WhatsApp ಬಳಸುತ್ತಿರುವಿರಾ? ಆದರೆ ಇದು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಿ. ಏಕೆಂದರೆ 'GB WhatsApp' ಎಂಬ WhatsApp ಕ್ಲೋನ್ ಆ್ಯಪ್ ನಮ್ಮ ದೇಶದ ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ESET ವರದಿ ಎಚ್ಚರಿಸಿದೆ.
ಈ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಥರ್ಡ್-ಪಾರ್ಟಿ ಸ್ಟೋರ್‌ಗಳಲ್ಲಿ ಲಭ್ಯವಿಲ್ಲದಿದ್ದರೂ, ಇದು ವಿವಿಧ ವೆಬ್‌ಸೈಟ್‌ಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಜಿಬಿ ವಾಟ್ಸ್ಆ್ಯಪ್ ಮೂಲ ವಾಟ್ಸ್ಆ್ಯಪ್ನಲ್ಲಿರುವ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ಕೆಲವು ಹೆಚ್ಚುವರಿ ಸೌಲಭ್ಯಗಳೂ ಇವೆ. ಇದು ಮಾಲ್‌ವೇರ್ ಫೈಲ್‌ಗಳೊಂದಿಗೆ ಫೋನ್‌ನಲ್ಲಿ ಕಣ್ಣಿಡುತ್ತದೆ. ಅದು ನಮಗೆ ತಕ್ಷಣ ತಿಳಿಯುವುದಿಲ್ಲ.
ಜಿಬಿ ವಾಟ್ಸ್ಆ್ಯಪ್ ನಿಧಾನವಾಗಿ ಫೋನ್ ದೈನಂದಿನ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಅಂತಹ ಸುರಕ್ಷಿತವಲ್ಲದ ಅಪ್ಲಿಕೇಶನ್‌ಗಳ ಬಳಕೆದಾರರ ಖಾತೆಗಳನ್ನು WhatsApp ತಾತ್ಕಾಲಿಕವಾಗಿ ನಿಷೇಧಿಸಿದೆ. ನಿಷೇಧ ಬಳಿಕವೂ ನೀವು ವಾಟ್ಸ್ಆ್ಯಪ್ ಬಳಸುವುದನ್ನು ಮುಂದುವರಿಸಿದರೆ, ನೀವು WhatsApp ಬಳಸುವುದನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಕ್ಲೋನ್ ವಾಟ್ಸಾಪ್ ಪ್ರಕರಣಗಳು ನಮ್ಮ ದೇಶ ಸೇರಿದಂತೆ ಈಜಿಪ್ಟ್, ಬ್ರೆಜಿಲ್ ಮತ್ತು ಪೆರುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ನಕಲಿ ಅಪ್ಲಿಕೇಶನ್‌ಗಳಿಂದ ಪ್ರಭಾವಿತವಾಗದಿರಲು ಏನು ಮಾಡಬೇಕು?
- WhatsApp ಅಪ್ಲಿಕೇಶನ್ ಮತ್ತು ಅಪ್ಡೇಟ್ನ್ನು Google Play Store ನಿಂದ ಮಾಡಬೇಕು. ಅಪರಿಚಿತ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ ಡೌನ್‌ಲೋಡ್ ಮತ್ತು ಅಪ್ಡೇಟ್ ಮಾಡಿಕೊಳ್ಳಬೇಡಿ.
- ವಾಟ್ಸ್ಆ್ಯಪ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಮಾಹಿತಿಯನ್ನು ಒಮ್ಮೆ ಪರಿಶೀಲಿಸಬೇಕು. ಇದು ದುರುದ್ದೇಶಪೂರಿತ ಅಥವಾ ನಕಲಿ ಎಂದು ತೋರುತ್ತಿದ್ದರೆ ತಕ್ಷಣ ಅದನ್ನು ಅನ್‌ಇನ್‌ಸ್ಟಾಲ್ ಮಾಡಿ.
- ಫೋನ್‌ನಲ್ಲಿ ಭದ್ರತಾ ಸ್ಥಿತಿಯನ್ನು ಪರಿಶೀಲಿಸಿ. ಯಾವುದೇ ಅನಧಿಕೃತ ಆಂಟಿವೈರಸ್ ಡೌನ್‌ಲೋಡ್ ಆಗಿದೇಯಾ ಎಂಬುದ ಪರಿಶೀಲಿಸಿ. ಅಂತಹ ವೈರಸ್ಗಳು ಕಂಡು ಬಂದ್ರೆ ಕೂಡಲೇ ನಿಮ್ಮ ಮೊಬೈಲ್ನ್ನು ಆಂಟಿವೈರಸ್ ಅಪ್ಲಿಕೇಶ್ನಿಂದ ತೆಗೆದು ಹಾಕಿ. ಹೀಗೆ ನೀವು ಬಳಸುತ್ತಿರುವ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಗ್ಗೆ ಒಮ್ಮೆ ಎಚ್ಚರ ವಹಿಸುವುದು ಸೂಕ್ತ.