ನವದೆಹಲಿ : ಭೂಮಿಯ ಮೇಲೆ ವಾಸಿಸುತ್ತಿರುವ 8 ಬಿಲಿಯನ್ ಜನರಲ್ಲಿ ಪ್ರತಿಯೊಬ್ಬರೂ ಭವಿಷ್ಯದಲ್ಲಿ ಎಐ ಟ್ಯೂಟರ್, ಎಐ ವೈದ್ಯರು, ಪ್ರೋಗ್ರಾಮರ್ ಅಥವಾ ಬಹುಶಃ ಎಐ ಸಲಹೆಗಾರರನ್ನು ಹೊಂದಿರಬಹುದು ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾಡೆಲ್ಲಾ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಾಡೆಲ್ಲಾ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ. ಭವಿಷ್ಯದಲ್ಲಿ AI ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.
"ಜನವರಿಯಲ್ಲಿ ನಾನು ಭಾರತದಲ್ಲಿದ್ದಾಗ ಅದ್ಭುತವಾದ ಡೆಮೊ ಒಂದನ್ನು ನೋಡಿದೆ. ಸರ್ಕಾರವು ಡಿಜಿಟಲ್ ಪಬ್ಲಿಕ್ ಗೂಡ್ಸ್ ಎಂಬ ಯೋಜನೆಯನ್ನು ಜಾರಿ ಮಾಡಿದೆ. ಇದೊಂದು ಪಠ್ಯದಿಂದ ಭಾಷಣ ವ್ಯವಸ್ಥೆಯಾಗಿದೆ. ಡೆಮೊದಲ್ಲಿ ಗ್ರಾಮೀಣ ರೈತರು ತಾವು ಸುದ್ದಿಯಲ್ಲಿ ನೋಡಿದ ಸಬ್ಸಿಡಿ ಬಗ್ಗೆ ಕೇಳಲು ವ್ಯವಸ್ಥೆಯನ್ನು ಬಳಸುತ್ತಿದ್ದರು. ಇದು ಯೋಜನೆಯ ಬಗ್ಗೆ ಮತ್ತು ಅರ್ಜಿ ಸಲ್ಲಿಸಲು ಅವರು ಭರ್ತಿ ಮಾಡಬಹುದಾದ ಫಾರ್ಮ್‌ಗಳ ಬಗ್ಗೆ ಮಾಹಿತಿ ನೀಡಿತು" ಎಂದು ನಾಡೆಲ್ಲಾ ಹೇಳಿದರು.
"ಸಾಮಾನ್ಯವಾಗಿ ಫಾರ್ಮ್‌ಗಳನ್ನು ಎಲ್ಲಿಂದ ಪಡೆಯಬಹುದು ಎಂಬುದನ್ನು ಅದು ಅವನಿಗೆ ತಿಳಿಸುತ್ತದೆ. ಆದರೆ, ಭಾರತದಲ್ಲಿ ಒಬ್ಬ ಡೆವಲಪರ್ ಎಲ್ಲ ಭಾರತೀಯ ಸರ್ಕಾರಿ ದಾಖಲೆಗಳ ಬಗ್ಗೆ ಜಿಪಿಟಿಗೆ ತರಬೇತಿ ನೀಡಿದ್ದಾನೆ. ಆದ್ದರಿಂದ ಸಿಸ್ಟಮ್ ಅವನಿಗೆ ಅದನ್ನು ಸ್ವಯಂಚಾಲಿತವಾಗಿ ಬೇರೆ ಭಾಷೆಯಲ್ಲಿ ತುಂಬಿದೆ" ಎಂದು ಅವರು ತಿಳಿಸಿದರು.
ಅಮೆರಿಕದ ಪಶ್ಚಿಮ ಕರಾವಳಿ ಭಾಗದಲ್ಲಿ ಕೆಲವು ತಿಂಗಳುಗಳ ಹಿಂದೆ ರಚಿಸಲಾದ ಯಾವುದೋ ಒಂದು ಸಾಫ್ಟವೇರ್ ಭಾರತದಲ್ಲಿನ ಡೆವಲಪರ್‌ಗೆ ಸಿಕ್ಕಿತು. ನಂತರ ಆತ ಗ್ರಾಮೀಣ ಭಾರತೀಯ ರೈತರು ತಮ್ಮ ಮೊಬೈಲ್ ಫೋನ್‌ನಲ್ಲಿನ ವಾಟ್ಸ್ಆ್ಯಪ್ ಬಾಟ್ನಲ್ಲಿ ಆ ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವಂಥ ಮಾದರಿಯನ್ನು ನಿರ್ಮಾಣ ಮಾಡಿದ ಎಂದು ನಾಡೆಲ್ಲಾ ತಿಳಿಸಿದರು.
ನಾವು ಕೃತಕ ಸಾಮಾನ್ಯ ಬುದ್ಧಿಮತ್ತೆ (AGI)ಯ ಸೂಪರ್ ಇಂಟೆಲಿಜೆನ್ಸ್ನ ಗರಿಷ್ಠ ಮಿತಿಯನ್ನು ತಲುಪಲಿದ್ದೇವಾ ಎಂಬ ಪ್ರಶ್ನೆಗೆ, ನಾನು ಈ ತಂತ್ರಜ್ಞಾನದಿಂದ ಮಾನವ ಕುಲಕ್ಕಾಗಬಹುದಾದ ಪ್ರಯೋಜನಗಳ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ ಎಂದರು. "ಕೈಗಾರಿಕಾ ಕ್ರಾಂತಿಯು ನಾನು ಬೆಳೆದ ಪ್ರಪಂಚದ ಭಾಗಗಳನ್ನು ಬಹಳ ಕಾಲದವರೆಗೂ ಮುಟ್ಟಲಿಲ್ಲ ಎಂಬ ಅಂಶ ನನ್ನನ್ನು ಕಾಡುತ್ತಿದೆ. ಹಾಗಾಗಿ ನಾನು ಕೈಗಾರಿಕಾ ಕ್ರಾಂತಿಗಿಂತಲೂ ದೊಡ್ಡದನ್ನು ಹುಡುಕುತ್ತಿದ್ದೇನೆ" ಎಂದರು.
"ಆದ್ದರಿಂದ ನಾನು AGI ತೋರಿಸುವುದರ ಬಗ್ಗೆ ಅಥವಾ ವೇಗವಾಗಿ ತೋರಿಸುವುದರ ಬಗ್ಗೆ ಚಿಂತಿಸುವುದಿಲ್ಲ. ಸರಿ ಅಲ್ಲವೇ? ಅಂದರೆ 8 ಶತಕೋಟಿ ಜನರು ಸಮೃದ್ಧಿಯನ್ನು ಹೊಂದಿದ್ದಾರೆ. ಇದು ವಾಸಿಸಲು ಅದ್ಭುತವಾದ ಪ್ರಪಂಚವಾಗಿದೆ" ಎಂದು ಅವರು ಅಭಿಪ್ರಾಯಪಟ್ಟರು . AI ಪ್ರಯೋಗಗಳನ್ನು ನಿಯಂತ್ರಿಸುವ ಅಥವಾ ನಿಲ್ಲಿಸುವ ಕುರಿತು ಉನ್ನತ AI ಸಂಶೋಧಕರು ಮತ್ತು ಎಲೋನ್ ಮಸ್ಕ್‌ನಂತಹ ಬಿಲಿಯನೇರ್ ಉದ್ಯಮಿಗಳ ಗುಂಪು ಕೇಳುತ್ತಿದೆಯಲ್ಲ ಎಂಬುದನ್ನು ಅವರ ಗಮನಕ್ಕೆ ತಂದಾಗ, ಕೇವಲ ನಿಲ್ಲಿಸಿ ಎಂದು ಹೇಳುವ ಬದಲು ಈ ಬದಲಾವಣೆಗಳನ್ನು ತರಲು ನಾವು ಮಾಡಬೇಕಾದ ಕೆಲಸಗಳನ್ನು ಇನ್ನೂ ವೇಗವಾಗಿ ಮಾಡಬೇಕು ಎಂದೂ ಸಲಹೆ ನೀಡಿದರು.
ಇದನ್ನೂ ಓದಿ : Wheat price: ಗೋಧಿ ವ್ಯಾಪಾರಿಗಳಿಂದ ದಾಸ್ತಾನು ಮಾಹಿತಿ ಪಡೆಯುವಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ