ಮೆಕ್ಕಾ (ಸೌದಿ ಅರೇಬಿಯಾ): ಮುಸ್ಲಿಂರ ಪವಿತ್ರ ಯಾತ್ರಾ ಸ್ಥಳ ಎಂದರೆ ಅದು ಮೆಕ್ಕಾ. ಸೌದಿ ಅರೇಬಿಯಾದ ಈ ಪವಿತ್ರ ನಗರ ಮೆಕ್ಕಾಗೆ ಹಜ್ ಯಾತ್ರೆ ಭಾಗವಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಲಿದ್ದಾರೆ. ಏಕೆಂದರೆ ವಿಶ್ವದ ಅತಿದೊಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಮೆಕ್ಕಾವೂ ಒಂದು. ಕೊರೊನಾ ವೈರಸ್ ನಿರ್ಬಂಧಗಳ ನಂತರ ಮೆಕ್ಕಾದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶ್ರದ್ಧಾಳುಗಳು ಈ ಬಾರಿ ಪಾಲ್ಗೊಳ್ಳಲಿದ್ದಾರೆ.
ಹಜ್ ಇಸ್ಲಾಂ ಧರ್ಮದ ಐದು ಪವಿತ್ರ ಆಚರಣೆಗಳಲ್ಲಿ ಮೆಕ್ಕಾವೂ ಒಂದಾಗಿದೆ. ಎಲ್ಲ ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಯಾತ್ರಾರ್ಥಿಗಳಿಗೆ ಇದು ಅಧ್ಯಾತ್ಮಿಕ ಅನುಭವವಾಗಿದ್ದು, ಇಲ್ಲಿಗೆ ಭೇಟಿ ನೀಡಿದರೆ ಪಾಪಗಳು ಕಳೆದು ಹೋಗಲಿವೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಮೆಕ್ಕಾಗೆ ಭೇಟಿ ನೀಡುವುದರಿಂದ ದೇವರಿಗೆ ನಾವು ಮತ್ತಷ್ಟು ಹತ್ತಿರ ಆಗುತ್ತೇವೆ ಎಂಬ ಭಾವನೆ ಮುಸ್ಲಿಂ ಶ್ರದ್ಧಾಳುಗಳದ್ದಾಗಿದೆ.
1920 ರ ದಶಕದಲ್ಲಿ ಮೆಕ್ಕಾವನ್ನು ಸೌದಿ ರಾಜಮನೆತನ ತಮ್ಮ ವಶಕ್ಕೆ ತೆಗೆದುಕೊಂಡಿತು. ಆ ಬಳಿಕ ತೀರ್ಥಯಾತ್ರೆ ಆಯೋಜಿಸುವುದು ಹೆಮ್ಮೆ ಎಂದು ಅದು ಪರಿಗಣಿಸಿದೆ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದೆ. ಯಾತ್ರಾರ್ಥಿಗಳ ಯೋಗಕ್ಷೇಮಕ್ಕಾಗಿ ಸೌದಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆದರೂ 2015 ರಲ್ಲಿ ಇಲ್ಲಿ ಉಂಟಾದ ಕಾಲ್ತುಳಿತಕ್ಕೆ ಸುಮಾರು 2,400 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.
ಹಜ್ ಯಾತ್ರೆ ಮಹತ್ವ ಮತ್ತು ಇತಿಹಾಸ: ಹಜ್ ಯಾತ್ರೆಯು ಪ್ರಪಂಚದಾದ್ಯಂತದ ಮುಸ್ಲಿಮರನ್ನು ಸೌದಿ ಅರೇಬಿಯಾದ ಮೆಕ್ಕಾಕ್ಕೆ ಭೇಟಿ ನೀಡುವಂತೆ ಮಾಡುತ್ತದೆ. ಮೆಕ್ಕಾಕ್ಕೆ ಭೇಟಿ ನೀಡುವ ಮೂಲಕ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಹೆಜ್ಜೆಗಳನ್ನು ಕಾಣಲು ಬಯಸುತ್ತಾರೆ. ಇಬ್ರಾಹಿಂ ಮತ್ತು ಇಸ್ಮಾಯಿಲ್ ಅಥವಾ ಅಬ್ರಹಾಂ ಮತ್ತು ಇಸ್ಮಾಯಿಲ್ ಅವರ ಪ್ರಯಾಣವನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಅಂದಹಾಗೆ ಈ ಪ್ರದೇಶ ಕ್ರಿಶ್ಚಿಯನ್ ಮತ್ತು ಇಸ್ಲಾಂ ಎರಡಕ್ಕೂ ಪವಿತ್ರವಾದ ಸ್ಥಳವಾಗಿದೆ.
ಕುರಾನ್‌ನಲ್ಲಿ ಇದಕ್ಕೆ ಸಂಬಂಧಿಸಿರುವಂತೆ, ಇಬ್ರಾಹಿಂ ತನ್ನ ಮಗ ಇಸ್ಮಾಯಿಲ್‌ನನ್ನು ನಂಬಿಕೆಯ ಪರೀಕ್ಷೆಯಾಗಿ ತ್ಯಾಗ ಮಾಡಲು ಹೇಳುತ್ತಾರೆ. ಆದರೆ ದೇವರು ಕೊನೆಯ ಕ್ಷಣದಲ್ಲಿ ಅವನನ್ನು ಉಳಿಸಿಕೊಳ್ಳುತ್ತಾನೆ. ಇಬ್ರಾಹಿಂ ಮತ್ತು ಇಸ್ಮಾಯಿಲ್ ನಂತರ ಕಾಬಾವನ್ನು ಒಟ್ಟಿಗೆ ನಿರ್ಮಿಸಿದರು ಎಂದು ಇಸ್ಲಾಂನಲ್ಲಿ ಹೇಳಲಾಗಿದೆ. ಕ್ರಿಶ್ಚಿಯನ್ ಮತ್ತು ಯಹೂದಿ ಸಂಪ್ರದಾಯಗಳಲ್ಲಿ, ಅಬ್ರಹಾಂ ತನ್ನ ಇನ್ನೊಬ್ಬ ಮಗ ಐಸಾಕ್‌ನನ್ನು ಮೌಂಟ್ ಮೋರಿಯಾದಲ್ಲಿ ತ್ಯಾಗ ಮಾಡುತ್ತಾನೆ, ಇದು ಜೆರುಸಲೆಮ್‌ನ ಪ್ರಮುಖ ಪವಿತ್ರ ಸ್ಥಳದೊಂದಿಗೆ ಸಂಬಂಧ ಹೊಂದಿರುವುದು ವಿಶೇಷ.
7 ನೇ ಶತಮಾನದಲ್ಲಿ ಇಸ್ಲಾಂ ಧರ್ಮದ ಆಗಮನದವರೆಗೂ ಕಾಬಾವು, ಅರಬ್ಬರಲ್ಲಿ ಬಹುದೇವತಾ ಆರಾಧನೆಯ ಕೇಂದ್ರವಾಗಿತ್ತು. ಪ್ರವಾದಿ ಮುಹಮ್ಮದ್ ಈ ಸ್ಥಳವನ್ನು ಪವಿತ್ರಗೊಳಿಸಿ ಹಜ್ ಉದ್ಘಾಟಿಸಿದ್ದರು. ಮುಸ್ಲಿಮರು ಕಾಬಾದಲ್ಲಿ ಪೂಜಿಸುವುದಿಲ್ಲ. ಬದಲಿಗೆ ಘನ ಆಕಾರದ ಕಪ್ಪು ರಚನೆ ಅದಾಗಿದ್ದು, ಚಿನ್ನದ ಕಸೂತಿ ಬಟ್ಟೆಯಿಂದ ಮುಚ್ಚಲಾಗಿದೆ. ಆದರೆ ಅದನ್ನು ಅವರ ಅತ್ಯಂತ ಪವಿತ್ರ ಸ್ಥಳ ಮತ್ತು ಏಕತೆ ಮತ್ತು ಏಕದೇವೋಪಾಸನೆಯ ಪ್ರಬಲ ಸಂಕೇತವೆಂದು ಪರಿಗಣಿಸುತ್ತಾರೆ. ಮುಸ್ಲಿಮರು ಜಗತ್ತಿನ ಯಾವುದೇ ಸ್ಥಳದಲ್ಲಿ ಇರಲಿ ತಮ್ಮ ದೈನಂದಿನ ಪ್ರಾರ್ಥನೆಯ ಸಮಯದಲ್ಲಿ ಕಾಬಾದ ಕಡೆಗೆ ಮುಖ ಮಾಡಿ ಪ್ರಾರ್ಥನೆ ಮಾಡುತ್ತಾರೆ.
ಪ್ರವಾದಿ ಅವರ ಕಾಲದಿಂದಲೂ ಪ್ರತಿ ವರ್ಷವೂ ಹಜ್ ಯಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಯುದ್ಧಗಳು, ಪಿಡುಗುಗಳು ಮತ್ತು ಇತರ ಪ್ರಕ್ಷುಬ್ಧತೆಗಳ ನಡುವೆಯೂ ಹಜ್ ಯಾತ್ರೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಮಧ್ಯಯುಗದಲ್ಲಿ, ಮುಸ್ಲಿಂ ಆಡಳಿತಗಾರರು ಕೈರೋ, ಡಮಾಸ್ಕಸ್ ಮತ್ತು ಇತರ ನಗರಗಳಿಂದ ಹೊರಡುವ ಸಶಸ್ತ್ರ ಬೆಂಗಾವಲುಗಳೊಂದಿಗೆ ಬೃಹತ್ ಕಾರಾವಾನ್ಗಳನ್ನು ಆಯೋಜಿಸುತ್ತಿದ್ದರು. ಇದು ಮರುಭೂಮಿಯ ಮೂಲಕ ಪ್ರಯಾಸಕರ ಪ್ರಯಾಣವಾಗಿದ್ದು, ಅಲ್ಲಿ ಬೆಡೋಯಿನ್ ಬುಡಕಟ್ಟು ಜನ ಯಾತ್ರಾರ್ಥಿಗಳ ಮೇಲೆ ದಾಳಿಗಳನ್ನು ನಡೆಸುತ್ತಿದ್ದರು. 1757 ರಲ್ಲಿ ನಡೆದ ಬೆಡೋಯಿನ್ ದಾಳಿ ವೇಳೆ ಹಜ್ ಕಾರವಾನ್ ಗಳನ್ನು ನಾಶಪಡಿಸಿತ್ತು. ಈ ವೇಳೆ ಸಾವಿರಾರು ಯಾತ್ರಿಕರನ್ನು ಕೊಂದು ಹಾಕಲಾಗಿತ್ತು.
2020 ರಲ್ಲಿ ವಿಶ್ವಾದ್ಯಂತ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಇಷ್ಟರ ನಡುವೆ, ಸೌದಿ ಅರೇಬಿಯಾ ಕೆಲವು ಸಾವಿರ ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಮಾತ್ರ ತೀರ್ಥಯಾತ್ರೆಗೆ ಅವಕಾಶ ನೀಡುವ ಮೂಲಕ ಹಜ್ ಯಾತ್ರೆಯನ್ನು ನಡೆಸಿತ್ತು.
ಹಜ್‌ಗೆ ಮುಸ್ಲಿಮರು ಹೇಗೆ ಸಿದ್ಧತೆ ನಡೆಸುತ್ತಾರೆ?: ಕೆಲವು ಯಾತ್ರಿಕರು ತಮ್ಮ ಇಡೀ ಜೀವನವನ್ನು ಯಾತ್ರೆಗಾಗಿಯೇ ಮೀಸಲಿಟ್ಟಿರುತ್ತಾರೆ. ಇನ್ನು ಹಲವರು ಹಜ್ ಯಾತ್ರೆಗೆ ಪರವಾನಗಿ ಪಡೆಯಲೇಂದೆ ವರ್ಷಗಟ್ಟಲೆ ಕಾಯುತ್ತಾರೆ. ಸೌದಿ ಅಧಿಕಾರಿಗಳು ಕೋಟಾ ವ್ಯವಸ್ಥೆಯ ಅಡಿ ಆಯಾ ದೇಶಗಳಿಗೆ ಕೋಟಾ ಹಂಚಿಕೆ ಮಾಡುತ್ತಾರೆ. ಟ್ರಾವೆಲ್ ಏಜೆಂಟ್‌ಗಳು ಅವರವರ ಆದಾಯಕ್ಕೆ ತಕ್ಕಂತೆ ಪ್ಯಾಕೇಜ್ಗಳನ್ನು ನೀಡುವ ಮೂಲಕ ಜನರ ಸೇವೆ ಮಾಡುತ್ತಾರೆ. ದತ್ತಿ ಸಂಸ್ಥೆಗಳು ಅಗತ್ಯ ಇರುವವರಿಗೆ ಧನ ಸಹಾಯ ಮಾಡುತ್ತವೆ.
ಯಾತ್ರಿಕರು "ಇಹ್ರಾಮ್" ಎಂದು ಕರೆಯಲ್ಪಡುವ ಅಧ್ಯಾತ್ಮಿಕ ಶುದ್ಧತೆಯ ಸ್ಥಿತಿಯನ್ನು ಪ್ರವೇಶಿಸುವ ಮೂಲಕ ಹಜ್ ಯಾತ್ರೆಯನ್ನು ಪ್ರಾರಂಭಿಸುತ್ತಾರೆ. ಮಹಿಳೆಯರು ಮೇಕಪ್ ಮತ್ತು ಸುಗಂಧ ದ್ರವ್ಯಗಳನ್ನು ಬಿಟ್ಟು ಯಾತ್ರೆಗೆ ತೆರಳುತ್ತಾರೆ. ಪುರುಷರು ತಡೆರಹಿತ ಟೆರಿಕ್ಲೋತ್ ನಿಲುವಂಗಿಯನ್ನು ತೊಡುತ್ತಾರೆ. ಉಡುಪುಗಳು ಯಾವುದೇ ಹೊಲಿಗೆಯನ್ನು ಹೊಂದಿರಬಾರದು, ಇದು ಶ್ರೀಮಂತ ಮತ್ತು ಬಡವರ ನಡುವೆ ಏಕತೆ ತರುವ ಉದ್ದೇಶ ಹೊಂದಿದೆ ಎಂಬುದು ಗಮನಾರ್ಹ.
ಇಹ್ರಾಮ್ ಸ್ಥಿತಿಯಲ್ಲಿದ್ದಾಗ ಯಾತ್ರಿಕರು ತಮ್ಮ ಕೂದಲನ್ನು ಕತ್ತರಿಸುವುದನ್ನು, ತಮ್ಮ ಉಗುರುಗಳನ್ನು ಟ್ರಿಮ್ ಮಾಡುವುದನ್ನು ಅಥವಾ ಲೈಂಗಿಕತೆಯಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಅವರು ವಾದ ಅಥವಾ ಜಗಳ ಮಾಡಬೇಕಾಗಿಲ್ಲ. ಆದರೆ ಪ್ರಯಾಣದ ವೇಳೆ ಇರುವ ತಾಪಮಾನ, ಜನಸಂದಣಿ ಮತ್ತು ಕಷ್ಟವು ಅನಿವಾರ್ಯವಾಗಿ ಜನರಿಗೆ ತಾಳ್ಮೆಯನ್ನು ಕಲಿಸುತ್ತದೆ. ಪ್ರವಾದಿ ಮುಹಮ್ಮದ್ ಅವರನ್ನು ಸಮಾಧಿ ಮಾಡಿದ ಮದೀನಾ ಮಸೀದಿಗೆ ಅನೇಕ ಮುಸ್ಲಿಮರು ಭೇಟಿ ನೀಡಿ, ಅವರ ಮನ್ನಣೆಗೆ ಪಾತ್ರರಾಗುವ ಯತ್ನ ಮಾಡುತ್ತಾರೆ.
ಹಜ್ ಸಮಯದಲ್ಲಿ ಏನಾಗುತ್ತದೆ?: ಏಳು ಬಾರಿ ಮೆಕ್ಕಾದಲ್ಲಿರುವ ಕಾಬಾವನ್ನು ಸುತ್ತುವ ಮೂಲಕ ಹಜ್ ಯಾತ್ರೆ ಪ್ರಾರಂಭವಾಗುತ್ತದೆ. ನಂತರ ಮುಹಮ್ಮದ್ ಮಗ ಇಸ್ಮಾಯಿಲ್‌ಗಾಗಿ ನೀರಿನ ಹುಡುಕಾಟದ ಮರು ರೂಪದಲ್ಲಿ ಎರಡು ಬೆಟ್ಟಗಳ ನಡುವೆ ನಡೆದು ಸಾಗುತ್ತಾರೆ. ಈ ಆಚರಣೆ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಯಹೂದಿ ಸಂಪ್ರದಾಯಗಳಲ್ಲಿ ವಿಭಿನ್ನ ರೂಪಗಳಲ್ಲಿ ಕಂಡುಬರುತ್ತವೆ. ಎರಡು ಬೆಟ್ಟಗಳನ್ನುನಡುವೆ ಇರುವ ವಿಶ್ವದ ಅತಿದೊಡ್ಡ ಮಕ್ಕಾದ ಗ್ರ್ಯಾಂಡ್ ಮಸೀದಿಯೊಳಗೆ ಈ ಎಲ್ಲ ಆಚರಣೆಗಳು ನಡೆಯುತ್ತವೆ.
ಮರುದಿನ, ಯಾತ್ರಿಕರು ಮೆಕ್ಕಾದಿಂದ ಪೂರ್ವಕ್ಕೆ ಸುಮಾರು 20 ಕಿಲೋಮೀಟರ್ (12 ಮೈಲುಗಳು) ದೂರದಲ್ಲಿರುವ ಅರಾಫತ್ ಪರ್ವತಕ್ಕೆ ಹೋಗುತ್ತಾರೆ. ಅಲ್ಲಿ ಪ್ರವಾದಿ ಮುಹಮ್ಮದ್ ತಮ್ಮ ಅಂತಿಮ ಧರ್ಮೋಪದೇಶ ನೀಡಿದ್ದರು. ಈ ಸ್ಥಳಕ್ಕೆ ಭೇಟಿ ನೀಡುವ ಯಾತ್ರಿಕರು ದಿನವಿಡೀ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡು, ತಮ್ಮ ಪಾಪಗಳನ್ನು ಮನ್ನಿಸು ಎಂದು ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತಾರೆ. ತೀರ್ಥಯಾತ್ರೆಯು ಅಧ್ಯಾತ್ಮಿಕ ಉನ್ನತ ಬಿಂದು ಎಂದು ಅನೇಕರು ಭಾವಿಸಿದ್ದಾರೆ.
ಸೂರ್ಯಾಸ್ತದ ಸಮಯದಲ್ಲಿ, ಯಾತ್ರಿಕರು ಅರಾಫತ್‌ನ ಪಶ್ಚಿಮಕ್ಕೆ 9 ಕಿಲೋಮೀಟರ್‌ಗಳು (5.5 ಮೈಲುಗಳು) ಮುಜ್ದಲಿಫಾ ಎಂಬ ಪ್ರದೇಶಕ್ಕೆ ಭೇಟಿ ಕೊಡುತ್ತಾರೆ. ಅಲ್ಲಿಂದ ಯಾತ್ರಿಗಳು ಮರುದಿನ ಮಿನಾ ಕಣಿವೆಯಲ್ಲಿ ಸಾಂಕೇತಿಕ ಕಲ್ಲೆಸೆತದಲ್ಲಿ ಪಾಲ್ಗೊಳ್ಳುತ್ತಾರೆ. ಆ ಬಳಿಕ ಯಾತ್ರಾರ್ಥಿಗಳು ಮಿನಾದಲ್ಲಿ ವಿಶ್ವದ ಅತಿದೊಡ್ಡ ಟೆಂಟ್ ಕ್ಯಾಂಪ್‌ಗಳಲ್ಲಿ ಹಲವಾರು ರಾತ್ರಿಗಳ ಕಾಲ ತಂಗಿ ಅಲ್ಲಾಹುವಿನ ಕೃಪೆಗೆ ಭಾಜನರಾಗುತ್ತಾರೆ. ತೀರ್ಥಯಾತ್ರೆಯು ಕಾಬಾದ ಅಂತಿಮ ಪ್ರದಕ್ಷಿಣೆಯೊಂದಿಗೆ ಮತ್ತು ಮಿನಾದಲ್ಲಿ ಕಲ್ಲುಗಳನ್ನು ಎಸೆಯುವುದರೊಂದಿಗೆ ಕೊನೆಗೊಳ್ಳುತ್ತದೆ.
ಇದನ್ನು ಓದಿ:ಈ ಮೇಕೆಗೆ ಭರ್ಜರಿ ಬೇಡಿಕೆ.. 175 ಕೆಜಿ ತೂಗುವ ಕಿಂಗ್ ಬೆಲೆ ಬರೋಬ್ಬರಿ 12 ಲಕ್ಷ.. ಯಾರೀತ ಕಿಂಗ್!