ಸ್ಯಾನ್ ಫ್ರಾನ್ಸಿಸ್ಕೋ : ಜಗತ್ತಿನಲ್ಲಿ ಸದ್ಯ ಅತ್ಯಂತ ಜನಪ್ರಿಯ ಚಾಟ್ ಬಾಟ್ ಆಗಿರುವ ಚಾಟ್ ಜಿಪಿಟಿಯನ್ನು ತಯಾರಿಸಿರುವ, ಮೈಕ್ರೊಸಾಫ್ಟ್ ಬೆಂಬಲಿತ ಕಂಪನಿಯಾಗಿರುವ ಓಪನ್ ಎಐ (OpenAI) ನ ನಷ್ಟವು ಕಳೆದ ವರ್ಷ 540 ಮಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ನಷ್ಟ ಇನ್ನೂ ಹೆಚ್ಚಾಗಲಿದೆ ಎನ್ನಲಾಗಿದೆ. ಗೂಗಲ್ನ ಪ್ರಮುಖ ಉದ್ಯೋಗಿಗಳನ್ನು ತನ್ನತ್ತ ಸೆಳೆದು ನೇಮಕ ಮಾಡಿಕೊಂಡಿದ್ದು ಮತ್ತು ಚಾಟ್ ಜಿಪಿಟಿ ಅಭಿವೃದ್ಧಿಪಡಿಸಲು ಮುಂದಾಗಿರುವ ಕಾರಣದಿಂದ ನಷ್ಟಗಳು ಹೆಚ್ಚಾಗಿವೆ ಎನ್ನಲಾಗಿದೆ. ಚಾಟ್ ಬಾಟ್ ಅನ್ನು ವಾಣಿಜ್ಯಿಕವಾಗಿ ಮಾರಾಟ ಮಾಡುವ ಮುನ್ನ, ಮೈಕ್ರೊಸಾಫ್ಟ್ ತನ್ನ ಮಶೀನ್ ಲರ್ನಿಂಗ್ ಮಾಡೆಲ್ಗಳಿಗೆ ತರಬೇತಿ ನೀಡಲು ಭಾರಿ ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡಿದೆ ಎಂದು ವರದಿಗಳು ತಿಳಿಸಿವೆ.
ಈ ವರ್ಷದ ಫೆಬ್ರವರಿಯಲ್ಲಿ ಓಪನ್ ಎಐ ChatGPT ಪ್ಲಸ್ ಹೆಸರಿನ ಹೊಸ ಸಬ್ಸ್ಕ್ರಿಪ್ಷನ್ ಯೋಜನೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ಗ್ರಾಹಕರು ತಿಂಗಳಿಗೆ 20 ಡಾಲರ್ ಶುಲ್ಕ ಪಾವತಿಸಬೇಕಾಗುತ್ತದೆ. ಕಂಪನಿಯ ಆದಾಯವು ಸಾಕಷ್ಟು ಹೆಚ್ಚಾದರೂ ನಷ್ಟ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಚಾಟ್ ಜಿಪಿಟಿಯನ್ನು ಹೊಸ ಹೊಸ ಗ್ರಾಹಕರು ಬಳಸಲಾರಂಭಿಸಿದ್ದು ಮತ್ತು ಅದಕ್ಕಾಗಿ ಸಾಫ್ಟವೇರ್ನ ಮುಂದಿನ ವರ್ಷನ್ಗಳನ್ನು ಟೆಸ್ಟ್ ಮಾಡಬೇಕಾಗಿರುವುದು ನಷ್ಟ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಓಪನ್ ಎಐ ತನ್ನನ್ನು ತಾನು ಉತ್ತಮಗೊಳಿಸಿಕೊಳ್ಳಲು ಸಾಧ್ಯವಾಗುವಂಥ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಅದಕ್ಕೆ ಅಳವಡಿಸುವ ಸಲುವಾಗಿ ಓಪನ್ ಎಐ ಸುಮಾರು 100 ಬಿಲಿಯನ್ ಡಾಲರ್ನಷ್ಟು ಬಂಡವಾಳ ಕ್ರೋಢೀಕರಣ ಮಾಡಬಹುದು ಎಂದು ಓಪನ್ ಎಐ ನ ಸಿಇಓ ಸ್ಯಾಮ್ ಆಲ್ಟಮನ್ ಹಿಂದೊಮ್ಮೆ ಖಾಸಗಿಯಾಗಿ ಹೇಳಿಕೊಂಡಿದ್ದರು. ಸ್ಯಾಮ್ ಆಲ್ಟಮನ್ ಹಾಗೆ ನನ್ನ ಮುಂದೆ ಹೇಳಿದ್ದರು ಎಂದು ಟ್ವಿಟರ್ ಸಿಇಓ ಎಲೋನ್ ಮಸ್ಕ್ ಶನಿವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಈ ಹಿಂದೆ ಓಪನ್ ಎಐ ಅನ್ನು ಹಲವಾರು ಬಾರಿ ಟೀಕಿಸಿರುವ ಮಸ್ಕ್, ತಮ್ಮದೇ ಆದ ಚಾಟ್ ಬಾಟ್ ಕಂಪನಿ X.AI ಅನ್ನು ಸ್ಥಾಪನೆ ಮಾಡಿದ್ದಾರೆ. ಓಪನ್ ಎಐ ಕಂಪನಿಯನ್ನು ಆರಂಭಿಸುವ ಸಮಯದಲ್ಲಿ ಎಲೋನ್ ಮಸ್ಕ್ ಅದರಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರು. ಆದರೆ ಕೆಲ ದಿನಗಳ ನಂತರ ಪಾಲುದಾರಿಕೆಯಿಂದ ಹಿಂದೆ ಸರಿದಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ಚಾಟ್ ಜಿಪಿಟಿ ಮತ್ತು ಜಿಪಿಟಿ - 4 ವಿಶ್ವಾದ್ಯಂತ ಭಾರಿ ಜನಪ್ರಿಯತೆ ಪಡೆದುಕೊಂಡಿವೆ. ಓಪನ್ ಎಐ ಇತ್ತೀಚೆಗಷ್ಟೇ 27 ರಿಂದ 29 ಬಿಲಿಯನ್ ಡಾಲರ್ ಮೌಲ್ಯಕ್ಕೆ ಸರಿಸಮನಾದ 300 ಮಿಲಿಯನ್ ಡಾಲರ್ ಮುಖಬೆಲೆಯ ಶೇರುಗಳನ್ನು ಮಾರಾಟ ಮಾಡಿದೆ.
ಯಂತ್ರ ಕಲಿಕೆ ಅಥವಾ ಮಶೀನ್ ಲರ್ನಿಂಗ್ ಎಂಬುದು ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟರ್ ವಿಜ್ಞಾನದ ಒಂದು ಶಾಖೆಯಾಗಿದ್ದು, ಇದು ಮಾನವರು ಕಲಿಯುವ ವಿಧಾನವನ್ನು ಅನುಕರಿಸಲು ಡೇಟಾ ಮತ್ತು ಅಲ್ಗಾರಿದಮ್‌ಗಳ ಬಳಕೆ ಮಾಡುತ್ತದೆ. ಕ್ರಮೇಣ ಅದರ ನಿಖರತೆಯನ್ನು ಸುಧಾರಿಸುತ್ತದೆ. IBM ಯಂತ್ರ ಕಲಿಕೆ ತಂತ್ರಜ್ಞಾನದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ.
ಇದನ್ನೂ ಓದಿ : ಜು.1 ರಿಂದ ಚಿನ್ನದ ಹಾಲ್ಮಾರ್ಕಿಂಗ್ ಕಡ್ಡಾಯ ನಿಯಮ ಜಾರಿ ಸಾಧ್ಯತೆ ಇಲ್ಲ!