ಆಧುನಿಕ ಜೀವನದಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಕೆಲ ಅಭ್ಯಾಸಗಳನ್ನು ಮಾಡಿಕೊಂಡಿರುತ್ತೇವೆ. ಇದರಿಂದಾಗಿ ನಮ್ಮ ದೇಹದ ಮೇಲೆ ಆಗುವ ಪರಿಣಾಮವನ್ನು ನಾವು ಲೆಕ್ಕಿಸಿರುವುದಿಲ್ಲ. ಈ ಕುರಿತು ಹೆಲ್ತ್ಕೇರ್ ಸಾಧನ ಕಂಪನಿಯ ಸಹ ಸಂಸ್ಥಾಪಕಿ ನೇಹಾ ಮಿತ್ತಲ್ ಕೆಲ ಮಾಹಿತಿಗಳನ್ನು ಈ ಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ನಿದ್ರೆ: ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ, ಲವಲವಿಕೆಯಿಂದ ಇರಲು ಸಾಧ್ಯವಿಲ್ಲ. ಕನಿಷ್ಠ ಆರು ಗಂಟೆಗಳಾದರೂ ನಿದ್ರೆ ಮಾಡಬೇಕು. ಇದರಿಂದಾಗಿ, ದೇಹದ ಚಟುವಟಿಕೆಗಳು(ಉಸಿರಾಟ, ಜೀರ್ಣಕ್ರಿಯೆ) ಸರಾಗವಾಗಿ ನಡೆಯುತ್ತವೆ.
ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರ: ಚೀಸ್, ಮಾಂಸ ಹಾಗೂ ಅತಿಯಾದ ಪ್ರೋಟೀನ್ ಯುಕ್ತ ಆಹಾರ ಸೇವಿಸುವುದರಿಂದ IGF1 ಹೆಸರಿನ ಹಾರ್ಮೋನ್ನಲ್ಲಿ ವ್ಯತ್ಯಾಸವಾಗುತ್ತದೆ. ಈ ಮೂಲಕ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಮಾಂಸಹಾರದ ಜತೆಗೆ ಸಸ್ಯಹಾರಿ ಊಟಗಳನ್ನೂ ಸಮ ಪ್ರಮಾಣದಲ್ಲಿ ಸೇವಿಸಿ.
ಹೆಚ್ಚು ಹೊತ್ತು ಕುಳಿತುಕೊಳ್ಳುವುದು: ನೀವು ಹೆಚ್ಚಿನ ಸಮಯ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ಧೂಮಪಾನದಷ್ಟೇ ಅಪಾಯಕಾರಿ. ಅತಿಯಾಗಿ ಕುಳಿತುಕೊಳ್ಳುವುದರಿಂದ ಸ್ತನ, ಕೊಲೊನ್ನಂತಹ ವಿವಿಧ ಕ್ಯಾನ್ಸರ್ಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಪ್ರತಿ ಒಂದು ಗಂಟೆಗೊಮ್ಮೆ ಸ್ವಲ್ಪ ದೂರ ನಡೆಯಿರಿ.
ಒಂಟಿತನ: ಜೀವನದಲ್ಲಿ ಒಂಟಿಯಾಗಿರುವುದು ನಮಗೆ ಸಮಸ್ಯೆ ಅಂತಾ ಅನ್ನಿಸುವುದಿಲ್ಲ. ಆದರೆ, ಏಕಾಂಗಿಯಾಗಿರುವುದು ಹೃದಯ ಸಂಬಂಧಿ ಕಾಯಿಲೆಗಳಿಗೆ ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಭಾವನಾತ್ಮಕ ವಿಚಾರಗಳನ್ನು ನೀವು ಹಂಚಿಕೊಳ್ಳದಿದ್ದರೆ ದೇಹವು ಮತ್ತಷ್ಟು ರೋಗಗಳ ಆವಾಸಸ್ಥಾನವಾಗುತ್ತದೆ.
ಸೂರ್ಯನ ಶಾಖಕ್ಕೆ ಮೈಯೊಡ್ಡಿ: ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದರಿಂದ ಚರ್ಮದ ಕ್ಯಾನ್ಸರ್ ಬರುತ್ತದೆ ಎಂದು ಕೆಲವು ಒಳಾಂಗಣದಲ್ಲಿಯೇ ಟ್ಯಾನಿಂಗ್ ಮಾಡುತ್ತದೆ. ಆದರೆ, ಬೆಳಗ್ಗೆ 7 ರಿಂದ 9 ಗಂಟೆವರೆಗೆ ಬೀಳುವ ಸೂರ್ಯನ ಕಿರಣಗಳಿಗೆ ಮೈಯೊಡ್ಡಿದರೆ, ಯಾವುದೇ ಪರಿಣಾಮಗಳಾಗುವುದಿಲ್ಲ. ಸಾಧ್ಯವಾದಷ್ಟು, ಟ್ಯಾನ್ಗಾಗಿ ಸಲೂನ್ಗೆ ಹೋಗುವುದನ್ನು ನಿಲ್ಲಿಸಿ.