ವಿರಾಜಪೇಟೆ(ಕೊಡಗು): ದರೋಡೆಗೆ ಹೊಂಚು ಹಾಕಿದ್ದ 9 ಜನ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿರುವ ಘಟನೆ ವಿರಾಜಪೇಟೆಯ ಲಕ್ಷ್ಮಿ ಹೋಟೆಲ್ ಬಳಿ ನಡೆದಿದೆ.
ವಿರಾಜಪೇಟೆ ನಗರ ಠಾಣೆಯ ಪೊಲೀಸರು ಖದೀಮರನ್ನು ಬಂಧಿಸಿದ್ದು, ಠಾಣೆಯ ಎಸ್.ಐ. ಬೋಜಪ್ಪ ಮತ್ತು ತಂಡ ಕೇರಳದ ಇಬ್ಬರು, ತಮಿಳುನಾಡಿನ ಒಬ್ಬ ಮತ್ತು ಬೆಂಗಳೂರಿನ 6 ಜನರನ್ನು ಬಂಧಿಸಿದ್ದಾರೆ. ರಾತ್ರಿ ಬೀಟ್ನಲ್ಲಿದ್ದಾಗ ಅನುಮಾನಗೊಂಡು ಎರಡು ಕಾರುಗಳನ್ನು ಹಿಂಬಾಲಿಸಿ ಬಂಧಿಸಲಾಗಿದೆ.
ಕಾರುಗಳಲ್ಲಿ ದರೋಡೆಗೆ ಸಂಗ್ರಹಿಸಿಟ್ಟಿದ್ದ ಕತ್ತಿ, ತಲ್ವಾರ್, ಸುತ್ತಿಗೆ, ಖಾರದಪುಡಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಬಂಧಿತರ ವಿರುದ್ಧ ಐಪಿಸಿ ಕಲಂ 399 ಮತ್ತು 402 ಅಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.