ETV Bharat / science-and-technology

ಐಫೋನ್​ 15 ಪ್ರೊ, ಪ್ರೊ ಮ್ಯಾಕ್ಸ್​ ಬಿಡುಗಡೆ: 48 MP ಕ್ಯಾಮರಾ, ಯುಎಸ್‌ಬಿ-ಸಿ ಟೈಪ್ ಚಾರ್ಜರ್‌ ಇನ್ನೂ ಏನೆಲ್ಲಾ!

Apple unveils iPhone 15: ಆ್ಯಪಲ್ ಕಂಪನಿ ಸಾಕಷ್ಟು ವೈಶಿಷ್ಟ್ಯತೆಗಳೊಂದಿಗೆ ಹೊಚ್ಚ ಹೊಸ ಐಫೋನ್​ 15 ಪ್ರೊ ಮತ್ತು ಐಫೋನ್​ 15 ಪ್ರೊ ಮ್ಯಾಕ್ಸ್​ ಬಿಡುಗಡೆ ಮಾಡಿದೆ. ಇದು ಅತ್ಯಂತ ಹಗುರ ಮತ್ತು ತೆಳುವಾದ ವಿನ್ಯಾಸ ಹೊಂದಿದೆ.

Apple iPhone 15 Pro Launch
ಟೆಕ್​ ಪ್ರಿಯರಿಗೆ ಗುಡ್ ನ್ಯೂಸ್: ಆ್ಯಪಲ್ ಐಫೋನ್​ 15 ಪ್ರೊ, ಪ್ರೊ ಮ್ಯಾಕ್ಸ್​ ಬಿಡುಗಡೆ...
author img

By ETV Bharat Karnataka Team

Published : Sep 13, 2023, 11:47 AM IST

Updated : Sep 13, 2023, 12:22 PM IST

ಕ್ಯಾಲಿಫೋರ್ನಿಯಾ (ಯುಎಸ್‌ಎ): ಆ್ಯಪಲ್ ಕಂಪೆನಿಯು ತನ್ನ ಪ್ರಧಾನ ಕಚೇರಿ ಇರುವ ಅಮೆರಿಕದ ಆ್ಯಪಲ್ ಪಾರ್ಕ್ ಕ್ಯುಪರ್ಟಿನೊದಲ್ಲಿ ಮಂಗಳವಾರ 'ವಾಂಡರ್‌ಲಸ್ಟ್' ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಆ್ಯಪಲ್‌ ಮೊಬೈಲ್‌ಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಟೆಕ್ ದೈತ್ಯ ತನ್ನ ಹೊಸ, ಉನ್ನತ ಮಟ್ಟದ ಐಫೋನ್‌ಗಳನ್ನು (iPhone 15 Pro ಮತ್ತು 15 Pro Max) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ಗಳಲ್ಲಿ ಹೆಚ್ಚು ಪ್ರೀಮಿಯಂ ಅನ್ನಿಸುವ ವಸ್ತುಗಳನ್ನು ಬಳಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇದೇ ಮೊದಲ ಬಾರಿಗೆ ಟೈಟಾನಿಯಂ ವಿನ್ಯಾಸ: ಕಳೆದ ವರ್ಷದ ಮಾದರಿಗಳ ಹೊಳೆಯುವ, ಸ್ಟೈನ್‌ಲೆಸ್ ಸ್ಟೀಲ್ ಫ್ರೇಮ್‌ಗಿಂತ ಭಿನ್ನವಾಗಿ, ಪ್ರೊ ಮಾದರಿಯ ಫ್ರೇಮ್ ಬ್ರಷ್‌ನಂತೆ ಹೊಸ ಮೊಬೈಲ್‌ಗಳು ಕಾಣುತ್ತಿವೆ. ಇದೇ ಮೊದಲ ಬಾರಿಗೆ ಟೈಟಾನಿಯಂ ವಿನ್ಯಾಸ ಅಳವಡಿಸಲಾಗಿದೆ. ನೋಡಲು ಆಕರ್ಷಕವಾಗಿದ್ದು, ಹೆಚ್ಚು ಬಾಳಿಕೆ ಬರಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ. ಮಾಧ್ಯಮ ವರದಿಗಳ ಪ್ರಕಾರ, ಡಿಸ್​ಪ್ಲೇ ಗಾತ್ರ 6.1 ಮತ್ತು 6.7 ಇಂಚು ಇದೆ. ಕುತೂಹಲದ ವಿಷಯವೆಂದರೆ, ಇದು ರಿಂಗ್ ಮ್ಯೂಟ್​ ಸ್ವಿಚ್ ಹೊಂದಿಲ್ಲ. ಅದರ ಸ್ಥಳದಲ್ಲಿ ಕಾರ್ಯಾಚರಣೆಯ ಬಟನ್ ಇರಿಸಲಾಗಿದೆ.

  • Introducing iPhone 15 Pro, iPhone 15, Apple Watch Series 9, and Apple Watch Ultra 2. All that and more news from the #AppleEvent.

    — Apple (@Apple) September 12, 2023 " class="align-text-top noRightClick twitterSection" data=" ">

ಹೊಸ ಬಟನ್‌ಗಳು ಶಾರ್ಟ್‌ಕಟ್‌ಗಳನ್ನು ಬಳಸಲು, ಪ್ರವೇಶಿಸುವಿಕೆ ವೈಶಿಷ್ಟ್ಯಗಳನ್ನು ತರಲು, ಕ್ಯಾಮರಾ ಬಳಸಲು, ಫ್ಲ್ಯಾಶ್‌ಲೈಟ್ ಆನ್ ಮಾಡಲು ಮತ್ತು ಹೆಚ್ಚಿನವುಗಳಿಗೆ ಅನುವು ಮಾಡಿಕೊಡುತ್ತದೆ. ಎರಡೂ ಮೊಬೈಲ್‌ಗಳು ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್​ಪ್ಲೇ ಹೊಂದಿವೆ.

ಹೊಸ ಟೆಟ್ರಾ-ಪ್ರಿಸ್ಮ್ ವಿನ್ಯಾಸ: ಐಫೋನ್ 15 ಪ್ರೊ ಆ್ಯಪಲ್​ನ ಹೊಸ A17 ಪ್ರೊ ಚಿಪ್ ಹೊಂದಿದೆ. ಇದು 3 ನ್ಯಾನೊಮೀಟರ್ ಚಿಪ್ ಆಗಿದೆ. 19 ಬಿಲಿಯನ್ ಟ್ರಾನ್ಸಿಸ್ಟರ್‌ಗಳು, 6 ಮುಖ್ಯ ಕೋರ್‌ಗಳು ಮತ್ತು 16 ಕೋರ್ ನ್ಯೂರಲ್ ಎಂಜಿನ್ ಹೊಂದಿದೆ. ಕ್ಯಾಮರಾ ಕಾರ್ಯಗಳನ್ನೂ ಹೊಸ ಫೋನ್‌ಗಳಲ್ಲಿ ಸುಧಾರಿಸಲಾಗಿದೆ. ಐಫೋನ್ 15 ಪ್ರೊ ಮ್ಯಾಕ್ಸ್ ಹೊಸ ಟೆಲಿಫೋಟೋ ಕ್ಯಾಮರಾ ಹೊಂದಿದೆ. ಹೊಸ ಟೆಟ್ರಾ-ಪ್ರಿಸ್ಮ್ ವಿನ್ಯಾಸದೊಂದಿಗೆ ಜೂಮ್ ಅನ್ನು 5xಗೆ ಹೆಚ್ಚಿಸುತ್ತದೆ (iPhone 15 Pro 3x ನಲ್ಲಿ ಗರಿಷ್ಠವಾಗಿದೆ).

ವೈಡ್, ಅಲ್ಟ್ರಾವೈಡ್ ಕ್ಯಾಮರಾ: ಮುಖ್ಯ ವೈಡ್ ಕ್ಯಾಮರಾ ಮತ್ತು ಅಲ್ಟ್ರಾವೈಡ್ ಕ್ಯಾಮರಾಕ್ಕೆ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. (ಇದು iPhone 15 Pro ಮತ್ತು Pro Max ಎರಡರಲ್ಲೂ ಒಂದೇ ಆಗಿರುತ್ತದೆ). ಬಹುಮುಖ್ಯವಾಗಿ, ಈ ಕ್ಯಾಮರಾದಲ್ಲಿ ಈಗ ಮತ್ತಷ್ಟು ಉತ್ತಮ ವಿಡಿಯೋ ಸೆರೆಹಿಡಿಯಬಹುದು. ಇದನ್ನು ಆ್ಯಪಲ್​ನ ಮುಂಬರುವ ವಿಷನ್ ಪ್ರೊನಲ್ಲಿ ವೀಕ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಐಫೋನ್​ 15 ಪ್ರೊನ ಆರಂಭಿಕ ಬೆಲೆ 999 ಯುಎಸ್ ಡಾಲರ್, ಐಫೋನ್​ 15 ಪ್ರೊ ಮ್ಯಾಕ್ಸ್​ಗಾಗಿ ನೀವು, 100 ಯುಸ್​ ಡಾಲರ್‌ಗಳಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ. ಅಂದರೆ, ಅದರ ಬೆಲೆ 1,199 ಯುಎಸ್​ ಡಾಲರ್‌ಗಳಾಗಿವೆ. ಈಗ ಇದು ಎರಡು ಪಟ್ಟು ಹೆಚ್ಚು ಸ್ಟೋರೆಜ್​ ಹೊಂದಿದ್ದು, 256 ಜಿಬಿಯಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಮೂಡ್​ನಂತೆ ಬದಲಾಗುವ ಪ್ಲೇ ಲಿಸ್ಟ್​; Spotifyನಲ್ಲಿ ಹೊಸ 'ಡೇ ಲಿಸ್ಟ್' ವೈಶಿಷ್ಟ್ಯ

Last Updated : Sep 13, 2023, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.