ETV Bharat / science-and-technology

ಆ್ಯಪಲ್​​​​​​ ಐಒಎಸ್​ 16 ಬೆಟಾ ಹೊಂದಿರುವ ಏರ್​ಟೆಲ್​, ಜಿಯೋ ಗ್ರಾಹಕರಿಗೆ 5ಜಿ ಸೇವೆ ಆರಂಭ

ಐಫೋನ್​ನ 14, ಐಫೋನ್​ 13, ಐಫೋನ್​ 12 ಮತ್ತು ಐಫೋನ್​ 3ಎಸ್​ಇ (ಥರ್ಡ್​ ಜನರೇಷನ್​) ಮೊಬೈಲ್​ ಹೊಂದಿರುವವರೂ ಕೂಡ 5ಜಿ ಸೇವೆಯನ್ನು ಡಿಸೆಂಬರ್​​ಗೆ ಮೊದಲೇ ಪಡೆಯಬಹುದಾಗಿದೆ.

author img

By

Published : Nov 10, 2022, 4:13 PM IST

ಆ್ಯಪಲ್​​​​​​ ಐಒಎಸ್​ 16ಬೆಟಾ ಹೊಂದಿರುವ ಏರ್​ಟೆಲ್​ ಮತ್ತು ಜಿಯೋ ಗ್ರಾಹಕರಿಗೆ 5ಜಿ ಸೇವೆ ಆರಂಭ
5G service started for Airtel and Jio customers with Apple iOS 16 beta

ನವದೆಹಲಿ: ಆ್ಯಪಲ್​ ಐಒಎಸ್​ 16 ಬೆಟಾ ಸಾಫ್ಟ್​​ವೇರ್​​ ಪ್ರೋಗ್ರಾಂ ಅನ್ನು ಭಾರತದಲ್ಲಿ ಇದೀಗ ಏರ್​ಟೆಲ್​ ಮತ್ತು ಜಿಯೋ ಗ್ರಾಹಕರು ಕೂಡ ಅನುಭವಿಸಬಹುದಾಗಿದೆ. ಈ ಮೂಲಕ 5ಜಿ ಸೂಪರ್​ ಫಾಸ್ಟ್​ ಇಂಟರ್​​ನೆಟ್​ ಬಳಕೆ ಮಾಡಬಹುದಾಗಿದೆ. ಐಫೋನ್​ನ 14, ಐಫೋನ್​ 13, ಐಫೋನ್​ 12 ಮತ್ತು ಐಫೋನ್​ 3ಎಸ್​ಇ (ಥರ್ಡ್​ ಜನರೇಷನ್​) ಮೊಬೈಲ್​ ಹೊಂದಿರುವವರೂ ಕೂಡ 5ಜಿ ಸೇವೆಯನ್ನು ಡಿಸೆಂಬರ್​​ಗೆ ಮೊದಲೇ ಪಡೆಯಬಹುದಾಗಿದೆ.

5ಜಿ ಸೇವೆ ಡಿಸೆಂಬರ್​ನಲ್ಲಿ ಸಾರ್ವಜನಿಕವಾಗಿ ಲಭ್ಯವಾಗಲಿದ್ದು, ಅದಕ್ಕೂ ಮೊದಲು ಭಾರತದಲ್ಲಿ ಆ್ಯಪಲ್​ನ ಐಒಎಸ್​ 16 ಬೆಟಾ ಸಾಫ್ಟ್​ವೇರ್​ನಲ್ಲಿ ಪಡೆಯಬಹುದಾಗಿದೆ. ಬೆಟಾ ಸಾಫ್ಟ್​ವೇರ್​ ಸಾರ್ವಜನಿಕವಾಗಿ ಲಭ್ಯವಾಗುವ ಮೊದಲೇ ಅಭ್ಯಾಸ ಪೂರ್ವವಾಗಿ ಈ ಬೆಟಾ ಪ್ರೋಗ್ರಾಮ್​ ಅನ್ನು ಬಳಕೆದಾರರು ಪಡೆಯಬಹುದಾಗಿದೆ. ಆ್ಯಪಲ್​ನ 5ಜಿ ಬೆಟಾ ಯಾವುದೇ ದೇಶದಲ್ಲಿ ಆ್ಯಪಲ್​ ಐಡಿಹೊಂದಿರುವ ಗ್ರಾಹಕರು ತೆರೆಯಬಹುದಾಗಿದೆ. ಸೈನ್​ ಅಪ್​​ ಪ್ರಕ್ರಿಯೆ ವೇಳೆ ಅವರು ಕೆಲವು ಷರತ್ತುಗಳಿಗೆ ಸಮ್ಮತಿ ಸೂಚಿಸಬೇಕಾಗಿದೆ.

ಬೆಟಾ ಸಾಫ್ಟ್​​ವೇರ್​ ಡೌನ್​ಲೋಡ್​ ಮಾಡುವ ಮುನ್ನ ಅವರು ತಮ್ಮ ಡಾಟಾ ಬ್ಯಾಕ್​ಅಪ್​ ಹೊಂದಿರುವುದು ಅವಶ್ಯ. ಬ್ಯುಸಿನೆಸ್​ ಅವಶ್ಯಕತೆಗೆ ಹೊರತಾದ ಇತರ ಡಿವೈಸ್​​ಗಳಲ್ಲಿ ಈ ಬೆಟಾ ಸಾಫ್ಟ್​ವೇರ್​​ ಡೌನ್​ಲೋಡ್​ ಮಾಡುವುದು ಸುರಕ್ಷಿತ.

ಐಒಎಸ್​ ಬೆಟಾ ಫೀಡ್​ಬ್ಯಾಕ್​ ಅಸಿಸ್ಟಂಟ್​ ಆ್ಯಪ್​ ಆಗಿ ತಯಾರಿಕೆ ಮಾಡಲಾಗಿದ್ದು, ಐಫೋನ್​ ಮತ್ತು ಐಪಾಡ್​ ಅಥವಾ ಮ್ಯಾಕ್​ನ ಡಾಕ್​ನಲ್ಲಿ ಹೋಮ್​ ಸ್ಕ್ರೀನ್​ನಲ್ಲಿ ತೆರೆಯಬಹುದಾಗಿದೆ. ನೆಟ್​ವರ್ಕ್​ ಪ್ರಮಾಣೀಕರಣ ಮತ್ತು ಗುಣಮಟ್ಟ ಪರೀಕ್ಷೆ ಪೂರ್ಣಗೊಂಡಿದ್ದು, ಭಾರತೀಯ ಗ್ರಾಹಕರಿಗೆ ಉತ್ತಮ ಐಜಿ ಸೇವೆ ನೀಡಲು ಆ್ಯಪಲ್​ ಕಾರ್ಯ ನಿರ್ವಹಿಸುತ್ತಿರುವುದಾಗಿ ಕಂಪನಿ ಕಳೆದ ಅಕ್ಟೋಬರ್​ನಲ್ಲಿ ತಿಳಿಸಿತ್ತು.

ಡಿಸೆಂಬರ್​ನಿಂದ ಸಾಫ್ಟ್​​ವೇರ್​ ಅಪ್​ಡೇಟ್​​ ಮಾಡುವ ಮೂಲಕ ಐಫೋನ್​ ಬಳಕೆದಾರರು ಐಜಿ ಸೇವೆ ಪಡೆಯಲಿದ್ದಾರೆ. ಭಾರತದಲ್ಲಿ ಪ್ರಮುಖ ಮೇಟ್ರೊ ನಗರದಲ್ಲಿ ಹಂತ ಹಂತವಾಗಿ 5ಜಿ ಸೇವೆ ಆರಂಭವಾಗಲಿದೆ. ಆ್ಯಪಲ್​ ಬಳಕೆದಾರರು ಉತ್ತಮ ಸೇವೆ ಪಡೆಯಲು ತಾವು ಹಲವು ಮಟ್ಟದಲ್ಲಿ ಪರೀಕ್ಷೆ ನಡೆಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ‘ಹೇ ಸಿರಿ’ ಕಮಾಂಡ್​​​​​​​ ಕೇವಲ ‘ಸಿರಿ’ ಎಂದು ಬದಲಾಯಿಸಲು ಆ್ಯಪಲ್ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.