ETV Bharat / science-and-technology

ಏರ್‌ಟೆಲ್-ಮೆಟಾ ಒಪ್ಪಂದ: ಡಿಜಿಟಲ್‌ ಇಂಡಿಯಾಗೆ ಸಿಗಲಿದೆ ಮತ್ತಷ್ಟು ವೇಗ

ಭಾರತದ ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಯನ್ನು ಬೆಂಬಲಿಸಲು ಭಾರ್ತಿ ಏರ್‌ಟೆಲ್ ಮತ್ತು ಮೆಟಾ ಸಂಸ್ಥೆ ಸೋಮವಾರ ಮಹತ್ವದ ಒಪ್ಪಂದ ಮಾಡಿಕೊಂಡಿವೆ.

ಏರ್‌ಟೆಲ್, ಮೆಟಾ ಒಪ್ಪಂದ
ಏರ್‌ಟೆಲ್, ಮೆಟಾ ಒಪ್ಪಂದ
author img

By

Published : Dec 5, 2022, 5:27 PM IST

ನವ ದೆಹಲಿ: ಭಾರತದ ಡಿಜಿಟಲ್​ ವ್ಯವಸ್ಥೆಯ ಅಭಿವೃದ್ಧಿಗಾಗಿ ಏರ್​ಟೆಲ್​ ಮತ್ತು ಮೆಟಾ ಮಹತ್ವದ ಒಡಂಬಡಿಕೆ ಮಾಡಿಕೊಂಡಿವೆ. ದೇಶದಲ್ಲಿ ಡಿಜಿಟಲ್‌ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲು ಏರ್​ಟೆಲ್, ಮೆಟಾ ಮತ್ತು ಎಸ್​​ಟಿಸಿ (Seychelles Trading Company) 2 ಆಫ್ರಿಕಾ ಪರ್ಲ್ಸ್‌​ ತರಲು ಯೋಜಿಸಿವೆ.

ಏನಿದು 2 ಆಫ್ರಿಕಾ ಪರ್ಲ್‌?: ಇದು ವಿಶ್ವದ ಅತಿ ಉದ್ದದ ಸಬ್‌ಸೀ ಕೇಬಲ್ ವ್ಯವಸ್ಥೆ. ವಿಶ್ವಾದ್ಯಂತ ಸುಮಾರು 3 ಶತಕೋಟಿ ಜನರಿಗೆ ವೇಗದ ಇಂಟರ್​​ನೆಟ್ ಸಂಪರ್ಕ ಒದಗಿಸುವ ನಿರೀಕ್ಷೆಯಿದೆ.​​ 2 ಆಫ್ರಿಕಾ ಕೇಬಲ್ ಮತ್ತು ಓಪನ್ RAN ಭಾರತದಲ್ಲಿ ಶರವೇಗದ ಡೇಟಾಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಹೂಡಿಕೆ ಮಾಡುತ್ತಿವೆ.

ಇದನ್ನೂ ಓದಿ: 21 ಹೊಸ ಎಮೋಜಿ ಪರಿಚಯಿಸಲಿರುವ ವಾಟ್ಸ್​ಆ್ಯಪ್​​!

'ಭಾರತದಲ್ಲಿರುವ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಡಿಜಿಟಲ್ ಅನುಭವವನ್ನು ನೀಡಲು ಮೆಟಾದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ' ಎಂದು ಭಾರ್ತಿ ಏರ್‌ಟೆಲ್‌ನ ಗ್ಲೋಬಲ್ ಬ್ಯುಸಿನೆಸ್ ಸಿಇಒ ವಾಣಿ ವೆಂಕಟೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಗ್ರಾಹಕರು ಮತ್ತು ಉದ್ಯಮಗಳ ಉದಯೋನ್ಮುಖ ಅಗತ್ಯತೆಗಳನ್ನು ಬೆಂಬಲಿಸಲು ಎರಡೂ ಕಂಪನಿಗಳು ಜಾಗತಿಕ ಸಂಪರ್ಕ ಮೂಲಸೌಕರ್ಯ ಮತ್ತು CPaaS ಆಧಾರಿತ ಹೊಸ-ಯುಗದ ಡಿಜಿಟಲ್ ಪರಿಹಾರಗಳಲ್ಲಿ ಜಂಟಿಯಾಗಿ ಹೂಡಿಕೆ ಮಾಡುತ್ತಿವೆ. ಈ ಮೂಲಕ ದೇಶಾದ್ಯಂತ ಜನತೆ ಮತ್ತು ವ್ಯವಹಾರಕ್ಕೆ ಉತ್ತಮ ನೆಟ್‌ವರ್ಕ್ ಅನುಭವ ಒದಗಿಸಲು ಏರ್‌ಟೆಲ್‌ನೊಂದಿಗೆ ನಾವು ಕೈಜೋಡಿಸಿದ್ದೇವೆ ಎಂದು ಮೆಟಾದ ಮೊಬೈಲ್ ಪಾಲುದಾರಿಕೆಗಳ ಉಪಾಧ್ಯಕ್ಷ ಫ್ರಾನ್ಸಿಸ್ಕೊ ವರೆಲಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.