ETV Bharat / science-and-technology

Cryptocurrency in India: ಕಾಯ್ದೆ ಜಾರಿಯ ನಂತರವೇ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಿ - ಶೀಘ್ರದಲ್ಲಿ ಶ್ರೀಮಂತರಾಗಲು ಕ್ರಿಪ್ಟೊಕರೆನ್ಸಿ

ಕ್ರಿಪ್ಟೊಕರೆನ್ಸಿಯನ್ನು ಕೆಲವರು ಮೋಸದ ವಹಿವಾಟು ಎಂದುಕೊಂಡರೆ ಇನ್ನು ಕೆಲವರು ಅದನ್ನು ಸುಲಭವಾಗಿ ಶ್ರೀಮಂತರಾಗುವ ಮಾರ್ಗ ಅಂದುಕೊಂಡಿದ್ದಾರೆ. ಏನೇ ಆದರೂ ಕ್ರಿಪ್ಟೊ ಬಗ್ಗೆ ಈವರೆಗೂ ದೇಶದಲ್ಲಿ ಯಾವುದೇ ಕಾನೂನು ಇಲ್ಲ ಎಂಬುದು ಮಾತ್ರ ಸತ್ಯ.

Let there be a law first, and then invest in a cryptocurrency

author img

By

Published : Jun 11, 2023, 12:25 PM IST

ಕ್ರಿಪ್ಟೋಕರೆನ್ಸಿಯನ್ನು ಬೇರೆ ಬೇರೆ ಜನ ಬೇರೆ ಬೇರೆ ರೀತಿಯಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ ಇದೊಂದು ಊಹಾಪೋಹ, ಗೊಂದಲದ ಭಾವನೆಗಳನ್ನು ಉಂಟು ಮಾಡುವ ವಸ್ತುವಾಗಿದೆ. ತಾವು ಅತ್ಯಂತ ಶೀಘ್ರದಲ್ಲಿ ಶ್ರೀಮಂತರಾಗಲು ಕ್ರಿಪ್ಟೊಕರೆನ್ಸಿಯೇ (cryptocurrency) ಮಾರ್ಗವೆಂದು ಅನೇಕರು ನಂಬುತ್ತಾರೆ. ಇನ್ನು ಕೆಲವರು ಇದನ್ನು ಅವನತಿಯ ಹಾದಿ ಎಂದು ನಂಬುತ್ತಾರೆ.

ಪ್ರಪಂಚದ ಹೆಚ್ಚಿನ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿಗೆ ಯಾವ ರೀತಿಯಲ್ಲಿ ಕಾನೂನಿನ ಮಾನ್ಯತೆ ನೀಡಬೇಕೆಂಬ ವಿಷಯದಲ್ಲಿ ಇನ್ನೂವರೆಗೂ ಗೊಂದಲದಲ್ಲಿವೆ ಮತ್ತು ಅದರ ಬಗ್ಗೆ ಸ್ಪಷ್ಟತೆ ಹೊರಹೊಮ್ಮಿಲ್ಲ. ಕಳೆದ ವಾರವಷ್ಟೇ ಯುಎಸ್‌ನಲ್ಲಿನ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಬಿನಾನ್ಸ್ ಮತ್ತು ಕಾಯಿನ್‌ಬೇಸ್ ಈ ಎರಡು ಕ್ರಿಪ್ಟೊ ಎಕ್ಸ್‌ಚೇಂಜ್‌ಗಳ ವಿರುದ್ಧ ಬಹಳ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪರಿಸ್ಥಿತಿ ಹೀಗಿರುವಾಗ ಕ್ರಿಪ್ಟೊನಲ್ಲಿ ಹೂಡಿಕೆ ಮಾಡುವವರು ಎಚ್ಚರವಾಗಿರುವುದು ಒಳಿತು.

ಭಾರತಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ಕ್ರಿಪ್ಟೋಗಳ ವಹಿವಾಟು ಚಾಲ್ತಿಯಲ್ಲಿದ್ದರೂ ಇದಕ್ಕೆ ಕಾನೂನಿನ ಮಾನ್ಯತೆ ನೀಡಲಾಗಿಲ್ಲ. ಆದರೆ ಹಾಗಂತ ಇದನ್ನು ಕಾನೂನು ಬಾಹಿರವೆಂದೂ ಘೋಷಿಸಲಾಗಿಲ್ಲ. ಭಾರತದಲ್ಲಿ ಕ್ರಿಪ್ಟೊ ಎಕ್ಸ್​ಚೇಂಜ್​ಗಳು ಕೆಲಸ ಮಾಡುತ್ತಿದ್ದರೂ ಅವುಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ಹೀಗಾಗಿ ಏನೇ ಮೋಸ ವಂಚನೆ ಉಂಟಾದರೆ ಅದಕ್ಕೆ ಹೂಡಿಕೆದಾರರೇ ಬಾಧ್ಯಸ್ಥರಾಗಿರುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಯಾವುದೇ ಕಾನೂನು ಕ್ರಮದ ಮೊರೆ ಹೋಗುವ ಅವಕಾಶಗಳು ಸದ್ಯಕ್ಕೆ ಭಾರತದಲ್ಲಿ ಇಲ್ಲ.

ತೆರಿಗೆ ಇಲಾಖೆಯು ಕ್ರಿಪ್ಟೋ ವ್ಯವಹಾರವನ್ನು (Crypto business) ಗೌರವಾನ್ವಿತ ಅಥವಾ ಹಣವನ್ನು ಗಳಿಸುವ ಅಥವಾ ಕಳೆದುಕೊಳ್ಳುವ ನ್ಯಾಯಯುತ ಮಾರ್ಗವೆಂದು ಪರಿಗಣಿಸುವುದಿಲ್ಲ. ಕ್ರಿಪ್ಟೋಕರೆನ್ಸಿಯನ್ನು ವಿನಿಮಯವಾಗಿ ಪಡೆದುಕೊಂಡು ನಿಷೇಧಿತ ಉತ್ಪನ್ನಗಳು ಮತ್ತು ಡ್ರಗ್ಸ್​ಗಳನ್ನು ಮಾರಾಟ ಮಾಡುವ 'ಡಾರ್ಕ್ ನೆಟ್' ಸಹ ಇದೆ. ಕ್ರಿಪ್ಟೋಕರೆನ್ಸಿಗಳ ಬಳಕೆಯು ದೇಶಾದ್ಯಂತ ಲಂಚದ ಹಣ ಪಾವತಿ ಮತ್ತು ಭೂಗತ ಚಟುವಟಿಕೆಗಳನ್ನು ಸಹ ಸುಗಮಗೊಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ಸಮಯಗಳಲ್ಲಿ ಕ್ರಿಪ್ಟೋಕರೆನ್ಸಿಯ ಬಗ್ಗೆ ಚರ್ಚೆ ನಡೆಸಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಕ್ರಿಪ್ಟೊಕರೆನ್ಸಿಗೆ ಮಾನ್ಯತೆ (Recognition of Cryptocurrency in India) ನೀಡುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನಿರ್ಧರಿಸಲು ಇನ್ನೂ ಬಹಳ ಕಾಲ ಬೇಕಾಗಬಹುದು ಎನ್ನಲಾಗಿದೆ.

ಆದರೆ ಇದೇ ಸಮಯದಲ್ಲಿ ಭಾರತದಲ್ಲಿ ಹಲವಾರು ಕ್ರಿಪ್ಟೋಕರೆನ್ಸಿಗಳ ವಹಿವಾಟು ನಡೆದಿದೆ. ಕ್ರಿಪ್ಟೊಗಳ ಬಗ್ಗೆ ಇಷ್ಟೆಲ್ಲ ಗೊಂದಲಗಿದ್ದರೂ ಇವುಗಳ ವಹಿವಾಟು ನಡೆದಿರುವುದಾದರೂ ಹೇಗೆ ಎಂದು ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಕ್ರಿಪ್ಟೊ ವಹಿವಾಟು ಸ್ಟಾಕ್ ಮಾರುಕಟ್ಟೆಯಲ್ಲಿನ ಪೆನ್ನಿ ಸ್ಟಾಕ್‌ಗಳ ವಹಿವಾಟನ್ನು ಹೋಲುತ್ತದೆ. ಪೆನ್ನಿ ಸ್ಟಾಕ್ಸ್​ ಅಥವಾ ಚಿಕ್ಕ ಮೌಲ್ಯದ ಸ್ಟಾಕ್​ಗಳನ್ನು ಖರೀದಿಸುವವರ ಸಂಖ್ಯೆ ಬಹಳ ದೊಡ್ಡದಾಗಿರುತ್ತದೆ. ಆದರೆ ಅವರೆಲ್ಲರೂ ತ್ವರಿತವಾಗಿ ಒಂದಷ್ಟು ಹಣವನ್ನು ಜೇಬಿಗಿಳಿಸಿಕೊಂಡು ಹೊರನಡೆಯಲು ಈ ಮೌಲ್ಯರಹಿತ ಸ್ಟಾಕ್​ಗಳನ್ನು ಖರೀದಿಸಿರುತ್ತಾರೆ. ಕ್ರಿಪ್ಟೊ ವಹಿವಾಟು ಕೂಡ ಹೀಗೆಯೇ ಕೆಲಸ ಮಾಡುತ್ತದೆ.

ಕ್ರಿಪ್ಟೊಗೆ ಹೋಲಿಸಿದರೆ ಈಕ್ವಿಟಿ ಮಾರುಕಟ್ಟೆಗಳು ಹೆಚ್ಚು ಸರಳವಾಗಿದ್ದು ಸಾಕಷ್ಟು ಸುರಕ್ಷತೆ ಹೊಂದಿವೆ. ವಿವಾದ ಪರಿಹಾರಕ್ಕೆ ಸರಿಯಾದ ಕಾರ್ಯವಿಧಾನ, ಮಧ್ಯಸ್ಥಿಕೆ ವ್ಯವಸ್ಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸೆಬಿಯಂಥ ಪ್ರಬಲ ನಿಯಂತ್ರಣಾ ಪ್ರಾಧಿಕಾರದಿಂದ ಇವು ನಿಯಂತ್ರಿಸಲ್ಪಡುತ್ತವೆ. ಕ್ರಿಪ್ಟೋಕರೆನ್ಸಿಗಳನ್ನು ನೋಡುವುದಾದರೆ ಈ ಯಾವ ಅನುಕೂಲಗಳೂ ಅದರಲ್ಲಿಲ್ಲ. ಹೂಡಿಕೆದಾರರು ಯಾವಾಗಲೂ ತಾವು ವಹಿವಾಟು ನಡೆಸಿದ ಎಕ್ಸ್​ಚೇಂಜ್ ಕೇಂದ್ರದ ಮೇಲೆ ಅವಲಂಬಿತರಾಗಿರುತ್ತಾರೆ. ಒಂದು ಕೈಯನ್ನು ಬೆನ್ನಿಗೆ ಕಟ್ಟಿಕೊಂಡು ಫುಟ್ಬಾಲ್ ಆಟ ಆಡಿದಂತಿದೆ ಕ್ರಿಪ್ಟೊ ವ್ಯಾಪಾರ.

ಮುಸುಕಿನ ಹಿಂದಿನಿಂದ ಕೈಬೀಸಿ ಕರೆಯುವ ಹೆಣ್ಣು ನಿಗೂಢ ಮತ್ತು ಸುಂದರವಾಗಿರುವ ಭಾವ ಮೂಡಿಸುತ್ತಾಳೆ. ಆದರೆ ಇಂಥ ನಿಗೂಢ ಸೌಂದರ್ಯದ ಬೆನ್ನು ಬೀಳದಿರುವುದೇ ಒಳಿತು. ಭಾರತದಲ್ಲಿ ಬಿಟ್‌ಕಾಯಿನ್‌ಗಳು ಕಾನೂನುಬದ್ಧತೆಯ ಸ್ಪಷ್ಟತೆಯನ್ನು ಹೊಂದಿಲ್ಲದ ಕಾರಣದಿಂದ ಈಗಲೇ ಇವುಗಳ ವಹಿವಾಟಿನಲ್ಲಿ ತೊಡಗಿಕೊಳ್ಳುವುದು ಶ್ರೇಯಸ್ಕರವಲ್ಲ. ಲಾಭ ಮತ್ತು ನಷ್ಟವನ್ನು ಊಹಿಸಲು ಸಾಧ್ಯವಿಲ್ಲದ ಕಾರಣದಿಂದ ಇದು ಅಪಾಯಕಾರಿಯಾಗಿದೆ.

ಒಟ್ಟಾರೆಯಾಗಿ ಬಿಟ್ ಕಾಯಿನ್​ಗಳು ಈಗ ನಿಮಗೆ ಎಷ್ಟೇ ಆಕರ್ಷಕವಾಗಿ ಕಾಣಿಸಿದರೂ ಅವುಗಳ ಗೋಜಿಗೆ ಹೋಗದಿರುವುದು ಸೂಕ್ತ. ಇವುಗಳ ಬಗ್ಗೆ ದೇಶದಲ್ಲಿ ಸೂಕ್ತವಾದ ಕಾನೂನು ಜಾರಿಗೆ ಬರುವವರೆಗೂ ಕಾಯಿರಿ ಎಂಬುದು ಹಣಕಾಸು ತಜ್ಞರ ಸಲಹೆಯಾಗಿದೆ.

ಇದನ್ನೂ ಓದಿ : ಭಾರತದಲ್ಲಿ ಐಡಿ ವೆರಿಫಿಕೇಶನ್ ಆರಂಭಿಸಿದ ಲಿಂಕ್ಡ್​ ಇನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.