ETV Bharat / science-and-technology

ಬ್ಲೂ ಟಿಕ್​ ಲೆಗಸಿ: ಎಲೋನ್​ ಮಸ್ಕ್ ​- ಸ್ಟೀಫನ್​ ಕಿಂಗ್​​ ನಡುವೆ ಟ್ವೀಟ್​ ವಾರ್​​ - ಖ್ಯಾತನಾಮರ ಬ್ಲೂ ಟಿಕ್​ ಲೆಗಸಿ

ಬ್ಲೂ ಟಿಕ್​ ಲೆಗಸಿಯನ್ನು ಪಾವತಿ ಮಾಡದೇ ಇದ್ದರೂ ನೀಡಿದ ಕಾರಣಕ್ಕೆ ಸ್ಟೀಫನ್​ ಕಿಂಗ್​ ಎಲೋನ್​ ಮಸ್ಕ್​ ವಿರುದ್ಧ ನಯವಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Blue Tick Legacy: Elon Musk-Stephen King Tweet War

author img

By

Published : Apr 24, 2023, 12:23 PM IST

ಲಾಸ್​ ಏಂಜಲ್ಸ್​​: ಟ್ವಿಟರ್​​ ಸಿಇಒ ಆದ ಬಳಿಕ ಉದ್ಯಮಿ ಎಲೋನ್​ ಮಸ್ಕ್​​ ಉದ್ಯೋಗಿಗಳ ವಜಾದಿಂದ ಬ್ಲೂ ಟಿಕ್​ ಚಂದಾದಾರಿಕೆವರೆಗೆ ಹಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ. ಅಲ್ಲದೇ ಈ ಸಂಬಂಧ ಮಸ್ಕ್​ ಕೂಡ ಹಲವು ಟೀಕೆಗೆ ಗುರಿಯಾಗಿದ್ದಾರೆ. ಪ್ರಸ್ತುತ ಅನೇಕ ಖ್ಯಾತನಾಮರ ಬ್ಲೂ ಟಿಕ್​ ಲೆಗಸಿಯನ್ನು ತೆಗೆದ ಕಾರಣಕ್ಕೆ ಹಲವರು ಮಸ್ಕ್​ನ ಕಟು ಧೋರಣೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಬ್ಲೂ ಟಿಕ್​ ಹೊಂದಿದ ಅನೇಕರು ಇದೀಗ ಪಾವತಿ ಮಾಡದ ಹಿನ್ನೆಲೆ ತಮ್ಮ ಲೆಗಸಿಯನ್ನು ಕಳೆದುಕೊಂಡಿದ್ದಾರೆ. ಟ್ವಿಟರ್​ ಸಂಸ್ಥಾಪಕರಾದ ಜಾರ್ಕ್​ ಡೋರ್ಸೆ ಕೂಡ ಹೊರತಾಗಿಲ್ಲ ಎಂಬುದು ಗಮನಿಸಬೇಕಾದ ವಿಷಯ.

ಏನಿದು ಟ್ವೀಟ್: ಆದಾಗ್ಯೂ, ಮಸ್ಕ್​ ಕೆಲವು ಪ್ರಮುಖ ವ್ಯಕ್ತಿಗಳಿಗೆ ಯಾವುದೇ ಪಾವತಿ ಇಲ್ಲದೇ, ಈ ಬ್ಲೂ ಟಿಕ್​ ಅನ್ನು ಮರು ನೀಡಿದ್ದಾರೆ. ಅದರಲ್ಲೂ ಮಸ್ಕ್​ ಅವರ ಅಚ್ಚುಮೆಚ್ಚಿನ ಲೇಖಕರಲ್ಲಿ ಒಬ್ಬರಾಗಿರುವ ಸ್ಟೀಫನ್​ ಕಿಂಗ್​ ಕೂಡ ಈ ಬ್ಲೂ ಟಿಕ್​ ಅನ್ನು ಪಡೆದಿದ್ದಾರೆ. ಆದರೆ, ಮಸ್ಕ್​ ನೀಡಿರುವ ಈ ಪ್ರಯೋಚಿತ ಬ್ಲೂಟಿಕ್​ ಸ್ಟೀಫನ್​ ಕಿಂಗ್​ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಸ್ಟೀಫನ್​ ಕಿಂಗ್​, ತಮ್ಮ ಬ್ಲೂಟಿಕ್​ ವೇರಿಫೀಕೇಷನ್​ಗೆ ವ್ಯಯ ಮಾಡುತ್ತಿರುವ ಹಣವನ್ನು ಉಕ್ರೇನ್​ ಮತ್ತು ರಷ್ಯಾ ಯುದ್ದಕ್ಕೆ ದಾನಮಾಡುವಂತೆ ಸಲಹೆ ನೀಡಿದ್ದಾರೆ.

ಮಸ್ಕ್​ ಅವರು ತಮ್ಮ ಬ್ಲೂ ಚೆಕ್ ಪಾವತಿಯ ಚೆಕ್​ ಅನ್ನು ದೇಣಿಗೆ ನೀಡುವುದು ಒಳಿತು. ಉಕ್ರೇನ್​ ಯುದ್ಧ ಸಂತ್ರಸ್ತರಿಗೆ ಜೀವನಕ್ಕೆ ಸಹಾಯ ಮಾಡುತ್ತಿರುವ ಪ್ರತ್ಯುಲಾ ಫೌಂಡೇಷನ್​ಗೆ ಈ ಹಣ ನೀಡಬೇಕು. ಕೇವಲ 8 ಅಮೆರಿಕನ್​ ಡಾಲರ್​ ಅಲ್ಲದೇ ಇನ್ನು ಹೆಚ್ಚು ಕೂಡ ಮಸ್ಕ್​ ಅವರು ದೇಣಿಗೆ ನೀಡಬಹುದು ಎಂದು ಟ್ವೀಟ್​ ಮೂಲಕ ಕಿಂಗ್ ತಿಳಿಸಿದ್ದಾರೆ. ಈ ಮೂಲಕ ತಾವು ಟ್ವಿಟರ್​​ಗೆ ಯಾವುದೇ ಪಾವತಿ ಮಾಡದಿದ್ದರೂ ಮಸ್ಕ್​ ತಮಗೆ ಉಚಿತವಾಗಿ ನೀಡಿರುವ ಬ್ಲೂ ಟಿಕ್​ ಸೇವೆಯನ್ನು ನಯವಾಗಿ ತಿರಸ್ಕರಿಸುವುದರ ಜೊತೆಗೆ ತಿರುಗೇಟು ನೀಡಿದ್ದಾರೆ.

ಟ್ವಿಟರ್​ ಅಕೌಂಟ್​ ಬ್ಲೂ ಟಿಕ್​ ಸೇವೆ ಸಬ್​ಸ್ಕ್ರೈಬ್​ ಮಾಡಿದ್ದೇವೆ ಎನ್ನುತ್ತಿದೆ. ಆದರೆ ನಾನು ಮಾಡಿಲ್ಲ. ನಾನು ಯಾವುದೇ ಪಾವತಿ ಮಾಡಿಲ್ಲ. ನಾನು ಟ್ವಿಟರ್​​ಗೆ ಕೇವಲ ಫೋನ್​ ನಂಬರ್​ ಮಾತ್ರ ನೀಡಿದ್ದೇನೆ ಎಂದಿದ್ದಾರೆ ಕಿಂಗ್​ ಕಿಂಗ್​ ಟ್ವೀಟ್​ಗೆ ಕೆರಳಿರುವ ಮಸ್ಕ್​​, ನಾನು ಈಗಾಗಲೇ ಉಕ್ರೇನ್​ ಯುದ್ದ ಪೀಡಿತರ ಸಹಾಯಕ್ಕೆ ಮುಂದಾಗಿದ್ದು, 100 ಅಮೆರಿಕನ್​ ಡಾಲರ್​ ನೀಡಿದ್ದೇನೆ. ನೀವು ಎಷ್ಟು ನೀಡಿದ್ದೀರಾ ಎಂದು ಮರು ಸವಾಲು ಹಾಕಿದ್ದಾರೆ ಕಿಂಗ್​ಗೆ. ರಕ್ಷಣಾ ಇಲಾಖೆ ಹಣ ಕಡಿಮೆಯಾದರೂ ಸ್ಲೇಸ್​ ಎಕ್ಸ್​ ಸಂಘಟನೆ ತನ್ನ ಸೇವಾ ನಿಧಿಯನ್ನು ಮುಂದುವರೆಸಿದೆ ಎಂದಿದ್ದಾರೆ.

ಬ್ಲೂಟಿಕ್​ ಸೇವೆ: 2009ರಲ್ಲಿ ಮೊದಲ ಬಾರಿಗೆ ಸೆಲೆಬ್ರಿಟಿ, ರಾಜಕೀಯ ನಾಯಕರು, ಕಂಪನಿಗಳು ಮತ್ತು ಬ್ರಾಂಡ್ಸ್​​, ಸುದ್ದಿ ಸಂಘಟನೆ ಮತ್ತಿತ್ತರ ಸಾರ್ವಜನಿಕ ಹಿತಾಸಕ್ತಿ ಖಾತೆಗಳಿಗೆ ಬ್ಲೂ ಟಿಕ್​ ಸೇವೆಯನ್ನು ಪರಿಚಯಿಸಿತು. ಅನೇಕ ವೆರಿಫಿಕೇಷನ್​ ಬಳಿಕ ಅನೇಕರು ಬ್ಲೂ ಟಿಕ್​ ಸೇವೆ ಪಡೆದರು.

ಇತ್ತೀಚೆಗೆ ಟ್ವಿಟರ್​ ಸಿಇಒ ಆದ ಬಳಿಕ ಎಲೋನ್​ ಮಸ್ಕ್​ ಈ ಬ್ಲೂಟಿಕ್​ ಸೇವೆಗೆ ಹೊಸ ಮಾರ್ಪಡು ತಂದರು. ಹಣ ಪಾವತಿ ಮಾಡಿದರೆ ಮಾತ್ರ ಈ ಬ್ಲೂ ಟಿಕ್​ ಸೇವೆ ಎಂದು ನಿಯಮ ಜಾರಿಗೆ ತಂದರೂ, ಆರಂಭದಲ್ಲಿ ಇದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು. ಆದರೆ, ಏಪ್ರಿಲ್​ 1 ರಿಂದ ಇದರ ಕಟ್ಟು ನಿಟ್ಟಿನ ಪಾಲನೆಗೆ ಮುಂದಾಗಿದ್ದು, ಅನೇಕ ಖ್ಯಾತನಾಮರು ತಮ್ಮ ಈ ಬ್ಲೂ ಲೆಗಸಿಯನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಟ್ವಿಟರ್ ಯೂಟರ್ನ್: ಪೇ ಮಾಡದಿದ್ದರೂ ಅನೇಕರಿಗೆ ಮರಳಿ ಸಿಕ್ಕ ಬ್ಲೂಟಿಕ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.