ನವದೆಹಲಿ: ಹೊಸ ವರ್ಷದ ಮೊದಲ ವಾರ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಆಕರ್ಷಿಸಿವೆ. 36 ಪುಟ್ಟ ದ್ವೀಪಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವೂ ನೆರೆಯ ಮಾಲ್ಡೀವ್ಸ್ಗಿಂತ ಉತ್ತಮ ಹಾಲಿಡೇ (ರಜೆಯ) ಪ್ರವಾಸಿ ಕೇಂದ್ರವಾಗಿದೆ ಎಂದು ಅನೇಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಇತ್ತೀಚಿಗೆ ಲಕ್ಷದ್ವೀಪದ ಜನರೊಂದಿಗೆ ನಾನು ಒಬ್ಬನಾಗಿರಲು ಅವಕಾಶ ಲಭಿಸಿತು. ಈ ದ್ವೀಪದ ಅಮೋಘ ಸೌಂದರ್ಯ ಮತ್ತು ಜನರ ಬಗ್ಗೆ ಬೆರಗುಗೊಂಡೆ. ಅಗಟ್ಟಿ, ಬಂಗಾರಂ ಮತ್ತು ಕವರಟ್ಟಿ ಜನರೊಂದಿಗೆ ಸಂವಹನ ಮಾಡುವ ಅವಕಾಶವನ್ನು ಪಡೆದೆ. ದ್ವೀಪ ರಾಷ್ಟ್ರದ ಅತಿಥ್ಯಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದರು.
ಇದೇ ವೇಳೆ ಇಲ್ಲಿನ ಸೌಂದರ್ಯ ಕುರಿತು ಮಾತನಾಡಿದ್ದ ಅವರು, ಸಾಹಸನವನ್ನು ಇಷ್ಟಪಡುವವರಿಗೆ ಲಕ್ಷದ್ವೀಪ ನಿಮ್ಮ ಲಿಸ್ಟ್ನಲ್ಲಿರಲಿ ಎಂದಿದ್ದರು. ಈ ಪ್ರವಾಸದ ವೇಳೆ ನಾನು ಸ್ಕಾರ್ಕಲಿಂಗ್ ಪ್ರಯತ್ನಿಸಿದೆ. ಇದೊಂದು ಅದ್ಭುತ ಅನುಭವ. ಸಮುದ್ರದ ಕಿನಾರೆಯಲ್ಲಿನ ಬೆಳಗಿನ ನಡೆಗೆಯು ಅಹ್ಲಾದಕರ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಭಾರತದ ಸಣ್ಣ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪವು 36 ಪುಟ್ಟ ದ್ವೀಪಗಳ ಸಮೂಹವನ್ನು ಹೊಂದಿರುವ 32 ಸ್ಕ್ವೇರ್ ಕಿಲೋ ಮೀಟರ್ ಪ್ರದೇಶ ಹೊಂದಿದೆ. ಈ ದ್ವೀಪವು ಏಕ ಜಿಲ್ಲಾ ಕೇಂದ್ರಾಡಳಿತ ಪ್ರದೇಶವಾಗಿದೆ. 12 ಅಟಾಲ್‌ಗಳು, ಮೂರು ಬಂಡೆಗಳು, ಐದು ಮುಳುಗಿದ ದಂಡೆಗಳು ಮತ್ತು 10 ಜನವಸತಿ ದ್ವೀಪಗಳನ್ನು ಒಳಗೊಂಡಿದೆ. ಈ ದ್ವೀಪದ ಒಟ್ಟಾರೆ ಪ್ರದೇಶವು 32 ಅಡಿ ಕಿ.ಮೀ. ಇದರ ರಾಜಧಾನಿ ಕವರಟ್ಟಿ ಆಗಿದ್ದು, ಕೇಂದ್ರಾಡಳಿತ ಪ್ರದೇಶದ ಪ್ರಮುಖ ನಗರವಾಗಿದೆ. ಈ ದ್ವೀಪವು ಅರಬ್ಬಿಸಮುದ್ರದಲ್ಲಿ ಕೇರಳದ ಕೊಚ್ಚಿಯಿಂದ 220 ರಿಂದ 440 ಕಿ. ಮೀ ದೂರದಲ್ಲಿದೆ. ಇದು ಬಿಳಿ ಮರಳಿನ ಕಡಲ ತೀರವಾಗಿದ್ದು, ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳ ಪ್ರಬೇಧವನ್ನು ಹೊಂದಿದೆ. ಬ್ಯುಸಿ ಜೀವನಶೈಲಿಯಿಂದ ದೂರಾಗಬೇಕು ಎನ್ನುವವರು ಈ ಆಕರ್ಷಣೀಯ ಸ್ಥಳವನ್ನು ರಜೆ ಕಳೆಯಲು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮಾಲ್ಡೀವ್ಸ್ ದ್ವೀಪ ಸಮೂಹಕ್ಕೆ ಪರ್ಯಾಯವಾಗಿದೆ.
ಲಕ್ಷದ್ವೀಪವೇ ನಮಗೆ ಮಾಲ್ಡೀವ್ಸ್ ಆಗಿದೆ. ದುಃಖದ ಸಂಗತಿ ಎಂದರೆ ಹಿಂದಿನ ಆಡಳಿತಗಳಲ್ಲಿ ಇದನ್ನು ಪ್ರವಾಸಿ ಆಕರ್ಷಣೀಯ ಪ್ರದೇಶವಾಗಿ ಮಾಡಲು ವಿಫಲರಾಗಿದ್ದೇವೆ ಎಂದು ನೆಟ್ಟಿಗರು ಮೋದಿ ಅವರ ಎಕ್ಸ್ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸರ್, ಎಂತಹ ನಾಯಕರು ನೀವು, ನೀವು ಕೇವಲ ನಮ್ಮ ಭಾರತದ ಸ್ಥಳಕ್ಕೆ ಭೇಟಿ ನೀಡಲಿಲ್ಲ. ನೀವು ನಿಮ್ಮ ಫೋಟೋಗಳ ಮೂಲಕ ಅಲ್ಲಿನ ಪ್ರದೇಶದ ಸೌಂದರ್ಯವನ್ನು ಪ್ರೋತ್ಸಾಹಿಸಿ ಅಭಿವೃದ್ಧಿಗೆ ಉತ್ತೇಜಿಸಿದ್ದೀರಾ. ನಿಮ್ಮ ಫೋಟೋಗಳು ಲಕ್ಷದ್ವೀಪಕ್ಕೆ ಶೀಘ್ರವೇ ಭೇಟಿ ನೀಡುವಂತೆ ಮತ್ತು ಅಲ್ಲಿನ ಕಡಲಿನ ಸೌಂದರ್ಯವನ್ನು ಸವಿಯುವಂತೆ ನನ್ನನ್ನು ಪ್ರೇರೇಪಿಸಿದೆ ಎಂದಿದ್ದಾರೆ.
ಇದರ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಲಕ್ಷದ್ವೀಪಕ್ಕೆ ಭೇಟಿ ನೀಡಿರುವುದು ಭೌಗೋಳಿಕ ರಾಜಕೀಯಕ್ಕೂ ಕಾರಣವಾಗಿದೆ. ಮಾಲ್ಡೀವ್ಸ್ ಹೊಸ ಅಧ್ಯಕ್ಷ ಮೊಹ್ಮದ್ ಮುಯಿಝು, ಭಾರತ ವಿರೋಧಿ ಮತ್ತು ಚೀನಾ ಪರ ವಿದೇಶಾಂಗ ನೀತಿ ಹೊಂದಿರುವ ಈ ಸಂದರ್ಭದಲ್ಲಿ ಮೋದಿ ಭೇಟಿ ಸದ್ದು ಮಾಡಿದೆ. ಭಾರತಕ್ಕೆ ಮಾಲ್ಡೀವ್ಸ್ ಬೇಡ ಎಂಬ ಸುಳಿವನ್ನು ನೀಡಿದೆ ಎಂದು ಅಮೆರಿಕನ್ ಥಿಂಕ್ ಟ್ಯಾಂಕ್ ಹಿರಿಯ ರಕ್ಷಣಾ ವಿಶ್ಲೇಷಕ ಡೆರೆಕ್ ಗ್ರಾಸ್ಮ್ಯಾನ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಲಕ್ಷದ್ವೀಪ ಪ್ರವಾಸದ ಈ ಪ್ರಮೋಷನ್ ಇದೀಗ ಮಾಲ್ಡೀವ್ಸ್ ಸರ್ಕಾರದ ವಲಯ ಮತ್ತು ರಾಜಕೀಯದಲ್ಲಿ ಕಹಿ ಉಂಟು ಮಾಡುವಂತೆ ಮಾಡಿದೆ. ಈ ಸಂಬಂಧ ಪೋಸ್ಟ್ ಮಾಡಿ ಡಿಲೀಟ್ ಮಾಡಿರುವ ಮಾಲ್ಡೀವ್ಸ್ ಯುವ ಸಬಲೀಕರಣ, ಮಾಹಿತಿ ಮತ್ತು ಕಲೆ ಸಚಿವ ಮಾರಿಯಂ ಶಿನುವಾ, ತಮ್ಮ ಪೋಸ್ಟ್ ಮೂಲಕ ಮೋದಿಗೆ ಅವಹೇಳನ ಮಾಡಿದ್ದಾರೆ.
ಮಾಲ್ಡೀವ್ಸ್‌ನ ಆರಳಿತ ಪಕ್ಷದ ಕೌನ್ಸಿಲ್ ಸದಸ್ಯೆ ಜಾಹೀದ್ ರಮೀಜ್, ಲಕ್ಷ ದ್ವೀಪದ ಪ್ರವಾಸ ಉತ್ತೇಜಿಸುವ ನಿಟ್ಟಿನಲ್ಲಿ ಈ ನಡೆ ಅತ್ಯುತ್ತಮ. ಆದರೆ, ನಮ್ಮೊಂದಿಗೆ ಅವರು ಸ್ಪರ್ಧಿಸಲು ಸಾಧ್ಯವಾ. ಹೇಗೆ ಅವರು ನಾವು ನೀಡುವಂತೆ ಆಫರ್ ನೀಡಲು ಸಾಧ್ಯ?, ಹೇಗೆ ಅವರು ಶುಚಿ ಕಾಪಾಡಲು ಸಾಧ್ಯ? ಕೊಠಡಿಗಳಲ್ಲಿನ ಶಾಶ್ವತ ವಾಸನೆಗಳು ಅವರ ದೊಡ್ಡ ಸಮಸ್ಯೆಗಳು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಗೆ ಭೇಟಿ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೊರತಾಗಿ ಮಾಲ್ಡೀವ್ಸ್ ಇರಲಿ ಮತ್ಯಾವುದೇ ದೇಶದ ಕುರಿತು ಹೇಳಿಕೆಯನ್ನು ನೀಡಿಲ್ಲ. ಆದಾಗ್ಯೂ ಈ ರೀತಿಯ ಹೇಳಿಕೆಗಳು ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಮಾಲ್ಡೀವ್ಸ್‌ನ ಆರ್ಥಿಕತೆಯು ಅತಿ ಹೆಚ್ಚಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಅದರಲ್ಲೂ ಅಧಿಕ ಸಂಖ್ಯೆ ಪ್ರವಾಸಿಗರು ಬರುವುದು ಭಾರತದಿಂದ. ಡಿಸೆಂಬರ್ 2023ರಲ್ಲಿ ಮಾಲ್ಡೀವ್ಸ್ ಪ್ರವಾಸಿ ಸಚಿವರು ಬಿಡುಗಡೆ ಮಾಡಿದ ವರದಿ ಅನುಸಾರ, ರಷ್ಯಾವನ್ನು ಹಿಂದಿಕ್ಕಿ ಮಾಲ್ಡೀವ್ಸ್‌ನ ಪ್ರವಾಸೋದ್ಯಮದ ಮೂಲಕ ಭಾರತದಿಂದ ಅತಿ ಹೆಚ್ಚಿದೆ.
ಪ್ರವಾಸೋದ್ಯಮ ಸಚಿವರ ಪ್ರಕಾರ. ಇಷ್ಟು ವರ್ಷಗಳ ಕಾಲ ಭಾರತಕ್ದಿಂದ 2,05,278 ಪ್ರವಾಸಿಗರು ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ. ಈ ವರ್ಷ 11.2ರಷ್ಟು ಒಟ್ಟಾರೆ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು avas.mv ವೆಬ್ಸೈಟ್ ವರದಿ ಮಾಡಿದೆ. ಜೂನ್ನಲ್ಲಿ ಭಾರತೀಯರು ರಷ್ಯಾಗಿಂತ ಅಧಿಕ ಸಂಖ್ಯೆಯಲ್ಲಿ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ. ರಷ್ಯಾದಿಂದ ಮಾಲ್ಡೀವ್ಸ್ಗೆ ಬಂದ ಪ್ರವಾಸಿಗರ ಸಂಖ್ಯೆ 2.03.539 ಆಗಿದೆ.
ಮಾಲ್ಡೀವ್ಸ್ ನಾಯಕತ್ವದ ಚೀನಾ ಪರ ನಿಲುವಿಗೆ ಭಾರತ ಪ್ರವಾಸೋದ್ಯಮವೂ ರಾಜತಾಂತ್ರಿಕ ಸಾಧನವಾಗಿ ಬಳಕೆಯಾಗಲಿದ್ಯಾ? ಭಾರತದ ಪ್ರವಾಸಿಗರನ್ನು ಮಾಲ್ಡೀವ್ಸ್ ಕಳೆದುಕೊಳ್ಳಲಿದೆಯಾ? ಮಾಲ್ಡೀವ್ಸ್ಗೆ ಹೊರತಾಗಿ ಲಕ್ಷದ್ವೀಪವೂ ಪ್ರವಾಸಿಗರ ಸೆಳೆಯಲಿದೆ? ನಕಾರಾತ್ಮಕ ರಾಜತಾಂತ್ರಿಕತೆ ಸಾಧನವನ್ನು ದೇಶವೂ ಪ್ರವಾಸೋದ್ಯಮಕ್ಕೆ ಬಳಕೆ ಮಾಡಲಿದೆಯಾ. ಇನ್ನೊಂದು ರಾಷ್ಟ್ರದ ನೀತಿಗಳ ವಿರುದ್ಧ ಅಸಮಾಧಾನ ಅಥವಾ ಪ್ರತಿಭಟನೆಯನ್ನು ವ್ಯಕ್ತಪಡಿಸಲು ದೇಶಗಳು ಪ್ರವಾಸೋದ್ಯಮದ ಮೇಲೆ ನಿರ್ಬಂಧಗಳನ್ನು ವಿಧಿಸಬಹುದು. ಇದು ಆರ್ಥಿಕ ಒತ್ತಡದ ಒಂದು ರೂಪವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉದ್ದೇಶಿತ ದೇಶದ ಪ್ರವಾಸೋದ್ಯಮ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಸರ್ಕಾರವೂ ಪ್ರವಾಸಿ ಸಲಹೆಗಾರರಿಗೆ, ರಾಜಕೀಯ ಕಾರಣದಿಂದ ಕೆಲವು ನಿರ್ದಿಷ್ಟ ದೇಶಗಳಿಗೆ ಹೋಗಲು ಎಚ್ಚರಿಕೆಯನ್ನು ನೀಡಬಹುದು. ಇದು ದೇಶವನ್ನು ಗುರಿಯಾಗಿಸಿಕೊಂಡು ಪ್ರವಾಸದ್ಯೋಮ ಉದ್ಯಮವನ್ನು ಹಾನಿ ಮಾಡಬಹುದು. ಪ್ರವಾಸಿಗರ ಸಂಖ್ಯೆ ಕ್ಷೀಣಿಸಬಹುದು. ಒಂದು ದೇಶವು ಹೆಚ್ಚಿದ ಪ್ರವಾಸೋದ್ಯಮದ ಭರವಸೆಯನ್ನು ಅಥವಾ ರಾಜತಾಂತ್ರಿಕ ಮಾತುಕತೆಗಳಲ್ಲಿ ಹತೋಟಿಯಾಗಿ ಅದನ್ನು ಕಡಿಮೆ ಮಾಡುವ ಬೆದರಿಕೆಯನ್ನು ಬಳಸಬಹುದು. ಉದಾಹರಣೆಗೆ, ಒಂದು ರಾಷ್ಟ್ರವು ರಾಜಕೀಯ ಅಂಶಗಳ ಹೊರತಾಗಿ ಆರ್ಥಿಕತೆಗೆ ಪ್ರವಾಸೋದ್ಯಮವನ್ನು ಹೆಚ್ಚಿಸಲು ಮುಂದಾಗಬಹುದು.
ಮಾಲ್ಡೀವ್ಸ್ ವಿರುದ್ಧವಾಗಿ ಭಾರತೀವು ಪ್ರವಾಸೋದ್ಯಮವನ್ನು ರಾಜತಾಂತ್ರಿಕ ಸಾಧನವಾಗಿ ಬಳಕೆ ಮಾಡಬಹುದು ಎಂಬುದನ್ನು ಅಂದಾಜಿಸಲಾಗುತ್ತಿದೆ. ಆದರೆ, ಒಂದು ವಿಷಯ ಸ್ಪಷ್ಟ. ಮಾಲ್ಡೀಲ್ಸ್ ಪ್ರವಾಸೋದ್ಯಮವೂ ಭಾರತದ ಪ್ರವಾಸಿಗರನ್ನು ತಮ್ಮ ದ್ವೀಪ ಸಮೂಹಕ್ಕೆ ಆಗಮಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪ್ರಚಾರ ಪಡೆದಿತ್ತು. ಆದರೆ, ಇದೀಗ ಮೋದಿ ಉತ್ತೇಜನದ ಬಳಿಕ ಮಾಲ್ಡೀವ್ಸ್ ಬದಲಾಗಿ ಲಕ್ಷದ್ವೀಪವನ್ನು ಆಯ್ಕೆ ಮಾಡಿಕೊಳ್ಳುವುದನ್ನು ಕಾಣಬಹುದು.
ಇಲ್ಲಿಯವರೆಗೆ ಲಕ್ಷದ್ವೀಪವೂ ಪ್ರವಾಸಿ ಮೂಲಸೌಕರ್ಯದಿಂದ ಹಿಂದೆ ಉಳಿದಿತ್ತು. ಆದಾಗ್ಯೂ ವರ್ಷದ ಹಿಂದೆ ಭಾರತದ ಅತಿ ದೊಡ್ಡ ಅತಿಥ್ಯ ಕಂಪನಿಯಾಗಿರುವ ಇಂಡಿಯನ್ ಹೋಟೆಲ್ಸ್ ಕಂಪನಿ (ಐಎಚ್ಸಿಎಲ್), ಈ ದ್ವೀಪದಲ್ಲಿ ಎರಡು ತಾಜ್ ಬ್ರಾಂಡೆಡ್ ರೆಸಾರ್ಟ್ ನಿರ್ಮಾಣಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿದೆ. 2026ರಲ್ಲಿ ಗ್ರೀನ್ಫೀಲ್ಡ್ ಯೋಜನೆ ತೆರಯಲಿದೆ. ತಾಜ್ ಸುಹೆಲಿ ಅಲ್ಲಿ ಬೀಚ್ನಲ್ಲಿ 60 ವಿಲ್ಲಾ ಮತ್ತು 50 ವಾಟರ್ ವಿಲ್ಲಾ ಹೊಂದಿರುವ 110 ರೂಮ್ ನಿರ್ಮಾಣ ಮಾಡಲಿದೆ. ಕಡ್ಮಾಟ್ನಲ್ಲಿ ತಾಜ್ 75 ಬೀಚ್ ವಿಲ್ಲಾ ಮತ್ತು 35 ವಾಟರ್ ವಿಲ್ಲಾದ ಹೋಟೆಲ್ ಆರಂಭಿಸಲಿದೆ.
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪ್ರವಾಸೋದ್ಯಮವನ್ನು ರಾಜತಾಂತ್ರಿಕ ಸಾಧನವಾಗಿ ಬಳಸುವ ಮೂಲಕ ಚೀನಾದ ಪ್ರಭಾವವನ್ನು ಭಾರತ ಎದುರಿಸುತ್ತಿದೆ. ಇದಕ್ಕೆ ಇರುವ ಮತ್ತೊಂದು ಉದಾಹರಣೆಯೆಂದರೆ ಶ್ರೀಲಂಕಾದಲ್ಲಿನ ವಿಮಾನ ನಿಲ್ದಾಣದ ಕಾರ್ಯಾಚರಣೆ ಆಗಿದೆ. ದಕ್ಷಿಣ ಶ್ರೀಲಂಕಾದ ಮಟ್ಟಾಲಾ ರಾಜಪಕ್ಸೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಎಂಆರ್‌ಐಎ) ನಡೆಸಲು ಖಾಸಗಿ ಸಂಸ್ಥೆಗಳನ್ನು ಒಳಗೊಂಡ ಭಾರತದೊಂದಿಗೆ ಜಂಟಿ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ರಷ್ಯಾ ಉತ್ಸಾಹ ತೋರಿದೆ. ಶ್ರೀಲಂಕಾದ ರಷ್ಯಾ ರಾಯಭಾರಿ ಲೆವನ್ ಎಸ್ ಝಗರ್ಯಾನ್ ಅವರು ಎಂಆರ್ಐಎಅನ್ನು ಅಲ್ಲಿ ನಿರ್ವಹಿಸಲು ಭಾರತದೊಂದಿಗೆ ಜಂಟಿ ಉದ್ಯಮದ ಬಗ್ಗೆ ಆಸಕ್ತಿ ತೋರಿಸಿದ್ದಾರೆ.
ರಷ್ಯಾದ ಅಧಿಕ ಸಂಖ್ಯೆಯ ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡುತ್ತಾರೆ. ಇದು ಮಟ್ಟಾಲಾ ವಿಮಾನ ನಿಲ್ದಾಣಕ್ಕೆ ಪ್ರಮುಖ ವಿಚಾರವಾಗಿದೆ. ಈ ಸಂಪರ್ಕದಲ್ಲಿ ಭಾರತದ ನಂತರದಲ್ಲಿ ರಷ್ಯಾವೂ ಶ್ರೀಲಂಕಾದ ಪ್ರವಾಸೋದ್ಯಮದ ಎರಡನೇ ಮೂಲವಾಗಿದೆ. 2024ರಲ್ಲಿ ರಷ್ಯಾದಿಂದ 1.2 ಮಿಲಿಯನ್ ಪ್ರವಾಸಿಗರನ್ನು ನಿರೀಕ್ಷಿಸಲಾಗಿದೆ.
ಎಂಆರ್‌ಐಎ ಮಟ್ಟಾಲಾ ನಗರದಲ್ಲಿ ನಿರ್ಮಾಣ ಬಾಗುತ್ತಿದ್ದು, ಹಂಬನ್‌ತೋಟ ಬಂದರಿನಿಂದ 18 ಕಿ.ಮೀ ದೂರದಲ್ಲಿ. 99 ವರ್ಷದ ಲೀಸ್ಗೆ ಶ್ರೀಲಂಕಾ ಚೀನಾದಕ್ಕೆ ಇದನ್ನು ನೀಡುತ್ತಿದೆ. ಇದು ಈ ದೇಶದ ಮೊದಲ ಗ್ರೀನ್ಫೀಲ್ಡ್ ಮತ್ತು ಮೂರನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವನ್ನು 2013ರಲ್ಲಿ ಮಹಿಂದಾ ರಾಜಪಕ್ಸೆ ಉದ್ಘಾಟಿಸಿದ್ದರು. ಶ್ರೀಲಂಕಾ ಏರ್ಲೈನ್ಸ್ ಸೇರಿದಂತೆ ಆರಂಭದಲ್ಲಿ ಹಲವು ವಿಮಾನಗಳು ಹಾರಾಟ ನಡೆಸಿದ್ದವು. ಆದಾಗ್ಯೂ ಕಡಿಮೆ ಬೇಡಿಕೆಯಿಂದ 2018ರಲ್ಲಿ ಎಲ್ಲಾ ಏರ್ಲೈನ್ಸ್ಗಳು ಮಟ್ಟಾಲಾದಿಂದ ನಿರ್ಮಿಸಿದ್ದವು.
ಹಾಗಾದರೆ, ಎಂಆರ್‌ಐಎ ಕಾರ್ಯಾಚರಣೆಯನ್ನು ಸ್ವಾಧೀನಪಡಿಸಿಕೊಳ್ಳಲು ರಷ್ಯಾದೊಂದಿಗೆ ಖಾಸಗಿ ಜಂಟಿ ಉದ್ಯಮಕ್ಕೆ ಬರಲು ಭಾರತ ಏಕೆ ಆಸಕ್ತಿ ಹೊಂದಿದೆ? ಎಂಬ ಕುರಿತು ಶ್ರೀಲಂಕಾದ ವಿಷಯಗಳ ತಜ್ಞರು ಈಟಿವಿ ಭಾರತ್ನೊಂದಿಗೆ ಅನಾಮಧೇಯತೆಯ ಷರತ್ತಿನ ಕುರಿತು ಮಾತನಾಡಿದ್ದಾರೆ. ಈ ವೇಳೆ , ಹಂಬನ್‌ತೋಟ ಬಂದರಿನಲ್ಲಿ ಚೀನಾದ ಉಪಸ್ಥಿತಿಯಿಂದಾಗಿ ಭಾರತವು ಕಾರ್ಯತಂತ್ರದ ಹಿತಾಸಕ್ತಿಗಳನ್ನು ಪರಿಗಣಿಸುತ್ತಿರಬಹುದು ಎಂದಿದ್ದಾರೆ.
2015-16ರಿಂದ ಭಾರತವೂ ಎಂಆರ್‌ಐಎ ಬಗ್ಗೆ ತೆಗೆದುಕೊಳ್ಳುವ ಆಸಕ್ತಿ ಹೊಂದಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ವಿಮಾನ ನಿಲ್ದಾಣವನ್ನು ದವಸಗಳ ಸಂಗ್ರಹಕ್ಕೆ ಬಳಕೆ ಮಾಡಲಾಗುತ್ತಿದೆ. ಹಿಂದೂ ಮಹಾಸಾಗರದಲ್ಲಿ ಚೀನಾದಿಂದ ಹೆಚ್ಚುತ್ತಿರುವ ಪ್ರಭಾವದ ಹಿನ್ನೆಲೆಯಲ್ಲಿ ಭಾರತದ ಆಸಕ್ತಿಯು ಕಾರ್ಯತಂತ್ರದ ಪರಿಣಾಮದಿಂದ ಕೂಡಿದೆ. ಈ ನಡುವೆ ಚೀನಾ ಪರ ಮತ್ತು ಭಾರತ ವಿರೋಧಿ ನಿಲುವು ಹೊಂದಿರುವ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಸುಮಾರು ಒಂದು ವಾರದ ಭೇಟಿಗಾಗಿ ಚೀನಾಕ್ಕೆ ತೆರಳಲಿದ್ದಾರೆ. ಮಾಲ್ಡೀವ್ಸ್‌ನ ಇಬ್ರಾಹಿಂ ಸೋಲಿಹ್, ಅಬ್ದುಲ್ಲಾ ಯಮೀನ್ ಮತ್ತು ಮೊಹಮದ್ ನಶೀದ್ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ಮೊದಲ ಭೇಟಿ ನೀಡಿದ್ದರು. ಕಳೆದ ನವೆಂಬರ್ನಲ್ಲಿ ಅಧಿಕಾರ ವಹಿಸಿಕೊಂಡ ಮುಯಿಝು ಟರ್ಕಿಗೆ ಭೇಟಿ ನೀಡಿದ್ದರು.
ಭಾರತ ವಿರೋಧಿ ನಿಲುವಿನ ಮೂಲಕ ಮುಯಿಝು ಘೋಷಿಸುವ ಮೂಲಕ ಕಳೆ ವರ್ಷ ಅಧ್ಯಕ್ಷ ಚುನಾವಣೆಯಲ್ಲಿ ಮುಯಿಝ್ ಗೆಲುವು ಸಾಧಿಸಿದರು. ಭಾರತ ಓಡು ಎಂಬ ಪ್ರಚಾರವನ್ನು ನಡೆಸುವ ಮೂಲಕ ಅವರ ದೇಶದಲ್ಲಿದ್ದ ಭಾರತದ ಸೇನೆಯನ್ನು ಹಿಂಪಡೆಯಲು ಕರೆ ನೀಡಿದ್ದರು. ಹಿಂದೂ ಮಹಾಸಾಗರದ ದ್ವೀಪಸಮೂಹ ರಾಷ್ಟ್ರದಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದಾಗ್ಯೂ, ಅಧಿಕಾರ ವಹಿಸಿಕೊಂಡ ನಂತರ, ಮುಯಿಝು ಈ ಸಿಬ್ಬಂದಿಯನ್ನು ಹಿಂಪಡೆಯಲು ಭಾರತಕ್ಕೆ ಔಪಚಾರಿಕ ವಿನಂತಿಯನ್ನು ಮಾಡಿದರು.
ಮಾಲ್ಡೀವ್ಸ್ ರಾಷ್ಟ್ರೀಯ ಭದ್ರತೆಯ ಕಾಳಜಿ ಮತ್ತು ಸೂಕ್ಷ್ಮ ಮಾಹಿತಿಯ ರಕ್ಷಣೆಯನ್ನು ಉಲ್ಲೇಖಿಸಿ ಭಾರತದೊಂದಿಗೆ ಹೈಡ್ರೋಗ್ರಫಿ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಿತು. ಜೂನ್ 8, 2019 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮಾಲ್ಡೀವ್ಸ್ ಭೇಟಿಯ ಸಂದರ್ಭದಲ್ಲಿ ಹೈಡ್ರೋಗ್ರಾಫಿಕ್ ಸಮೀಕ್ಷೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದ ಅಡಿಯಲ್ಲಿ, ಭಾರತವು ದ್ವೀಪ ರಾಷ್ಟ್ರದ ಪ್ರಾದೇಶಿಕ ಜಲಗಳ ಸಮಗ್ರ ಅಧ್ಯಯನವನ್ನು ನಡೆಸಲು ಅವಕಾಶ ನೀಡಿತ್ತು. ಇದರಲ್ಲಿ ಬಂಡೆಗಳು, ಆವೃತ ಪ್ರದೇಶಗಳು, ಕರಾವಳಿಗಳು, ಸಾಗರ ಪ್ರವಾಹಗಳು ಮತ್ತು ಉಬ್ಬರವಿಳಿತದ ಮಟ್ಟಗಳು ಸೇರಿವೆ.
ಹೊಸ ದೆಹಲಿಯ ನೆರೆಹೊರೆಯ ಮೊದಲ ನೀತಿಯ ಭಾಗವಾಗಿ, ಮಾಲ್ಡೀವ್ಸ್ ಹಿಂದೂ ಮಹಾಸಾಗರದಲ್ಲಿ ಅದರ ಸ್ಥಳದಿಂದಾಗಿ ಭಾರತಕ್ಕೆ ಕಾರ್ಯತಂತ್ರವಾಗಿ ಮಹತ್ವದ್ದಾಗಿದೆ. ಭಾರತ ಮತ್ತು ಮಾಲ್ಡೀವ್ಸ್ ಪ್ರಾಚೀನತೆಯಲ್ಲಿನ ಜನಾಂಗೀಯ, ಭಾಷಾ, ಸಾಂಸ್ಕೃತಿಕ, ಧಾರ್ಮಿಕ ಮತ್ತು ವಾಣಿಜ್ಯ ಸಂಪರ್ಕಗಳನ್ನು ಹಂಚಿಕೊಳ್ಳುತ್ತವೆ ಮತ್ತು ನಿಕಟ, ಸೌಹಾರ್ದ ಮತ್ತು ಬಹು ಆಯಾಮದ ಸಂಬಂಧಗಳನ್ನು ಆನಂದಿಸುತ್ತವೆ. ಆದಾಗ್ಯೂ, 2008 ರಿಂದ ಮಾಲ್ಡೀವ್ಸ್‌ನಲ್ಲಿನ ಆಡಳಿತ ಅಸ್ಥಿರತೆಯು ಭಾರತ ಮಾಲ್ಡೀವ್ಸ್ ಸಂಬಂಧಕ್ಕೆ, ವಿಶೇಷವಾಗಿ ರಾಜಕೀಯ ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಗಮನಾರ್ಹ ಸವಾಲುಗಳನ್ನು ಒಡ್ಡಿದೆ.
ಭಾರತವು ಮಾಲ್ಡೀವ್ಸ್‌ನ ಪ್ರಮುಖ ಪಾಲುದಾರನಾಗಿ ಮುಂದುವರಿದರೂ, ನವದೆಹಲಿ ತನ್ನ ಸ್ಥಾನದ ಬಗ್ಗೆ ತೃಪ್ತಿ ಹೊಂದಲು ಸಾಧ್ಯವಿಲ್ಲ. ಮಾಲ್ಡೀವ್ಸ್‌ನಲ್ಲಿನ ಬೆಳವಣಿಗೆಗಳ ಬಗ್ಗೆ ಗಮನ ಹರಿಸಬೇಕು. ದಕ್ಷಿಣ ಏಷ್ಯಾ ಮತ್ತು ಸುತ್ತಮುತ್ತಲಿನ ಸಮುದ್ರ ಗಡಿಗಳಲ್ಲಿ ಪ್ರಾದೇಶಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇಂಡೋ ಪೆಸಿಫಿಕ್ ಭದ್ರತಾ ಜಾಗದಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸಬೇಕು. ಭಾರತದ ನೆರೆಹೊರೆಯಲ್ಲಿ ಚೀನಾದ ಕಾರ್ಯತಂತ್ರದ ಹೆಜ್ಜೆಗುರುತು ಹೆಚ್ಚಾಗಿದೆ. ದಕ್ಷಿಣ ಏಷ್ಯಾದಲ್ಲಿ ಚೀನಾದ ಸ್ಟ್ರಿಂಗ್ ಆಫ್ ಪರ್ಲ್ಸ್ (ಮುತ್ತಿನ ಮಾಲೆ) ನಿರ್ಮಾಣದಲ್ಲಿ ಮಾಲ್ಡೀವ್ಸ್ ಪ್ರಮುಖವಾಗಿ ಹೊರಹೊಮ್ಮಿದೆ.
ಇದೀಗ ಲಕ್ಷದ್ವೀಪ ಪ್ರವಾಸೋದ್ಯಮವನ್ನು ಮೋದಿ ಪ್ರಚಾರ ಮಾಡಿದ್ದು, ಇದು ಮಾಲ್ಡೀವ್ಸ್ಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ನಂಬಲಾಗಿದೆ. ಮಾಲೆ ಕೂಡ ತನ್ನ ಭಾರತ ವಿರೋಧಿ ಮತ್ತು ಚೀನಾ ಪರವಾದ ವಿದೇಶಾಂಗ ನೀತಿಯ ಬಗ್ಗೆ ಮರುಚಿಂತನೆಯನ್ನು ಹೊಂದುತ್ತದೆಯೇ ಎಂದು ನೋಡಬೇಕಾಗಿದೆ.
ಇದನ್ನೂ ಓದಿ: ಮಾಲ್ಡೀವ್ಸ್ಗೆ ವಿಮಾನ ಸಂಚಾರ ರದ್ದುಗೊಳಿಸಿದ EaseMyTrip