ಟೊಮೆಟೊ, ಈರುಳ್ಳಿ ಮತ್ತು ಅಕ್ಕಿಯಂತಹ ವಸ್ತುಗಳು ಸೇರಿದಂತೆ ಆಹಾರ ಹಣದುಬ್ಬರ ಎದುರಿಸಿದ್ದ ಭಾರತಕ್ಕೆ ಇದೀಗ ಮತ್ತೊಂದು ಆಹಾರ ಬಿಕ್ಕಟ್ಟು ಎದುರಾಗಲಿದೆ. ಅದುವೇ ಸಕ್ಕರೆ. ಆಗಸ್ಟ್ನಲ್ಲಿ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಆದ ಕಡಿಮೆ ಮಳೆ ಹಿನ್ನೆಲೆ ದೇಶದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಸರ್ಕಾರ ಏಳು ವರ್ಷಗಳ ಬಳಿಕ ಮತ್ತೊಮ್ಮೆ ಸಕ್ಕರೆ ರಫ್ತಿಗೆ ನಿಷೇದ ಹೇರಿದೆ. ಇನ್ನು ಸಕ್ಕರೆ ಉತ್ಪಾದನೆಯ ಪ್ರಮುಖ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕು ವರ್ಷದಲ್ಲೇ ಕಡಿಮೆ ಅಂದರೆ ಶೇ 14ರಷ್ಟು ಉತ್ಪಾದನೆ ಕುಸಿದಿದೆ ಎಂದು ವರದಿಯಾಗಿದೆ.
ಸಕ್ಕರೆ ರಫ್ತುದಾರರು ಭಾರತದ ಮಾನ್ಸೂನ್ ಮತ್ತು ಬಿಜ್ರೋಯಿ ಚಂಡಮಾರುತವನ್ನು ಮೇಲ್ವಿಚಾರಣೆ ನಡೆಸುತ್ತಿದ್ದು, ಇದು ಭಾರತದ ಖಾರಿಫ್ ಬೆಳೆ ಬಿತ್ತನೆಗೆ ಅಡ್ಡಿ ಮಾಡಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಸಕ್ಕರೆ ದರ ಹೆಚ್ಚಾಗುವ ಸಾಧ್ಯತೆ ಇದೆ. ಭಾರತ ಸಕ್ಕರೆ ನಿಷೇಧ ಹೇರಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಈಗಾಗಲೇ ಕಳೆದ ವರ್ಷವೇ ಸಕ್ಕರೆ ದರ ಶೇ 30ರಷ್ಟು ಹೆಚ್ಚಾಗಿದೆ.
ಬ್ರೆಜಿಲ್ಗೆ ಲಾಭ: ಜಾಗತಿಕ ಮಾರುಕಟ್ಟೆಯನ್ನು ಉತ್ತಮವಾಗಿ ಅರ್ಥೈಸಿಕೊಂಡಾಗ ಸಕ್ಕರೆ ಉತ್ಪಾದಿಸುವ ಮತ್ತೊಂದು ದೇಶವಾದ ಬ್ರೆಜಿಲ್ ಇದರಿಂದ ಲಾಭ ಪಡೆಯಲಿದೆ. ಯುಎಸ್ಡಿಎ ಇತ್ತೀಚಿಗೆ ಅಂದಾಜಿಸಿದಂತೆ ಬ್ರೆಜಿಲ್ನಲ್ಲಿ ಅನುಕೂಲಕರ ವಾತಾವರಣ ಇರುವ ಹಿನ್ನೆಲೆ ಸಕ್ಕರೆ ಉತ್ಪಾದನೆ ಶೇ 6.5ರಷ್ಟು ಹೆಚ್ಚಾಗಿದೆ. ಹಾಗೇ ಸಕ್ಕರೆ ದರ ಕೂಡ ಹೆಚ್ಚಿದೆ. ಆದಾಗ್ಯೂ ಮಾರುಕಟ್ಟೆಯ ಹಣದುಬ್ಬರವನ್ನು ಮುಟ್ಟಲಿದೆಯಾ ಎಂಬ ಅನಿಶ್ಚಿತತೆ ಎದುರಾಗಲಿದೆ. ಇದಕ್ಕೆ ಕಾರಣ ಬ್ರೆಜಿಲ್ ತಮ್ಮ ಸಕ್ಕರೆಯನ್ನು ಜೈವಿಕ ಇಂಧನ ಮತ್ತು ಎಥೆನಾಲ್ ಉತ್ಪಾದನೆಗೆ ತಿರುಗಿಸಲಿದೆ. ಜಿ20 ಶೃಂಗಸಭೆಯಲ್ಲೂ ಜೈವಿಕ ಇಂಧನದ ಉದ್ಯಮದ ಮೇಲೆ ಬ್ರೆಜಿಲ್ ಹೆಚ್ಚಿನ ಗಮನ ಹೊಂದಿರುವುದನ್ನು ತೋರಿಸಿದೆ.
ಸಕ್ಕರೆಗೆ ಬೇಡಿಕೆ : ತನ್ನ ಸಾಂಪ್ರದಾಯಿಕ ಅಂತಾರಾಷ್ಟ್ರೀಯ ಗ್ರಾಹಕರಿಗೆ ಹೊರತಾಗಿ ಬ್ರೆಜಿಲ್ ರಷ್ಯಾ, ಇರಾನ್ ಮತ್ತು ಆಫ್ರಿನ್ ದೇಶಗಳಿಗೆ ಕಚ್ಚಾ ಸಕ್ಕರೆಯನ್ನು ರವಾನಿಸುತ್ತದೆ. ಭಾರತ ಸದ್ಯ ಸಕ್ಕರೆ ಮೇಲೆ ನಿಷೇಧ ಹೇರಿರುವದರಿಂದ ಬ್ರೆಜಿಲ್ ಗಮನಾರ್ಹ ಅವಕಾಶವನ್ನು ಪಡೆಯಲಿದ್ದು, ತಮ್ಮ ಕೃಷಿಕರನ್ನು ಗಮನದಲ್ಲಿರಿಸಿಕೊಂಡು ಇದರ ಬೇಡಿಕೆಯನ್ನು ತೂಗಿಸಲಿದೆ. ಥೈಲ್ಯಾಂಡ್ನಲ್ಲೂ ಕೂಡ ಈ ವರ್ಷ ಸವಾಲಿನಿಂದ ಕೂಡಿರಲಿದೆ. ಇಲ್ಲಿ ಕೂಡ ಬ್ರೆಜಿಲ್ ಸಕ್ಕರೆಗೆ ಭಾರತೀಯ ಖರೀದಿದಾರರಿಂದ ಬೇಡಿಕೆ ಹೆಚ್ಚಲಿದೆ.
ಭಾರತದ ಸಕ್ಕರೆಗೆ ನಿಷೇಧ: ಸಕ್ಕರೆ ಕೊರತೆ ಮತ್ತು ದರ ಹೆಚ್ಚಳದಿಂದ ಭವಿಷ್ಯದಲ್ಲಿ ಎದುರಾಗುವ ಹಣದುಬ್ಬರಕ್ಕೆ ಕಡಿವಾಣ ಹಾಕಿ ಅಧಿಕಾರಿಗಳು ಸಕ್ಕರೆ ರಫ್ತಿಗೆ ನಿಷೇಧ ಹೇರಿದ್ದಾರೆ. ಈ ನಿರ್ಧಾರವೂ ಆಹಾರ ಬಿಕ್ಕಟ್ಟಿನ ಸಂದರ್ಭವನ್ನು ಎದುರಿಸಲು ನಡೆಸಿರುವ ಸರ್ಕಾರದ ಕ್ರಮವಾಗಿದೆ. ಇದು ಈ ಹಿಂದೆ ಟೊಮೆಟೊ ಬಿಕ್ಕಟ್ಟಿನ ಸಂದರ್ಭವನ್ನು ನೆನಪಿಸಿದೆ. ಇದು ಕೃಷಿ ನೀತಿ ಮತ್ತು ರಾಜ್ಯದ ದಕ್ಷತೆಯ ನ್ಯೂನತೆಯನ್ನು ಬಹಿರಂಗಪಡಿಸಿದೆ. ವಿದೇಶಿ ವಿನಿಮಯ ಮೀಸಲು ನಷ್ಟವನ್ನು ಹೆಚ್ಚುವರಿ ಹೊರೆಯನ್ನು ಸೇರಿಸಲಿದೆ. ಟೊಮೆಟೊ ಬೇಡಿಕೆ ಹೆಚ್ಚಿದ ಬಳಿಕ ಹೊಸ ಟೊಮೆಟೊ ಕೊಯ್ಲು ಆದಾಗ ಅದರ ಬೆಲೆಯೂ ಹಠಾತ್ ಕುಸಿತಗೊಂಡಿತು. ಅಲ್ಲದೇ ಇದೀಗ ಕೆಜಿಗೆ 4-5 ರೂ. ಆಗಿದೆ.
ಸ್ಟಾಕ್ ಮಿತಿ ಘೋಷಿಸುವುದು ಕಡ್ಡಾಯ: ಇಂತಹ ಹಣದುಬ್ಬರ ಪರಿಸ್ಥಿತಿಗಳಲ್ಲಿ ಕಬ್ಬಿನ ಉದ್ಯಮಗಳು ಹೆಚ್ಚಿನ ವಿಪತ್ತಿನ ಸೃಷ್ಟಿಗೆ ಕಾರಣವಾಗುತ್ತದೆ. ಈ ಹಿನ್ನೆಲೆ ಸರ್ಕಾರ ಹೆಚ್ಚುವರಿಗೆ ಮಾಪನ ಅಳವಡಿಸುವ ಮೂಲಕ ಇದರ ನಿರ್ವಹಣೆ ಮಾಡಲಿದೆ. ಎಲ್ಲಾ ಚಿಲ್ಲರೆ, ಉದ್ಯಮ, ಪ್ರಮುಖ ಉತ್ಪಾದಕರು, ಹೋಲ್ಸೇಲರ್ ಸೇರಿದಂತೆ ಎಲ್ಲಾ ಸಂಸ್ಥೆಗಳು ತಮ್ಮಲ್ಲಿರುವ ಸ್ಟಾಕ್ ಲಿಮಿಟ್ ಅನ್ನು ಘೋಷಿಸಬೇಕು. ಎಲ್ಲಾ ಸ್ಟಾಕ್ ಸಂಗ್ರಹ ಕುರಿತು ಪ್ರತಿ ಸೋಮವಾರ ಸರ್ಕಾರದ ಪೋರ್ಟಲ್ನಲ್ಲಿ ವರದಿ ಮಾಡಲಾಗುವುದು. ಸರ್ಕಾರದ ಈ ನಿರ್ಣಯಗಳು ಸಕ್ಕರೆ ಮಾರುಕಟ್ಟೆಯಲ್ಲಿ ನಡೆಯುವ ಸಕ್ಕರೆ ಸ್ಟಾಕ್ ಮಾಡುವ ಕೆಲಸಕ್ಕೆ ಹಿಡಿತ ಸಿಗಲಿದೆ.
ದೇಶಿಯ ಜೈವಿಕ ಉತ್ಪಾದನೆ: ಮಧ್ಯಮ ಗಾತ್ರದ ಕಬ್ಬು ಭಾರತದ ಎಥೆನಾಲ್ ಉದ್ಯಮಕ್ಕೆ ಅಗತ್ಯವಾಗಿದೆ. 2023ರಲ್ಲಿ ಕೆಟ್ಟ ಹವಾಮಾನಗೂ ಕಬ್ಬಿನ ಉತ್ಪಾದನೆಯನ್ನು ಕಡಿಮೆ ಮಾಡಿತು. ಸರ್ಕಾರ ಎಥೆನಾಲ್ಗೆ ಕಬ್ಬಿನ ಉತ್ಪಾದನೆ ಕಡಿಮೆ ಮಾಡಿತು. ಇದು ಜೈವಿಕ ಇಂಧನ ಉದ್ಯುಮಕ್ಕೆ ಭಾರಿ ಪೆಟ್ಟು ಕೊಟ್ಟಿತು.
ಭಾರತದಲ್ಲಿ ಸಕ್ಕರೆ ಹಿಂದೆ ರಾಜಕೀಯ ಅಂಶಗಳು ಅಡಗಿವೆ. ಇದರ ಹಿಂದೆ ಕೋ ಆಪರೇಟಿವ್, ರಾಜಕಾರಣಿಗಳು, ಮಿಲ್ಗಳು ಮತ್ತು ಉದ್ಯಮ ಮತ್ತು ಸರ್ಕಾರಗಳು ಇದನ್ನು ಲಾಭದಾಯಕವಾದ ಉದ್ಯಮವಾಗಿ ತೋರಿಸಿಲ್ಲ. ನಿರ್ದಿಷ್ಟ ಕಬ್ಬು ಉತ್ಪಾದನೆ ಮತ್ತು ಆರ್ಥಿಕತೆ ಇಲ್ಲದ ಕಾರಣ ಜೈವಿಕ ಇಂಧನಗಳು ದುಬಾರಿಯಾಗಿ ಮತ್ತು ಅಪ್ರಾಯೋಗಿಕವಾಗಿ ಉಳಿಯಬಹುದು.
ಭಾರತೀಯರ ಊಟದ ಮೇಲೆ ಪರಿಣಾಮ : ಭಾರತೀಯರ ಊಟದ ತಟ್ಟೆಯಲ್ಲಿ ಸಕ್ಕರೆಗೆ ವಿಶೇಷ ಸ್ಥಾನವಿದೆ. ಸಿಹಿ ಆಹಾರ ಪ್ರಮುಖ ನಿರ್ಣಾಯಕ ಅಂಶವಾಗಿದ್ದು, ಸಕ್ಕರೆ ಅಭಾವ ಹೆಚ್ಚಿನ ಕುಟುಂಬಗಳ ಮೇಲೆ ನೇರ ದಾಳಿ ಎಂದು ಗುರುತಿಸಲಾಗಿದೆ. ಅಧಿಕ ಹಣದುಬ್ಬರ, ಹೆಚ್ಚುತ್ತಿರುವ ಇಂಧನ ಮತ್ತು ತರಕಾರಿ ವೆಚ್ಚಗಳು, ಕಡಿಮೆ ಇಳುವರಿ ಮತ್ತು ಹವಾಮಾನ ಪರಿಸ್ಥಿತಿ ನಿರ್ವಹಣೆಗೆ ಗ್ರಾಮೀಣ ಜನರು ನರೇಗಾ ಮತ್ತು ಸಾಮೂಜಿಕ ಬೆಂಬಲ ಬೆಲೆ ಪ್ರಯೋಜವನ್ನು ಹೊಂದ ಬಯಸುತ್ತಾರೆ. ಕಬ್ಬಿನ ಉತ್ಪಾದನೆ ಪ್ರದೇಶದಲ್ಲಿ ರೈತರನ್ನು ಸಮಾಧಾನಪಡಿಸುವ ಉದ್ದೇಶದಿಂದ ಕಬ್ಬಿನ ಬೆಲೆ ಹೆಚ್ಚಿಸುವ ಅಗತ್ಯ ಎದುರಾಗಲಿದ್ದು, ಇದು ಸಕ್ಕರೆ ಬೆಲೆ ಏರಿಕೆಗೆ ಹೆಚ್ಚು ಕೊಡಗೆ ನೀಡುತ್ತದೆ.
ಸದ್ಯ ಜನ ಮತ್ತು ಸರ್ಕಾರ ಇಬ್ಬರು ಬಿಕ್ಕಟ್ಟು ಎದುರಿಸುವ ಪರಿಸ್ಥಿತಿ ಕಂಡು ಬಂದಿದ್ದು, ಭವಿಷ್ಯದಲ್ಲಿನ ಸಕ್ಕರೆ ಬಿಕ್ಕಟ್ಟು ನಿರ್ವಹಿಸಲು ಸರ್ಕಾರ ಎಚ್ಚರದಿಂದ ವ್ಯಾಪಾರ ಮಾಡಬೇಕಿದೆ.
ಇದನ್ನೂ ಓದಿ: ಭಾರತ - ಮಧ್ಯಪ್ರಾಚ್ಯ- ಯುರೋಪ್ ಕಾರಿಡಾರ್: ಮುಂಬರುವ ಚುನಾವಣೆಗಳಲ್ಲಿ ಮೋದಿ- ಬೈಡನ್ಗೆ ಲಾಭ ತರುವುದೇ?