ಸ್ಯಾನ್ ಫ್ರಾನ್ಸಿಸ್ಕೊ: ಟೆಕ್ ದೈತ್ಯ ಆ್ಯಪಲ್ ಕಂಪನಿಯು ಹೇ ಸಿರಿ ಧ್ವನಿ ಸಹಾಯಕವನ್ನು ಕೇವಲ ಸಿರಿ ಎಂದು ಬದಲಾಯಿಸುವ ಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಧ್ವನಿ ಸಹಾಯಕ ಪ್ರಕ್ರಿಯೆಯನ್ನು ಉಪಯೋಗಿಸಲು ಇನ್ನಷ್ಟು ಸುಲಭಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಬ್ಲೂಮ್ಬರ್ಗ್ ಮಾರ್ಕ್ ಗುರ್ಮನ್ ಪ್ರಕಾರ, ಈ ಒಂದು ಹೊಸ ವೈಶಿಷ್ಟ್ಯವು ಹಲವಾರು ತಿಂಗಳಿನಿಂದ ಅಭಿವೃದ್ಧಿಯಲ್ಲಿದೆ. ಮುಂದಿನ ವರ್ಷ ಅಥವಾ 2024ರಲ್ಲಿ ಬಿಡುಗಡೆಯಾಗುತ್ತದೆ ಎಂದು ‘ದಿ ವರ್ಜ್’ ವರದಿ ಮಾಡಿದೆ.
ಸ್ಮಾರ್ಟ್ ಅಸಿಸ್ಟೆಂಟ್ ಸಕ್ರಿಯಗೊಳಿಸಲು, ಬಳಕೆದಾರರು "ಸಿರಿ" ಎಂದು ಹೇಳಬೇಕಾಗುತ್ತದೆ. ಈ ಒಂದು ಹೊಸ ವೈಶಿಷ್ಟ್ಯವನ್ನು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸಲು, ಕಂಪನಿಯು ಗಮನಾರ್ಹ ಕೃತಕ ಬುದ್ದಿಮತ್ತೆಯ ತರಬೇತಿ ಆಧಾರವಾಗಿರುವ ಇಂಜಿನಿಯರಿಂಗ್ ಕೆಲಸಗಳನ್ನು ನಿರ್ಮಿಸುವ ಅಗತ್ಯವಿದೆ. ಏಕೆಂದರೆ ಒಂದೇ ಎಚ್ಚರಿಕೆಯ ಪದವನ್ನು ವಿವಿಧ ಉಚ್ಚಾರಣೆ ಮತ್ತು ಉಪಭಾಷೆಗಳಲ್ಲಿ ಪದಗಳನ್ನು ಕಂಡು ಹಿಡಿಯಬೇಕಾಗುತ್ತದೆ ಎಂದು ವರದಿ ತಿಳಿಸಿದೆ.
ಎರಡು ಪದದ ಎಚ್ಚರಿಕೆಯ ಪದವಾದ "ಹೇ ಸಿರಿ" ಧ್ವನಿ ಸಹಾಯಕವು ಮೊದಲಿಗಿಂತ ಗುರುತಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ವರ್ಷದ ಆರಂಭದಲ್ಲಿ, iOS 15.4ರ ಬೀಟಾದಲ್ಲಿ ಆಪಲ್ ತನ್ನ ಸಿರಿ ಧ್ವನಿ ಸಹಾಯಕ್ಕಾಗಿ ‘ಅಮೆರಿಕನ್’ ಧ್ವನಿಯನ್ನು ಪರಿಚಯಿಸಿತ್ತು. ಆಪಲ್ ನ ಬಳಕೆದಾರರ ಮುಖಾ - ಮುಖಿ ಇಂಟರ್ಫೇಸ್ ‘‘ವಾಯ್ಸ್ 5’’ ಎಂದು ಕರೆದಿದೆ. ಆದರೆ, iOS ಡೆವಲಪರ್ ಸ್ಟೀವ್ ಮೋಸರ್ ಫೈಲ್ ಹೆಸರನ್ನು ಹೊಸ ಧ್ವನಿ "ಕ್ವಿನ್" ಎಂದು ಉಲ್ಲೇಖಿಸಿದ್ದಾರೆ.
ಈ ಹೊಸ ಧ್ವನಿ ಬರುವ ಒಂದು ವರ್ಷದ ಹಿಂದೆ ಆಪಲ್ ಕಂಪನಿಯು ಕೊನೆಯ ಎರಡು ಸಿರಿ ಧ್ವನಿಯನ್ನು ಬಿಡುಗಡೆ ಮಾಡಲಾಗಿತ್ತು, ಮತ್ತು ಪೂರ್ವನಿಯೋಜಿತ ಸ್ರ್ತೀಧ್ವನಿಯನ್ನು ಬಳಸುವುದನ್ನು ನಿಷೇಧಿಸಿತ್ತು.
ಇದನ್ನೂ ಓದಿ: ಉಪಗ್ರಹ ಉಡಾವಣಾ ಹೊಣೆ ಎನ್ಎಸ್ಐಎಲ್ಗೆ ವರ್ಗ: ಇಸ್ರೋ