ETV Bharat / lifestyle

ತರಬೇತಿ ಹಿನ್ನೆಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವರ್ಚುಯಲ್​ ರೋಬೋಟ್ಸ್​​​

author img

By

Published : Jan 29, 2021, 12:16 PM IST

ಓಪನ್ ಎಐ ಸಂಶೋಧಕರು ಅಭಿವೃದ್ಧಿಪಡಿಸಿರುವ ಒಂದೇ ರೀತಿಯ ವರ್ಚುಯಲ್ ರೋಬೋಟ್​ಗಳು ಪರಸ್ಪರ ವಿರುದ್ಧ ವಿಭಿನ್ನ ಆಟಗಳನ್ನು ಆಡಲಿವೆ. ಕೆಲವು ಗುರಿಗಳನ್ನು ಸಾಧಿಸಲು ವಿಭಿನ್ನ ಸಂದರ್ಭಗಳಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ರೋಬೋಟ್​ಗಳಾದ ಆರ್ಮ್​ ಆಲಿಸ್ ಮತ್ತು ಬಾಬ್ ಲರ್ನ್

ಯುಎಸ್ಎ: ವರ್ಚುಯಲ್ ರೋಬೋಟ್ ಆರ್ಮ್ ವಿವಿಧ ಕೆಲಸಗಳನ್ನು ಮಾಡುತ್ತಿದ್ದು, ಬ್ಲಾಕ್​ಗಳನ್ನು ನಿರ್ವಹಿಸುವುದು, ಟೇಬಲ್ ಹೊಂದಿಸುವುದು, ಚೆಸ್ ಆಡುವುದು ಸೇರಿದಂತೆ ಪ್ರತಿಯೊಂದು ಕಾರ್ಯವನ್ನು ಮಾಡಲು ತರಬೇತಿ ಪಡೆದು, ಅದನ್ನು ನಿರ್ವಹಿಸುತ್ತಿದೆ. ಕಠಿಣ ಸವಾಲುಗಳನ್ನು ನೀಡಲು ತರಬೇತಿ ಪಡೆದ ಎರಡನೇ ರೋಬೋಟ್​ನ ವಿರುದ್ಧ ಕೆಲಸ ಮಾಡುವ ಮೂಲಕ ಈ ರೋಬೊಟ್​ ಈ ಸಾಧನೆ ಮಾಡಿದೆ.

ಓಪನ್​ಎಐ ಸಂಶೋಧಕರು ಅಭಿವೃದ್ಧಿಪಡಿಸಿರುವ ಒಂದೇ ರೀತಿಯ ರೋಬೋಟ್​ಗಳಾದ ಆರ್ಮ್​ ಆಲಿಸ್ ಮತ್ತು ಬಾಬ್ ಲರ್ನ್​ ಮಾನವ ರಹಿತವಾಗಿ ಸಿಮ್ಯುಲೇಶನ್‌ನಲ್ಲಿ ಪರಸ್ಪರ ಆಟವನ್ನು ಆಡಲಿವೆ.

ಓದಿ: ಭಾರತದಲ್ಲಿ 29.28 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ.. ಕೇವಲ 11 ದಿನದಲ್ಲಿ 2 ಮಿಲಿಯನ್​ ಡೋಸ್​

ಈ ರೋಬೋಟ್‌ಗಳ ಬಲವರ್ಧನೆಗಾಗಿ ತರಬೇತಿ ನೀಡಲಾಗುತ್ತಿದ್ದು, ವಿಭಿನ್ನ ಕಷ್ಟಕರ ಸಂದರ್ಭಗಳಲ್ಲಿ ಸವಾಲ್​ನನ್ನು ಎದುರಿಸಿ ಹೇಗೆ ಗುರಿಯನ್ನು ತಲುಪಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ವರ್ಚುಯಲ್ ಟೇಬಲ್​​ಟಾಪ್​​ ಚಲಿಸುವ ವಸ್ತುಗಳು ಆಟವನ್ನು ಒಳಗೊಂಡಿದ್ದು, ಬಾಬ್​ ಪರಿಹರಿಸಲು ಕಷ್ಟಕರವಾದ ಒಗಟುಗಳನ್ನು ಆರ್ಮ್​ ಆಲಿಸ್​ ಪರಿಹರಿಸಲಿದೆ.

ಒಂದು ವಿಷಯವೆಂದರೆ ಎಐ ಅನ್ನು ಬಹುಕಾರ್ಯಕಕ್ಕೆ ತರಬೇತಿ ನೀಡಲು ಹೆಚ್ಚಿನ ಸಂಖ್ಯೆಯ ಉದಾಹರಣೆಗಳು ಬೇಕಾಗುತ್ತವೆ. ಬಾಬ್‌ಗೆ ಉದಾಹರಣೆಗಳನ್ನು ರಚಿಸಲು ಆಲಿಸ್‌ಗೆ ತರಬೇತಿ ನೀಡುವ ಮೂಲಕ ಓಪನ್‌ಎಐ ಇದನ್ನು ತಪ್ಪಿಸುತ್ತದೆ. ಒಂದು ಎಐ ಅನ್ನು ಇನ್ನೊಂದಕ್ಕೆ ತರಬೇತಿ ನೀಡಲು ಬಳಸಬೇಕಾಗುತ್ತದೆ. ಬ್ಲಾಕ್​​ಗಳ ಗೋಪುರ ನಿರ್ಮಿಸುವುದು, ನಂತರ ಅದನ್ನು ಎತ್ತಿಕೊಳ್ಳುವುದು ಮತ್ತು ಸಮತೋಲನಗೊಳಿಸುವುದು ಮುಂತಾದ ಗುರಿಗಳನ್ನು ಹೊಂದಿಸಲು ಆಲಿಸ್ ಕಲಿತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.