ETV Bharat / science-and-technology

ಆ್ಯಪಲ್​ IOS 16 ಶೀಘ್ರದಲ್ಲಿ : ಏನೆಲ್ಲಾ ನವೀಕರಣಗೊಳ್ಳಲಿದೆ ಎಂಬ ಮಾಹಿತಿ ಇಲ್ಲಿದೆ.. - ಈಟಿವಿ ಭಾರತ್​ ಕನ್ನಡ

IOS 16ರ ಅಪ್​ಡೇಟ್​ ಬಗ್ಗೆ ಐಫೋನ್​ ಸಂಸ್ಥೆ ಮಾಹಿತಿ ನೀಡಿದ್ದು, ಐಮೆಸ್ಸೇಜ್​ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಐಫೋನ್​ ಬಳಕೆದಾರರಿಗೆ ಐಮೆಸ್ಸೇಜ್​ ಆ್ಯಪ್​ ಹೆಚ್ಚು ಯೂಸರ್​ ಫ್ರೆಂಡ್ಲಿ ಮಾಡುವ ಬಗ್ಗೆ ಚಿಂತಿಸಲಾಗಿದೆ.

Apple rolls out iOS 16 update
ಆ್ಯಪಲ್​ IOS 16 ಶೀಘ್ರದಲ್ಲಿ
author img

By

Published : Sep 13, 2022, 2:29 PM IST

ವಾಷಿಂಗ್ಟನ್ : ಜನಪ್ರಿಯ ಮೊಬೈಲ್​ ತಯಾರಿಕಾ ಸಂಸ್ಥೆಯಾದ ಆ್ಯಪಲ್ ಇತ್ತೀಚೆಗೆ IOS 16 ಆಪರೇಟಿಂಗ್​ ಸಿಸ್ಟಮ್​ನ್ನು ಬಿಡುಗಡೆ ಮಾಡಿದೆ. ಈ ಅಪ್​ಡೇಟ್​ನಲ್ಲಿ ಗ್ರಾಹಕರಿಗೆ ಪ್ರಿಯವಾಗುವ ಕೆಲವು ಹೊಸ ಫೀಚರ್​ಗಳನ್ನು ತಂದಿದೆ. ವಾಟ್ಸಪ್​ ಐಫೋನ್​ ಅಪ್​ಡೇಟ್​ನಲ್ಲಿ ನೀಡಿರುವ ಮೆಸ್ಸೇಜ್​ ಎಡಿಟ್​ ಅವಕಾಶವನ್ನು ಐಮೆಸ್ಸೇಜ್​ನಲ್ಲೂ ಅಭಿವೃದ್ಧಿಪಡಿಸಿದೆ.

ಮೆಸೆಂಜಿಂಗ್​ ಆ್ಯಪ್​ನಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಪ್​ನ ರೀತಿಯ ಫೀಚರನ್ನು ಅಪ್​ಡೇಟ್​ನಲ್ಲಿ ತಂದು ಗ್ರಾಹಕ ಸ್ನೇಹಿಯಾಗಿ ಮಾಡುವ ಪ್ರಯತ್ನ ಆ್ಯಪಲ್​ ಸಂಸ್ಥೆ ಮಾಡುತ್ತಿದೆ. ಹೊಸ ಐಎಸ್​ಓ 16ರಲ್ಲಿ ಲಾಕ್​ ಸ್ಕ್ರೀನ್​ಗೆ ಹೊಸಾ ವಿಂಡೊಅಡ್ಜೆಸ್ಟ್​(widgets), ಐಮೆಸೆಜ್​ನಲ್ಲಿ ಕಳಿಸಿದ ಸಂದೇಶ ಎಡಿಟ್​ ಮಾಡುವ ಆಯ್ಕೆ, ಹೊಸ ಕೀಬೋರ್ಡ್ ಹ್ಯಾಪ್ಟಿಕ್ಸ್, ಹೊಸ ಹೋಮ್ ಅಪ್ಲಿಕೇಶನ್ ಮತ್ತು ಇನ್ನು ಕೆಲವು ಅಪ್​ಡೇಟ್​ಗಳನ್ನು ನೀಡಿದೆ.

ಐಮೆಸ್ಸೇಜ್​ನಲ್ಲಿ ಕಳುಹಿಸಿದ ಸಂದೇಶವನ್ನು 15 ನಿಮಿಷಗಳ ಒಳಗೆ ಎಡಿಟ್​ ಮಾಡುವ ಮತ್ತು ಕಳುಹಿಸಿದ ಎರಡು ನಿಮಿಷದ ಒಳಗೆ ಅದನ್ನು ಹಿಂಪಡೆಯುವ(undo) ಆಯ್ಕೆ ಸೇರಿಸಲಾಗಿದೆ. ಆಡಿಯೋ ಸಂದೇಶಗಳನ್ನು ಫಾರ್ವರ್ಡ್​ ಮಾಡುವ ಮತ್ತು ರಿವೈಂಡ್​ ಮಾಡಿ ಕೇಳುವ ಅವಕಾಶ ಹೊಸಾ ಅಪ್​ಡೇಟ್​ನಲ್ಲಿ ಇರಲಿದೆ. ಈ ಹೊಸ ಅಪ್​ಡೇಟ್​ ಇತ್ತೀಚೆಗೆ ಬಿಡುಗಡೆಯಾದ ಆ್ಯಪಲ್​ 14 ಸೀರಿಸ್​ ಮೊಬೈಲ್​ಗಳಲ್ಲಿ ಡೀಪಾಲ್ಟ್​ ಆಗಿ ಸೇರ್ಪಡೆಯಾಗಿದ್ದು ಅಪ್​ಡೇಟ್​ ಮಾಡುವ ಅಗತ್ಯ ಇರುವುದಿಲ್ಲ.

ಆ್ಯಪಲ್​ ಇನ್​ ಬಿಲ್ಟ್​ ಮೇಲ್​ ಅಪ್ಲಿಕೇಶನ್​ನಲ್ಲಿ ಮೇಲ್​ ಕಳಿಸುವ ಸಮಯವನ್ನು ಡಿಫಾಲ್ಟ್​ ಸೆಟ್​ ಮಾಡಿರುವುದು ಸೆಂಡ್​ ಆದ ಕೆಲವು ಸಮಯದಲ್ಲಿ ಹಿಂಪಡೆಯುವ (unsend) ಅವಕಾಶವನ್ನು ನೀಡಲಾಗಿದೆ. ಹೊಸ ಕೀಬೋರ್ಡ್ ಹ್ಯಾಪ್ಟಿಕ್ಸ್​ ಆಯ್ಕೆಯಲ್ಲಿ ಟೈಪ್ ಮಾಡುವಾಗ ಕಂಪನ(vibration) ಅನುಭವಕ್ಕೆ ಬರುವಂತೆ ಮಾಡಲಾಗಿದೆ. ಆಗುವಂತೆ ಅವಕಾಶ ಇದೆ. ​

ಐಓಎಸ್​ 16ರಲ್ಲಿ ಮೊಬೈಲ್​ ರಕ್ಷಣೆ ವಿಭಾಗದಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಆ್ಯಪಲ್​ ವಾಚ್​ ಅಪ್ಲಿಕೇಶನ್​ನಲ್ಲಿ ಕೆಲವು ಬದಲಾವಣೆಗಳು ಆಗಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : 5ಜಿ ಯುಗದಲ್ಲಿ ಹೊಸ ಪೇಮೆಂಟ್ ಸೆಕ್ಯುರಿಟಿ ಸ್ಟ್ಯಾಂಡರ್ಡ್ ಅಳವಡಿಕೆ ಅಗತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.