ETV Bharat / opinion

ವಿಶೇಷ ಲೇಖನ: ಹೊಸ 'ರಾಷ್ಟ್ರೀಯ ಶಿಕ್ಷಣ ನೀತಿ' - ಆಕಾಂಕ್ಷೆಗಳು.. ಆತಂಕಗಳು

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದಲಾವಣೆ ಕೈಗೊಂಡು 'ಹೊಸ ಶಿಕ್ಷಣ ನೀತಿ' ಜಾರಿಗೆ ತರಲಾಗಿದೆ. ಇದರ ಯಶಸ್ಸು ಸಂಪನ್ಮೂಲಗಳ ಸರಿಯಾದ ಹಂಚಿಕೆ ಮತ್ತು ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಕಾದಂಬರಿಕಾರ, ವಿಮರ್ಶಕ ಸೈಕತ್ ಮಜುಂದಾರ್ ಹೇಳುತ್ತಾರೆ.

New Education Policy
ರಾಷ್ಟ್ರೀಯ ಶಿಕ್ಷಣ ನೀತಿ
author img

By

Published : Aug 8, 2020, 10:42 AM IST

2020ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಪ್ರಭಾವಶಾಲಿ ಮತ್ತು ಮಹತ್ವಾಕಾಂಕ್ಷೆಯ ಬೆಳವಣಿಗೆಯಾಗಿದ್ದು, ಅದು ಜ್ವಾಜಲ್ಯಮಾನವಾಗಿಯೂ ಮತ್ತು ಆಶಾದಾಯಕ ಭವಿಷ್ಯವಾಗಿಯೂ ಕಂಡು ಬರುತ್ತದೆ. ನೀತಿ ಕುರಿತಂತೆ ಸಮಿತಿಯ ಕೆಲವು ಸದಸ್ಯರನ್ನು ಭೇಟಿಯಾಗಿ ಚರ್ಚೆ ನಡೆಸಿದ ನಂತರ ನೀತಿಯ ಸುಂದರ ರೂಪುರೇಷೆ ಬಗ್ಗೆ ನನಗೆ ಅಚ್ಚರಿ ಎನಿಸಲಿಲ್ಲ. ಬದಲಿಗೆ ಇದು ಸ್ವಾಭಾವಿಕ ಮತ್ತು ನಿರೀಕ್ಷಿತ ಸಂಗತಿಯಾಗಿತ್ತು ಎನಿಸಿತು. ನಾನು ವಿಚಾರ ವಿನಿಮಯ ಮಾಡಿಕೊಂಡ ತಜ್ಞರಲ್ಲಿ ಪ್ರಸಿದ್ಧ ವಿಜ್ಞಾನಿ ಡಾ. ಕೆ ಕಸ್ತೂರಿ ರಂಗನ್ ಮತ್ತು ಉದ್ಯಮ ಆಡಳಿತದ ಹಿನ್ನೆಲೆ ಹೊಂದಿರುವ ವಿದ್ವಾಂಸ ಡಾ. ಎಂ. ಕೆ. ಶ್ರೀಧರ್ ಮಕಮ್ ಪ್ರಮುಖರು. ಮಕಮ್ ಅವರು ಈಗ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಂಶೋಧನಾ ಮತ್ತು ನೀತಿ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ಆದರೆ, ಸಮಿತಿಯಲ್ಲಿ ಹೊಸ ಚಿಂತನೆಗಳ ಮೂಲಕ ಭಾರಿ ಗಮನ ಸೆಳೆದ ಪ್ರತಿನಿಧಿ ಎಂದರೆ ಪ್ರಿನ್ಸ್ಟನ್ ನ ಗಣಿತ ಪ್ರಾಧ್ಯಾಪಕ ಮತ್ತು ಫೀಲ್ಡ್ಸ್ ಪದಕ ವಿಜೇತ ಮಂಜುಲ್ ಭಾರ್ಗವ್. ಇವರು ಭಾರತೀಯ ಶಾಸ್ತ್ರೀಯ ಸಂಗೀತದ ಕುರಿತಂತೆಯೂ ಅಪಾರ ಪ್ರೀತಿ ಆಸ್ಥೆ ಇರಿಸಿಕೊಂಡವರು.

ಆದರೆ ಉಜ್ವಲ ಭವಿಷ್ಯದ ಕಡೆಗೆ ಭಾರತದಂತಹ ದೈತ್ಯನನ್ನು ಎಳೆದೊಯ್ಯ ಬೇಕಿರುವುದು ಕೂಡ ಗಮನಿಸಬೇಕಾದ ಮಹತ್ವದ ಕಾರ್ಯ. ಹೀಗಾಗಿ ನೀತಿಯ ಅಂತಿಮ ಯಶಸ್ಸು ಎಂಬುದು ಗಣನೀಯ ಪ್ರಮಾಣದ ಸಂಪನ್ಮೂಲಗಳ ವಿನಿಯೋಗ ಮತ್ತು ಅನೇಕರ ಸಹಕಾರವನ್ನು ಅವಲಂಬಿಸಿರುತ್ತದೆ. ಎಲ್ಲರಿಗೂ ಈಗಾಗಲೇ ತಿಳಿದಿರುವಂತೆಯಾವುದೇ ನೀತಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಂಡಾಗ ಮಾತ್ರ ಅದು ಪರಿಣಾಮಕಾರಿ ಆಗಬಲ್ಲದು.

ಉನ್ನತ ಶಿಕ್ಷಣದ ವಿಷಯಕ್ಕೆ ಬಂದರೆ, ಹಲವಾರು ಗಮನಾರ್ಹ ಸಂಗತಿಗಳು ಎದ್ದು ಕಾಣುತ್ತವೆ. ಮೊದಲನೆಯದಾಗಿ, ಅಧ್ಯಯನ ಶಿಸ್ತುಗಳನ್ನು ಪ್ರತ್ಯೇಕವಾಗಿ ಪರಿಗಣಿಸಿರುವ ಕುರಿತಂತೆ ನೀತಿಯಲ್ಲಿ ತೀಕ್ಷ್ಣ ವಿಮರ್ಶೆ ಇರುವುದನ್ನು ಗಮನಿಸಬಹುದು. ದೇಶದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ ನಮ್ಮಂತಹ ಅನೇಕರಿಗೆ - ಮತ್ತು ಇಂದು ಹಾಗೆಯೇ ಶಿಕ್ಷಣ ಪಡೆಯುತ್ತಿರುವ ಅನೇಕರಿಗೆ ನಿಸ್ಸಂದೇಹವಾಗಿ ಅಧ್ಯಯನ ಶಿಸ್ತುಗಳು ಬದಲಿಸಲು ಸಾಧ್ಯವೇ ಇಲ್ಲದ ಕಠಿಣ ಪೆಟ್ಟಿಗೆಗಳಲ್ಲಿ ಎರಕ ಹೊಯ್ದ ಶಾಶ್ವತ ಅಚ್ಚುಗಳಂತೆ ಕಂಡುಬರುತ್ತಿವೆ. ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಎಂದು ಪ್ರತ್ಯೇಕ ಬಣ್ಣ ಬಳಿಯಲಾಗುತ್ತದೆ. ಇದರಿಂದ ನಿಮ್ಮ ವೃತ್ತಿಜೀವನದ ಪಾತ್ರ ನಿರ್ಧರಿಸಲು ತೊಂದರೆ ಉಂಟಾಗುತ್ತದೆ. ಏಕೆಂದರೆ ನಿಜಕ್ಕೂ ಬದುಕು ಎಂಬುದು ಈ ಎಲ್ಲವುಗಳ ಸಮ್ಮಿಶ್ರವೇ ಆಗಿರುತ್ತದೆ. ಸ್ಪಷ್ಟವಾಗಿ ಇದೆಲ್ಲಾ ಬ್ರಿಟಿಷ್ ವಸಾಹತುಶಾಹಿ ವಿಶ್ವವಿದ್ಯಾಲಯಗಳಿಂದ ಪ್ರೇರಿತಗೊಂಡ ಪಠ್ಯಕ್ರಮ ಪರಂಪರೆಯಾಗಿದೆ. ಆಕ್ಸ್ ಫರ್ಡ್ ಮಾದರಿಯನ್ನು ಅನುಸರಿಸದೇ ಲಂಡನ್ ವಿಶ್ವವಿದ್ಯಾಲಯದ ಅನುಸಾರ ಪಠ್ಯಕ್ರಮ ರೂಪುಗೊಂಡಿತು. ಪರಿಣಾಮ ಇದು ಭಾರತೀಯರಂತಹ ಕಂದು ವರ್ಣೀಯರನ್ನು ಸಮರ್ಥ ಗುಮಾಸ್ತರನ್ನಾಗಿ ಮಾಡಲು ಮುಂದಾಯಿತು. ಈ ವ್ಯವಸ್ಥೆ ಇಂದಿನವರೆಗೂ ಬದಲಾಗದೆ ಇದೆ. ಈ ಮಧ್ಯೆ ಜಗತ್ತು 21 ನೇ ಶತಮಾನದ ಜ್ಞಾನ ಪರಂಪರೆಯನ್ನು ಪ್ರವೇಶಿಸಿದೆ, ಅಲ್ಲಿ ಸ್ಟ್ಯಾನ್‌ಫೋರ್ಡ್ ಪ್ರಯೋಗಾಲಯದೊಳಗೆ ಗಣಿತ, ಸಂಗೀತ ಹಾಗೂ ಸಾಹಿತ್ಯವನ್ನು ಬೆರೆಸಲಾಗುತ್ತದೆ ಮತ್ತು ಸಿಲಿಕಾನ್ ಕಣಿವೆಯ ನವೀನ ಸಂಸ್ಕೃತಿಯನ್ನು ಹುರಿಗೊಳಿಸಲಾಗುತ್ತದೆ. ನಾನು ಬೇರೆಡೆ ಕಾಂಟ್ರಾಡಿಸಿಪ್ಲಿನಾರಿಟಿ ( Contradisciplinarity ) ಎಂದು ಕರೆದಿರುವ ಅಂತರಶಿಸ್ತೀಯ ಅಧ್ಯಯನದ ಮೇಲೆ ಈ ನೀತಿ ಗಮನ ಹರಿಸಿದೆ. ಇದರಲ್ಲಿ ಹೊಂದಾಣಿಕೆ ಅಸಂಭವ ಎಂದು ಭಾವಿಸಿದ ಮಾದರಿಯನ್ನು ನೀಡಲಾಗಿದೆ. ಅಂತಿಮವಾಗಿ ಈ ನೀತಿಯಿಂದಾಗಿ 21ನೇ ಶತಮಾನದ ನವೀನ ಜ್ಞಾನ ಆಧಾರಿತ ಆರ್ಥಿಕತೆ ( Knowledge economy ) ಕಡೆಗೆ ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆ ಹೊರಳಲಿದೆ ಎಂಬ ಭರವಸೆ ನಮ್ಮಲ್ಲಿ ಮೂಡುತ್ತದೆ.

ಸಂಶೋಧನೆ ಮತ್ತು ಬೋಧನೆಯನ್ನು ಒಂದುಗೂಡಿಸುವ ಬಹುಶಿಸ್ತೀಯ ವಿಶ್ವವಿದ್ಯಾಲಯಗಳ ಚಿಂತನಾ ಕ್ರಮಕ್ಕೆ ಅನುಗುಣವಾಗಿ ಸಮಿತಿಯ ಈ ಧೋರಣೆ ಇದೆ. ಶಿಸ್ತುಗಳನ್ನು ಕಟ್ಟುನಿಟ್ಟಾಗಿ ಬೇರ್ಪಡಿಸುವುದು ಮಾತ್ರವಲ್ಲ, ಬೋಧನೆ ಮತ್ತು ಸಂಶೋಧನೆಯನ್ನು ಸಂಪೂರ್ಣ ಧ್ರುವೀಕರಣಗೊಳಿಸುವುದು 19ನೇ ಶತಮಾನದ ವಸಾಹತುಶಾಹಿ ಮಾದರಿಯ ವ್ಯವಸ್ಥಿತ ರೂಢಿಯಾಗಿತ್ತು. ಏಷ್ಯಾಟಿಕ್ ಸೊಸೈಟಿಯೇ ಆಗಿರಲಿ ಅಥವಾ ಇನ್ನಾವುದೇ ವೈಜ್ಞಾನಿಕ ಅನ್ವೇಷಣೆಯ ವಿಶೇಷ ಕೇಂದ್ರಗಳೇ ಆಗಿರಲಿ, ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧನೆಗಳು ನಡೆಯುತ್ತಿದ್ದವು. ಕಾಲೇಜುಗಳಲ್ಲಿ ಬೋಧನೆಗಳು ನಡೆಯುತ್ತಿದ್ದವು. ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ವಿನ್ಯಾಸಗೊಳಿಸಿದ ಜರ್ಮನ್ ಮಾದರಿ, ಒಂದೇ ಸ್ಥಳದಲ್ಲಿ ಸಂಶೋಧನೆ ಮತ್ತು ಬೋಧನೆಯನ್ನು ಬೆಸೆಯಿತು, ಇದು 20ನೇ ಶತಮಾನದಲ್ಲಿ ಉನ್ನತ-ಶಕ್ತಿಯ ಅಮೆರಿಕನ್ ವಿಶ್ವವಿದ್ಯಾಲಯಗಳಿಗೆ ಸ್ಫೂರ್ತಿ ನೀಡಿತು. ಬೆರಳೆಣಿಕೆಯ ಪ್ರಕರಣಗಳನ್ನು ಹೊರತುಪಡಿಸಿದರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಇದು ಬಹುತೇಕ ಕಾಣೆಯಾಗಿದೆ, ಎನ್ ಇ ಪಿ 2020 ಈ ಕಾರಣಕ್ಕೆ ಅತ್ಯಂತ ಸಂವೇದನಾಶೀಲವಾಗಿದೆ ಎಂದು ತೋರುತ್ತದೆ, ಅಧ್ಯಯನ ಶಿಸ್ತು ವಿಭಾಗಗಳಲ್ಲಿ ದೀರ್ಘಕಾಲದವರೆಗೆ ಸಂಶೋಧನೆ ಮತ್ತು ಬೋಧನೆ ಬೆಸೆದಿರಬೇಕು ಎಂದು ಇದು ಒತ್ತಾಯಿಸುತ್ತದೆ, ಉದಾಹರಣೆಗೆ ನೀತಿ ನಿರ್ದಿಷ್ಟಪಡಿಸಿರುವ ಮಾನವಿಕ ವಿಷಯಗಳು ಮತ್ತು ಎಸ್‌ಟಿಇಎಂ (STEM) ವಿಭಾಗಗಳ ನಡುವಿನ ಸಹಯೋಗ.

ಒಂದೇ ಕಡೆ ಅಂತರಶಿಸ್ತೀಯ ಸಂಶೋಧನೆ ಮತ್ತು ಬೋಧನೆಯನ್ನು ಒಗ್ಗೂಡಿಸುವ ಈ ಚಿಂತನೆ ಬೇರೂರುವಂತೆ ಮಾಡಲು ಭಾರತದ ಪ್ರಾಧ್ಯಾಪಕರ ಮನಸ್ಸಿನ ಮೇಲೆ ಗಣನೀಯ ಪ್ರಭಾವ ಬೀರಬೇಕಾಗುತ್ತದೆ. ಇದಕ್ಕಾಗಿ ಉನ್ನತ ಮಟ್ಟದಲ್ಲಿ ಸಂಶೋಧನೆಯ ಕೂಲಂಕಷ ಪರಾಮರ್ಶೆ ನಡೆಯುವ ಅಗತ್ಯವಿರುತ್ತದೆ, ಹೀಗೆ ಮಾಡುವುದರಿಂದ ಭವಿಷ್ಯದ ಅಧ್ಯಾಪಕರಿಗೆ ತರಬೇತಿ ನೀಡಿದಂತಾಗುತ್ತದೆ. ಪ್ರಸ್ತಾವಿತ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು ನಿರೀಕ್ಷೆಯಂತೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದರೆ, ಈ ಹೆಬ್ಬಯಕೆ ಈಡೇರಲಿದೆ.

ಈ ಮಹತ್ವಾಕಾಂಕ್ಷೆಯನ್ನು ಗಮನದಲ್ಲಿಟ್ಟುಕೊಂಡು, ಸಂಶೋಧನೆ ಮತ್ತು ಬೋಧಕವರ್ಗದ ಅಭಿವೃದ್ಧಿಗಾಗಿ ಗಣನೀಯ ಪ್ರಮಾಣದಲ್ಲಿ ಹೂಡಿಕೆಗೆ ಕರೆ ನೀಡಲಾಗುತ್ತದೆ ಎಂದು ಸ್ವಾಭಾವಿಕವಾಗಿ ನಿರೀಕ್ಷಿಸಲಾಗಿದೆ, ಎನ್ ಇ ಪಿ ಈ ನಿಟ್ಟಿನಲ್ಲಿ ನಿರಾಶೆಗೊಳಿಸುವುದಿಲ್ಲ ಎಂ ಭರವಸೆ ಇದೆ. ಇದನ್ನು ನೀತಿಯಲ್ಲಿ ಬಹಳ ಸ್ಪಷ್ಟವಾಗಿ ವಿಷದಪಡಿಸಲಾಗಿದೆ. ಈ ದೇಶದಲ್ಲಿ ಸಂಶೋಧನಾ ತರಬೇತಿಯ ಕಳಪೆ ಸಂಸ್ಕೃತಿಯಿಂದ ಕೂಡಿದೆ. ಆಂಡ್ರೆ ಬೆಟಿಲ್ಲೆ ಒಂದು ಸಂದರ್ಭದಲ್ಲಿ ನಮ್ಮ ದೇಶದ ಡಾಕ್ಟರೇಟ್ ಸಂಸ್ಕೃತಿಯನ್ನು ‘ ತರಬೇತಿ ಪಡೆದ ಅಸಮರ್ಥತೆಯ ಉತ್ಪಾದನೆ ‘ ಎಂದು ಜರಿದಿದ್ದರು. ಇದು ಗುಣಪಡಿಸಲೇಬೇಕಿರುವ ಗಾಯ. ಆದರೂ, ರಾತ್ರೋರಾತ್ರಿ ಇದೆಲ್ಲಾ ಬದಲಾವಣೆ ಆಗುತ್ತದೆ ಎಂದು ನಿರೀಕ್ಷಿಸುವುದು ಸಾಧುವಲ್ಲ. ಏಕೆಂದರೆ ಇದು ಆಡಳಿತಾತ್ಮಕ ಬದಲಾವಣೆ ಕುರಿತಾದ ಸಂಗತಿಯಲ್ಲ ಬದಲಿಗೆ ಸಂಸ್ಕೃತಿಯನ್ನು ಮರುರೂಪಿಸಲು ಮುಂದಾದ ವಿಚಾರ, ಆದ್ದರಿಂದ ಈ ಕುರಿತಂತೆ ಯಶಸ್ಸನ್ನು ಅಂದಾಜು ಮಾಡುವುದು ತುಂಬಾ ಕಷ್ಟ.

ಹೊಸ ಉನ್ನತ ಶಿಕ್ಷಣ ನೀತಿಯ ಅತ್ಯಂತ ಗಮನಾರ್ಹ ಲಕ್ಷಣ ಎಂದರೆ ಪದವಿಪೂರ್ವ ಶಿಕ್ಷಣ ಕಾರ್ಯಕ್ರಮಗಳಿಗೆ ನೀಡಲಾಗಿರುವ ಬಹು ನಿರ್ಗಮನ ಆಯ್ಕೆಯ ಅವಕಾಶ. ಬಹಳ ಸುಸಜ್ಜಿತವಾಗಿ ರೂಪುಗೊಂಡ ಆಳವಾದ ನಾಲ್ಕು ವರ್ಷಗಳ ಪದವಿಪೂರ್ವ ಶಿಕ್ಷಣ ಅಗತ್ಯ ಇದೆ ಎಂದು ನಾನು ಭಾವಿಸಿದ್ದೆ. ಹೊಸ ನೀತಿಯಿಂದಾಗಿ ಅದು ನಿಜವಾಗುತ್ತಿದೆ. ಸ್ವಲ್ಪ ಗಂಡಾಂತರಕಾರಿಯಾದರೂ ಪ್ರತಿ 4 ವರ್ಷಗಳಲ್ಲಿ ಪ್ರತ್ಯೇಕಗೊಳ್ಳುವ ನಿರ್ಗಮನ ಆಯ್ಕೆಗಳು - ಡಿಪ್ಲೊಮಾ, ಅಡ್ವಾನ್ಸಡ್ ಡಿಪ್ಲೊಮಾ ಮತ್ತು 3 ಹಾಗೂ 4 ವರ್ಷದ ಬಿ. ಎ. ಡಿಗ್ರಿಗಳು ನಿಜವಾಗಿಯೂ ಗಮನಾರ್ಹವಾದವು ಎಂದು ನಾನು ಹೇಳಬಯಸುತ್ತೇನೆ. ಇದು ಯೋಚನೆಗೀಡುಮಾಡುತ್ತದೆ ಎಂದರೆ ಅದಕ್ಕೆ ಯಾರೂ ಏನೂ ಮಾಡಲು ಸಾಧ್ಯ ಇಲ್ಲ. ಒಂದು ವರ್ಷದ ಕಾಲೇಜಿನ ನಂತರ ಯಾವ ರೀತಿಯ ಮೂರು ವರ್ಷದ ಶಿಕ್ಷಣ ಪಡೆಯುತ್ತಾರೆ? ನಮ್ಮ ಕಾಲದ ಶಿಕ್ಷಣವನ್ನೇ ಗಮನಿಸಿದರೂ ಬಿಎ / ಬಿಎಸ್ಸಿ / ಬಿಕಾಂ ಉತ್ತೀರ್ಣರಾದ ಮತ್ತು ಹಾನರ್ಸ್ ಪದವಿ ಪಡೆದ ವಿದ್ಯಾರ್ಥಿಗಳು ಹಾನರ್ಸ್ ಅಲ್ಲದ ವಿಷಯಗಳನ್ನು ಅಧ್ಯಯನಕ್ಕೆ ತೆಗೆದುಕೊಂಡಾಗ ಎರಡು ವರ್ಷಗಳ ಅವಧಿಯನ್ನು ಮೀಸಲಿಡಬೇಕಿತ್ತು. ಈಗ ಅಂತಹ ಸ್ಥಿತಿ ಉದ್ಭವಿಸದು. ಆದರೆ ಒಂದು ವರ್ಷದ ನಿರ್ಗಮನದ ಅವಕಾಶದಿಂದಾಗಿ ಕಾಲೇಜು ಶಿಕ್ಷಣ ಕ್ಷುಲ್ಲಕ ಎಂಬ ಭಾವನೆ ಮೂಡಬಲ್ಲದು. ಇದು ವಿದ್ಯಾರ್ಥಿಗಳ ದುರುಪಯೋಗಕ್ಕೆ ಕಾರಣ ಆಗಬಾರದು.

ಅಂತಿಮವಾಗಿ, ಹೊಸ ನೀತಿಯು ಬಹುಮುಖ್ಯವಾದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ( ಪ್ರಮಾಣಿತ ಶ್ರೇಯಾಂಕ ವ್ಯವಸ್ಥೆಯ ಅಗ್ರ 100ರ ಪಟ್ಟಿಯಲ್ಲಿರುವ ವಿಶ್ವವಿದ್ಯಾಲಯಗಳಿಗೆ ) ಭಾರತದಲ್ಲಿ ಕ್ಯಾಂಪಸ್‌ಗಳನ್ನು ತೆರೆಯಲು ಅನುವು ಮಾಡಿಕೊಡುತ್ತದೆ. ಇದೊಂದು ದೊಡ್ಡ ಹೆಜ್ಜೆಯಾಗಿದೆ. ಮೂಲಭೂತವಾಗಿ ಭಾರತೀಯ ಉನ್ನತ ಶಿಕ್ಷಣದ ಉದಾರೀಕರಣದ ಪರಿಣಾಮಗಳು ಧನಾತ್ಮಕ ಇಲ್ಲವೇ ಋಣಾತ್ಮಕವಾಗಿ ಇರಬಹುದು. ಅಂದುಕೊಂಡದ್ದನ್ನು ಸಾಧಿಸಲು ಅದು ಸಾಗಬೇಕಾದ ಹಾದಿ ದೂರವೇ ಇರಬಹುದು. ಉನ್ನತ ಶಿಕ್ಷಣದ ದೇಶೀಯ ಸಂದರ್ಭಕ್ಕೆ ಸಂಬಂಧಿಸಿದಂತೆ ಇದು ಹೊಮ್ಮಿಸುವ ಅರ್ಥ ಏನೆಂದರೆ ಪಾಶ್ಚಾತ್ಯ ಉನ್ನತ ಶಿಕ್ಷಣದ ಸಂಸ್ಥೆಗಳಿಗೆ, ಅದರಲ್ಲಿಯೂ ವಿಶೇಷವಾಗಿ ಅಮೆರಿಕ ಮತ್ತು ಇಂಗ್ಲೆಂಡ್ಗಳಿಗೆ ಇದು ಹೆಚ್ಚಿನ ಮಹತ್ವ ನೀಡುತ್ತದೆ ಎಂದು ಸ್ಪಷ್ಟವಾಗುತ್ತದೆ, ಅಲ್ಲಿನ ವಿಶ್ವವಿದ್ಯಾಲಯಗಳು ಈಗ ಹಣಕಾಸಿನ ಮುಗ್ಗಟ್ಟು, ವಿದ್ಯಾರ್ಥಿಗಳ ದಾಖಲಾತಿ ಸಮಸ್ಯೆ, ಸರ್ಕಾರದ ಪ್ರತಿಕೂಲ ನೀತಿಯಂತಹ ಕಷ್ಟದ ಸ್ಥಿತಿಯನ್ನು ಎದುರಿಸುತ್ತಿವೆ. ತಮ್ಮ ಆದಾಯದ ನಿರ್ಣಾಯಕ ಭಾಗವಾಗಿ ಆ ವಿಶ್ವವಿದ್ಯಾಲಯಗಳು ವಿದೇಶ ವಿದ್ಯಾರ್ಥಿಗಳ ದಾಖಲಾತಿಯನ್ನು ಅವಲಂಬಿಸಿವೆ. ಭಾರತದಂತಹ ವಿಶಾಲವಾದ ಶೈಕ್ಷಣಿಕ ಮಾರುಕಟ್ಟೆಯಲ್ಲಿ ಅಂತರರಾಷ್ಟ್ರೀಯ ಕ್ಯಾಂಪಸ್‌ಗಳು ಬೇರೂರುವಂತೆ ಮಾಡುವುದು ಹೂಡಿಕೆ ಮತ್ತು ಸಹಯೋಗಕ್ಕೆ ಅನುವು ಮಾಡಿಕೊಡುತ್ತದೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ, ಅದು ಆ ದೇಶದ ವಿವಿಗಳಿಗೆ ಹೊಸ ಆದಾಯದ ಹೊಳೆಯನ್ನು ಹರಿಸುತ್ತದೆ. ಸಿಂಗಾಪುರದಲ್ಲಿರುವ ಯೇಲ್-ಎನ್‌ ಯು ಎಸ್ ಮತ್ತು ಮಧ್ಯಪ್ರಾಚ್ಯದ ನ್ಯೂಯಾರ್ಕ್ ವಿಶ್ವವಿದ್ಯಾಲಯದ ವಿವಿಧ ಕ್ಯಾಂಪಸ್‌ಗಳು ಈಗಾಗಲೇ ಅಂತಹ ನಿದರ್ಶನಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಉನ್ನತ ಶಿಕ್ಷಣದ ಉದಾರೀಕರಣ ಕುರಿತು ‘ ದ ಟೈಮ್ಸ್ ಹೈಯರ್ ಎಜುಕೇಶನ್ ‘ ಈಗಾಗಲೇ ದೊಡ್ಡದಾಗಿ ಸುದ್ದಿ ಪ್ರಕಟಿಸಿರುವುದು ಅಚ್ಚರಿದಾಯಕ ಸಂಗತಿಯೇನೂ ಅಲ್ಲ.

ಆದರೆ ದೇಶೀಯ ಸಂದರ್ಭಕ್ಕೆ ಇದರಿಂದಾಗುವ ಉಪಯೋಗ ಎಂಥದ್ದು ? ಇದು ಸ್ಥಳೀಯ ವಿಶ್ವವಿದ್ಯಾಲಯಗಳಿಗೆ ಕಡಿವಾಣ ಹಾಕಲಿದೆಯೇ ? ಈ ಬೆಳವಣಿಗೆ ಅವುಗಳನ್ನು ಅನಾರೋಗ್ಯಕರ ಸ್ಪರ್ಧೆ ಎದುರಿಸುವಂತೆ ಮಾಡುತ್ತದೆಯೇ ? ಅವುಗಳ ವಿದ್ಯಾರ್ಥಿ ಸಂಪತ್ತನ್ನು ಇದು ಬರಿದಾಗಿಸುತ್ತದೆಯೇ? ಇದು ಉನ್ನತ ಶಿಕ್ಷಣ ಕುರಿತಂತೆ ಇರುವ ಸಾರ್ವಜನಿಕ ಮನಸ್ಥಿತಿಯನ್ನು ಬದಲಿಸುತ್ತದೆಯೇ? ಬದಲಾವಣೆ ಯಾರ ಮೇಲೆ ಪರಿಣಾಮ ಬೀರುತ್ತದೆ? ಕೇವಲ ಒಂದು ಸಣ್ಣ ಸಮುದಾಯಕ್ಕೆ ಮಾತ್ರ ಅನುಕೂಲಕರ ಆಗಲಿದೆಯೇ? ದೇಶದ ಅಪಾರ ಯುವ ಜನಸಂಖ್ಯೆಗೆ ಇದು ಇಡಿಯಾಗಿ ಏನಾದರೂ ನೆರವಾಗಬಲ್ಲದೇ?

ಕಾಲವೇ ಈ ಪ್ರಶ್ನೆಗಳಿಗೆ ಉತ್ತರಿಸಬೇಕು. ಭವಿಷ್ಯದ ಸ್ಥಾನ ಮಹತ್ವದ್ದಾಗಿದೆ, ಆದರೆ ಇದು ದುಬಾರಿ ವಿಚಾರ ಕೂಡ ಆಗಿದೆ.

( ಲೇಖಕರು- ಸೈಕತ್ ಮಜುಂದಾರ್: ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಅಶೋಕ ವಿಶ್ವವಿದ್ಯಾಲಯದ ಸೃಜನಶೀಲ ಬರವಣಿಗೆ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅಲ್ಲದೆ ಅವರೊಬ್ಬ ಪ್ರಸಿದ್ಧ ಕಾದಂಬರಿಕಾರ ಮತ್ತು ವಿಮರ್ಶಕ ಕೂಡ, ಭಾರತದಲ್ಲಿ ಮತ್ತು ಅಮೆರಿಕದಲ್ಲಿ ಶಿಕ್ಷಣ ಪಡೆದವರು. ಅಲ್ಲಿಯೇ ಅನೇಕ ವರ್ಷಗಳ ಕಾಲ ಬೋಧನೆಯಲ್ಲಿ ತೊಡಗಿದ್ದವರು. ಅಶೋಕ ವಿವಿಯಲ್ಲಿ ಬೋಧನೆ ಕೈಗೊಳ್ಳುವ ಮೊದಲು ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.