ETV Bharat / science-and-technology

ಬೆಳಕನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುವ ಕೃತಕ ವ್ಯವಸ್ಥೆ ಸಂಶೋಧಕರಿಂದ ವಿನ್ಯಾಸ - absorbs more solar energy

ಸೂರ್ಯನಿಂದ ಶಕ್ತಿಯನ್ನು ಹೀರಿಕೊಳ್ಳಲು ಸಸ್ಯಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣಾ ಪ್ರಕ್ರಿಯೆಯನ್ನು ಅನುಕರಿಸುವ ಮೂಲಕ ಬೆಳಕನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುವ ಕೃತಕ ವ್ಯವಸ್ಥೆಯನ್ನು ಐಐಎಸ್ಇಆರ್ ತಿರುವನಂತಪುರಂ ಮತ್ತು ಐಐಟಿ ಇಂದೋರ್ ಸಂಶೋಧಕರು ವಿನ್ಯಾಸಗೊಳಿಸಿದ್ದಾರೆ. ಈ ವಿವರಗಳನ್ನು ಪ್ರತಿಷ್ಠಿತ ರಾಯಲ್ ಕೆಮಿಕಲ್ ಸೊಸೈಟಿ ಕೆಮಿಕಲ್ ಸೈನ್ಸ್ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

A new beamforming system
ಬೆಳಕನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುವ ಕೃತಕ ವ್ಯವಸ್ಥೆ
author img

By

Published : Nov 29, 2022, 9:30 PM IST

ನವದೆಹಲಿ: ಸೂರ್ಯನಿಂದ ಶಕ್ತಿಯನ್ನು ಹೀರಿಕೊಳ್ಳಲು ಸಸ್ಯಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣಾ ಪ್ರಕ್ರಿಯೆಯನ್ನು ಅನುಕರಿಸುವ ಮೂಲಕ ಬೆಳಕನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುವ ಕೃತಕ ವ್ಯವಸ್ಥೆಯನ್ನು ಐಐಎಸ್ಇಆರ್ ತಿರುವನಂತಪುರಂ ಮತ್ತು ಐಐಟಿ ಇಂದೋರ್ ಸಂಶೋಧಕರು ವಿನ್ಯಾಸಗೊಳಿಸಿದ್ದಾರೆ. ಈ ವಿವರಗಳನ್ನು ಪ್ರತಿಷ್ಠಿತ ರಾಯಲ್ ಕೆಮಿಕಲ್ ಸೊಸೈಟಿ ಕೆಮಿಕಲ್ ಸೈನ್ಸ್ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಸೂರ್ಯನಿಗೆ ಒಡ್ಡಿಕೊಳ್ಳುವ ಸಸ್ಯದ ಭಾಗಗಳಲ್ಲಿನ ಕ್ರೋಮೋಫೋರ್ ಗಳು ಸೂರ್ಯನ ಬೆಳಕಿನಿಂದ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಅದನ್ನು ಹತ್ತಿರದ ಇತರ ಕ್ರೋಮೋಫೋರ್ ಗಳಿಗೆ ರವಾನಿಸುತ್ತದೆ. ಹೀಗೆ ಶಕ್ತಿಯನ್ನು ಎಲ್ಲಾ ಕ್ರೋಮೋಫೋರ್ ಗಳಿಗೆ ಪೂರೈಸಲಾಗುತ್ತದೆ.

ಇದೇ ವಿಧಾನವನ್ನು ಅನುಸರಿಸಿ ಸಾಧ್ಯವಾದಷ್ಟು ಬೆಳಕನ್ನು ಹೀರಿಕೊಳ್ಳುವ ಪ್ರಯೋಗಗಳನ್ನು ಪ್ರಪಂಚದಾದ್ಯಂತ ಮಾಡಲಾಗುತ್ತಿದೆ. ಇದರ ಭಾಗವಾಗಿ ಪಾಲಿಮರಿಕ್ ರಚನೆಗಳು, ಡಿಟರ್ಜೆಂಟ್ ರೀತಿಯ ಅಣುಗಳು, ಕೋಶಕಗಳು, ಜೆಲ್ ಮತ್ತು ಜೈವಿಕ ವಸ್ತುಗಳನ್ನು ಬಳಸಲಾಗುತ್ತದೆ. ಆದರೆ, ಇದೆಲ್ಲದರ ಸಂಯೋಜನೆಯಿಂದಾಗಿ ಬೆಳಕನ್ನು ಹೀರಿಕೊಳ್ಳುವ ಮತ್ತು ಅದನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಮರ್ಥ್ಯವು ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲ.

ಐಐಎಸ್ಇಆರ್ ಮತ್ತು ಐಐಟಿ ವಿಜ್ಞಾನಿಗಳು ಈ ಸಮಸ್ಯೆಯ ಬಗ್ಗೆ ಗಮನಹರಿಸಿದ್ದು ಪರಮಾಣು ನ್ಯಾನೊಕ್ಲಸ್ಟರ್​ಗಳನ್ನು ಬಳಸುವ ಮೂಲಕ ಸೂರ್ಯನ ಬೆಳಕನ್ನು ಉನ್ನತ ಮಟ್ಟದಲ್ಲಿ ಹೀರಿಕೊಳ್ಳುವುದು ಮಾತ್ರವಲ್ಲದೆ, ಶೇ 93ರಷ್ಟು ದಕ್ಷತೆಯೊಂದಿಗೆ ಶಕ್ತಿಯನ್ನು ವರ್ಗಾಯಿಸಲು ಸಾಧ್ಯವಾಗಿದೆ.

ಈ ವ್ಯವಸ್ಥೆಯಲ್ಲಿ ಉನ್ನತ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಭಾರತವು 2070 ರ ವೇಳೆಗೆ ಶೂನ್ಯ ಹೊರಸೂಸುವಿಕೆ ವಿದ್ಯುತ್ ಪೂರೈಕೆಗೆ ಬದ್ಧವಾಗಿದೆ. ಈ ಕ್ರಮದಲ್ಲಿ ಈ ಸಂಶೋಧನೆಯು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ:ಸ್ಕೈರೂಟ್ ಏರೋಸ್ಪೇಸ್: ಒಂದು ವರ್ಷದಲ್ಲಿ ವಿಕ್ರಮ್-1 ಪ್ರಾರಂಭಿಸಲು ಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.