ನವದೆಹಲಿ : ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳುವುದು ಎಂಬುದನ್ನು ಜನರಿಗೆ ತಿಳಿಸಲು ಮತ್ತು ತರಬೇತಿ ನೀಡಲು ಮೈಕ್ರೋಸಾಫ್ಟ್ ಹೊಸ AI ಸ್ಕಿಲ್ಸ್ ಇನಿಶಿಯೇಟಿವ್ (AI Skills Initiative) ಅನ್ನು ಪ್ರಾರಂಭಿಸಿದೆ.
ಈ ಇನಿಶಿಯೇಟಿವ್ ಲಿಂಕ್ಡ್‌ಇನ್‌ನೊಂದಿಗೆ ಅಭಿವೃದ್ಧಿಪಡಿಸಿದ ಹೊಸ, ಉಚಿತ ಕೋರ್ಸ್‌ವರ್ಕ್ ಅನ್ನು ಒಳಗೊಂಡಿರುತ್ತದೆ. ಆನ್‌ಲೈನ್ ಕಲಿಕಾ ಮಾರುಕಟ್ಟೆಯಲ್ಲಿ ಜನರೇಟಿವ್ AI ಕುರಿತು ಮೊದಲ ವೃತ್ತಿಪರ ಪ್ರಮಾಣಪತ್ರ ಇದರಲ್ಲಿ ಸಿಗಲಿದೆ. ಆನ್‌ಲೈನ್ ಕಲಿಕಾ ಮಾರುಕಟ್ಟೆಯಲ್ಲಿ ಜನರೇಟಿವ್ ಎಐ ಕುರಿತು ಮೊದಲ ವೃತ್ತಿಪರ ಪ್ರಮಾಣಪತ್ರ ಇದಾಗಲಿದೆ. ಉತ್ಪಾದಕ AI ನಲ್ಲಿ ಕಾರ್ಮಿಕರಿಗೆ ತರಬೇತಿ ನೀಡುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು data ಡಾಟ್ org ಯೊಂದಿಗೆ ಸಮನ್ವಯದಲ್ಲಿ ಇದು ಕೆಲಸ ಮಾಡಲಿದೆ. ಪ್ರತಿಯೊಬ್ಬರೂ ತಮ್ಮ AI ತಿಳುವಳಿಕೆಗಳನ್ನು ಸುಧಾರಿಸಿಕೊಳ್ಳಲು ಉಚಿತ ಡಿಜಿಟಲ್ ಕಲಿಕಾ ಸಾಮಗ್ರಿಗಳು ಮತ್ತು ಸಂಪನ್ಮೂಲಗಳು ಇದರಲ್ಲಿ ಸಿಗಲಿವೆ.
ಜನರೇಟಿವ್ AI ಕೋರ್ಸ್‌ವರ್ಕ್‌ನ ವೃತ್ತಿಪರ ಪ್ರಮಾಣಪತ್ರದ ಅಡಿಯಲ್ಲಿ, ಉದ್ಯೋಗಿಗಳು ಜವಾಬ್ದಾರಿಯುತವಾಗಿ AI ಅನ್ನು ಹೇಗೆ ಬಳಸುವುದು ಮತ್ತು AI ನ ಪರಿಚಯಾತ್ಮಕ ಪರಿಕಲ್ಪನೆಗಳನ್ನು ಕಲಿಯಲಿದ್ದಾರೆ. ಮೌಲ್ಯಮಾಪನದಲ್ಲಿ ಉತ್ತೀರ್ಣರಾದರೆ ಅವರಿಗೆ Career Essentials certificate ನೀಡಲಾಗುವುದು. ಇದಲ್ಲದೆ ಶಿಕ್ಷಕರು, ತರಬೇತುದಾರರು ಮತ್ತು ಫೆಸಿಲಿಟೇಟರ್‌ಗಳಿಗಾಗಿ ತರಬೇತುದಾರ ಟೂಲ್‌ಕಿಟ್ ಅನ್ನು ಸಹ ಮೈಕ್ರೊಸಾಫ್ಟ್ ಪ್ರಾರಂಭಿಸುತ್ತಿದೆ. ಇದು ಸ್ಥಳೀಯ ಸಮುದಾಯಗಳಿಗೆ ಕೌಶಲ್ಯ ಸಂಪನ್ಮೂಲಗಳು ಮತ್ತು ತರಬೇತಿಯನ್ನು ನೀಡುತ್ತದೆ.
ತರಬೇತುದಾರರಿಗಾಗಿ ತಯಾರಿಸಲಾದ ಟೂಲ್‌ಕಿಟ್ ಡೌನ್‌ಲೋಡ್ ಮಾಡಬಹುದಾದ, ಬೈಟ್ ಗಾತ್ರದ ವಿಷಯಗಳನ್ನು ಒಳಗೊಂಡಿರುತ್ತದೆ. ಇದು ಮೈಕ್ರೋಸಾಫ್ಟ್ ಎಜುಕೇಶನ್‌ನಿಂದ ಶಿಕ್ಷಕರಿಗಾಗಿ ನಿರ್ಮಿಸಲಾದ ಹೊಸ AI ಕೋರ್ಸ್ ಮತ್ತು AI ಯ ಪ್ರಾಯೋಗಿಕ ಬಳಕೆಗಳ ವಿಷಯವನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿದೆ. ಈ ಹಿಂದಿನ ಯಾವುದೇ ವೈಜ್ಞಾನಿಕ ಆವಿಷ್ಕಾರಕ್ಕಿಂತ ಹೆಚ್ಚು ಎಐ ತಂತ್ರಜ್ಞಾನವು ಮಾನವ ಕುಲಕ್ಕೆ ಅನುಕೂಲತೆಗಳನ್ನು ಒದಗಿಸಲಿದೆ ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ವೈಸ್ ಚೇರಮನ್ ಬ್ರಾಡ್ ಸ್ಮಿತ್ ಹೇಳಿದರು.
ಅಲ್ಲದೆ ಕಂಪನಿಯು ಮೈಕ್ರೋಸಾಫ್ಟ್ ಲರ್ನ್ ಎಐ ಸ್ಕಿಲ್ಸ್ ಚಾಲೆಂಜ್ (Microsoft Learn AI Skills Challenge) ಅನ್ನು ಬಿಡುಗಡೆ ಮಾಡುತ್ತಿದೆ. ಇದು ಜುಲೈ 17 ರಿಂದ ಪ್ರಾರಂಭವಾಗುವ ಮೈಕ್ರೋಸಾಫ್ಟ್ ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಅಗತ್ಯ AI ಕೌಶಲ್ಯಗಳನ್ನು ಕಲಿಯಲು ಉಚಿತ ತಾಂತ್ರಿಕ ತರಬೇತಿ ಕೋರ್ಸ್ ಆಗಿದೆ.
ಬಿಂಗ್ ಚಾಟ್ ಬಾಟ್ ಇದು ಮೈಕ್ರೊಸಾಫ್ಟ್ನ ಓಪನ್ ಎಐ ಸಾಫ್ಟವೇರ್ ಆಗಿದೆ. ಚಾಟ್‌ಜಿಪಿಟಿಯಂತೆಯೇ ವರ್ಲ್ಡ್ ವೈಡ್ ವೆಬ್‌ನಿಂದ ಮಾಹಿತಿಯನ್ನು ಸೆಳೆಯುವ ಮೂಲಕ ಬಿಂಗ್ ಚಾಟ್‌ಬಾಟ್ ಕಾರ್ಯನಿರ್ವಹಿಸುತ್ತದೆ. ಇದರ ಸಂಪೂರ್ಣ ಕಂಟೆಂಟ್ GPT-4 ನಿಂದ ಚಾಲಿತವಾಗಿದೆ. ನಿಮ್ಮ ಮೈಕ್ರೋಸಾಫ್ಟ್ ಖಾತೆಯೊಂದಿಗೆ ಹೊಸ ಬಿಂಗ್ ಅಥವಾ ಎಡ್ಜ್‌ಗೆ ಸೈನ್ ಇನ್ ಆದರೆ ಸಾಕು.. ನೀವು ಈಗ GPT-4 ಯಿಂದ ಚಾಲಿತವಾಗಿರುವ ಚಾಟ್ಬಾಟ್ಗೆ ಪ್ರವೇಶ ಪಡೆಯಬಹುದು.
ಇದನ್ನೂ ಓದಿ : ಲೈವ್ ಸ್ಟ್ರೀಮ್ Google Meetನಲ್ಲಿ ಪ್ರಶ್ನೋತ್ತರ, ಪೋಲ್ ವೈಶಿಷ್ಟ್ಯ: ವ್ಯಾಪಾರ, ಶೈಕ್ಷಣಿಕ ವಲಯಕ್ಕೆ ಅನುಕೂಲ