ETV Bharat / lifestyle

ಕ್ಯೂಆನೊನ್ ಸಿದ್ಧಾಂತಕ್ಕೆ ಸಂಬಂಧಿಸಿದ ಖಾತೆಗಳನ್ನು ಭೇದಿಸುತ್ತಿರುವ ಟ್ವಿಟರ್ - ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ಬೆಂಬಲಿಗರಲ್ಲಿ ಜನಪ್ರಿಯವಾಗಿರುವ ಕ್ಯೂಆನೊನ್ ಸಿದ್ಧಾಂತಕ್ಕೆ ಸಂಬಂಧಿಸಿದ ಖಾತೆಗಳು ಮತ್ತು ವಿಷಯವನ್ನು ಭೇದಿಸಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ. ಕ್ಯೂಆನೊನ್ ವಿಷಯಕ್ಕೆ ಸಂಬಂಧಿಸಿದ ಖಾತೆಗಳನ್ನು ನಿಷೇಧಿಸುವುದು. ಅದಕ್ಕೆ ಸಂಬಂಧಿಸಿದ ಯುಆರ್​ಎಲ್​ಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳದಂತೆ ನಿರ್ಬಂಧಿಸಲಾಗುವುದು ಎಂದು ಟ್ವಿಟರ್ ತಿಳಿಸಿದೆ.

twitter
twitter
author img

By

Published : Jul 22, 2020, 3:42 PM IST

ಹಾಂಕಾಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಲ್ಲಿ ಜನಪ್ರಿಯವಾಗಿರುವ ಕ್ಯೂಆನೊನ್ (QAnon) ಬಲಪಂಥೀಯ ಯುಎಸ್ ಸಿದ್ಧಾಂತಕ್ಕೆ ಸಂಬಂಧಿಸಿದ ಖಾತೆಗಳು ಮತ್ತು ವಿಷಯವನ್ನು ಭೇದಿಸಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ.

ಕ್ಯೂಆನೊನ್ ವಿಷಯಕ್ಕೆ ಸಂಬಂಧಿಸಿದ ಖಾತೆಗಳನ್ನು ನಿಷೇಧಿಸುವುದು, ಮತ್ತು ಅದಕ್ಕೆ ಸಂಬಂಧಿಸಿದ ಯುಆರ್​ಎಲ್​ಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳದಂತೆ ನಿರ್ಬಂಧಿಸುವುದು ಈ ಕ್ರಮಗಳಲ್ಲಿ ಸೇರಿದೆ.

ಕ್ಯೂಆನೊನ್​ಗೆ ಸಂಬಂಧಿಸಿದ ಟ್ವೀಟ್‌ಗಳನ್ನು ಹೈಲೈಟ್ ಮಾಡುವುದು ಮತ್ತು ಶಿಫಾರಸು ಮಾಡುವುದನ್ನು ನಿಲ್ಲಿಸುವುದಾಗಿಯೂ ಟ್ವಿಟರ್ ಹೇಳಿದೆ.

"ಆಫ್‌ಲೈನ್ ಹಾನಿಗೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಿರುವ ನಡವಳಿಕೆಯ ಮೇಲೆ ನಾವು ಬಲವಾದ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಕಂಪನಿಯು ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ನಮ್ಮ ಬಹುಖಾತೆ ನೀತಿಯ ಉಲ್ಲಂಘನೆಯಲ್ಲಿ ತೊಡಗಿರುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುವುದು. ಇಂತಹ ನಿಯಮ ಉಲ್ಲಂಘನೆಗಳಿಗಾಗಿ ಕಳೆದ ಕೆಲವು ವಾರಗಳಲ್ಲಿ 7,000ಕ್ಕೂ ಹೆಚ್ಚು ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕ್ರಮಗಳಿಂದಾಗಿ ಜಾಗತಿಕವಾಗಿ 1,50,000 ಖಾತೆಗಳು ಕಡಿಮೆಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಕ್ಯೂಆನೊನ್ ಪಿತೂರಿ ಸಿದ್ಧಾಂತವು ಶತ್ರುಗಳ ವಿರುದ್ಧ ರಹಸ್ಯ ಅಭಿಯಾನವನ್ನು ನಡೆಸುತ್ತಿದೆ ಎಂಬ ಆರೋಪವಿದೆ. ಇದರ ಪಿತೂರಿ ಸಿದ್ಧಾಂತವು ಅಂತರ್ಜಾಲದಿಂದ ಹೊರಹೊಮ್ಮಿ, ಮುಖ್ಯವಾಹಿನಿಯ ರಾಜಕೀಯ ರಂಗಕ್ಕೆ ತೆವಳುತ್ತಿದೆ. ಕ್ಯೂಆನೊನ್ ಪ್ರಚಾರದ ಖಾತೆಗಳನ್ನು ಟ್ರಂಪ್ ಕೂಡಾ ರಿಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.