ನವದೆಹಲಿ: ಸ್ಯಾಮ್ಸಂಗ್ ಗ್ಯಾಲಾಕ್ಷಿ A33 5G ರೆಂಡರ್‌ಗಳ ಬಗ್ಗೆ ಈಗ ಟೆಕ್ ಪ್ರಿಯರು ಭಾರಿ ವಿಮರ್ಶೆ ಮಾಡಲು ಮುಂದಾಗಿದ್ದಾರೆ. ಸೋರಿಕೆಯಾದ ಮಾಹಿತಿ ಪ್ರಕಾರ ಸ್ಮಾರ್ಟ್‌ಫೋನ್ ಗ್ಯಾಲಕ್ಷಿ A32 4G ಅನ್ನು ಹೋಲುತ್ತದೆ.
ಇದು ಇನ್ಫಿನಿಟಿ - ಯು ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ. ಇವು ಒಪ್ಪೋ ಫೈಂಡ್ X3 ಮತ್ತು ಫೈಂಡ್ X3 Pro ಗೆ ಇರುವ ಹಾಗೆ ಇದೆ. Galaxy A33 5G ನ ಪರದೆಯು 6.4 ಇಂಚು ಇದ್ದು, ಸಂಪೂರ್ಣ ಹೆಚ್ಡಿ+ ರೆಸಲ್ಯೂಶನ್ ಹೊಂದಿದೆ.
A33 5G ಬಲಭಾಗದ ಚೌಕಟ್ಟಿನಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಅನ್ನು ಹೊಂದಿದೆ. ಯುಎಸ್‌ಬಿ-ಸಿ ಪೋರ್ಟ್, ಮೈಕ್ರೊಫೋನ್ ಮತ್ತು ಸ್ಪೀಕರ್ ಕೆಳಭಾಗದಲ್ಲಿದೆ.
ಸ್ಯಾಮ್ಸಿಂಗ್ Galaxyಯು A32 4G ಮತ್ತು 5G ಯಲ್ಲಿದ್ದ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಕೈಬಿಟ್ಟಿದೆ. ಜನವರಿ 2022 ರಲ್ಲಿ ಇವು ಅನಾವರಣವಾಗಲಿದ್ದು, ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಲಭ್ಯವಾಗುವ ಸಾಧ್ಯತೆ ಇದೆ.