ಯೋಗಾಭ್ಯಾಸವು ಎಲ್ಲ ಋತುವಿನಲ್ಲಿ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಇದು ದೇಹವನ್ನು ನೈಸರ್ಗಿಕವಾಗಿ ಬೆಚ್ಚಗಾಗಲು ಸಹಾಯ ಮಾಡುತ್ತದೆ. ಚಳಿಯಿಂದ ಉಂಟಾಗುವ ಸಮಸ್ಯೆಗಳನ್ನು ದೂರವಿರಿಸುತ್ತದೆ. ಶೀತಕಾಲದಲ್ಲಿ ಜನರು ಸಾಮಾನ್ಯವಾಗಿ ಶೀತ, ಕೆಮ್ಮು, ಆಸ್ತಮಾ ಮತ್ತು ಬ್ರಾಂಕೈಟಿಸ್ ಸೇರಿದಂತೆ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಾರೆ.
ಹಾಗೆಯೇ ಪಚನಕ್ರಿಯೆ, ಕೀಲು ನೋವು ಅಥವಾ ಊತ, ಮೈಗ್ರೇನ್, ಸಂಧಿವಾತ, ಸ್ನಾಯು ಸೆಳೆತವೂ ಸಾಮಾನ್ಯವಾಗಿರಲಿದೆ. ಹಾಗಾದರೆ ಚಳಿಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಯೋಗ ಹೇಗೆ ಸಹಕಾರಿ ಎಂಬುದನ್ನು ಅರಿಯೋಣ.
ಚಳಿಗಾಲದಲ್ಲಿ ಯೋಗದ ಪ್ರಯೋಜನಗಳೇನು?
- ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ದೇಹದಲ್ಲಿನ ಸ್ನಾಯುಗಳು ಹಿಗ್ಗುತ್ತವೆ.
- ಯೋಗ ಸೋಮಾರಿತನವನ್ನು ಕಡಿಮೆ ಮಾಡಿ, ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುತ್ತದೆ.
- ಅತಿಯಾದ ಶೀತದಿಂದ ಉಂಟಾಗುವ ಸೆಳೆತ ಅಥವಾ ಸ್ನಾಯುಗಳ ಬಿಗಿತದಂತಹ ಸಮಸ್ಯೆಗಳಿಗೂ ಪರಿಹಾರ
- ಪ್ರಾಣಾಯಾಮ, ಭುಜಂಗಾಸನ, ಪವನಮುಕ್ತಾಸನ ಮತ್ತು ಶಶಾಂಕಾಸನಗಳು ಆರೋಗ್ಯಕ್ಕೆ ಪ್ರಯೋಜನಕಾರಿ
- ಮಂಜು ಮತ್ತು ಸೂರ್ಯನ ಶಾಖದ ಕೊರತೆಯಿಂದ ಮಾನಸಿಕ ಆರೋಗ್ಯದ ಮೇಲೆ ಚಳಿ ವ್ಯತಿರಿಕ್ತ ಪರಿಣಾಮ
- ಶವಾಸನ, ಯೋಗ ನಿದ್ರಾ ಮತ್ತು ಇತರ ರೀತಿಯ ಧ್ಯಾನ ಸೇರಿದಂತೆ ಪ್ರಾಣಾಯಾಮ, ಯೋಗಾಭ್ಯಾಸ ಅಗತ್ಯ
- ಚಳಿಗಾಲದಲ್ಲಿ ಜೀರ್ಣಕ್ರಿಯೆ, ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಯೋಗಾಭ್ಯಾಸ ಉತ್ತಮ
- ಸೂರ್ಯ ನಮಸ್ಕಾರ, ಸುಖಾಸನ, ಭ್ರಮರಿ, ತಾಡಾಸನ, ವೃಕ್ಷಾಸನ, ಭುಜಂಗಾಸನ, ಶಿಶು ಆಸನ, ಪವನಮುಕ್ತಾಸನ, ವಜ್ರಾಸನ ಮತ್ತು ಮರ್ಕಟಾಸನಗಳು ಉಸಿರಾಟದ ಸರಾಗ ಪ್ರಕ್ರಿಯೆಗೆ ಸಹಾಯಕ
ಚಳಿಗಾಲದಲ್ಲಿ ಹಗಲು ವೇಳೆ ಕಡಿಮೆ ಇದ್ದು, ರಾತ್ರಿಗಳು ದೀರ್ಘವಾಗಿರುವುದರಿಂದ, ದೇಹದ ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ಆಲಸ್ಯತನವನ್ನು ಹೆಚ್ಚಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯ ನಮಸ್ಕಾರ, ವಿವಿಧ ರೀತಿಯ ಪ್ರಾಣಾಯಾಮ ಮತ್ತು ಸಾಮಾನ್ಯ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ದೇಹವು ಬೆಚ್ಚಗಿರುತ್ತದೆ. ಸೋಮಾರಿತನವನ್ನು ಯೋಗ ನೀಗಿಸುತ್ತದೆ ಎಂದು ಯೋಗ ತಜ್ಞೆ ಮೀನು ವರ್ಮಾ ಹೇಳುತ್ತಾರೆ.
ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೂಳೆಗಳು, ಜೀರ್ಣಕ್ರಿಯೆ, ನರಗಳು, ಸ್ನಾಯುಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಹವಾಮಾನದ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು ಮೀನು ಶರ್ಮಾ ತಿಳಿಸುತ್ತಾರೆ.