ETV Bharat / science-and-technology

ನೋಡಿ ಲ್ಯಾಂಡರ್​ನ 3-ಡಿ ಚಿತ್ರ; ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಅಧ್ಯಯನ ನಡೆಸಿದ 'ವಿಕ್ರಮ್​' ಚಿತ್ರ ಹಂಚಿಕೊಂಡ ಇಸ್ರೋ - first 3D image of Vikram on Moon

ದಕ್ಷಿಣ ಧ್ರುವದಲ್ಲಿ ಇಳಿದ ವಿಕ್ರಮ್​ ಲ್ಯಾಂಡರ್​ ಸುರಕ್ಷಿತವಾಗಿದ್ದು, ಸದ್ಯಕ್ಕೆ ಅಧ್ಯಯನ ನಿಲ್ಲಿಸಿದೆ. ಇದರ 3-ಡಿ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.

ನೋಡಿ ಲ್ಯಾಂಡರ್​ನ 3-ಡಿ ಚಿತ್ರ
ನೋಡಿ ಲ್ಯಾಂಡರ್​ನ 3-ಡಿ ಚಿತ್ರ
author img

By ETV Bharat Karnataka Team

Published : Sep 5, 2023, 7:48 PM IST

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ವಿಕ್ರಮ್​ ಲ್ಯಾಂಡರ್​ನ ಮೊದಲ 3-ಡಿ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಪ್ರಜ್ಞಾನ್​ ರೋವರ್​ ಆಗಸ್ಟ್​ 30 ರಂದು ಸೆರೆಹಿಡಿದಿತ್ತು.

  • Chandrayaan-3 Mission:

    Anaglyph is a simple visualization of the object or terrain in three dimensions from stereo or multi-view images.

    The Anaglyph presented here is created using NavCam Stereo Images, which consist of both a left and right image captured onboard the Pragyan… pic.twitter.com/T8ksnvrovA

    — ISRO (@isro) September 5, 2023 " class="align-text-top noRightClick twitterSection" data=" ">

15 ದಿನಗಳ ಕಾಲ ಚಂದ್ರನಲ್ಲಿ ವಿವಿಧ ಕಾರ್ಯಾಚರಣೆ ನಡೆಸಿದ್ದ ರೋವರ್​ ತನ್ನಲ್ಲಿನ ನ್ಯಾವಿಕ್ಯಾಮ್​ ಮೂಲಕ ಲ್ಯಾಂಡರ್​ನ ಸುಂದರವಾದ ಚಿತ್ರವನ್ನು ಸೆರೆಹಿಡಿದಿತ್ತು. ನ್ಯಾವಿಕ್ಯಾಮ್​ ನೀಡಿದ ಚಿತ್ರವನ್ನು ಬಳಸಿಕೊಂಡು 3-ಡಿ ಚಿತ್ರವನ್ನು ರಚಿಸಲಾಗಿದೆ ಎಂದು ಇಸ್ರೋ ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) ಮಾಹಿತಿ ಹಂಚಿಕೊಂಡಿದೆ.

ಅನಾಗ್ಲಿಫ್ ಸ್ಟಿರಿಯೊ ಮೂರು ಆಯಾಮಗಳಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದೆ. ಇದು ವಸ್ತು ಅಥವಾ ಭೂಪ್ರದೇಶದ ಸರಳ ದೃಶ್ಯವಾಗಿದೆ. ಇಲ್ಲಿರುವ ಲ್ಯಾಂಡರ್ನ ಚಿತ್ರವನ್ನು NavCam ಸ್ಟಿರಿಯೊ ಬಳಸಿ ರೂಪಿಸಲಾಗಿದೆ. ಇದು ಪ್ರಗ್ಯಾನ್ ರೋವರ್‌ ಸೆರೆಹಿಡಿದಿರುವ ಎಡ ಮತ್ತು ಬಲ ಚಿತ್ರಗಳಾಗಿವೆ. ಮೂರು ಕೋನಗಳಲ್ಲಿನ ಎಡ ಚಿತ್ರವು ಕೆಂಪು ಬಣ್ಣ ಉಂಟು ಮಾಡಿದರೆ, ಬಲ ಚಿತ್ರವು ನೀಲಿ ಮತ್ತು ಹಸಿರಿನಿಂದ ಕೂಡಿದೆ. ಈ ಎರಡು ಚಿತ್ರಗಳೂ ಸ್ಟಿರಿಯೊ ಪರಿಣಾಮಕ್ಕೆ ಕಾರಣವಾಗಿದೆ. ಇದು ಲ್ಯಾಂಡರ್​ ಚಿತ್ರವು 3 ಡಿಯಲ್ಲಿ ಕಾಣುವಂತೆ ಮಾಡುತ್ತದೆ ಎಂದು ಇಸ್ರೋ ಬರೆದುಕೊಂಡಿದೆ.

ನ್ಯಾವಿಕ್ಯಾಮ್​ ಅನ್ನು ಎಲ್​ಇಒಎಸ್​ ಮತ್ತು ಇಸ್ರೋ ಜಂಟಿಯಾಗಿ ರೂಪಿಸಿದೆ. ಅದನ್ನು ಎಸ್​ಎಸಿ ಮತ್ತು ಇಸ್ರೋ ಕೂಡಿಕೊಂಡು ಮಾಹಿತಿಯನ್ನು ವಿಶ್ಲೇಷಣೆ ಮಾಡುತ್ತವೆ. ಇಲ್ಲಿಯವರೆಗೂ ನ್ಯಾವಿಕ್ಯಾಮ್​ ಚಂದ್ರನ ಹಲವಾರು ಚಿತ್ರಗಳನ್ನು ಭೂಮಿಗೆ ರವಾನಿಸಿದೆ ಎಂದು ಇಸ್ರೋ ತಿಳಿಸಿದೆ.

ಲ್ಯಾಂಡರ್ ಪೆಲೋಡ್‌ಗಳನ್ನು ಸ್ವಿಚ್ ಆಫ್: ಸೋಮವಾರವಷ್ಟೇ ಇಸ್ರೋ, ಲ್ಯಾಂಡರ್​ ಅನ್ನು ಹಾಪ್ ಪರೀಕ್ಷೆಗೆ ಒಳಪಡಿಸಿತ್ತು. ಚಂದ್ರನ ಮೇಲಿರುರವ ವಿಕ್ರಮ್ ಲ್ಯಾಂಡರ್ ಅನ್ನು ತುಸು ಎತ್ತರಿಸಿ ಮತ್ತೆ ಲ್ಯಾಂಡ್​ ಮಾಡಲಾಗಿತ್ತು. ಇದರ ನಂತರ ಲ್ಯಾಂಡರ್ ಪೆಲೋಡ್‌ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ. ಈ ಪರೀಕ್ಷೆಯಿಂದ ಭವಿಷ್ಯದಲ್ಲಿ ಚಂದ್ರನಲ್ಲಿಗೆ ಮಾನವ ಸಹಿತ ಕಾರ್ಯಾಚರಣೆ ನಡೆಸಿದಲ್ಲಿ ಉಪಗ್ರಹಗಳನ್ನು ಮರಳಿ ತರುವ ಸಾಹಸ ನಡೆಸಬಹುದು ಎಂಬುದನ್ನು ಇದು ಸಾಬೀತು ಮಾಡಿದೆ.

ಸೋಮವಾರ ಬೆಳಗ್ಗೆ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ ನಿದ್ರಾವಸ್ಥೆಗೆ(ಸ್ಲೀಪ್ ಮೋಡ್‌) ಕಳುಹಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಅದರಿಂದ ಬರುವ ಮಾಹಿತಿಯನ್ನು ಚಾಲ್ತಿಯಲ್ಲಿಟ್ಟರೂ ಪೆಲೋಡ್‌ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ. ಜೊತೆಗೆ ಲ್ಯಾಂಡರ್‌ನಲ್ಲಿರುವ ಚೆಸ್ಟೆ, ರಂಬಾ ಮತ್ತು ಐಎಲ್​ಎಸ್​ಎ ಪೆಲೋಡ್‌ಗಳಿಂದ ಪ್ರಯೋಗಗಳನ್ನು ನಡೆಸಲಾಗಿದ್ದು, ಸಂಗ್ರಹಿಸಿದ ಡೇಟಾವನ್ನು ಭೂಮಿಗೆ ಅವುಗಳು ರವಾನಿಸಿವೆ.

ಇದನ್ನೂ ಓದಿ: ವಿಕ್ರಂ ಲ್ಯಾಂಡರ್​ ಪೆಲೋಡ್​ಗಳು ಸ್ವಿಚ್ಡ್​​​ ಆಫ್, ರಿಸಿವರ್ ಆನ್: ಹೊಸ ಫೋಟೋ ಹಂಚಿಕೊಂಡ ಇಸ್ರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.