ETV Bharat / lifestyle

ರಿಯಲ್​ಮಿ ಮೊಬೈಲ್ಸ್​ನಿಂದ ಜಿಟಿ 5-G ಫೋನ್ ಮಾರುಕಟ್ಟೆಗೆ..ದರ ಎಷ್ಟು..? - ಕ್ವಾಲ್​​ಕಾಮ್​​ ಸ್ನ್ಯಾಪ್​​​​ಡ್ರಾಗನ್ 888

5ಜಿ ಮೊಬೈಲ್ ಮಾರುಕಟ್ಟೆಗೆ ರಿಯಲ್​​ಮಿ ವತಿಯಿಂದ ಹೊಸ ಮೊಬೈಲ್ ಹೊರಬಂದಿದ್ದು, ಕ್ವಾಲ್​​ಕಾಮ್​​ ಸ್ನ್ಯಾಪ್​​​​ಡ್ರಾಗನ್ 888 ಚಿಪ್​ಸೆಟ್​ ಹೊಂದಿದೆ. ಭಾರತದ ಮಾರುಕಟ್ಟೆ ಪ್ರವೇಶಿಸುವ ದಿನಾಂಕ ಇನ್ನೂ ನಿಗದಿಯಾಗಬೇಕಿದೆ.

realme-gt-launched-with-snapdragon-888-chipset-in-overseas-markets
ರಿಯಲ್​ಮಿ ಮೊಬೈಲ್ಸ್​ನಿಂದ ಜಿಟಿ 5ಜಿ ಫೋನ್
author img

By

Published : Jun 16, 2021, 7:11 PM IST

ನವದೆಹಲಿ: ಸ್ಮಾರ್ಟ್​ಫೋನ್​​​ ಮಾರುಕಟ್ಟೆಯಲ್ಲಿ 5-G ತಂತ್ರಜ್ಞಾನದ ಮೊಬೈಲ್​ಗಳು ಲಗ್ಗೆ ಇಟ್ಟಿವೆ. ಆದರೆ, ದರ ಸಮರದಲ್ಲಿ ತೀವ್ರ ಪೈಪೋಟಿಯಿದ್ದು, ಈ ಸಾಲಿಗೀಗ ರಿಯಲ್​​​​ಮಿ ಜಿಟಿ ಮೊಬೈಲ್ ಸೇರಿಕೊಂಡಿದೆ. ರಿಯಲ್​​ಮಿ ಬೊಬೈಲ್ಸ್ ಇದೀಗ ತನ್ನ ಫ್ಲಾಗ್​ಶಿಪ್​ ಸೆಗ್ಮೆಂಟ್​​ನಲ್ಲಿ ಹೊಸ ಫೋನ್ ಮಾರುಕಟ್ಟೆಗೆ ತಂದಿದ್ದು, ಕ್ವಾಲ್​​ಕಾಮ್​​ ಸ್ನ್ಯಾಪ್​​​​ಡ್ರಾಗನ್ 888 ಚಿಪ್​ಸೆಟ್​ ಮೂಲಕ ಮಾರುಕಟ್ಟೆಗೆ ಪರಿಚಯಿಸಿದೆ. ಇದರರ್ಥ ಈ ಮೊಬೈಲ್ ಫೋನ್ 5-Gಯಲ್ಲಿ ಕಾರ್ಯ ನಿರ್ವಹಿಸಲಿದೆ.

ರಿಯಲ್​ಮಿ ಮೊಬೈಲ್ಸ್​ನಿಂದ ಜಿಟಿ 5ಜಿ ಫೋನ್

ಆದರೆ, ಭಾರತದಲ್ಲಿ ಈ ಮೊಬೈಲ್ ಇನ್ನೂ ಬಿಡುಗಡೆಯಾಗಬೇಕಿದೆ. ಈಗಾಗಲೇ ಪೋಲೆಂಡ್​, ಸ್ಪೈನ್, ರಷ್ಯಾ, ಥಾಯ್ಲೆಂಡ್​, ಸೇರಿ ಹಲವೆಡೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಹೊಸ ಮೊಬೈಲ್​ನಲ್ಲಿ 12 ಜಿಬಿ ಱಮ್​​ ಮತ್ತು 256 ಜಿಟಿ ಸ್ಟೊರೇಜ್ ಸಾಮರ್ಥ್ಯ ನೀಡಲಾಗಿದೆ. ಇದರಿಂದ ಸಾವಿರಾರು ಫೋಟೋ ಹಾಗೂ ವಿಡಿಯೋಗಳನ್ನು ಸಂಗ್ರಹಿಸಿಡಬಹುದು.

ಸದ್ಯ ಮಾರಕಟ್ಟೆಯಲ್ಲಿ ಮೂರು ಮಾದರಿಯ ಬಣ್ಣದಲ್ಲಿ ಫೋನ್ ಲಭ್ಯವಾಗುತ್ತಿದೆ. ಸಿಲ್ವರ್, ಡ್ಯಾಶಿಂಗ್​ ನೀಲಿ ಮತ್ತು ರೇಸಿಂಗ್ ಹಳದಿ ಬಣ್ಣದ ಫೋನ್​ಗಳಿಗೆ ಬಾರಿ ಬೇಡಿಕೆ ಬಂದಿದೆ. ಬಾಕ್ಸ್​ನಲ್ಲಿಯೇ 65 ವ್ಯಾಟ್ ಚಾರ್ಜರ್ ಗ್ರಾಹಕರ ಕೈಸೇರಲಿದೆ.

ಈ ಜಿಟಿ ಮೊಬೈಲ್​ನ ಹೈ -ಎಂಡ್​ ಮಾದರಿಗೆ 599 ಯುರೋ ಬೆಲೆ ನಿಗದಿಯಾಗಿದೆ. ಅಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 53 ಸಾವಿರ ರೂ. ಆಗುತ್ತದೆ. ಇದರ ಇನ್ನೊಂದು ಅವತರಣಿಕೆಯಾದ 8 ಜಿಬಿ ಱಮ್​ ಮತ್ತು 128ಜಿಬಿ ಸ್ಟೊರೇಜ್ ಹೊಂದಿರುವ ಮೊಬೈಲ್​ನ ಬೆಲೆ 369 ಯುರೋ ಆಗಿದ್ದು, ಭಾರತೀಯ ಮಾರುಕಟ್ಟೆಗೆ ಹೋಲಿಸಿದರೆ ಸುಮಾರು 30 ಸಾವಿರ ಆಸುಪಾಸಿಗೆ ಸಿಗಲಿದೆ.

ಇದಿಷ್ಟೆ ಅಲ್ಲದೇ ಈ ಮೊಬೈಲ್​ 6.43 ಇಂಚಿನ 120 ಹರ್ಟ್ಸ್​​​​ ಜೊತೆ ಸ್ಯಾಮ್​ಸಂಗ್ ಸೂಪರ್ ಆಮೊಲೆಡ್​ ಡಿಸ್​​​ಪ್ಲೆ ಹೊಂದಿದೆ. ಇದು ಬೆಳಕಿನಲ್ಲೂ ಅತೀ ಹೆಚ್ಚು ಪ್ರಕಾಶವಾಗಿ ಡಿಸ್​​ಪ್ಲೆ ಕಾಣುವಂತೆ ಮಾಡುತ್ತದೆ. ಕ್ಯಾಮರಾ ಕಡೆ ಬಂದರೆ ಹಿಂಬದಿಯಲ್ಲಿ 64 ಎಂಪಿ ತ್ರಿಪಲ್ ಕ್ಯಾಮರಾ ಸೆಟ್​​ಅಪ್​ ಜೊತೆ ಬ್ರ್ಯಾಂಡ್​​ ನ್ಯೂ ವೈಡ್ ಆ್ಯಂಗಲ್ ನೈಟ್ ಶಾಟ್​ ಕ್ಯಾಮರಾ ಸಹ ಲಭ್ಯವಿದೆ. ಜೊತೆಗೆ ಬಾಕ್ಸ್​ನಲ್ಲಿಯೇ ಆ್ಯಂಡ್ರೋಯ್ಡ್​ 12 ಬಿಟಾ ವರ್ಷನ್ ಸಿಗಲಿದ್ದು, ಮುಂಬರುವ ದಿನಗಳಲ್ಲಿ ಅಪ್​ಡೇಟ್​​​ ಸಿಗಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.