ಸ್ಯಾನ್ ಫ್ರಾನ್ಸಿಸ್ಕೋ: ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳಲ್ಲಿ ವಾಸಿಸುವ ಜನರು ಕಡಿಮೆ ಡೇಟಾ ಬಳಸಿ, ಉತ್ತಮವಾದ ಫೋಟೋ ಮತ್ತು ವಿಡಿಯೋ ಹಂಚಿಕೆ ಮಾಡಬಹುದಾದ ಇನ್‌ಸ್ಟಾಗ್ರಾಮ್ ಲೈಟ್ ಆ್ಯಪ್ ಅನ್ನು ಫೇಸ್‌ಬುಕ್ 170 ದೇಶಗಳಲ್ಲಿ ಹೊರತಂದಿದೆ.
ಇನ್‌ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ಏಕೆಂದರೆ, ಐಒಎಸ್ ಆವೃತ್ತಿಯ ಅಪ್ಲಿಕೇಶನ್ ಅನ್ನು ಇನ್ನೂ ಅಭಿವೃದ್ಧಿಪಡಿಸಿಲ್ಲ.
"ಇಂದಿನಿಂದ 170ಕ್ಕೂ ಹೆಚ್ಚು ದೇಶಗಳ ಜನರು ಯಾವುದೇ ನೆಟ್‌ವರ್ಕ್ ಅಥವಾ ಸಾಧನವಿದ್ದರೂ ಉತ್ತಮ ಗುಣಮಟ್ಟದ ಇನ್‌ಸ್ಟಾಗ್ರಾಮ್ ಅನುಭವವನ್ನು ಪಡೆಯಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇನ್‌ಸ್ಟಾಗ್ರಾಮ್ ಲೈಟ್ ಆ್ಯಪ್ ಡೌನ್‌ಲೋಡ್ ಮಾಡಬಹುದಾಗಿದೆ. ನಾವು ಶೀಘ್ರದಲ್ಲೇ ಅಪ್ಲಿಕೇಶನ್ ಜಾಗತಿಕವಾಗಿ ಹೊರತರುತ್ತೇವೆ" ಎಂದು ಫೇಸ್‌ಬುಕ್ ಹೇಳಿದೆ.
ಆಂಡ್ರಾಯ್ಡ್‌ನಲ್ಲಿ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಕೇವಲ 2MB ಡೇಟಾ ಅಗತ್ಯವಿರುತ್ತದೆ. ಪೂರ್ಣ ಗಾತ್ರದ ಆವೃತ್ತಿಗಿಂತ ಗಣನೀಯವಾಗಿ ಕಡಿಮೆ ಇದ್ದು, 30MB ಗೆ ಹತ್ತಿರದಲ್ಲಿದೆ. ಆದರೆ ಆರಂಭದಲ್ಲಿ ಜನರು ಬಳಸುವ ಸಾಧನಗಳಲ್ಲಿ ಪ್ರಮುಖ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದೆ ಎಂದು ಫೇಸ್‌ಬುಕ್ ಹೇಳಿದೆ.
ಆ ವೈಶಿಷ್ಟ್ಯಗಳನ್ನು ಸಣ್ಣ ಅಪ್ಲಿಕೇಶನ್‌ನಲ್ಲಿ ಇರಿಸಿಕೊಳ್ಳಲು, ಫೋನ್‌ನಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ನಿಂದ ಹೆಚ್ಚಿನ ಕೋಡ್ನನ್ನು ಕ್ಲೌಡ್‌ಗೆ ಆಫ್‌ಲೋಡ್ ಮಾಡುವ ಮೂಲಕ ತಂಡವು ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಫೇಸ್‌ಬುಕ್ ಲೈಟ್‌ನಿಂದ ಒಂದು ಪುಟವನ್ನು ತೆಗೆದುಕೊಂಡಿತು.
ಇದನ್ನೂ ಓದಿ: ಮೊದಲ ಬಾರಿಗೆ ಮಂಗಳ ಗ್ರಹದಲ್ಲಿನ ಶಬ್ದ ಸೆರೆಹಿಡಿದ ನಾಸಾ ರೋವರ್‌ನ ಸೂಪರ್‌ಕ್ಯಾಮ್
ಅಪ್ಲಿಕೇಶನ್‌ನಲ್ಲಿ ಒಳಗೊಂಡಿರುವ ವೈಶಿಷ್ಟ್ಯಗಳ ಪೈಕಿ ರೀಲ್ಸ್ ಎಂಬ ಕಿರು ವಿಡಿಯೋ ವೈಶಿಷ್ಟ್ಯವಿದೆ.
ಕಾರ್ಯಕ್ಷಮತೆಯನ್ನು ವಿಶ್ವಾಸಾರ್ಹವಾಗಿಡಲು, ಕ್ಯೂಬ್ ಪರಿವರ್ತನೆಗಳು ಮತ್ತು ಜನರು ಮುಖಗಳಿಗೆ ಅನ್ವಯಿಸಬಹುದಾದ AR ಫಿಲ್ಟರ್‌ಗಳಂತಹ ಅಲಂಕೃತ, ಡೇಟಾ-ಭರಿತ ಅನಿಮೇಷನ್ನನ್ನು ತೆಗೆದುಹಾಕಲಾಗಿದೆ.
ಆದಾಗ್ಯೂ GIF ಗಳು ಮತ್ತು ಸ್ಟಿಕ್ಕರ್ಗಳನ್ನು ಕಡಿಮೆ ಡೇಟಾದೊಂದಿಗೆ ನೀಡುವಂತಹ ವೈಶಿಷ್ಟ್ಯಗಳನ್ನು ಇಟ್ಟುಕೊಂಡಿದೆ.
ಹೊಸ ಡಿಜಿಟಲ್ ಬಳಕೆದಾರರಿಗೆ ಅರ್ಥವಾಗದ ಕೆಲವು ಐಕಾನ್‌ಗಳನ್ನು ಸಹ ಅವರು ತೆಗೆದುಹಾಕಿದ್ದಾರೆ.
ಹೊಸ ಇನ್‌ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್ ಭಾರತದಲ್ಲಿ 2020 ರ ಡಿಸೆಂಬರ್‌ನಲ್ಲಿ ಪರೀಕ್ಷೆಯನ್ನು ಪ್ರಾರಂಭಿಸಿತು.