಳ ಲಭ್ಯತೆಯ ಮೇಲೆ ಗೂಗಲ್ ವಾಸ್ತವಿಕ ನಿಯಂತ್ರಣವನ್ನು ಹೊಂದಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ" ಎಂದು ಅವರು ಹೇಳಿದರು. ಆಂಡ್ರಾಯ್ಡ್ ಅಪ್ಲಿಕೇಶನ್ಗಳ ವಿಷಯದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ಕಂಪನಿಯ ಪ್ಲೇ ಸ್ಟೋರ್ ಅನ್ನು ಸಮರ್ಥಿಸಿಕೊಂಡ ಒಂದು ವಾರದ ನಂತರ ಸ್ವೀನಿ ಸಾಕ್ಷ್ಯ ನುಡಿದಿದ್ದಾರೆ. ಇದು ಗೂಗಲ್ ವಿರುದ್ಧದ ಎರಡು ಆಂಟಿಟ್ರಸ್ಟ್ ಪ್ರಕರಣಗಳಲ್ಲಿ ಒಂದಾಗಿದೆ.
ಗೂಗಲ್ನ ಆಫರ್ಗಳನ್ನು ತಿರಸ್ಕರಿಸಿದ ನಂತರ, ಎಪಿಕ್ ತನ್ನದೇ ಆದ ವೆಬ್ಸೈಟ್ ಮೂಲಕ ಆಂಡ್ರಾಯ್ಡ್ಗಾಗಿ ಫೋರ್ಟ್ನೈಟ್ ಗೇಮ್ ವಿತರಿಸಲು ಪ್ರಯತ್ನಿಸಿತ್ತು. ಆದರೆ ತಮ್ಮ ಈ ಪ್ರಯತ್ನವು ನಿರಾಶಾದಾಯಕವಾಗಿತ್ತು ಮತ್ತು ಕೆಲವೇ ಜನ ವೆಬ್ಸೈಟ್ ಮೂಲಕ ಪೋರ್ಟ್ನೈಟ್ ಡೌನ್ಲೋಡ್ ಮಾಡಿದ್ದರು ಎಂದು ಸ್ವೀನಿ ಸಾಕ್ಷ್ಯ ನುಡಿದರು.
ಗೂಗಲ್ ನಮ್ಮ ಕಠಿಣ ಎದುರಾಳಿಯಾಗಿದೆ ಮತ್ತು ನಮ್ಮನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ಅವರ ವಿರುದ್ಧ ಹೋರಾಡಲು ನಾವು ಸಿದ್ಧರಿದ್ದೇವೆ ಎಂದು ಸ್ವೀನಿ ಹೇಳಿದ್ದಾರೆ. ಎಪಿಕ್ ಅಂತಿಮವಾಗಿ 2020 ರಲ್ಲಿ ಪ್ಲೇ ಸ್ಟೋರ್ನಲ್ಲಿ ಫೋರ್ಟ್ನೈಟ್ ಅನ್ನು ಬಿಡುಗಡೆ ಮಾಡಿತ್ತು.
ಇದನ್ನೂ ಓದಿ : ಏನಿದು ಕ್ಲೌಡ್ ಲ್ಯಾಪ್ಟಾಪ್? ಬೆಲೆ ಇಷ್ಟು ಕಡಿಮೆ ಹೇಗೆ?