ನವದೆಹಲಿ: ಟೆಕ್ ದೈತ್ಯ ಗೂಗಲ್ ಶೀಘ್ರದಲ್ಲೇ ಕ್ಯಾಲೆಂಡರ್ನಲ್ಲಿ 'ಟೈಮ್ ಇನ್ಸೈಟ್ಸ್' ಪ್ಯಾನಲ್ ಎಂಬ ಹೊಸ ಫೀಚರ್ನ್ನು ಅಳವಡಿಸಲಿದ್ದು, ಇದು ಬಳಕೆದಾರರು ತಮ್ಮ ಕೆಲಸದ ವಾರದಲ್ಲಿ ಎಷ್ಟು ಸಮಯವನ್ನು ಮೀಟಿಂಗ್‌ಗಳಲ್ಲಿ ವ್ಯಯಿಸಿದ್ದಾರೆ ಎಂಬುದನ್ನು ತಿಳಿಸುತ್ತದೆ.
ದಿ ವರ್ಜ್‌ನಿಂದ ಗುರುತಿಸಲ್ಪಟ್ಟ ಗೂಗಲ್‌ನ ಬ್ಲಾಗ್ ಪೋಸ್ಟ್ ಈ ಮಾಹಿತಿಯನ್ನು ನೀಡಿದ್ದು, 'ಟೈಮ್ ಇನ್ಸೈಟ್ಸ್' ಫೀಚರ್ ಬಳಕೆದಾರರ ಒಟ್ಟು ಸಮಯ, ಸಭೆಗಳಲ್ಲಿ ಕಳೆದ ಸಮಯ ಮತ್ತು ಅವರು ಹೆಚ್ಚು ಸಮಯ ಕಳೆಯಬೇಕಾದ ಜನರ ಪಟ್ಟಿ ಸೇರಿದಂತೆ ಇತರ ಮಾಹಿತಿಯನ್ನು ತೋರಿಸುತ್ತದೆಯಂತೆ.
-
Seamless collaboration between those in the room and those working remotely - that's #GoogleCalendar → https://t.co/IL1tqMr3ht https://t.co/cj35IVefN8
— Google Calendar (@googlecalendar) August 5, 2021 " class="align-text-top noRightClick twitterSection" data="
">Seamless collaboration between those in the room and those working remotely - that's #GoogleCalendar → https://t.co/IL1tqMr3ht https://t.co/cj35IVefN8
— Google Calendar (@googlecalendar) August 5, 2021Seamless collaboration between those in the room and those working remotely - that's #GoogleCalendar → https://t.co/IL1tqMr3ht https://t.co/cj35IVefN8
— Google Calendar (@googlecalendar) August 5, 2021
ಇನ್ನು ಫೀಚರ್ ಹೇಗಿರುತ್ತದೆ ಎಂಬುದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ಹಂಚಿಕೊಂಡಿದೆ. ಮೇಲೆ ಪಟ್ಟಿ ಮಾಡಲಾದ ವೈಶಿಷ್ಟ್ಯಗಳ ಜೊತೆಗೆ, ಗುಂಪು ಸಭೆಗಳ ಸಮಯ ಮತ್ತು ಒಂದೊಂದೇ ಸಭೆಯಲ್ಲಿ ವ್ಯಕ್ತಿ ವ್ಯಯಿಸಿದ ಸಮಯದ ಬಗ್ಗೆ ತೋರಿಸುತ್ತದೆ.