ETV Bharat / science-and-technology

ಲಕ್ಷಾಂತರ ಬಳಕೆದಾರರ ಮಾಹಿತಿ ಕಳವು ಆರೋಪ; Google ವಿರುದ್ಧ ಕ್ಲಾಸ್​ ಆ್ಯಕ್ಷನ್ ಮೊಕದ್ದಮೆ - ಕ್ಲಾರ್ಕ್​ ಸನ್ ಕಾನೂನು ಸಂಸ್ಥೆ ಮೊಕದ್ದಮೆ

ತನ್ನ ಎಐ ಸಾಫ್ಟ್‌ವೇರ್​ಗಳಿಗೆ ತರಬೇತಿ ನೀಡಲು ಗೂಗಲ್ ಇಂಟರ್​ನೆಟ್​ನಲ್ಲಿರುವ ಸಾರ್ವಜನಿಕರ ಡೇಟಾ ಕಳವು ಮಾಡಿದೆ ಎಂದು ಆರೋಪಿಸಿ ಗೂಗಲ್ ವಿರುದ್ಧ ಅಮೆರಿಕದಲ್ಲಿ ಕ್ಲಾಸ್-ಆಕ್ಷನ್ ಮೊಕದ್ದಮೆ ಹೂಡಲಾಗಿದೆ.

Google sued for allegedly stealing
Google sued for allegedly stealing
author img

By

Published : Jul 12, 2023, 12:15 PM IST

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಗೂಗಲ್ ತನ್ನ ಕೃತಕ ಬುದ್ಧಿಮತ್ತೆ (artificial intelligence -AI) ಸಾಫ್ಟ್‌ವೇರ್ ಬಳಸಿಕೊಂಡು, ಬಳಕೆದಾರರ ಒಪ್ಪಿಗೆಯಿಲ್ಲದೆ ಲಕ್ಷಾಂತರ ಬಳಕೆದಾರರ ಡೇಟಾವನ್ನು ಕಳವು ಮಾಡಿದೆ ಎಂದು ಆರೋಪಿಸಿ ಗೂಗಲ್ ವಿರುದ್ಧ ಕ್ಲಾಸ್-ಆಕ್ಷನ್ ಮೊಕದ್ದಮೆ ಹೂಡಲಾಗಿದೆ. ತನ್ನ AI ಸಾಫ್ಟ್‌ವೇರ್​ಗಳಿಗೆ ತರಬೇತಿ ನೀಡಲು ಮತ್ತು ಅವನ್ನು ಅಭಿವೃದ್ಧಿಪಡಿಸಲು ಗೂಗಲ್ ಕೃತಿಸ್ವಾಮ್ಯ ಕಾನೂನುಗಳನ್ನು ಸಹ ಉಲ್ಲಂಘಿಸಿದೆ ಎಂದು ಮೊಕದ್ದಮೆ ಹೇಳಿದೆ.

ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಲಯದಲ್ಲಿ ಗೂಗಲ್, ಅದರ ಮೂಲ ಕಂಪನಿ ಆಲ್ಫಾಬೆಟ್ ಮತ್ತು ಅದರ AI ಅಂಗಸಂಸ್ಥೆ ಡೀಪ್‌ಮೈಂಡ್ ವಿರುದ್ಧ ಕ್ಲಾಸ್-ಆಕ್ಷನ್ ಮೊಕದ್ದಮೆಯನ್ನು ಮಂಗಳವಾರ ದಾಖಲಿಸಲಾಗಿದೆ. ಕ್ಲಾರ್ಕ್​ ಸನ್ ಕಾನೂನು ಸಂಸ್ಥೆ ಮೊಕದ್ದಮೆ ದಾಖಲಿಸಿದೆ. ಕ್ಲಾರ್ಕ್​ ಸನ್ ಕಾನೂನು ಸಂಸ್ಥೆಯು ಈ ಹಿಂದೆ ಚಾಟ್‌ಜಿಪಿಟಿ ತಯಾರಕ ಕಂಪನಿ ಓಪನ್‌ಎಐ ವಿರುದ್ಧ ಕಳೆದ ತಿಂಗಳು ಇದೇ ರೀತಿಯ ಮೊಕದ್ದಮೆಯನ್ನು ಹೂಡಿತ್ತು.

ಗೂಗಲ್ ಇಂಟರ್‌ನೆಟ್‌ನಲ್ಲಿ ನೂರಾರು ಮಿಲಿಯನ್ ಅಮೆರಿಕನ್ನರು ಸೃಷ್ಟಿಸಿದ ಮತ್ತು ಹಂಚಿಕೊಂಡ ಎಲ್ಲವನ್ನೂ ರಹಸ್ಯವಾಗಿ ಕದಿಯುತ್ತಿದೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ. ಗೂಗಲ್ ತನ್ನ AI ಸಾಫ್ಟ್‌ವೇರ್​ಗಳನ್ನು ನಿರ್ಮಿಸಲು ನಮ್ಮ ಸೃಜನಾತ್ಮಕ ಮತ್ತು ನಕಲು ಬರಹದ ಕೃತಿಗಳು ಸೇರಿದಂತೆ ನಮ್ಮ ಇಡೀ ಡಿಜಿಟಲ್ ಹೆಜ್ಜೆಗುರುತುಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮೊಕದ್ದಮೆಯ ಬಗ್ಗೆ ಗೂಗಲ್ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ವಾರ ಗೂಗಲ್ ತನ್ನ ಗೌಪ್ಯತಾ ನೀತಿಯನ್ನು ಅಪ್ಡೇಟ್ ಮಾಡಿತ್ತು. ಅದರಲ್ಲಿ ತನ್ನ AI ಮಾದರಿಗಳಿಗೆ ತರಬೇತಿ ನೀಡಲು ಸಾರ್ವಜನಿಕವಾಗಿ ಲಭ್ಯವಿರುವ ಡೇಟಾವನ್ನು ಬಳಸಬಹುದು ಎಂದು ನಿಯಮ ಮಾಡಿಕೊಂಡಿದೆ. ಇದಕ್ಕೆ ಪೂರಕವಾಗಿ ಕಳೆದ ವಾರಾಂತ್ಯದಲ್ಲಿ ತನ್ನ ನೀತಿ ನಿಯಮಗಳಲ್ಲಿನ ಕೆಲ ಶಬ್ದಗಳನ್ನು ಬದಲಾಯಿಸಿತು. "AI models" ಎಂಬ ಶಬ್ದವನ್ನು "language models" ಎಂಬುದಾಗಿ ಗೂಗಲ್ ಬದಲಾಯಿಸಿದೆ.

ಸಾರ್ವಜನಿಕವಾಗಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಯಾವುದನ್ನಾದರೂ ಬಾರ್ಡ್, ಭವಿಷ್ಯದ ಆವೃತ್ತಿಗಳು ಮತ್ತು ಅದು ಅಭಿವೃದ್ಧಿಪಡಿಸುವ ಇತರ ಉತ್ಪಾದಕ AI ಉತ್ಪನ್ನಗಳಿಗೆ ತರಬೇತಿ ನೀಡಲು ಬಳಸಬಹುದು ಎಂದು ಗೂಗಲ್ ನಿಯಮ ರೂಪಿಸಿಕೊಂಡಿದೆ. ಆದರೆ ಜನರೇಟಿವ್ AI ಬಳಕೆಗಾಗಿ ದೊಡ್ಡ ಭಾಷಾ ಮಾದರಿಗಳಿಗೆ ತರಬೇತಿ ನೀಡಲು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಕಂಪನಿಗಳು ಬಳಸುವ ಬಗ್ಗೆ ವಿಮರ್ಶಕರು ಕಳವಳ ವ್ಯಕ್ತಪಡಿಸಿದ್ದಾರೆ.

Google Bard ಎಂಬುದು AI ಚಾಲಿತ ಚಾಟ್‌ಬಾಟ್ ಸಾಧನವಾಗಿದ್ದು, ನೈಸರ್ಗಿಕ ಭಾಷಾ ಸಂಸ್ಕರಣೆ ಮತ್ತು ಯಂತ್ರ ಕಲಿಕೆಯನ್ನು ಬಳಸಿಕೊಂಡು ಮಾನವ ಸಂಭಾಷಣೆಗಳನ್ನು ಅನುಕರಿಸಲು ಗೂಗಲ್ ಇದನ್ನು ವಿನ್ಯಾಸಗೊಳಿಸಿದೆ. ಗೂಗಲ್ ಬಾರ್ಡ್ ಅನ್ನು ಪಾಥ್‌ವೇಸ್ ಲ್ಯಾಂಗ್ವೇಜ್ ಮಾಡೆಲ್ 2 (PaLM 2) ನಲ್ಲಿ ನಿರ್ಮಿಸಲಾಗಿದೆ. ಇದು 2022 ರ ಕೊನೆಯಲ್ಲಿ ಬಿಡುಗಡೆಯಾದ ಭಾಷಾ ಮಾದರಿಯಾಗಿದೆ. ಮಾರ್ಚ್ 21, 2023 ರಂದು ಗೂಗಲ್​ ತನ್ನ ಬಾರ್ಡ್‌ ಸಾಫ್ಟ್‌ವೇರ್​ ಬಳಕೆಗೆ ಅವಕಾಶ ನೀಡಲಾರಂಭಿಸಿತು. 180ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಬಾರ್ಡ್ ಲಭ್ಯವಿದೆ.

ಇದನ್ನೂ ಓದಿ : Cyber Security: ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆ ಜಾರಿ ಏಕೆ ಅಗತ್ಯ? ಏನಿದರ ಮಹತ್ವ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.