ETV Bharat / lifestyle

ಮಕ್ಕಳಲ್ಲಿ ಅಲರ್ಜಿ ನಿಯಂತ್ರಣ ಹೇಗೆ? ಹೀಗಿವೆ ಕೆಲವು ಮಾರ್ಗಗಳು.. - ಮಕ್ಕಳಲ್ಲಿ ಅಲರ್ಜಿ ನಿಯಂತ್ರಣಕ್ಕೆ ಮಾರ್ಗಗಳು

Allergies In Children: ನಮ್ಮ ದೇಹಕ್ಕೆ ಒಗ್ಗದ ಯಾವುದೇ ಕಣ ದೇಹ ಪ್ರವೇಶಿಸಿದರೆ ಇದನ್ನು ತಡೆಯಲು ದೇಹದ ರೋಗ ನಿರೋಧಕ ಶಕ್ತಿ ಕೈಗೊಳ್ಳುವ ಪ್ರತಿಕ್ರಿಯೆಯೇ ಅಲರ್ಜಿ. ಈ ಅಲರ್ಜಿಗೆ ಕಾರಣವಾಗುವ ಕಣಗಳನ್ನು ಅಲರ್ಜಿಕಾರಕ ಎಂದು ಕರೆಯಲಾಗುತ್ತದೆ. ಮಕ್ಕಳಲ್ಲಿ ಅಲರ್ಜಿ ನಿಯಂತ್ರಣಕ್ಕೆ ಅನುಸರಿಸಬೇಕಾದ ಕೆಲವು ಮಾರ್ಗೋಪಾಯಗಳು ಹೀಗಿವೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Jan 21, 2022, 8:43 AM IST

Updated : Jan 21, 2022, 8:49 AM IST

ಅಲರ್ಜಿ.. ಅಬಾಲವೃದ್ಧರಾದಿಯಾಗಿ ಎಲ್ಲರೂ ಇದರಿಂದ ಬಳಲುವವರೇ. ಪಾಶ್ಚಿಮಾತ್ಯ ಜಗತ್ತಿನಲ್ಲಿ ಫುಡ್ ಅಲರ್ಜಿ ಹೆಚ್ಚಾಗಿದ್ದು, ಭಾರತದಲ್ಲಿ ಅದು ಬಹಳ ಅಪರೂಪ. ಆದರೆ, ಇದು ಅತ್ಯಂತ ವೇಗವಾಗಿ ಬದಲಾಗುತ್ತಿದ್ದು ನಾವು ಕೂಡಲೇ ಸಕ್ರಿಯರಾಗಬೇಕಿದೆ.

ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಅಲರ್ಜಿಕಾರಕ (ಅಲರ್ಜಿನ್) ಎಂದರೆ ಹಾಲು, ಮೊಟ್ಟೆ ಮತ್ತು ಕಡಲೆಕಾಯಿ. IAP ಸಮೀಕ್ಷೆಯ ಪ್ರಕಾರ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ 11.4 ಪ್ರತಿಶತ ಮಕ್ಕಳು ಕೆಲವು ರೀತಿಯ ಅಲರ್ಜಿಗಳಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಇದು ಹೆಚ್ಚಾಗಿರುತ್ತದೆ.

ಅಲರ್ಜಿಯ ಲಕ್ಷಣಗಳು

  • ಮೂಗು ಸ್ರವಿಸುವಿಕೆ
  • ಸತತ ಸೀನುವಿಕೆ
  • ಕೆಮ್ಮು
  • ದದ್ದು ಕಾಣಿಸಿಕೊಳ್ಳುವುದು
  • ಕೆಂಪಗಾದ ಕಣ್ಣು
  • ಊದಿಕೊಂಡ ನಾಲಿಗೆ
  • ಅತಿಸಾರ
  • ಮತ್ತು ಉಸಿರಾಟದ ತೊಂದರೆ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಸಮಸ್ಯೆಗಳಿಂದ ಮಗು ಗಂಭೀರ ಅಸ್ವಸ್ಥತೆ ಅನುಭವಿಸುತ್ತದೆ. ಇದು ಕೆಲವೊಮ್ಮೆ ಪೋಷಕರನ್ನು ಹತಾಶರನ್ನಾಗಿ ಮಾಡುತ್ತದೆ. ಕಾಲಾನಂತರದಲ್ಲಿ ಅಲರ್ಜಿ ನಿಧಾನವಾಗಿ ಹೆಚ್ಚುತ್ತದೆ. ಅದನ್ನು ನಿಯಂತ್ರಿಸುವಲ್ಲಿ ಪೋಷಕರು ತಾಳ್ಮೆ ಮತ್ತು ಬದ್ಧತೆ ಹೊಂದಿರಬೇಕು. ಆದಾಗ್ಯೂ ಸಮಸ್ಯೆ ತಡೆಗಟ್ಟುವಿಕೆ ಮತ್ತು ಸಂಭವನೀಯ ಉಪಶಮನಕ್ಕಾಗಿ ಕೆಲವು ಮಾರ್ಗಗಳು ಹೀಗಿವೆ..

1) ಒತ್ತಡ ಬೇಡ:

ಈ ಸಮಯದಲ್ಲಿ ಒತ್ತಡ ಮುಕ್ತ ಮತ್ತು ಶಾಂತವಾಗಿರುವುದು ಬಹಳ ಮುಖ್ಯ. ಭಯ ಸೃಷ್ಟಿಸುವುದು ದುಃಖವನ್ನು ಮಾತ್ರ ಹೆಚ್ಚಿಸುತ್ತದೆ. ರೋಗಲಕ್ಷಣಗಳ ಬಗ್ಗೆ ನಮಗೆ ತಿಳಿದ ನಂತರ, ಮನೆಯಲ್ಲಿ ಪ್ರಥಮ ಚಿಕಿತ್ಸಾ ಅಲರ್ಜಿಕ್ ಕಿಟ್ ಇಟ್ಟುಕೊಳ್ಳುವುದು ಉತ್ತಮ.

2) ಸ್ವಚ್ಛತೆ ಒಳ್ಳೆಯದೇ ಆದರೆ ಗೀಳು ಒಳ್ಳೆಯದಲ್ಲ:

ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಅನೇಕ ಮಾರ್ಗಗಳಿವೆ. ಮಕ್ಕಳ ಬಗ್ಗೆ ಅತಿಯಾಗಿ ಸಂರಕ್ಷಿಸುವುದು, ಅವರ ಕೈಗಳನ್ನು ಕೊಳಕು ಮಾಡಿಕೊಳ್ಳಲು ಬಿಡದಿರುವುದು ಅವರ ಸೂಕ್ಷ್ಮ ಪ್ರತಿಕ್ರಿಯೆ ಹೆಚ್ಚಿಸುತ್ತದೆ. ಮಕ್ಕಳು ಹೊರಗಡೆ ಕಾಲ ಕಳೆಯುವುದು ಮತ್ತು ಅವರ ಕೈಗಳು ಗಲೀಜಾಗುವುದು ಬಹಳ ಮುಖ್ಯ. ಪ್ರಾಣಿಗಳೊಂದಿಗೆ ಹೊಲಗಳಲ್ಲಿ ವಾಸಿಸುವ ಜನರಿಗೆ ಅಲರ್ಜಿ ಪ್ರಮಾಣ ಕಡಿಮೆ.

3) ಪ್ಯಾಕ್ಡ್ ಆಹಾರ ಬಳಕೆ ಬೇಡ:

ಆ್ಯಂಟಿಬಯೋಟಿಕ್ಸ್ ಮತ್ತು MSG ತುಂಬಿದ ಪ್ಯಾಕ್ಡ್ ಆಹಾರಗಳ ಅತಿಯಾದ ಬಳಕೆ ನಮ್ಮ ಕರುಳಿನಲ್ಲಿ ಸೂಕ್ಷ್ಮ ರಂಧ್ರಗಳನ್ನು ಮಾಡಿದೆ. ಈ ರಂಧ್ರಗಳು ಹೆಚ್ಚು ಅಲರ್ಜಿನ್‌ಗಳು ರಕ್ತಪ್ರವಾಹಕ್ಕೆ ಹಾದುಹೋಗಲು ಸಮಯದೊಂದಿಗೆ ದೊಡ್ಡದಾಗುತ್ತವೆ.

4) ಅಲರ್ಜಿನ್ ಸಂಪೂರ್ಣ ಸಂಶೋಧನೆ

ನಮ್ಮ ಮಗುವು ಅಲರ್ಜಿಯ ಲಕ್ಷಣಗಳನ್ನು ಅನುಭವಿಸುತ್ತಿದೆ ಎಂದು ತಿಳಿದ ನಂತರ, ಪೋಷಕರು ಹೆಚ್ಚಿನ ಗಮನ ಹರಿಸುವುದು ಅಗತ್ಯ. ಅವರು ತಮ್ಮ ಮಕ್ಕಳ ಆಹಾರ, ಬಟ್ಟೆ ಮತ್ತು ಚರ್ಮದ ಆರೈಕೆ ಉತ್ಪನ್ನಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.

5) ಅಲೋವೆರಾ ಆಧಾರಿತ ಉತ್ಪನ್ನ ಬಳಕೆ

ಚರ್ಮದ ಅಲರ್ಜಿಗಳಿಗೆ ಸಂಬಂಧಿಸಿದಂತೆ, ಅಲೋವೆರಾ ಉತ್ಪನ್ನಗಳ ಬಳಕೆ ಸೂಕ್ತ. ಮಕ್ಕಳಿಗೆ ನೈಸರ್ಗಿಕ, ಸಾವಯವ ಮತ್ತು ಶುದ್ಧೀಕರಿಸಿದ ಅಲೋವೆರಾ ಆಧಾರಿತ ಉತ್ಪನ್ನಗಳನ್ನು ಬಳಸುವುದರಿಂದ ಅವರ ಚರ್ಮ ನಯವಾಗಿರುತ್ತದೆ.

ಇದನ್ನೂ ಓದಿ: ನಿಮ್ಮ ತುಟಿಗಳು ಸುಂದರ ಹಾಗೂ ಆರೋಗ್ಯಕರವಾಗಿರಲು ಹೀಗೆ ಮಾಡಿ ನೋಡಿ..

Last Updated : Jan 21, 2022, 8:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.