ETV Bharat / lifestyle

ಏಪ್ರಿಲ್​ 14 ರವರೆಗೂ ತಿರುಮಲವಾಸನ ದರ್ಶನಕ್ಕಿಲ್ಲ ಅವಕಾಶ

ತಿರುಮಲದಲ್ಲಿ ಧಾರ್ಮಿಕ ಸಮಾರಂಭಗಳ ಮೇಲೆ ಕೊರೊನಾ ಕರಿನೆರಳು ಬೀರಿದೆ. ಆದರೂ ಕೊರೊನಾದಿಂದ ತೀವ್ರ ಸಂಕಷ್ಟಕ್ಕೆ ಈಡಾಗಿರುವವರ ನೆರವಿಗೆ ಟಿಟಿಡಿ ಧಾವಿಸಿದೆ. ಏಪ್ರಿಲ್​ 14ರವರೆಗೂ ದೇವಸ್ಥಾನದ ಸೇವೆಗಳನ್ನು ರದ್ದುಗೊಳಿಸಲಾಗಿದೆ.

Tirumala
ತಿರುಮಲ
author img

By

Published : Mar 31, 2020, 9:57 AM IST

Updated : Mar 31, 2020, 10:08 AM IST

ತಿರುಪತಿ(ಆಂಧ್ರ ಪ್ರದೇಶ): ಲಾಕ್​ಡೌನ್​ ಏಪ್ರಿಲ್​ 14ರವರೆಗೂ ಮುಂದುವರೆದ ಕಾರಣ ತಿರುಪತಿಯ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್​​ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ 300 ರೂಪಾಯಿ ಕೊಟ್ಟು ಪ್ರತ್ಯೇಕ ಪ್ರವೇಶಕ್ಕೆ ಟಿಕೆಟ್​ ಬುಕ್​ ಮಾಡಿರುವ ಭಕ್ತರು ತಮ್ಮ ಪ್ರವೇಶವನ್ನು ಮೂಂದೂಡಲು, ಇಲ್ಲವಾದಲ್ಲಿ ಟಿಕೆಟ್​​ ರದ್ದು ಮಾಡಿಕೊಂಡರೆ ಹಣ ವಾಪಸ್​ ನೀಡುವುದಕ್ಕೆ ಟಿಟಿಡಿ ಏರ್ಪಾಟುಗಳನ್ನು ಮಾಡಿಕೊಂಡಿದೆ.

ಏಪ್ರಿಲ್​​ 2ರ ಶ್ರೀರಾಮನವಮಿ ಸಂದರ್ಭದಲ್ಲಿ ನಡೆಯಬೇಕಿದ್ದ ಹನುಮಂತ ವಾಹನ ಸೇವೆಯನ್ನೂ ರದ್ದು ಮಾಡಲಾಗಿದೆ. ಕೆಲವೊಂದು ಉತ್ಸವಗಳನ್ನು ಕೆಲವೇ ಮಂದಿಯ ಸಮಕ್ಷಮದಲ್ಲಿ ಆಚರಿಸಬೇಕೆಂದು ನಿರ್ಧಾರ ಮಾಡಲಾಗಿದೆ. ಏಪ್ರಿಲ್​ 5ರಿಂದ 7ರವರೆಗೆ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ವಸಂತೋತ್ಸವವನ್ನು ಕೂಡಾ ಯಾವುದೇ ವೈಭವವಿಲ್ಲದೇ ಆಚರಿಸಲಾಗುತ್ತದೆ.

ತಿರುಮಲದಲ್ಲಿ ಧಾರ್ಮಿಕ ಸಮಾರಂಭಗಳ ಮೇಲೆ ಕೊರೊನಾ ಕರಿನೆರಳು ಬೀರಿದೆ. ಆದರೂ ಕೊರೊನಾದಿಂದ ತೀವ್ರ ಸಂಕಷ್ಟಕ್ಕೆ ಈಡಾಗಿರುವವರ ನೆರವಿಗೆ ಟಿಟಿಡಿ ಧಾವಿಸಿದೆ. ತಿರುಪತಿಯಲ್ಲಿರುವ ಬಡವರಿಗೆ, ವಲಸೆ ಕಾರ್ಮಿಕರಿಗೆ, ಭಿಕ್ಷುಕರಿಗೆ ಸೇರಿದಂತೆ ದಿನಕ್ಕೆ 50 ಸಾವಿರ ಮಂದಿಗೆ ಅನ್ನಾಹಾರವನ್ನು ಟಿಟಿಡಿ ನೀಡುತ್ತಿದೆ.

''ಶ್ರೀವಾರಿಗಳ ಧಾರ್ಮಿಕ ಕಾರ್ಯಗಳಲ್ಲಿ ಲೋಪವಿಲ್ಲ''

ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿಗೆ ಜರುಗಬೇಕಿದ್ದ ನಿತ್ಯ ಕೈಂಕರ್ಯಗಳು ಜರುಗುತ್ತಿವೆ. ಕೆಲವು ನಿರ್ಬಂಧಗಳನ್ನು ಸರ್ಕಾರ ಆದೇಶದಂತೆ ವಿಧಿಸಿಕೊಂಡಿದೆಯಾದರೂ ಎಲ್ಲಾ ಸಂಪ್ರದಾಯ, ಆಚರಣೆಗಳು ಸರಿಯಾದ ಸಮಯಕ್ಕೆ ನಡೆಯುತ್ತಿವೆ ಎಂದು ಶ್ರೀ ಶಠಗೋಪ ರಾಮಾನುಜ ಪೆದ್ದಜಿಯ್ಯಂಗಾರ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಶ್ರೀವಾರಿ ಆಲಯದಲ್ಲಿ ಅಖಂಡ ದೀಪ ಆರಿಹೋಯಿತು ಎಂಬ ವದಂತಿಯನ್ನು ಅವರು ತಳ್ಳಿಹಾಕಿದ್ದಾರೆ.

Last Updated : Mar 31, 2020, 10:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.