ETV Bharat / science-and-technology

ಎಐನಿಂದ ರಚಿತವಾದ ಡೀಪ್​ಫೇಕ್ ಕುರಿತು ಸಾಮಾಜಿಕ ಜಾಲತಾಣ: ಐಟಿ ದೈತ್ಯರಿಗೆ ಕೇಂದ್ರ ಸರ್ಕಾರದ ಸಲಹೆ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಜಾಲತಾಣಗಳ ದೈತ್ಯರಿಗೆ ಸಲಹೆ ಕೊಟ್ಟಿದೆ. ಸಾಮಾಜಿಕ ಜಾಲತಾಣಗಳು ತಪ್ಪು ಮಾಹಿತಿ, ಸುಳ್ಳು ಅಥವಾ ತಪ್ಪುದಾರಿಗೆಳೆಯುವ ವಿಷಯ ಮತ್ತು ಡೀಪ್​ಫೇಕ್​ ಸೇರಿದಂತೆ ನಕಲಿ ಕಂಟೆಂಟ್​ಗಳನ್ನು ಗುರುತಿಸಬೇಕು, ಜೊತೆಗೆ ಅವುಗಳನ್ನು ತ್ವರಿತವಾಗಿ ತೆಗೆದುಹಾಕಬೇಕು ಎಂದು ಹೇಳಿದೆ.

deep fakes
ಎಐನಿಂದ ರಚಿತವಾದ ಡೀಪ್​ಫೇಕ್ ಕುರಿತು ಸಾಮಾಜಿಕ ಜಾಲತಾಣಗಳ ದೈತ್ಯರಿಗೆ ಕೇಂದ್ರ ಸರ್ಕಾರ ಸಲಹೆ
author img

By ETV Bharat Karnataka Team

Published : Dec 27, 2023, 8:21 AM IST

ನವದೆಹಲಿ: ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್, ಎಲೋನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌, ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ಮಾರ್ಕ್ ಜುಕರ್‌ಬರ್ಗ್ ಮೆಟಾ ಸೇರಿದಂತೆ ಟೆಕ್ ದೈತ್ಯರಿಗೆ ಕೇಂದ್ರ ಸರ್ಕಾರ ಮಂಗಳವಾರ ಪ್ರಬಲವಾದ ಸಲಹೆ ನೀಡಿದೆ.

ಸಾಮಾಜಿಕ ಜಾಲತಾಣವಾದ ಎಕ್ಸ್​, ಸರ್ಚ್ ಇಂಜಿನ್ ದೈತ್ಯ ಗೂಗಲ್, ವೃತ್ತಿಪರ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್ ಮತ್ತು ಟೆಲಿಗ್ರಾಮ್, ಶೇರ್‌ಚಾಟ್ ಮತ್ತು ಭಾರತೀಯ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಸೇರಿದಂತೆ ಇತರ ಮಧ್ಯವರ್ತಿಗಳಿಗೆ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚನೆ ನೀಡಲಾಗಿತ್ತು. ನಂತರ ಈ ವರ್ಷ ಕೂಡ ಮಾಹಿತಿ ತಂತ್ರಜ್ಞಾನ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಇಲಾಖೆ ನೀಡಿರುವ ಸಲಹೆಯು ನಿರ್ದಿಷ್ಟವಾಗಿ ಕೃತಕ ಬುದ್ಧಿಮತ್ತೆಯ ಡೀಪ್​ಫೇಕ್​ಗೆ ಸಂಬಂಧಿಸಿದೆ.

ಸಾಮಾಜಿಕ ಜಾಲತಾಣ, ಐಟಿ ದೈತ್ಯರೊಂದಿಗೆ ಸರ್ಕಾರ ಚರ್ಚೆ: ಕಳೆದ ಒಂದು ತಿಂಗಳಿನಿಂದ ಐಫೋನ್ ತಯಾರಕ Apple Inc ಮತ್ತು HP ಮತ್ತು Dell ನಂತಹ ಹಾರ್ಡ್‌ವೇರ್ ತಯಾರಕರು ಸೇರಿದಂತೆ ಟೆಕ್ ಕಂಪನಿಗಳು ಸೇರಿದಂತೆ ಸಾಮಾಜಿಕ ಜಾಲತಾಣ ಮತ್ತು ಐಟಿ ದೈತ್ಯರೊಂದಿಗೆ ಸರ್ಕಾರವು ಚರ್ಚಿಸಿದ ನಂತರ, ಮಂಗಳವಾರದ ಸಲಹೆ ನೀಡಲಾಗಿದೆ. ಇಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಉದ್ಯಮ ಪ್ರತಿನಿಧಿಗಳ ನಡುವಿನ ಚರ್ಚೆಯ ನಂತರ ಹೊರಡಿಸಲಾದ ಸಲಹೆಯು ನಿಷೇಧಿತ ವಿಷಯದ ಬಗ್ಗೆ ವಿಶೇಷವಾಗಿ ಐಟಿ ಮತ್ತು ಸಾಮಾಜಿಕ ಜಾಲತಾಣ ಕಂಪನಿಗಳು ಬಳಕೆದಾರರೊಂದಿಗೆ ಅತ್ಯಂತ ಸ್ಪಷ್ಟ ಮತ್ತು ನಿಖರವಾದ ರೀತಿಯಲ್ಲಿ ಸಂವಹನ ನಡೆಸಬೇಕು. ಇದನ್ನು ಐಟಿ ನಿಯಮಗಳ ನಿಯಮ 3(1)(ಬಿ) ಅಡಿ ನಿರ್ದಿಷ್ಟ ಪಡಿಸಲಾಗಿದೆ.

''ತಪ್ಪು ಮಾಹಿತಿಯು ಇಂಟರ್​ನೆಟ್‌ನಲ್ಲಿ ಬಳಕೆದಾರರ ಸುರಕ್ಷತೆ ಮತ್ತು ನಂಬಿಕೆ ಬಗ್ಗೆ ಹೆದರಿಕೆ ಶುರುವಾಗಿದೆ. ಅದರಲ್ಲೂ ಎಐನಿಂದ ರಚಿತವಾಗುವ ಡೀಪ್​ಫೇಕ್​ನ ತಪ್ಪು ಮಾಹಿತಿಯು ಡಿಜಿಟಲ್ ಬಳಕೆದಾರರ ಸುರಕ್ಷತೆ ಮತ್ತು ನಂಬಿಕೆ ಕುರಿತ ಹೆದರಿಕೆ ಇನ್ನಷ್ಟು ಹೆಚ್ಚಾಗಿದೆ'' ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು. ಐಟಿ ನಿಯಮಗಳ ಅಡಿಯಲ್ಲಿ ಅನುಮತಿಸದ ವಿಷಯಗಳು, ನಿರ್ದಿಷ್ಟವಾಗಿ ನಿಯಮ 3(1)(ಬಿ) ಅಡಿಯಲ್ಲಿ ಪಟ್ಟಿ ಮಾಡಲಾದ ವಿಷಯವನ್ನು ಅದರ ಸೇವಾ ನಿಯಮಗಳು ಮತ್ತು ಬಳಕೆದಾರ ಒಪ್ಪಂದಗಳ ಮೂಲಕ ಬಳಕೆದಾರರಿಗೆ ಸ್ಪಷ್ಟ ಮತ್ತು ನಿಖರವಾದ ಭಾಷೆಯಲ್ಲಿ ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.

"ಮೊದಲ ನೋಂದಣಿಯ ಸಮಯದಲ್ಲಿ ಬಳಕೆದಾರರಿಗೆ ಇದನ್ನು ಸ್ಪಷ್ಟವಾಗಿ ತಿಳಿಸಬೇಕು. ನಿರ್ದಿಷ್ಟವಾಗಿ, ಲಾಗಿನ್‌ನ ಪ್ರತಿಯೊಂದು ನಿದರ್ಶನದಲ್ಲಿ ಮತ್ತು ಪ್ಲಾಟ್‌ಫಾರ್ಮ್‌ಗೆ ಮಾಹಿತಿಯನ್ನು ಅಪ್‌ಲೋಡ್ ಮಾಡುವಾಗ/ಹಂಚಿಕೊಳ್ಳುವಾಗ ಬಳಕೆದಾರರಿಗೆ ತಿಳಿಸಬೇಕಾಗುತ್ತದೆ" ಎಂದು ಸರ್ಕಾರ ಹೇಳಿದೆ. ಐಟಿ ನಿಯಮಗಳ ನಿಯಮ 3(1)(ಬಿ) ಉಲ್ಲಂಘನೆಯ ಸಂದರ್ಭದಲ್ಲಿ 1860 ರ ಭಾರತೀಯ ದಂಡ ಸಂಹಿತೆ (IPC) ಮತ್ತು IT ಕಾಯಿದೆ 2000 ಸೇರಿದಂತೆ ದಂಡದ ನಿಬಂಧನೆಗಳ ಬಗ್ಗೆ ಬಳಕೆದಾರರಿಗೆ ತಿಳಿಸಲಾಗಿದೆ ಎಂದು ಡಿಜಿಟಲ್ ಮಧ್ಯವರ್ತಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಒತ್ತಿ ಹೇಳುತ್ತದೆ.

''ಭಾರತೀಯ ದಂಡ ಸಂಹಿತೆ (IPC) 1860, IT ಕಾಯಿದೆ, 2000 ಮತ್ತು ನಿಯಮ 3(1)(b) ಉಲ್ಲಂಘನೆಯ ಸಂದರ್ಭದಲ್ಲಿ ಕೈಗೊಳ್ಳಲಾಗುವ ಇತರ ಕಾನೂನುಗಳ ವಿವಿಧ ದಂಡದ ನಿಬಂಧನೆಗಳ ಬಗ್ಗೆ ಬಳಕೆದಾರರಿಗೆ ತಿಳಿದಿರಬೇಕು. ಹೆಚ್ಚುವರಿಯಾಗಿ, ಸೇವಾ ನಿಯಮಗಳು ಮತ್ತು ಬಳಕೆದಾರರ ಒಪ್ಪಂದಗಳು ಸಂದರ್ಭಕ್ಕೆ ಅನ್ವಯವಾಗುವ ಸಂಬಂಧಿತ ಭಾರತೀಯ ಕಾನೂನುಗಳ ಅಡಿ ಕಾನೂನು ಉಲ್ಲಂಘನೆಗಳನ್ನು ಕಾನೂನು ಜಾರಿ ಏಜೆನ್ಸಿಗಳಿಗೆ ವರದಿ ಮಾಡಲು ಮಧ್ಯವರ್ತಿಗಳು, ಪ್ಲಾಟ್‌ಫಾರ್ಮ್‌ಗಳು ಬಾಧ್ಯತೆ ಹೊಂದಿವೆ ಎಂದು ಹೈಲೈಟ್ ಮಾಡಬೇಕು'' ಎಂದು ಸರ್ಕಾರವು ನೀಡಿದ ಸಲಹೆಯಲ್ಲಿ ತಿಳಿಸಿದೆ.

ನಿಯಮ 3(1)(b) ಐಟಿ ನಿಯಮಗಳ ಕಟ್ಟುನಿಟ್ಟಿನ ವಿಭಾಗದಲ್ಲಿ ಮಧ್ಯವರ್ತಿಗಳು ತಮ್ಮ ನಿಯಮಗಳು, ನಿಬಂಧನೆಗಳು, ಗೌಪ್ಯತೆ ನೀತಿ ಮತ್ತು ಬಳಕೆದಾರರ ಒಪ್ಪಂದವನ್ನು ಬಳಕೆದಾರರ ಆದ್ಯತೆಯ ಭಾಷೆಯಲ್ಲಿ ತಿಳಿಸಲು ಸರ್ಕಾರ ಸೂಚನೆ ನೀಡಿದೆ. ಮಧ್ಯವರ್ತಿಗಳು ಎಂದು ಕರೆಯಲ್ಪಡುವ ಈ ಸಾಮಾಜಿಕ ಜಾಲತಾಣ ಮತ್ತು ಟೆಕ್ ಕಂಪನಿಗಳು 11 ಪಟ್ಟಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಹೋಸ್ಟ್ ಮಾಡುವುದು, ಪ್ರದರ್ಶಿಸುವುದು, ಅಪ್ಲೋಡ್​ ಮಾಡುವುದು, ಮಾರ್ಪಡಿಸುವುದು, ಪ್ರಕಟಿಸುವುದು, ರವಾನಿಸುವುದು, ಸಂಗ್ರಹಿಸುವುದು, ನವೀಕರಿಸುವುದು ಅಥವಾ ಹಂಚಿಕೊಳ್ಳುವುದನ್ನು ತಡೆಯಲು ಸಮಂಜಸವಾದ ಪ್ರಯತ್ನಗಳನ್ನು ಖಚಿತಪಡಿಸಿಕೊಳ್ಳಲು ನಿರ್ಬಂಧವನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ.

ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು, ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಸಾಮಾಜಿಕ ಮಾಧ್ಯಮದಲ್ಲಿ ಡೀಪ್​ಫೇಕ್​ ವಿಷಯದಿಂದ ಬೆದರಿಕೆಯೊಡ್ಡುವ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು.

ಇದನ್ನೂ ಓದಿ: ಶಬರಿಮಲೆ: 39 ದಿನಗಳಲ್ಲಿ ₹204 ಕೋಟಿ ಆದಾಯ, 31 ಲಕ್ಷ ಭಕ್ತರಿಂದ ಅಯ್ಯಪ್ಪ ಸ್ವಾಮಿಯ ದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.