ಸ್ಯಾನ್ ಫ್ರಾನ್ಸಿಸ್ಕೋ: ಯುವ ಜನರ ಸೆಳೆಯುತ್ತಿರುವ ಮೂರು ವರ್ಷ ಹಳೆಯ ಕ್ಲಬ್ಹೌಸ್ ಈಗ ಭಾರತದಲ್ಲಿ ಸದ್ದು ಮಾಡ್ತಿದೆ. ಕಳೆದೊಂದು ವರ್ಷದಿಂದ ಭಾರತದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಕ್ಲಬ್ಹೌಸ್ಗೆ ಟಕ್ಕರ್ ಕೊಡಲು ಫೇಸ್ಬುಕ್ ಮುಂದಾಗಿದೆ. ಆಡಿಯೋ ಮೆಸೆಜಿಂಗ್ ಆ್ಯಪ್ ಆಗಿರುವ ಕ್ಲಬ್ಹೌಸ್ ಕಡಿಮೆ ಅವಧಿಯಲ್ಲಿ ಮನೆಮಾತಾಗಿದೆ. ಈ ಹಿನ್ನೆಲೆ ಫೇಸ್ಬುಕ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್ ಹೊರತರಲು ಮುಂದಾಗಿದೆ.
ಫೇಸ್ಬುಕ್ ತನ್ನ ಆ್ಯಪ್ನಲ್ಲಿ ಆಡಿಯೋ ರೂಮ್ ಮತ್ತು ಪಾಡ್ಕಾಸ್ಟ್ ಸೌಲಭ್ಯ ನೀಡಲು ಮುಂದಾಗಿದೆ. ಈಗಾಗಲೇ ಯುಸ್ನಲ್ಲಿ ಆಯ್ದ ಬಳಕೆದಾರರಿಗೆ ಈ ವಿನೂತನ ಸೌಲಭ್ಯ ಲಭ್ಯವಾಗಿದೆ. ಇದಲ್ಲದೇ ತನ್ನದೆ ‘ಸೌಂಡ್ಬೈಟ್’ ಎಂಬ ಆ್ಯಪ್ ಅಭಿವೃದ್ಧಿಪಡಿಸುವ ಕಾರ್ಯಕ್ಕೂ ಫೇಸ್ಬುಕ್ ಮುಂದಾಗಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ಹೆಚ್ಚು ಬಳಕೆದಾರರಿಗೆ ಈ ಲೈವ್ ಆಡಿಯೋ ರೂಮ್ ಬಳಕೆಯ ಅವಕಾಶ ನೀಡಲಿದೆಯಂತೆ.
ಈ ವ್ಯವಸ್ಥೆಯಲ್ಲಿ ಸ್ನೇಹಿತರ ಗುಂಪು, ಫಾಲೋಯರ್ಸ್, ಪರಿಶೀಲಿಸಿದ ವ್ಯಕ್ತಿಗಳು ಮತ್ತು ರೂಮ್ನಲ್ಲಿ ಕೇಳುಗರು ಸಹ ಸ್ಪೀಕರ್ಗಳಾಗಿಯೂ ಕಾರ್ಯನಿರ್ವಹಿಸುವ ಸೌಲಭ್ಯ ಇರಲಿದೆಯಂತೆ.
ಜೊತೆಗೆ ಗ್ರೂಪ್ನ ಅಡ್ಮಿನ್ಗಳು ಮುಂಚಿತವಾಗಿಯೂ ಸ್ಪೀಕರ್ಗಳಿಗೆ ಆಹ್ವಾನ ಕಳುಹಿಸಬಹುದು ಅಥವಾ ಸಂಭಾಷಣೆ ನಡೆಯುತ್ತಿರುವ ಸಮಯದಲ್ಲೂ ಆಹ್ವಾನ ನೀಡಬಹುದು. ಅಲ್ಲದೇ ಒಟ್ಟು ರೂಮ್ನಲ್ಲಿ 50 ಸ್ಪೀಕರ್ಗಳಿದ್ದರೆ, ಕೇಳುಗರ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ ಎಂದು ಫೇಸ್ಬುಕ್ ತಿಳಿಸಿದೆ. ಫೇಸ್ಬುಕ್ಗೂ ಮೊದಲು ಮ್ಯೂಸಿಕ್ ಸ್ಟ್ರೀಮಿಂಗ್ ಆ್ಯಪ್ ಆಗಿರುವ ‘ಸ್ಪೋಟಿಫೈ’ ಕ್ಲಬ್ಹೌಸ್ಗೆ ಪೈಪೋಟಿ ನೀಡಲು ತನ್ನದೇ ಆದ ‘ಗ್ರೀನ್ಹೌಸ್’ ಎಂಬ ಆ್ಯಪ್ ಬಿಡುಗಡೆ ಮಾಡಿತ್ತು. ಇದೀಗ ಫೇಸ್ಬುಕ್ ಸಹ ಇದೇ ಹಾದಿಯಲ್ಲಿದೆ.
ಇದನ್ನೂ ಓದಿ: ಭಾರತವು 5 ವರ್ಷಗಳಲ್ಲಿ 330 ಮಿಲಿಯನ್ 5ಜಿ ಸ್ಮಾರ್ಟ್‌ಫೋನ್ ಹೊಂದಲಿದೆ!