ETV Bharat / science-and-technology

ಆಧುನಿಕ ಡಿಜಿಟಲ್​ ತಂತ್ರಜ್ಞಾನದೊಂದಿಗೆ ಡ್ರೋನ್; ಗುರುಡ ಏರೋಸ್ಪೇಸ್​ ಜೊತೆ ಕಾಗ್ನಿಜೆಂಟ್​ ಒಪ್ಪಂದ

author img

By

Published : Dec 22, 2022, 6:40 PM IST

ಡ್ರೋನ್​ ಸೇವೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದೆ. ಜೊತೆಗೆ ಕೃಷಿ, ಉತ್ಪಾದನೆ, ಶಕ್ತಿ ಮತ್ತು ಉಪಯುಕ್ತತೆಗಳು, ಚಿಲ್ಲರೆ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್‌ನಂತಹ ಕೈಗಾರಿಕೆಗಳು ಡ್ರೋನ್ ಸೇವೆಗಳು ವೇಗವಾಗಿ ಬೆಳೆಯುತ್ತಿವೆ.

ಆಧುನಿಕ ಡಿಜಿಟಲ್​ ತಂತ್ರಜ್ಞಾನದೊಂದಿಗೆ ಡ್ರೋನ್; ಗುರುಡ ಏರೋಸ್ಪೇಸ್​ ಜೊತೆ ಕಾಗ್ನಿಜೆಂಟ್​ ಒಪ್ಪಂದ
drone-with-modern-digital-technology-cognizant-ties-up-with-gurud-aerospace

ನವದೆಹಲಿ: ಐಟಿ ದಿಗ್ಗಜ ಕಾಗ್ನಿಜೆಂಟ್​​ ಸ್ವದೇಶಿ ಡ್ರೋನ್​ ಸ್ಟಾರ್ಟ್​ಅಪ್​ ಗರುಡಾ ಏರೋಸ್ಪೇಸ್​ ಜೊತೆಗೆ ಮೆಮೊರಂಡಮ್​ ಆಫ್​ ಅಂಡರ್​ಸ್ಟಂಡಿಂಗ್​ (ಎಂಒಯು)ಗೆ ಸಹಿ ಹಾಕಿದೆ.

ಡ್ರೋನ್​ ಸೇವೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದೆ. ಜೊತೆಗೆ ಕೃಷಿ, ಉತ್ಪಾದನೆ, ಶಕ್ತಿ ಮತ್ತು ಉಪಯುಕ್ತತೆಗಳು, ಚಿಲ್ಲರೆ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್‌ನಂತಹ ಕೈಗಾರಿಕೆಗಳು ಡ್ರೋನ್ ಸೇವೆಗಳು ವೇಗವಾಗಿ ಬೆಳೆಯುತ್ತಿದೆ ಎಂದು ಕಾಗ್ನಿಜೆಂಟ್​ ಉಪಾಧ್ಯಕ್ಷರಾದ ಅಚಲ್​ ಕಟಾರಿಯಾ ತಿಳಿಸಿದ್ದಾರೆ.

ಕಾಗ್ನಿಜೆಂಟ್ ಮತ್ತು ಗರುಡಾ ಏರೋಸ್ಪೇಸ್ ಜೊತೆಯಾಗಿ ಎಂಡ್-ಟು-ಎಂಡ್ ಡ್ರೋನ್ ಆಧಾರಿತ ನಿರ್ವಹಣೆ ಮತ್ತು ಮೇಲ್ವಿಚಾರಣೆ ತರಲು ಸಜ್ಜಾಗಿದೆ. ಕೃಷಿ, ಗೋದಾಮಿನ ನಿರ್ವಹಣೆ ಮತ್ತು ಶಕ್ತಿ ಮತ್ತು ಉಪಯುಕ್ತತೆಗಳಂತಹ ಕ್ಷೇತ್ರಗಳನ್ನು ವಲಯಗಳನ್ನು ಇದು ಒಳಗೊಂಡಿರಲಿದೆ.

ಕಾಗ್ನಿಜೆಂಟ್​ ಜೊತೆಗಿನ ಈ ಒಪ್ಪಂದ ವಿಶ್ವ ದರ್ಜೆ ತಂತ್ರಜ್ಞಾನದ ಮೂಲಕ ಮೇಡ್​ ಇನ್​ ಇಂಡಿಯಾಕ್ಕೆ ಒತ್ತು ನೀಡಲಿದೆ. ಈ ಸಹಯೋಗವು ಕಾಗ್ನಿಜೆಂಟ್ ಅಸೋಸಿಯೇಟ್‌ಗಳಿಗೆ ಅದರ ಸೇವಾ ಮಾರ್ಗಗಳಾದ ಅನಾಲಿಟಿಕ್ಸ್, ಐಒಟಿಗಳಲ್ಲಿ ಅಂತಹ ಉದ್ದೇಶ-ಚಾಲಿತ ಡ್ರೋನ್ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಗರುಡ ಏರೋಸ್ಪೇಸ್ ದೇಶಾದ್ಯಂತ 26 ನಗರಗಳಲ್ಲಿ 400 ಡ್ರೋನ್‌ಗಳ ಫ್ಲೀಟ್ ಮತ್ತು 500 ಪೈಲಟ್‌ಗಳ ಉತ್ತಮ ತರಬೇತಿ ಪಡೆದ ತಂಡವನ್ನು ಹೊಂದಿದೆ.

ಇದನ್ನೂ ಓದಿ: ಸ್ಮಾರ್ಟ್​ ಫೋನ್​ ಇದ್ದರಷ್ಟೇ ಸಾಲದು.. ನೀವು ಕೂಡ ಸ್ಮಾರ್ಟ್​ ಆಗಬೇಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.