ETV Bharat / science-and-technology

40 ಲಕ್ಷದ ಮೈಲುಗಲ್ಲು ದಾಟಿದ ಟಿವಿಎಸ್​ ಅಪಾಚಿ ಬೈಕ್​ಗಳ ಮಾರಾಟ

ಟಿವಿಎಸ್​ ಕಂಪನಿಯ ಅಪಾಚಿ ಸೀರಿಸ್​ ಬೈಕ್​ಗಳ ಮಾರಾಟ 40 ಲಕ್ಷದ ಗಡಿ ದಾಟಿದೆ ಎಂದು ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ.

New milestone in Apache bike bike sales
ಟಿವಿಎಸ್​ ಅಪಾಚಿ ಬೈಕ್​ಗಳ ಮಾರಾಟದಲ್ಲಿ ದಾಖಲೆ
author img

By

Published : Oct 12, 2020, 5:13 PM IST

Updated : Feb 16, 2021, 7:52 PM IST

ನವದೆಹಲಿ : ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟಿವಿಎಸ್​ ಕಂಪನಿಯ ಅಪಾಚಿ ಬೈಕ್ ಮಾರಾಟ 40 ಲಕ್ಷ ದಾಟಿದೆ ಎಂದು ಕಂಪನಿ ತಿಳಿಸಿದೆ.

2005 ರಲ್ಲಿ ಪ್ರಾರಂಭವಾದ ಟಿವಿಎಸ್ ಅಪಾಚಿ ಸರಣಿಯು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಮೋಟಾರ್‌ ಸೈಕಲ್ ಬ್ರಾಂಡ್​ಗಳಲ್ಲಿ ಒಂದಾಗಿದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಹೆಸರನ್ನು ಹೊಂದಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಕೆಲ ವರ್ಷಗಳಲ್ಲಿ ಯುವ ಬೈಕ್ ಸವಾರರು ಕಾರ್ಯಕ್ಷಮತೆ ಆಧಾರಿತ, ಪ್ರೀಮಿಯಂ ಮೋಟಾರ್‌ ಸೈಕಲ್‌ಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಇದರ ಪರಿಣಾಮವಾಗಿ, ಟಿವಿಎಸ್ ಅಪಾಚಿ ಬ್ರಾಂಡ್ ಜಾಗತಿಕವಾಗಿ ಮೋಟಾರ್‌ ಸೈಕಲ್ ಉತ್ಸಾಹಿಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ನಿರ್ದೇಶಕ ಮತ್ತು ಸಿಇಒ ಕೆ.ಎನ್ ರಾಧಾಕೃಷ್ಣನ್ ಹೇಳಿದ್ದಾರೆ.

ಅಪಾಚಿ ಬೈಕ್ ಬ್ರಾಂಡ್​ ಕಂಪನಿಯ ತಾಂತ್ರಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. 160 ಸಿಸಿ ಯಿಂದ 310 ಸಿಸಿ ವರೆಗಿನ ಮೋಟಾರ್‌ ಸೈಕಲ್‌ಗಳ ಮೂಲಕ ಕಂಪನಿಗೆ ವಿಭಿನ್ನ ಮತ್ತು ವಿಶಿಷ್ಟ ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಾಧ್ಯವಾಗಿದೆ ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ. ಟಿವಿಎಸ್ ಅಪಾಚಿ ಸರಣಿಯಲ್ಲಿ ಆರ್‌ಟಿಆರ್ 160, ಅಪಾಚಿ ಆರ್‌ಟಿಆರ್ 160 4 ವಿ, ಅಪಾಚಿ ಆರ್‌ಟಿಆರ್ 180 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 4 ವಿ ಮತ್ತು ಆರ್​ಆರ್​ 310 ಸೇರಿವೆ.

Last Updated : Feb 16, 2021, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.