ETV Bharat / lifestyle

ನಕಲಿ ಸುದ್ದಿ ತಡೆಯಲು ಫೇಸ್​ಬುಕ್ ಕೈಗೊಂಡಿದೆ ಹೊಸ ಕ್ರಮ! ಏನು ಆ ಆ್ಯಕ್ಷನ್​​​?

ಫೇಸ್​ಬುಕ್​ನ ನ್ಯೂಸ್ ಫೀಡ್‌ನಲ್ಲಿನ ಪೋಸ್ಟ್‌ಗಳಿಗೆ ಸಾರ್ವಜನಿಕ ಅಧಿಕಾರಿ, ಅಭಿಮಾನಿ ಪುಟ ಅಥವಾ ವಿಡಂಬನೆ ಪುಟ ಸೇರಿದಂತೆ ಲೇಬಲ್‌ಗಳನ್ನು ಹಾಕಲು ಪ್ರಾರಂಭಿಸುತ್ತೇವೆ ಎಂದು ಫೇಸ್‌ಬುಕ್ ಹೇಳಿದೆ.

author img

By

Published : Apr 9, 2021, 4:59 PM IST

fb
fb

ಸ್ಯಾನ್ ಫ್ರಾನ್ಸಿಸ್ಕೋ (ಯು.ಎಸ್): ಬಳಕೆದಾರರು ಸಾಮಾಜಿಕ ಮಾಧ್ಯಮದ ಪೋಸ್ಟ್​ಗಳ ವಿಡಂಬನಾತ್ಮಕ ವಿಷಯವನ್ನು ನಿಜ ಎಂದು ನಂಬಿ ಗೊಂದಲಕ್ಕೊಳಗಾಗುತ್ತಾರೆ. ಹೀಗಾಗಿ ನಕಲಿ ಸುದ್ದಿಗಳ ವಿರುದ್ಧ ಹೋರಾಡುವುದೇ ಕಷ್ಟದ ಕೆಲಸ. ಆದರೆ, ಇದೀಗ ವಿಷಯಗಳನ್ನು ಸ್ಪಷ್ಟಪಡಿಸಲು, ಫೇಸ್‌ಬುಕ್ ಕೆಲವು ಪೋಸ್ಟ್‌ಗಳನ್ನು ಲೇಬಲ್ ಮಾಡಲು ಬಯಸಿದೆ.

ಫೇಸ್​ಬುಕ್ ಈಗಾಗಲೇ ಜನರು ನೋಡುವ ಪೇಜ್​ಗಳ ಕುರಿತು ಪರೀಕ್ಷಿಸುತ್ತಿದೆ ಎಂದು ಹೇಳಿದ್ದು, ಯುಎಸ್​ನಲ್ಲಿ ಬಳಕೆದಾರರಿಗಾಗಿ ಪ್ರಯೋಗವನ್ನು ಪ್ರಾರಂಭಿಸಲಾಗಿದೆ.

"ನಾವು ನ್ಯೂಸ್ ಫೀಡ್‌ನಲ್ಲಿನ ಪೋಸ್ಟ್‌ಗಳಿಗೆ ಸಾರ್ವಜನಿಕ ಅಧಿಕಾರಿ, ಅಭಿಮಾನಿ ಪುಟ ಅಥವಾ ವಿಡಂಬನೆ ಪುಟ ಸೇರಿದಂತೆ ಲೇಬಲ್‌ಗಳನ್ನು ಹಾಕಲು ಪ್ರಾರಂಭಿಸುತ್ತೇವೆ. ಇದರಿಂದ ಜನರು ವಿಷಯ ಎಲ್ಲಿಂದ ಬರುತ್ತಿದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು" ಎಂದು ಫೇಸ್‌ಬುಕ್ ಹೇಳಿದೆ.

ಫೇಸ್​ಬುಕ್ ಈ ರೀತಿಯ ಲೇಬಲ್​ಗಳನ್ನು ಏಕೆ ಅನ್ವಯಿಸಲು ಬಯಸಿದೆ ಎಂದು ಅಧಿಕೃತಗೊಳಿಸಿಲ್ಲ. ಆದರೂ ನಕಲಿ ಸುದ್ದಿಗಳ ವಿರುದ್ಧ ಹೋರಾಡುವುದೇ ಇದರ ಉದ್ದೇಶ ಎಂಬುವುದು ಸ್ಪಷ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.