ETV Bharat / science-and-technology

ಜ.6ರಂದು ಸೂರ್ಯ ನಿರಂತರವಾಗಿ ಕಾಣಿಸುವ ಲ್ಯಾಂಗ್ರೇಜ್ ಪಾಯಿಂಟ್​ ತಲುಪಲಿದೆ ಆದಿತ್ಯ ಎಲ್​ 1

ಸೌರ ಮಿಷನ್ ಆದಿತ್ಯ ಎಲ್ 1 ನೌಕೆಯು ಸೂರ್ಯನು ನಿರಂತರವಾಗಿ ಕಾಣಿಸುವಂಥ ಲ್ಯಾಂಗ್ರೇಜ್ ಪಾಯಿಂಟ್​ಗೆ ತಲುಪಲಿದೆ.

solar-mission-come-january-6-indias-adityal1-will-start-seeing-sun-forever

author img

By ETV Bharat Karnataka Team

Published : Dec 29, 2023, 2:23 PM IST

ನವದೆಹಲಿ: ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಜನವರಿ 6 ರಂದು ಸೂರ್ಯ-ಭೂಮಿ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಅನ್ನು ತಲುಪಲಿದೆ. ಈ ಪಾಯಿಂಟ್​ನಿಂದ ಉಪಗ್ರಹಕ್ಕೆ ಸೂರ್ಯನು ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ಕಾಣಿಸುತ್ತಾನೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಗುರುವಾರ ಹೇಳಿದ್ದಾರೆ.

ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯ ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮ ಟೆಕ್ಫೆಸ್ಟ್ 2023 ಯನ್ನುದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, "ಆದಿತ್ಯ ಎಲ್ 1 ಈಗ ಬಹುತೇಕ ಅಲ್ಲಿಗೆ ತಲುಪಿದೆ. ಅದು ಜನವರಿ 6 ರಂದು ಸಂಜೆ 4 ಗಂಟೆಗೆ ಲ್ಯಾಗ್ರೇಂಜ್ ಪಾಯಿಂಟ್ ತಲುಪಲಿದೆ. ಆದಿತ್ಯ ಎಲ್ 1 ನ ಎಂಜಿನ್​​ನ ಬರ್ನಿಂಗ್​ ಮೇಲೆ ನಾವು ಸಂಪೂರ್ಣ ನಿಯಂತ್ರಣ ಹೊಂದಿದ್ದೇವೆ. ಇದರಿಂದಾಗಿ ಅದು ಹ್ಯಾಲೋ ಕಕ್ಷೆ ಎಂದು ಕರೆಯಲ್ಪಡುವ ಕಕ್ಷೆಯನ್ನು ಪ್ರವೇಶಿಸುತ್ತದೆ." ಎಂದು ತಿಳಿಸಿದರು.

ಭೂಮಿ ಮತ್ತು ಸೂರ್ಯನ ನಡುವಿನ ಗುರುತ್ವಾಕರ್ಷಣೆ ತಟಸ್ಥಗೊಳ್ಳುವ ಪ್ರದೇಶವಾದ ಲ್ಯಾಗ್ರೇಂಜ್ ಬಿಂದುವನ್ನು ತಲುಪುವ ಉದ್ದೇಶದ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸೌರ ಮಿಷನ್ ಅನ್ನು ಈ ವರ್ಷದ ಸೆಪ್ಟೆಂಬರ್​ನಲ್ಲಿ ಉಡಾವಣೆ ಮಾಡಲಾಗಿದೆ. ಆದರೆ ಚಂದ್ರ, ಮಂಗಳ, ಶುಕ್ರನಂತಹ ಇತರ ಗ್ರಹಗಳು ಇರುವುದರಿಂದ ಗುರುತ್ವಾಕರ್ಷಣ ಶಕ್ತಿ ಸಂಪೂರ್ಣ ತಟಸ್ಥವಾಗುವುದು ಸಾಧ್ಯವಿಲ್ಲ ಎಂದು ಸೋಮನಾಥ್ ಹೇಳಿದರು. ಎಲ್ಲಾ ಆರು ಪೇಲೋಡ್​ಗಳನ್ನು ಪರೀಕ್ಷಿಸಲಾಗಿದ್ದು, ಅವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಎಲ್ಲವೂ ನಮ್ಮ ಬಳಿಗೆ ಮಾಹಿತಿಯನ್ನು ಕಳುಹಿಸುತ್ತಿವೆ ಎಂದು ಅವರು ನುಡಿದರು.

"ಆ ಸ್ಥಳಕ್ಕೆ ತಲುಪಿದ ನಂತರ ಉಪಗ್ರಹವು, ಒಳಗಿನ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುವವರೆಗೆ ಮತ್ತು ಡೇಟಾ ರವಾನಿಸಲು ಸಿದ್ಧವಾಗಿರುವವರೆಗೆ ಸೂರ್ಯನನ್ನು ಶಾಶ್ವತವಾಗಿ ನೋಡುತ್ತಿರುತ್ತದೆ. ಈ ಮಿಷನ್​ನಿಂದ ಸೌರ ಕರೋನಾ ಮತ್ತು ಮಾಸ್ ಎಜೆಕ್ಷನ್ ಮತ್ತು ನಾವು ಪ್ರತಿದಿನ ಎದುರಿಸುತ್ತಿರುವ ಬಾಹ್ಯಾಕಾಶ ಹವಾಮಾನದ ಮೇಲಿನ ಪರಿಣಾಮಗಳ ನಡುವಿನ ಸಂಬಂಧವನ್ನು ನಾವು ಕಂಡುಹಿಡಿಯಬಹುದಾಗಿದೆ" ಎಂದು ಸೋಮನಾಥ್ ಹೇಳಿದರು.

ಈ ಹಿಂದೆ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಆದಿತ್ಯ-ಎಲ್ 1 ಮುಂದಿನ ತಿಂಗಳ ಆರಂಭದಲ್ಲಿ ತನ್ನ ಗಮ್ಯಸ್ಥಾನವಾದ ಲ್ಯಾಗ್ರೇಂಜ್ ಪಾಯಿಂಟ್ 1 ಅನ್ನು ತಲುಪಲಿದೆ ಎಂದು ಮಾಹಿತಿ ನೀಡಿದ್ದರು.

ಭಾರತದ ಚಂದ್ರಯಾನ -3 ಬಗ್ಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, 14 ದಿನಗಳ ಕಾಲ ಡೇಟಾ ಕಳುಹಿಸಿದ ನಂತರ ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಆರಾಮವಾಗಿ ಮಲಗಿದೆ. ಅದು ಶಾಶ್ವತ ನಿದ್ರೆಗೆ ಜಾರಿದೆ. ಅದು ಮತ್ತೊಮ್ಮೆ ಎಚ್ಚರಗೊಳ್ಳಬಹುದು ಅಂದುಕೊಂಡಿದ್ದೆವು, ಆದರೆ ಹಾಗಾಗಲಿಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಏನೂ ಮಾಡದೆಯೇ 8 ಸಾವಿರ ಕೋಟಿ ರೂ. ಪಡೆಯಲಿದ್ದಾರೆ ಮೈಕ್ರೋಸಾಫ್ಟ್ ಮಾಜಿ ಸಿಇಒ ಬಾಲ್ಮರ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.