ETV Bharat / science-and-technology

Acer Nitro 16 ಗೇಮಿಂಗ್ ಲ್ಯಾಪ್​ಟಾಪ್ ಬಿಡುಗಡೆ; ಬೆಲೆ 1 ಲಕ್ಷ 15 ಸಾವಿರ - Nitro 16 ಲ್ಯಾಪ್​ಟಾಪ್

ಪ್ರಖ್ಯಾತ ತಂತ್ರಜ್ಞಾನ ಕಂಪನಿ ಏಸರ್​ ಭಾರತದ ಮಾರುಕಟ್ಟೆಗೆ ಹೊಸ ಗೇಮಿಂಗ್ ಲ್ಯಾಪ್​ಟಾಪ್​ Nitro 16 ಅನ್ನು ಬಿಡುಗಡೆ ಮಾಡಿದೆ.

Acer unveils new gaming laptop with sleek body in India

author img

By

Published : Jul 21, 2023, 2:00 PM IST

ನವದೆಹಲಿ : ತೈವಾನ್‌ನ ಎಲೆಕ್ಟ್ರಾನಿಕ್ಸ್ ಕಂಪನಿ ಏಸರ್ ಶುಕ್ರವಾರ ಭಾರತದ ಮಾರುಕಟ್ಟೆಗೆ ಹೊಸ ಗೇಮಿಂಗ್ ಲ್ಯಾಪ್​ಟಾಪ್ ಬಿಡುಗಡೆ ಮಾಡಿದೆ. ಆಕರ್ಷಕವಾದ ವಿನ್ಯಾಸದ ಏಸರ್ ಹೊಸ ಗೇಮಿಂಗ್ ಲ್ಯಾಪ್‌ಟಾಪ್ 'ನೈಟ್ರೋ 16' 16 ಇಂಚಿನ ದೊಡ್ಡ ಡಿಸ್ ಪ್ಲೇಯನ್ನು ಹೊಂದಿದೆ. Nitro 16 ಲ್ಯಾಪ್​ಟಾಪ್​ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ 1,14,990 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.

ಲ್ಯಾಪ್‌ಟಾಪ್ ಇತ್ತೀಚಿನ AMD Ryzen 7 7840HS ಆಕ್ಟಾ-ಕೋರ್ ಪ್ರೊಸೆಸರ್‌ ಹೊಂದಿದೆ. Nvidia GeForce RTXTM 4060 ನೊಂದಿಗೆ 8 GB ಡೆಡಿಕೇಟೆಡ್ RAM ಮತ್ತು Nvidia GeForce RTXTM 4050 ನೊಂದಿಗೆ 6 GB RAM ಹೀಗೆ ಆವೃತ್ತಿಗಳಲ್ಲಿ ಇದು ಲಭ್ಯವಿದೆ.

"ತನ್ನ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಹೊಳಪಿನ 16-ಇಂಚಿನ ಡಿಸ್ ಪ್ಲೇಯೊಂದಿಗೆ ನೈಟ್ರೋ 16 ಭಾರತದಲ್ಲಿ ಉತ್ಸಾಹಿ ಗೇಮರುಗಳಿಗೆ ಅತ್ಯುತ್ತಮ ಗೇಮಿಂಗ್ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ" ಎಂದು ಏಸರ್ ಇಂಡಿಯಾದ ಮುಖ್ಯ ವ್ಯಾಪಾರ ಅಧಿಕಾರಿ ಸುಧೀರ್ ಗೋಯೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Nitro 16 ತಲ್ಲೀನಗೊಳಿಸುವ ದೃಶ್ಯ ಅನುಭವಕ್ಕಾಗಿ 16:10 aspect ratio ಮತ್ತು ವೇಗದ 165 Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಯಾವುದೇ ವಿಳಂಬ ಅಥವಾ ಅಸ್ಪಷ್ಟತೆ ಇಲ್ಲದೆ ಪರದೆಯ ಮೇಲೆ ಮೃದುವಾದ ಮತ್ತು ಸ್ಪಷ್ಟವಾದ ಚಿತ್ರಗಳನ್ನು ಖಚಿತಪಡಿಸುತ್ತದೆ. ಇದರ ಕೀಬೋರ್ಡ್, ನೈಟ್ರೋ ಸೆನ್ಸ್‌ನೊಂದಿಗೆ ಕಸ್ಟಮೈಸ್ ಮಾಡಬಹುದಾದ 4-ಜೋನ್​ RGB ಬ್ಯಾಕ್‌ಲೈಟ್ ಅನ್ನು ಹೊಂದಿದೆ. ಇದು ಗೇಮರುಗಳಿಗಾಗಿ ತಮ್ಮ ಗೇಮಿಂಗ್ ವಾತಾವರಣವನ್ನು ವೈಯಕ್ತೀಕರಿಸಲು ಮತ್ತು ಆಟದ ಅನುಭವವನ್ನು ಉತ್ತಮಗೊಳಿಸಲು ಅವಕಾಶ ನೀಡುತ್ತದೆ.

ಇದಲ್ಲದೆ ಹೆಚ್ಚು ಅವಧಿಗೆ ಗೇಮ್​​ಗಳನ್ನು ಆಡುವಾಗ ಹೆಚ್ಚು ಬಿಸಿಯಾಗದಂತೆ ತಡೆಯಲು ಲ್ಯಾಪ್‌ಟಾಪ್ ಶಕ್ತಿಯುತ ಕೂಲಿಂಗ್ ಸಿಸ್ಟಮ್‌ ಹೊಂದಿದೆ ಎಂದು ಕಂಪನಿ ಹೇಳಿದೆ. ಸಿಸ್ಟಮ್​ನಲ್ಲಿ ಉಂಟಾಗುವ ಬಿಸಿಯನ್ನು ಪರಿಣಾಮಕಾರಿಯಾಗಿ ಹೊರಹಾಕಲು ಡ್ಯುಯಲ್ ಫ್ಯಾನ್‌ಗಳು, ಡ್ಯುಯಲ್ ಇನ್‌ಟೇಕ್, ಕ್ವಾಡ್ ಎಕ್ಸಾಸ್ಟ್ ಮತ್ತು ಲಿಕ್ವಿಡ್ ಮೆಟಲ್ ಗ್ರೀಸ್‌ಗಳನ್ನು ಒಳಗೊಂಡಿದ್ದು, ತುಂಬಾ ಹೊತ್ತು ಗೇಮಿಂಗ್​​ ಮಾಡಿದರೂ ಲ್ಯಾಪ್‌ಟಾಪ್ ಅನ್ನು ತಂಪಾಗಿರಿಸಲು ಸಹಾಯಕವಾಗಿವೆ.

HDMI 2.1, ಮೈಕ್ರೋ SD ಕಾರ್ಡ್ ರೀಡರ್, USB 4, ಕಿಲ್ಲರ್ ಈಥರ್ನೆಟ್ E2600, ಮತ್ತು Wi-Fi 6E ಯಂತಹ ಕನೆಕ್ಟಿವಿಟಿ ಆಯ್ಕೆಗಳ ಶ್ರೇಣಿಯೊಂದಿಗೆ, Nitro 16 ತಡೆರಹಿತ ಆನ್‌ಲೈನ್ ಗೇಮಿಂಗ್ ಅನುಭವಗಳನ್ನು ಖಾತ್ರಿಗೊಳಿಸುತ್ತದೆ ಎಂದು ಕಂಪನಿ ಉಲ್ಲೇಖಿಸಿದೆ. 1976 ರಲ್ಲಿ ಸ್ಥಾಪನೆಯಾದ ಏಸರ್ 160 ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ವಿಶ್ವದ ಅಗ್ರ ICT ಕಂಪನಿಗಳಲ್ಲಿ ಒಂದಾಗಿದೆ. ಪರಿಸರ ಸ್ನೇಹಿ ಪಿಸಿಗಳು, ಡಿಸ್‌ಪ್ಲೇಗಳು, ಪ್ರೊಜೆಕ್ಟರ್‌ಗಳು, ಸರ್ವರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಉತ್ಪಾದಿಸುತ್ತದೆ.

ಇದನ್ನೂ ಓದಿ : ಫಾಸ್ಟ್​ ಚಾರ್ಜಿಂಗ್​ ಸ್ಮಾರ್ಟ್​ಫೋನ್​ ಮಾರಾಟ ಹೆಚ್ಚಳ; ಚೀನಿ ಬ್ರ್ಯಾಂಡ್​ಗಳು ಮುಂಚೂಣಿಯಲ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.