ETV Bharat / science-and-technology

ಅಂತಿಮ ಕಕ್ಷೆ ತಲುಪಲಿದೆ ಆದಿತ್ಯ-ಎಲ್ 1; ಇಂದು ಸಂಜೆ ಇಸ್ರೋ ಮಹತ್ವದ ಕಾರ್ಯಾಚರಣೆ - ಉಪಗ್ರಹ

ಇಂದು ಸಂಜೆ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ತನ್ನ ಅಂತಿಮ ಗಮ್ಯಸ್ಥಾನದ ಕಕ್ಷೆಗೆ ಸೇರಲಿದೆ.

ISRO gears up to put Aditya-L1 spacecraft

author img

By PTI

Published : Jan 5, 2024, 4:01 PM IST

ಬೆಂಗಳೂರು: ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾದ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ತನ್ನ ಅಂತಿಮ ಗಮ್ಯಸ್ಥಾನದ ಕಕ್ಷೆಗೆ ಸೇರಿಸಲು ಇಸ್ರೋ ಶನಿವಾರ ನಿರ್ಣಾಯಕ ತಂತ್ರವನ್ನು ನಡೆಸಲು ಸಜ್ಜಾಗಿದೆ.

ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಸೂರ್ಯ-ಭೂಮಿ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಸುತ್ತಲೂ ಹ್ಯಾಲೋ ಕಕ್ಷೆಯಲ್ಲಿ ಇರಿಸಲಾಗುವುದು ಮತ್ತು ಎಲ್ 1 ಬಿಂದುವು ಭೂಮಿ ಮತ್ತು ಸೂರ್ಯನ ನಡುವಿನ ಒಟ್ಟು ಅಂತರದ ಶೇಕಡಾ ಒಂದರಷ್ಟಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಉಪಗ್ರಹವು ಎಲ್ 1 ಬಿಂದುವಿನ ಸುತ್ತಲೂ ಹ್ಯಾಲೋ ಕಕ್ಷೆಯಲ್ಲಿರುವಾಗ ಯಾವುದೇ ಅಡೆತಡೆಗಳಿಲ್ಲದೆ ಸೂರ್ಯನನ್ನು ನಿರಂತರವಾಗಿ ನೋಡಲು ಸಾಧ್ಯವಾಗುತ್ತದೆ. ಇದು ಸೌರ ಚಟುವಟಿಕೆಗಳನ್ನು ಮತ್ತು ಬಾಹ್ಯಾಕಾಶ ಹವಾಮಾನದ ಮೇಲೆ ಅದರ ಪರಿಣಾಮವನ್ನು ನೈಜ ಸಮಯದಲ್ಲಿ ವೀಕ್ಷಿಸಲು ಹೆಚ್ಚಿನ ಅನುಕೂಲ ನೀಡುತ್ತದೆ ಎಂದು ಅವರು ಹೇಳಿದರು.

"ಶನಿವಾರ ಸಂಜೆ 4 ಗಂಟೆಗೆ ನಡೆಸಲಾಗುವ ಈ ಕಾರ್ಯಾಚರಣೆಯು ಆದಿತ್ಯ-ಎಲ್ 1 ಅನ್ನು ಎಲ್ 1 ರ ಸುತ್ತಲಿನ ಹ್ಯಾಲೋ ಕಕ್ಷೆಗೆ ಬಂಧಿಸುತ್ತದೆ. ನಾವು ಇವಾಗ ಇದನ್ನು ಮಾಡದಿದ್ದರೆ ನೌಕೆಯು ಬಹುಶಃ ಸೂರ್ಯನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸುವ ಸಾಧ್ಯತೆಯಿರುತ್ತದೆ" ಎಂದು ಇಸ್ರೋ ಅಧಿಕಾರಿಯೊಬ್ಬರು ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್​ವಿ-ಸಿ 57) ಮೂಲಕ ಕಳೆದ ವರ್ಷ ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (ಎಸ್​ಡಿಎಸ್​ಸಿ) ಎರಡನೇ ಉಡಾವಣಾ ಪ್ಯಾಡ್​ನಿಂದ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿದೆ.

63 ನಿಮಿಷ 20 ಸೆಕೆಂಡುಗಳ ಹಾರಾಟದ ಅವಧಿಯ ನಂತರ ಇದನ್ನು ಭೂಮಿಯ ಸುತ್ತಲೂ 235 x 19500 ಕಿ.ಮೀ ಅಂಡಾಕಾರದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು. ನಂತರ ಬಾಹ್ಯಾಕಾಶ ನೌಕೆಯು ಸರಣಿ ಕುಶಲತೆಗಳಿಗೆ ಒಳಗಾಯಿತು ಮತ್ತು ಭೂಮಿಯ ಪ್ರಭಾವದ ವಲಯದಿಂದ ತಪ್ಪಿಸಿಕೊಂಡು ಸೂರ್ಯ-ಭೂಮಿಯ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಕಡೆಗೆ ಸಾಗಿತು. ವಿದ್ಯುತ್ಕಾಂತೀಯ ಮತ್ತು ಕಣ ಮತ್ತು ಕಾಂತಕ್ಷೇತ್ರ ಶೋಧಕಗಳನ್ನು ಬಳಸಿಕೊಂಡು ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರ ಪದರಗಳನ್ನು (ಕರೋನಾ) ವೀಕ್ಷಿಸಲು ಬಾಹ್ಯಾಕಾಶ ನೌಕೆ ಏಳು ಪೇಲೋಡ್​ಗಳನ್ನು ಹೊತ್ತೊಯ್ದಿದೆ.

ಇದನ್ನೂ ಓದಿ: ಬ್ರೌಸಿಂಗ್​ ವೇಳೆ ಡೇಟಾ ಟ್ರ್ಯಾಕಿಂಗ್​ ಕುಕೀಸ್‌ಗೆ ಗೂಗಲ್ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.