ETV Bharat / science-and-technology

ಆ್ಯಪಲ್ iOS ಇನ್ ​ಆ್ಯಪ್ ಪರ್ಚೇಸ್ ದರ ಶೇ 40 ರಷ್ಟು ದುಬಾರಿ - etv bharat kannada

2022 ರಲ್ಲಿ ಉಂಟಾದ ಹಣದುಬ್ಬರಕ್ಕಿಂತಲೂ ಮುಂಚೆಯೇ iOS ನಲ್ಲಿನ ದರಗಳು ಹೆಚ್ಚಾಗಿವೆ. ಆ್ಯಪಲ್​ನ ಆ್ಯಪ್​ ಟ್ರ್ಯಾಕಿಂಗ್ ಟ್ರಾನ್ಸಪರೆನ್ಸಿ (ATT) ನೀತಿಯಿಂದಾಗಿ ಬಳಕೆದಾರರನ್ನು ಗಳಿಸಿಕೊಳ್ಳುವುದು ಮುಂಚಿಗಿಂತಲೂ ದುಬಾರಿಯಾಗಿದೆ.

ಇನ್​-ಆ್ಯಪ್ ಪರ್ಚೇಸ್ ದರ ಶೇ 40 ರಷ್ಟು ದುಬಾರಿ
Apple in-app purchase prices up
author img

By

Published : Sep 14, 2022, 5:27 PM IST

ನವದೆಹಲಿ: ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಈ ಜುಲೈನಲ್ಲಿ iOS ಆ್ಯಪ್​ ಸ್ಟೋರ್​ನ ಸರಾಸರಿ ಇನ್​ - ಆ್ಯಪ್​ ಪರ್ಚೇಸ್​ಗಳ (IAPs) ದರ ಶೇ 40 ರಷ್ಟು ಹೆಚ್ಚಾಗಿದೆ. ಖಾಸಗಿತನ ನಿಯಮಗಳ ಬದಲಾವಣೆಯಿಂದ ದರಗಳಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ.

ಇನ್ನು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಇನ್-ಆ್ಯಪ್ ಪರ್ಚೇಸ್ ದರಗಳು ಶೇ 9ರಷ್ಟು ಮಾತ್ರ ಹೆಚ್ಚಾಗಿವೆ. ಆ್ಯಪ್ ಇಂಟೆಲಿಜೆನ್ಸ್ ಸಂಸ್ಥೆ ಆಪ್ಟೋಪಿಯಾ ದ ಅಂಕಿ - ಅಂಶಗಳ ಪ್ರಕಾರ, ಗ್ರಾಹಕರ ಬೆಲೆ ಸೂಚ್ಯಂಕವು ಅಮೆರಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ 8.5ಕ್ಕೆ ಏರಿದೆ. ಬಹುತೇಕ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ.

2022 ರಲ್ಲಿ ಉಂಟಾದ ಹಣದುಬ್ಬರಕ್ಕಿಂತಲೂ ಮುಂಚೆಯೇ iOS ನಲ್ಲಿನ ದರಗಳು ಹೆಚ್ಚಾಗಿವೆ. ಆ್ಯಪಲ್​ನ ಆ್ಯಪ್​ ಟ್ರ್ಯಾಕಿಂಗ್ ಟ್ರಾನ್ಸಪರೆನ್ಸಿ (ATT) ನೀತಿಯಿಂದಾಗಿ ಬಳಕೆದಾರರನ್ನು ಗಳಿಸಿಕೊಳ್ಳುವುದು ಮುಂಚಿಗಿಂತಲೂ ದುಬಾರಿಯಾಗಿದೆ. ಅಂದರೆ ಪ್ರತಿ ಇನ್​ಸ್ಟಾಲ್​​​​ಗೆ ತಗಲುವ ವೆಚ್ಚ ಜಾಸ್ತಿಯಾಗಿರುವುದರಿಂದ ಆ್ಯಪ್ ಪಬ್ಲಿಷರ್​ಗಳು ಅದಕ್ಕೆ ಪ್ರತಿಕ್ರಿಯೆಯಾಗಿ ದರ ಹೆಚ್ಚು ಮಾಡಿದ್ದಾರೆ ಎಂದು ಆಪ್ಟೋಪಿಯಾ ವರದಿ ಹೇಳಿದೆ.

ಮಾಸಿಕ ಅಥವಾ ವಾರ್ಷಿಕ IAP ಗಳಿಗಿಂತ ಸಿಂಗಲ್ ಪರ್ಚೇಸ್ IAP ಗಳ ಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ. iOS ಸಿಂಗಲ್ ಪರ್ಚೇಸ್ IAPಗಳ ಸರಾಸರಿ ಬೆಲೆಯು ಜುಲೈನಲ್ಲಿ ಶೇ 36 ರಷ್ಟು ಏರಿದೆ. ಆದರೆ, ವಾರ್ಷಿಕ ಮತ್ತು ಮಾಸಿಕ IAPಗಳು ಕೇವಲ ಶೇ 19 ರಷ್ಟು ಹೆಚ್ಚಾಗಿದೆ.

ಪಬ್ಲಿಶರ್​ಗಳು ಮೌಲ್ಯವನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸ್ವಾಧೀನ ವೆಚ್ಚವನ್ನು ಕಡಿತಗೊಳಿಸಲು ಗ್ರಾಹಕರನ್ನು ತಮ್ಮ ಬಳಿಗೆ ಹೆಚ್ಚು ಕಾಲ ಸೆಳೆಯುತ್ತಿದ್ದಾರೆ ಎಂದು ಇನ್​ಸೈಟ್ಸ್​ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಆಡಮ್ ಬ್ಲೇಕರ್ ಹೇಳಿದರು. ಕೆಲವು ಕೆಟೆಗರಿಗಳಲ್ಲಿ ಬೆಲೆಗಳು ಅತಿ ಹೆಚ್ಚಾಗಿವೆ. ಅದರಲ್ಲಿ ಪುಸ್ತಕಗಳು iOS ಮತ್ತು Google Play ಎರಡರಲ್ಲೂ ಟಾಪ್ 5 ಪಟ್ಟಿಯಲ್ಲಿವೆ.

ಇದನ್ನೂ ಓದಿ: ನಾಸಾದಿಂದ ಹೊಸ ಅಧ್ಯಯನ ಪ್ರಾರಂಭ... ಈ ಬಾರಿಯ ಸಂಶೋಧನೆ ಏನು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.