ವಾಷಿಂಗ್ಟನ್ [ಯುಎಸ್]: ಬಳಕೆದಾರರಿಗಾಗಿ ಒಟ್ಟಾರೆ ವಿನ್ಯಾಸವನ್ನು ಸರಳಗೊಳಿಸುವ ಉದ್ದೇಶದಿಂದ, ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ತನ್ನ ಎಲ್ಲ ಸಾರ್ವಜನಿಕ ಪುಟ (public pages) ಗಳಿಂದ 'ಲೈಕ್ ಬಟನ್' ಅನ್ನು ಕೈಬಿಟ್ಟಿದೆ.
ಪಬ್ಲಿಕ್ ಪುಟಗಳನ್ನು ಸಾಮಾನ್ಯವಾಗಿ ಸಾರ್ವಜನಿಕ ನಾಯಕರು, ಕಲಾವಿದರು, ಬ್ರ್ಯಾಂಡ್ಗಳು ಉಪಯೋಗಿಸುತ್ತಾರೆ. ವಿಭಿನ್ನ ಕಲಾವಿದರು ಮತ್ತು ಬ್ರ್ಯಾಂಡ್ಗಳ ಮಧ್ಯೆ ಬಳಕೆದಾರರು ಸುಲಭವಾಗಿ ಸಂವಹನ ಸಾಧಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಈ ಪುಟಗಳ ಲೈಕ್ ಬಟನ್ ತೆಗೆದು ಹಾಕಲಾಗಿದೆ. ಇನ್ನು ಈ ಪೇಜ್ಗಳಲ್ಲಿ ಫಾಲೋವರ್ಗಳ ಸಂಖ್ಯೆ ಮತ್ತು ನ್ಯೂಸ್ ಫೀಡ್ಗಳು ಮಾತ್ರ ಕಾಣಿಸಲಿವೆ ಎಂದು ಮಾಶೆಬಲ್ ಹೇಳಿದೆ.
ಫೇಸ್‌ಬುಕ್ ತನ್ನ ಬ್ಲಾಗ್‌ನಲ್ಲಿ ಈ ಬಗ್ಗೆ ತಿಳಿಸಿದ್ದು, ಜನರು ತಮ್ಮ ನೆಚ್ಚಿನ ಪುಟಗಳೊಂದಿಗೆ ಸಂಪರ್ಕ ಸಾಧಿಸುವ ವಿಧಾನವನ್ನು ಸರಳೀಕರಿಸಲು ನಾವು ಲೈಕ್ ಬಟನ್ ತೆಗೆದು ಹಾಕುತ್ತಿದ್ದೇವೆ. ಈ ಮೂಲಕ ಫಾಲೋವರ್ಸ್ ಮೇಲೆ ಕೇಂದ್ರೀಕರಿಸುತ್ತಿದ್ದೇವೆ ಎಂದು ಹೇಳಿದೆ.
ಮುಂಬರುವ ತಿಂಗಳುಗಳಲ್ಲಿ ಈ ಹೊಸ ನವೀಕರಣವನ್ನು ಕ್ರಮೇಣ ಎಲ್ಲಾ ಸಾರ್ವಜನಿಕ ಪುಟಗಳಿಗೆ ಅಧಿಕೃತಗೊಳಿಸಲಾಗುವುದು ಎಂದು ಫೇಸ್‌ಬುಕ್ ಹೇಳಿದೆ.